Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನೀವು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಸ್ವಲ್ಪ ಅರಿಶಿಣ ಹಾಕಿದರೆ ಈ 7 ಆರೋಗ್ಯ ಸಮಸ್ಯೆ ತಡೆಗಟ್ಟಬಹುದು
ಕೆಲವರು ನೀರಿಗೆ ಅರಿಶಿಣ ಹಾಕಿ ಕುಡಿಯುತ್ತಾರೆ, ಇನ್ನು ಕೆಲವರು ಹಾಲಿಗೆ ಅರಿಶಿಣ ಹಾಕಿ ಕುಡಿಯುತ್ತಾರೆ. ಕೆಮ್ಮು ಶೀತವಾದಾಗ ಬಿಸಿ ನೀರಿಗೆ ಅಥವಾ ಹಾಲಿಗೆ ಅರಿಶಿಣ ಹಾಕಿ ಕುಡಿದರೆ ಒಳ್ಳೆಯ ಮನೆಮದ್ದು ಕೂಡ ಹೌದು, ಆದರೆ ನೀರಿಗೆ ದಿನಾ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ದೊರೆಯುವ ಪ್ರಯೋಜನವೇನು?
ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ಈ ಪ್ರಯೋಜನಗಳಿವೆ:

ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ಪುಡಿ ಇಲ್ಲದಿದ್ದರೆ ಅರಿಶಿಣ ಬೇಯಿಸಿ ಒಣಗಿಸಿಟ್ಟಿರುವುದನ್ನು ಕೂಡ ತಿನ್ನಬಹುದು. ಆದ್ದರಿಂದ ನೀವು ಅರಿಶಿಣ ತಿಂದರೆ ಹೊಟ್ಟೆಯ ಆರೋಗ್ಯ ತಂದಿರುತ್ತದೆ.
ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
ನೀರಿಗೆ ಅರಿಶಿಣ ಹಾಕಿ ಕುಡಿಯುವುದರಿಂದ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅರಿಶಿಣ ಗಾಲ್‌ಬ್ಲೇಡರ್‌ನಲ್ಲಿ ಪಿತ್ತರಸ ಉತ್ಪತ್ತಿಗೆ ಸಹಕಾರಿ ಹಾಗೂ ದಿನವಿಡೀ ಜೀರ್ಣಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿ. ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅನೇಕ ಆರೋಗ್ಯ ಸಮಸ್ಯೆ ಉಂಟಾಗುತ್ತದೆ, ಆದ್ದರಿಂದ ಲಿವರ್‌ನ ಆರೋಗ್ಯದ ಕಡೆಗೆ ಗಮನಹರಿಸಬೇಕು, ಅರಿಶಿಣ ಲಿವರ್‌ನ ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ.
ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ
ಉರಿಯೂತದ ಸಮಸ್ಯೆಯಿದ್ದರೆ ಕ್ಯಾನ್ಸರ್, ಸಂಧಿವಾತದ ಸಮಸ್ಯೆ ಉಂಟಾಗುವುದು . ಈ ಬಗೆಯ ಸಮಸ್ಯೆ ತಡೆಗಟ್ಟಲು ಅರಿಶಿಣದಲ್ಲಿರುವ ಕರ್ಕ್ಯೂಮಿನ್ ಸಹಾಯ ಮಾಡುತ್ತದೆ. ದಿನಾ ನೀರಿಗೆ ಅರಿಶಿಣ ಹಾಕಿ ಕುಡಿಯುವುದರಿಂದ ಉರಿಯೂತದ ಸಮಸ್ಯೆ ತಡೆಗಟ್ಟಲು ಸಹಕಾರಿ. ಸಂಧಿವಾತದ ಸಮಸ್ಯೆ ಇರುವವರು ಅರಿಶಿಣ ನೀರು ಕುಡಿಯಬೇಕು, ಬರೀ ಈ ಅರಿಶಿಣ ನೀರು ಕುಡಿದರೆ ಸಾಲದು ಔಷಧ ಕೂಡ ತೆಗೆದುಕೊಳ್ಳಬೇಕು.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಅರಿಶಿಣ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಅರಿಶಿಣ ಸೋಂಕು, ಬ್ಯಾಕ್ಟಿರಿಯಾ ತಡೆಗಟ್ಟುತ್ತದೆ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದ. ಅರಿಶಿಣದಲ್ಲಿ ಈ ಗುಣಗಳು ಇರುವುದರಿಂದಲೇ ಗಾಯವಾದಾಗ ಅರಿಶಿಣ ಹಾಕಲಾಗುವುದು.
ತೂಕವನ್ನು ನಿಯಂತ್ರಿಸುತ್ತದೆ
ಅರಿಶಿಣ ತೂಕ ನಿಯಂತ್ರಣದಲ್ಲಿಡಲು ಕೂಡ ಸಹಕಾರಿ. ಇದು ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ನಿಯಮಿತ ವ್ಯಾಯಾಮ ಮಾಡುವ ಮುನ್ನ ನೀರಿಗೆ ಅರ್ಧ ಚಮಚ ಅರಿಶಿಣ ಹಾಕಿ ಮಿಕ್ಸ್ ಮಾಡಿ ಕುಡಿಯುರಿ. ಇದರಿಂದ ಮೈ ತೂಕ ನಿಯಂತ್ರಣದಲ್ಲಿಡಲು ಸಹಕಾರಿ. ನೀವು ಬಿಸಿನೀರಿಗೆ ಸ್ವಲ್ಪ ನಿಂಬೆರಸ ಹಾಗೂ ಅರಿಶಿಣ ಹಾಕಿ ಕುಡಿದರೆ ಒಳ್ಳೆಯದು.
ತ್ವಚೆಗೂ ತುಂಬಾ ಒಳ್ಳೆಯದು
ನೀರಿಗೆ ಅರಿಶಿಣ ಹಾಕಿ ಕುಡಿಯವುದರಿಂದ ತ್ವಚೆಗೆ ತುಂಬಾ ಒಳ್ಳೆಯದು. ಅಲ್ಲದೆ ಮೊಡವೆ, ಮುಖದಲ್ಲಿ ಕಜ್ಜಿ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ. ಅಲ್ಲದೆ ಮುಖದಲ್ಲಿ ಹೊಳಪು ಕೂಡ ಹೆಚ್ಚಾಗುವುದು. ನಟಿ ವಿದ್ಯಾಬಾಲನ್ ಅವರು ಸೌಂದರ್ಯಕ್ಕಾಗಿ ದಿನಾ ಒಂದು ತುಂಡು ಅರಿಶಿಣ ತಿನ್ನುತ್ತೇನೆ ಎಂದು ಹೇಳಿದ್ದಾರೆ. ಅರಿಶಿಣ ತ್ವಚೆಯನ್ನು ಆಂತರಿಕವಾಗಿ ಕೂಡ ಪೋಷಣೆ ಮಾಡುತ್ತದೆ.
ಮಂಡಿ ನೋವು ಕಡಿಮೆಯಾಗುವುದು
ಇನ್ನು ನೀರಿಗೆ ಅರಿಶಿಣ ಹಾಕಿ ಕುಡಿಯುವುದರಿಂದ ಮಂಡಿ ನೋವು ಕಡಿಮೆಯಾಗುವುದು. ಇದರಿಂದ ಮಂಡಿ ನೋವು ಕಡಿಮೆಯಾಗುವುದು.
ಇಷ್ಟೆಲ್ಲಾ ಗುಣಗಳು ಅರಿಶಿಣದಲ್ಲಿದೆ. ಅರಿಶಿಣ ಖರೀದಿಸುವಾಗ ಅದಕ್ಕೆ ಕೃತಕ ಬಣ್ಣ ಮಿಶ್ರವಾಗಿಲ್ಲ ಎಂದು ಖಾತರಿಪಡಿಸಿಕೊಳ್ಳಿ, ಅರಿಶಿಣ ಹೆಚ್ಚಾಗಿ ಸೇವಿಸಬೇಕಾಗಿಲ್ಲ, ನೀವು ಸ್ವಲ್ಪ ಅರಿಶಿಣ ಹಾಕಿ ಸೇವಿಸಬಹುದು. ಮಕ್ಕಳು ನೀರಿನಲ್ಲಿ ಹಾಕಿಕೊಟ್ಟರೆ ಕುಡಿಯಲ್ಲ, ಹಾಗಾಗಿ ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕೊಡಿ, ತುಂಬಾನೇ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
