Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ಖಾರ ಪ್ರಿಯರೇ? ಹಾಗಾದರೆ ಈ ಸುದ್ದಿ ನಿಮಗೆ ಖುಷಿ ನೀಡಲಿದೆ
ಕೆಲವರು ಖಾರ ಪ್ರಿಯರು, ಇನ್ನು ಕೆಲ ಪ್ರದೇಶಕ್ಕೆ ಹೋದರೆ ಅವರು ತಿನ್ನುವ ಖಾರ ನಮಗೆ ತಿನ್ನಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಗುಂಟೂರು ಮೆಣಸು ಹೆಚ್ಚಾಗಿ ಬಳಸುವ ಆಂಧ್ರಶೈಲಿಯ ಅಡುಗೆ, ಹಸಿ ಮೆಣಸು ಹೆಚ್ಚಾಗಿ ಬಳಸುವ ಉತ್ತರ ಕರ್ನಾಟಕದ ಅಡುಗೆ ಇವೆಲ್ಲಾ ಖಾರ ಸ್ವಲ್ಪ ಕಡಿಮೆ ತಿನ್ನುವವರಿಗೆ ತಿನ್ನಲು ಸಾಧ್ಯವಾಗುವುದಿಲ್ಲ.
ಕೆಲವರು ಖಾರ ತಿಂದರೆ ಆಗಿ ಬರಲ್ಲ ಎಂದು ಹೇಳುತ್ತಾರೆ. ಹೊಟ್ಟೆ ಉರಿಯಾಗುತ್ತೆ, ಪೈಲ್ಸ್ ಬರುತ್ತೆ ಹೀಗೆ ನಾನಾ ಕಾರಣ ಹೇಳುತ್ತಾರೆ.ಆದರೆ ಖಾರ ನಾವು ಅಂದುಕೊಂಡಷ್ಟು ಕೆಟ್ಟದ್ದಲ್ಲ, ಖಾರ ತಿಂದರೆ ತುಂಬಾನೇ ಪ್ರಯೋಜನವಿದೆ. ಖಾರ ತಿಂದರೆ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಆಯುಸ್ಸು ಹೆಚ್ಚಾಗುವುದು
ಅಧ್ಯಯನ ಪ್ರಕಾರ 6-7 ವಾರಗಳ ನಿರಂತರ ಖಾರ ಆಹಾರ ತಿಂದರೆ ಆಯುಸ್ಸು ಹೆಚ್ಚಾಗುವುದು ಎಂದು ಅಧ್ಯಯನ ಹೇಳಿದೆ. ಮಸಾಲೆ, ಕಾಳು ಮೆಣಸಿನ ಪುಡಿ ಸಾವಿನ ಸಂಖ್ಯೆಯನ್ನು ಶೇ. 22ರಷ್ಟು ಕಡಿಮೆ ಮಾಡಲಿದೆ ಎಂದು ಹೇಳಲಾಗುವುದು.
ಮತ್ತೊಂದು ಅಧ್ಯಯನವು ಕೆಂಪು ಮೆಣಸು ಸೇವನೆ ಮಾಡಿದವರಲ್ಲಿ ಸಾವಿನ ಸಂಖ್ಯೆ ಶೇ. 22ರಷ್ಟು ಕಡಿಮೆಯಿದೆ, ಅದೇ ಕೆಂಪು ಮೆಣಸು ತಿನ್ನದವರಲ್ಲಿ ಶೇ. 34ರಷ್ಟಿದೆ ಎಂದು ಹೇಳಿದೆ.
ಮೆಣಸಿನಲ್ಲಿರುವ ಗುಣಗಳು
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ
ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಲು ಸಹಕಾರಿ
ದೇಹ fibrin ಕರಗಿಸಲು ಸಹಕಾರಿ
ಕ್ಯಾನ್ಸರ್ ತಡೆಗಟ್ಟುತ್ತದೆ
ಮೆಣಸಿನಲ್ಲಿರುವ Capsaicin ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ, ಮೆಣಸು ಕ್ಯಾನ್ಸರ್ ಕಣಗಳು ಹರಡುವುದನ್ನು ತಡೆಗಟ್ಟಲು ಸಹಕಾರಿ ಎಂದು ಅಧ್ಯಯನ ಹೇಳುತ್ತದೆ.
ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಹೊಟ್ಟೆ ಹಸಿವು ನಿಯಂತ್ರಿಸುತ್ತದೆ
ತೂಕ ಇಳಿಕೆಗೆ ತುಂಬಾನೇ ಸಹಕಾರಿ
ಚಯಪಚಯ ಸಮಸ್ಯೆ ( metabolic syndrome ) ತಡೆಗಟ್ಟಲು ಸಹಕಾರಿ.
ಉರಿಯೂತದ ಸಮಸ್ಯೆ ತಡೆಗಟ್ಟಲು ಸಹಕಾರಿ
ಕೆಂಪು ಮೆಣಸು ಆಕ್ಸಿಡೇಟಿವ್ ಸ್ಟ್ರೆಸ್ ಕಡಿಮೆ ಮಾಡಲು ಸಹಕಾರಿ, ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಉಸಿರಾಟದ ಸಮಸ್ಯೆ ಇರುವವರೆಗೆ , ಹೃದಯ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು.
ನೋವು ಕಡಿಮೆ ಮಾಡುತ್ತದೆ
ಮೆಣಸಿನಲ್ಲಿರುವ Capsaicin ದೇಹದಲ್ಲಿ ಎಂಡೋಪ್ರಿನ್ಸ್ ಬಿಡುಗಡೆ ಮಾಡುವುದರಿಂದ ನೋವು ಕಡಿಮೆ ಮಾಡುತ್ತದೆ. ಮೆಣಸು ನೈಸರ್ಗಿಕವಾದ ನೋವು ನಿವಾರಕವಾಗಿದೆ, ತಲೆನೋವು, ಸಂಧಿವಾತ ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.
ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಇದು ಕೊಲೆಸ್ಟ್ರಾಲ್ ನಿಯಂತ್ರಣ ಮಾಡಲು ಸಹಕಾರಿ, ಕೊಲೆಸ್ಟ್ರಾಲ್ ಹೃದಯ ಆರೋಗ್ಯಕ್ಕೆ ಒಳ್ಳೆಯದಲ್ಲ, ಅದೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿದ್ದರೆ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಮೆಣಸಿನಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ. ಅಲ್ಲದೆ ಫಂಗಲ್ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಚಳಿಗಾಲದಲ್ಲಿ ಖಾರ ಸೂಪ್ ಮೈ ಬೆಚ್ಚಗಿಡುತ್ತದೆ, ಮೈ ಆರೋಗ್ಯ ವೃದ್ಧಿಸುತ್ತದೆ.
ಇಷ್ಟೆಲ್ಲಾ ಗುಣವಿದೆ ಎಂದು ತಿಳಿದ ಮೇಲೆ ನಿಮ್ಮ ಆಹಾರದಲ್ಲಿ ಖಾರ ಹೆಚ್ಚಿಸಬೇಕೆಂದರೆ ಈ ಟಿಪ್ಸ್ ಬಳಸಿ:
ನೀವು ಹೆಚ್ಚು ಖಾರ ಬಳಸುತ್ತಿಲ್ಲ ಎಂದಾದರೆ ನಿಧಾನಕ್ಕೆ ಖಾರ ಹೆಚ್ಚಿಸಲು ಪ್ರಯತ್ನಿಸಬೇಕು
ಹಸಿ ಮೆಣಸು, ಗಾಂಧಾರಿ ಮೆಣಸು, ಒಣ ಮೆಣಸು ಇವುಗಳನ್ನು ಬಳಸಬಹುದು
ನೀವು ಖಾರ ಹೆಚ್ಚಾದರೆ ಅದಕ್ಕೆ ತೆಂಗಿನಕಾಯಿ ಹಾಕಿದರೆ ಖಾರ ಕಡಿಮೆಯಾಗುವುದು
ಹಾಗಾಗಿ ಖಾರ ಒಳ್ಳೆಯದು ಎಂದು ಅಧ್ಯಯನಗಳು ಹೇಳಿವೆ, ಹಾಗಾಗಿ ತುಂಬಾ ಸಪ್ಪೆ ಊಟದ ಬದಲಿಗೆನಿಮ್ಮ ಆಹಾರದಲ್ಲಿ ಖಾರ ಸೇರಿಸಿದರೆ ತುಂಬಾನೇ ಒಳ್ಳೆಯದು. ಖಾರದಲ್ಲಿ ಇಷ್ಟೆಲ್ಲಾ ಒಳ್ಳೆ ಗುಣವಿದೆ ಎಂದ ಮೇಲೆ ಖಾರ ಆಹಾರ ಇಷ್ಟವಾಗುವುದಂತೂ ಖಂಡಿತ ಅಲ್ವಾ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications