ಮಹಿಳೆಯರಲ್ಲಿ ಲೈಂಗಿಕ ಬಯಕೆ ಹೆಚ್ಚಿಸುವ 6 ಆಯುರ್ವೇದ ಗಿಡಮೂಲಿಕೆಗಳಿವು

ಸುಂದರ ದಾಂಪತ್ಯ ಜೀವನಕ್ಕೆ ಲೈಂಗಿಕ ತೃಪ್ತಿ ಎಂಬುವುದು ತುಂಬಾನೇ ಮುಖ್ಯ. ಮದುವೆಯಾದ ಹೊಸದರಲ್ಲಿ ಯೌವನ ಪ್ರಾಯದಲ್ಲಿ ಇರುವ ಉತ್ಸಾಹ, ಆಸಕ್ತಿ ವರ್ಷಗಳು ಕಳೆದಂತೆ ಸ್ವಲ್ಪ ಕಡಿಮೆಯಾಗಬಹುದು, ಅದರಲ್ಲೂ ಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ ಲೈಂಗಿಕಾಸಕ್ತಿ ಕಡಿಮೆಯಾಗುವುದು.

ಅದಕ್ಕೆ ಪ್ರಮುಖ ಕಾರಣ ಹಾರ್ಮೋನ್‌ಗಳಲ್ಲಾಗುವ ಬದಲಾವಣೆ, ವಯಸ್ಸಾಗುತ್ತಿದ್ದಂತೆ ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾಗುವುದು, ಈ ಕಾರಣದಿಂದ ಲೈಂಗಿಕ ಆಸಕ್ತಿ ಸ್ವಲ್ಪ ಕಡಿಮೆಯಾಗುವುದು. ಪತ್ನಿ ನಿರಾಸಕ್ತಿ ತೋರಿದಾಗ ಕೆಲವೊಂದು ದಾಂಪತ್ಯದಲ್ಲಿ ಸಮಸ್ಯೆ ತರಬಹುದು. ಅನೈತಿಕ ಸಂಬಂಧದ ಅಪಾಯವೂ ಇದೆ, ಆದ್ದರಿಂದ ಗಂಡ-ಹೆಂಡತಿ ನಡುವೆ ಲೈಂಗಿಕ ತೃಪ್ತಿ ತುಂಬಾನೇ ಮುಖ್ಯ.

Ayurvedic Herbs to Balance Womens Hormones And Promote Husband Wife physical bond

ದೇಹದಲ್ಲಿ ಹಾರ್ಮೋನ್‌ ಸಮತೋಲನ ಕಾಪಾಡಲು, ಗಂಡ-ಹೆಂಡತಿ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿಸಲು ಈ ಆಯುರ್ವೇದ ಗಿಡಮೂಲಿಕೆ ತುಂಬಾನೇ ಸಹಕಾರಿಯಾಗಿದೆ.

1. ಅಶ್ವಗಂಧ

ಮಹಿಳೆಯರ ದೇಹದಲ್ಲಿ ಹಾರ್ಮೋನ್‌ ಸಮತೋಲನದಲ್ಲಿಡಲು ಅಶ್ವಗಂಧ ಸಹಕಾರಿ. ಇದು ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಅಲ್ಲದೆ ಮುಟ್ಟಿನ ಚಕ್ರ ಸರಿಯಾಗಿರಲು ಇದು ಸಹಕಾರಿಯಾಗಿದೆ. ಇದು ಮೂಡ್‌ ಸ್ವಿಂಗ್, ಸುಸ್ತು, ತಲೆಸುತ್ತು ಈ ಬಗೆಯ ಸಮಸ್ಯೆ ತಡೆಗಟ್ಟುತ್ತದೆ, ಅಲ್ಲದೆ ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು ಸಹಕಾರಿ.

2. ಲೈಂಗಿಕ ಆಸಕ್ತಿ ಹೆಚ್ಚಿಸಲು ಶತಾವರಿ

ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯ ಕಾಪಾಡುವಲ್ಲಿ ಶತಾವರಿ ತುಂಬಾನೇ ಸಹಕಾರಿ. ಇದು ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡಲು, ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು, ಮೆನೋಪಾಸ್ ಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿ. ಇದರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುವ ಅಂಶವಿರುವುದರಿಂದ ಮಹಿಳೆಯರ ಲೈಂಗಿಕ ಆರೋಗ್ಯಕ್ಕೆ ಒಳ್ಳೆಯದು. ಮೆನೋಪಾಸ್ ಬಳಿಕ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಆದರೆ ಶತಾವರಿ ಅವರಲ್ಲಿ ಆ ವಿಷಯದಲ್ಲಿ ನಿರಾಸಕ್ತಿ ಉಂಟಾಗುವುದನ್ನು ತಡೆಗಟ್ಟಲು ಸಹಕಾರಿ.

3. ಲೈಂಗಿಕ ಆರೋಗ್ಯಕ್ಕೆ ತ್ರಿಫಲ

ತ್ರಿಫಲ ಮೂರು ಹಣ್ಣುಗಳ ಮಿಶ್ರಣವಾಗಿದೆ. ನೆಲ್ಲಿಕಾಯಿ, ಹರಿತಕಿ ಮತ್ತು ವಿಭಿತಕಿ ಔಷಧಗಳು ಈ ಮೂರು ಹಣ್ಣುಗಳ ಮಿಶ್ರಣವಾಗಿದೆ. ಇದು ದೇಹವನ್ನು ಡಿಟಾಕ್ಸ್ ಮಾಡಲು ಹಾಗೂ ದೇಹದಲ್ಲಿ ಲವಲವಿಕೆ ಹೆಚ್ಚಿಸಲು ಸಹಕಾರಿಯಾಗಿದೆ. ತ್ರಿಫಲ ಹಾರ್ಮೋನ್‌ ಸಮತೋಲನದಲ್ಲಿಡಲು ಸಹಕಾರಿಯಾಗಿದೆ.

4. ಗೋಕ್ಷುರಾ (ಟ್ರಿಬ್ಯುಲಸ್ ಟೆರೆಸ್ಟ್ರಿಸ್)

ಇದು ಆಯುರ್ವೇದದ ವಯಗ್ರಾ ಎಂದು ಕರೆಯಲಾಗುವುದು. ಇದು ಸಂತಾನೋತ್ಪತ್ತಿ ಆರೋಗ್ಯ ವೃದ್ಧಿಸಲು ತುಂಬಾನೇ ಸಹಕಾರಿ. ಗೋಕ್ಷುರಾ ರಕ್ತ ಸಂಚಾರ ಉತ್ತಮವಾಗಿ ನಡೆಯಲು, ಲೈಂಗಿಕ ತೃಪ್ತಿ ನೀಡಲು ತುಂಬಾನೇ ಸಹಕಾರಿಯಾಗಿದೆ.

5. ಲೋಧ್ರಾ ಸಸ್ಯ

ಇದನ್ನು ಕೂಡ ಆಯುರ್ವೇದದಲ್ಲಿ ಬಳಸಲಾಗುವುದು. ಇದು ಹಾರ್ಮೋನ್‌ ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ಸಂತಾನೋತ್ಪತ್ತಿ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದ, ಅಲ್ಲದೆ ಋತುಚಕ್ರ ಸರಿಯಾಗಿರಲು ಸಹಕಾರಿಯಾಗಿದೆ. ಇದು ಅತ್ಯಧಿಕ ರಕ್ತಸ್ರಾವ, ಮುಟ್ಟಿನ ನೋವು, ಜನನೇಂದ್ರೀಯ ಆರೋಗ್ಯ, ಲೈಂಗಿಕ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ.

6. ಮಾಕಾ ಬೇರು

ಮಾಕಾ ಬೇರು ಹಾರ್ಮೋನ್‌ ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ಎಂಡೋಕ್ರೈನ್ ಉತ್ಪತ್ತಿ, ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ. ಮೂಡ್‌ಸ್ವಿಂಗ್, ತಲೆಸುತ್ತು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Ayurvedic Herbs to Balance Womens Hormones And Promote Husband Wife physical bond

Ayurvedic Herbs helps to balance womens hormones, and helps to boost husband, wife physical bond read on.
Story first published: Wednesday, July 5, 2023, 21:00 [IST]
X
Desktop Bottom Promotion