Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದೆರಡು ಎಲೆ ಕಹಿ ಬೇವು ಸೇವಿಸಿದರೆ ಇಷ್ಟೆಲ್ಲಾ ಗುಣಗಳಿವೆ ಗೊತ್ತಾ?
ಕಹಿಬೇವು ಆರೋಗ್ಯ ತುಂಬಾನೇ ಒಳ್ಳೆಯದು, ಹಾಗಾಗಿ ಯುಗಾದಿಯಂದು ಕಹಿಬೇವು ಸವಿಯುತ್ತೇವೆ. ಆ ದಿನ ಬೆಲ್ಲ ಜೊತೆ ಬೇವು ಪದ್ಧತಿಯಂತೆ ಸವಿಯುತ್ತೇವೆ, ಅದರೆ ಇದನ್ನು ಪ್ರತಿದಿನ ಸೇವಿಸಿದರೆ ಇದರ ಪ್ರಭಾವ ಹೇಗಿರಲಿದೆ ಎಂದು ಯೋಚಿಸಿದ್ದೀರಾ? ಹೌದು ಒಂದೆರಡು ಎಲೆ ಕಹಿಬೇವು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹಕ್ಕೆ ಅತ್ಯುತ್ತಮವಾದ ಪ್ರಯೋಜನವನ್ನು ಪಡೆಯಬಹುದು.

ಕಹಿಬೇವು ಪ್ರತಿನಿತ್ಯ ಸೇವಿಸಿದರೆ ದೊರೆಯುವ ಪ್ರಯೋಜನಗಳು:
ಖಾಲಿ ಹೊಟ್ಟೆಯಲ್ಲಿ ಎರಡು ಕಹಿಬೇವಿನ ಎಲೆ ಸೇವಿಸಿದರೆ ಒಳ್ಳೆಯದು
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇನ್ಸುಲಿನ್ ನಿಯಂತ್ರಣದಲ್ಲಿಡಲು ಸಹಕಾರಿ. ಇದರಿಂದ ಮಧುಮೇಹವನ್ನು ನಿಯಂತ್ರಿಸಲು ತುಂಬಾನೇ ಸಹಕಾರಿಯಾಗಿದೆ
ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಪ್ರತಿನಿತ್ಯ ಖಾಲಿ ಹೊಟ್ಟೆ ಒಂದು ಅಥವಾ ಎರಡು ಕಹಿಬೇವಿನ ಎಲೆ ಸೇವಿಸುವುದರಿಂದ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ಹಲವು ಬೇಡದ ಬ್ಯಾಕ್ಟಿರಿಯಾಗಳನ್ನು ದೇಹದಿಂದ ಹೊರ ಹಾಕಲು ಸಹಕಾರಿ. ದೇಹವನ್ನು ಡಿಟಾಕ್ಸ್ ಮಾಡಲು ಜಂತು ಹುಳು ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿ.
ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ಕಹಿಬೇವಿನ ಎಲೆ ಸೇವಿಸುವುದರಿಂದ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದು ಆಕ್ಸಿಡೇಟಿವ್ ಸ್ಟ್ರೆಸ್ ವಿರುದ್ಧ ಹೋರಾಡಿ, ದೇಹದಲ್ಲಿನ ಕಶ್ಮಲ ಹೊರ ಹಾಕುತ್ತದೆ, ಹಾಗಾಗಿ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿ
ಕಹಿಬೇವಿನ ಎಲೆ ಸೇವಿಸುವುದರಿಂದ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು, ಹೊಟ್ಟೆ ಉಬ್ಬವುದು, ಮಲಬದ್ಧತೆ ಈಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ರಕ್ತವನ್ನು ಶುದ್ಧೀಕರಿಸುತ್ತದೆ
ನೀವು ಕಹಿಬೇವಿನ ಎಲೆಯನ್ನು ಆಹಾರಕ್ಕಿಂತ ಮುಂಚೆ ಸೇವಿಸುವುದರಿಂದ ಇದು ರಕ್ತವನ್ನು ಶುದ್ಧೀಕರಿಸಲು, ತ್ವಚೆ ಸಂಬಂಧಿತ ಸಮಸ್ಯೆ ತಡೆಗಟ್ಟಲು ತುಂಬಾನೇ ಸಹಕಾರಿ, ಇದರಿಂದ ತ್ವಚೆಯಲ್ಲಿ ಕಲೆ ಹೋಗಲಾಡಿಸಲು ಕೂಡ ತುಂಬಾನೇ ಸಹಕಾರಿ. ಮೊಡವೆ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುತ್ತದೆ.
ಈ ಕಹಿ ಬೇವು ಹೇಗೆ ಸೇವಿಸಿದರೆ ಒಳ್ಳೆಯದು:
ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು, ನಿಮಗೆ ಎಲೆ ಜಗಿದು ತಿನ್ನಲು ಕಷ್ಟ ಅನಿಸಿದರೆ ಜ್ಯೂಸ್ ಮಾಡಿಟ್ಟು 1 ಚಮಚ ಕಹಿಬೇವಿನ ರಸ ತೆಗೆದುಕೊಂಡು ಒಂದು ತುಂಡು ಬೆಲ್ಲವನ್ನು ಬಾಯಿಗೆ ಹಾಕಿದರೆ ಸಾಕು.
ಮಧುಮೇಹಿಗಳು ಊಟದ ಬಳಿಕ ಸೇವಿಸಿದರೆ ಒಳ್ಳೆಯದು
ಒಂದೆರಡು ಚಮಚ ಕಹಿಬೇವಿನ ರಸ ತೆಗೆದುಕೊಳ್ಳುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ಸಹಕಾರಿ.
ಜಂತುಹುಳುವಿಗೆ ಹೇಗೆ ಸೇವಿಸಬೇಕು?
1/2 ಚಮಚ ನಿಂಬೆರಸಕ್ಕೆ 1/2 ಚಮಚ ಜೇನು ಮಿಶ್ರ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಜಂತು ಹುಳು ಸಾಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
