Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬೇಸಿಗೆಯಲ್ಲಿ ದೇಹ ತಂಪಾಗಿಡಲು ಈ 7 ಬೀಜಗಳು ಪರಿಣಾಮಕಾರಿ
ಈ ವರ್ಷ ಬೇಸಿಗೆ ಫೆಬ್ರವರಿಗೇ ಬಂದಂತೆ ಇದೆ, ಬಿಸಿಲಿನ ಝಳ ಮತ್ತಷ್ಟು ಹೆಚ್ಚಾಗುವ ಸೂಚನೆಯಿದೆ, ಬೇಸಿಗೆಯಲ್ಲಿ ನಾವು ನಮ್ಮ ಆಹಾರಕ್ರಮದಲ್ಲಿ ಬದಲಾಣೆ ಮಾಡಬೇಕು, ದೇಹದಲ್ಲಿ ನೀರಿನಂಶ ಕಾಪಾಡುವ ಹಾಗೂ ದೇಹವನ್ನು ತಂಪಾಗಿಡುವ ಆಹಾರಗಳ ಕಡೆಗೆ ಹೆಚ್ಚಿ ಒತ್ತು ಕೊಡಬೇಕು. ಅದರಲ್ಲೂ ಬೇಸಿಗೆಯಲ್ಲಿ ಪ್ರತಿನಿತ್ಯ ಈ ಬೀಜಗಳನ್ನು ಬಳಸಿ:

1. ಜೀರಿಗೆ
ಇದು ದೇಹವನ್ನು ತಂಪಾಗಿ ಇಡುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಅಡುಗೆಯಲ್ಲಿ ತಪ್ಪದೆ ಬಳಸಿ. ಇದು ದೇಹದಲ್ಲಿ ಉಷ್ಣಾಂಶ ಕಡಿಮೆ ಮಾಡುತ್ತದೆ, ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುತ್ತದೆ, ಆದ್ದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಹೊಟ್ಟೆಉಬ್ಬುವುದು, ಹಿಟ್ಟೆಯ ಸೆಳೆತ ಈ ರೀತಿ ಬೇಸಿಗೆಯಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳಿಂದಲೂ ಮುಕ್ತಿ ನೀಡುವುದು. 1 ಚಮಚ ಜೀರಿಗೆಯನ್ನು ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯಿರಿ.
2. ಚಿಯಾ ಬೀಜ
ಚಿಯಾ ಬೀಜ ಕೂಡ ಬೇಸಿಗೆಗೆ ತುಂಬಾನೇ ಒಳ್ಳೆಯದು, ಇದರಲ್ಲಿ ನಾರಿನಂಶವಿದೆ ಅಲ್ಲದೆ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ. ಅಲ್ಲದೆ ದೇಹದಲ್ಲಿ ನೀರಿನಂಶ ಕಾಪಾಡಲು ಕೂಡ ಚಿಯಾ ಬೀಜ ಸಹಕಾರಿ. ಅಲ್ಲದೆ ಈ ಬೀಜದಲ್ಲಿ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಬೇಸಿಗೆಯಲ್ಲಿ ತುಂಬಾ ಒಳ್ಳೆಯದು, ಇದನ್ನು ಜ್ಯೂಸ್‌ನಲ್ಲಿ ಹಾಕಿ ಕುಡಿಯಿರಿ ದೇಹ ತಂಪಾಗಿರುತ್ತದೆ.
3. ಅಗಸೆ ಬೀಜ(Flax Seeds)
ಇದು ಕೂಡ ತುಂಬಾನೇ ಒಳ್ಳೆಯದು, ಅದರಲ್ಲೂ ಸಸ್ಯಾಹಾರಿಗಳು ಇದನ್ನು ತಪ್ಪದೆ ಬಳಸಿ, ಇದರಿಂದ ಒಮೆಗಾ 3 ಕೊಬ್ಬಿನಂಶದ ಕೊರತೆ ಉಂಟಾಗುವುದಿಲ್ಲ, ಇದು ಕೂದಲಿನ ಹಾಗೂ ತ್ವಚೆಯ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದರ ಜೊತೆಗೆ ಇದರಲ್ಲಿ ನಾರಿನಂಶ ಅಧಿಕವಿದೆ, ಆದ್ದರಿಂದ ಜೀರ್ಣಕ್ರಿಯೆಗೂ ಸಹಕಾರಿ. ಅಲ್ಲದೆ ಇದು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುವುದರಿಂದ ದೇಹದ ಆರೋಗ್ಯಕ್ಕೆ ಒಳ್ಳೆಯದು.
4. ಸೋಂಪು
ಸೋಂಪು ಕೂಡ ದೇಹವನ್ನು ತಂಪಾಗಿಡಲು ಸಹಕಾರಿ. ಊಟವಾದ ಬಳಿಕ ಸ್ವಲ್ಪ ಸೋಂಪು ಬಾಯಿಗೆ ಹಾಕಿದರೆ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು. ಅಲ್ಲದೆ ದೇಹವನ್ನು ತಂಪಾಗಿಡುವುದು, ಇದನ್ನು ಕೂಡ ನೀರಿಗೆ ಹಾಕಿ ಕುದಿಸಿಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
5. ಗಸೆಗಸೆ
ಗಸೆಗಸೆ ಬೇಸಿಗೆಯಲ್ಲಿ ಸೇವಿಸಿದರೆ ತುಂಬಾನೇ ಒಳ್ಳೆಯದು, ಇದು ದೇಹದಲ್ಲಿರುವ ಅತ್ಯಧಿಕ ಉಷ್ಣಾಂಶವನ್ನು ಹೊರಹಾಕುವುದರಿಂದ ಇದನ್ನು ಆಯುರ್ವೇದ ಹಾಗೂ ಮನೆಮದ್ದಿನಲ್ಲಿ ಬಳಸಲಾಗುವುದು. ಗಸೆಗಸೆಯಲ್ಲಿ ಆಲ್ಕೋಲೈಡ್ಸ್ ಇರುವುದರಿಂದ ದೇಹದಲ್ಲಿರುವ ಅತ್ಯಧಿಕ ಉಷ್ಣಾಂಶವನ್ನು ಹೊರಹಾಕುತ್ತದೆ, ಅಲ್ಲದೆ ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಷ್ಯಿಯಂ, ಪೊಟಾಷ್ಯಿಯಂ ಇದೆ. ಇದನ್ನು ನೀವೂ ಸ್ಮೂತಿ, ಸಲಾಡ್, ಡೆಸರ್ಟ್‌ನಲ್ಲಿ ಹಾಕಿ ಬಳಸಬಹುದು.
6. ಕೊತ್ತಂಬರಿ ಬೀಜ
ಕೊತ್ತಂಬರಿ ಬೀಜ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಕೊತ್ತಂಬರಿ ಬೀಜವನ್ನು ಬೆಲ್ಲ ಹಾಕಿ ಕಾಯಿಸಿ ಕುಡಿದರೆ ತುಂಬಾನೇ ಚೆನ್ನಾಗಿರುತ್ತದೆ. ಇದು ದೇಹದಲ್ಲಿರುವ ಉಷ್ಣಾಂಶ ಕಡಿಮೆ ಮಾಡುತ್ತದೆ, ಇದನ್ನು ಕೂಡ ಬೇಸಿಗೆಯಲ್ಲಿ ಹೆಚ್ಚಾಗಿ ಬಳಸಿ.
7. ಮೆಂತೆಬೀಜ
ಮೆಂತೆ ಬೀಜ ಕೂಡ ದೇಹವನ್ನು ತಂಪಾಗಿಸುತ್ತದೆ ಅಲ್ಲದೆ ಅದರಲ್ಲಿ ಅನೇಕ ಔಷಧೀಯ ಗುಣಗಳು ಇವೆ, ಇದನ್ನು ತುಂಬಾ ಉಷ್ಣಾಂಶ ಇರುವಾಗ ಬಳಸಿದರೆ ದೇಹಕ್ಕೆ ತುಂಬಾನೇ ಒಳ್ಳೆಯದು. ಮೆಂತೆಯನ್ನು ರಾತ್ರಿ ನೆನೆಹಾಕಿ ಬೆಳಗ್ಗೆ ಕುಡಿದರೆ ತುಂಬಾ ಒಳ್ಳೆಯದು, ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿ. ಮೆಂತೆಯನ್ನು ಅಡುಗೆಗೆ ಬಳಸಿ, ಈ ಮೆಂತೆ ಬೀಜ ಸೇವಿಸುವುದರಿಂದ ಉಷ್ಣಾಂಶದಿಂದ ಹೊಟ್ಟೆನೋವು ಆದರೆ ಅದನ್ನು ಕಡಿಮೆ ಮಾಡಲು ಸಹಕಾರಿ, ಮೂತ್ರ ಸೋಂಕು ತಡೆಗಟ್ಟಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications