Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ನಟಿ ಶ್ರೀದೇವಿ-ಇಳಿ ವಯಸ್ಸಿನಲ್ಲೂ ಪಾದರಸದ ಹುರುಪು!
ತಮ್ಮ ಇಳಿ ವಯಸ್ಸಿನಲ್ಲೂ ಸುಂದರಿಯಾಗಿ ಕಾಣಿಸುವುದು ತುಸು ಕಷ್ಟದ ಕೆಲಸವೇ ಆಗಿದೆ. ವಯಸ್ಸನ್ನು ಮರೆಸಿ ಯವ್ವನವನ್ನು ಹೊಮ್ಮಿಸುವುದು ನಿಜಕ್ಕೂ ಸವಾಲಿನ ಕೆಲಸವೇ. ಈ ಸಾಲಿನಲ್ಲಿ ಪ್ರಸ್ತುತ ಕನಸಿನ ಕನ್ಯೆ ಹೇಮಮಾಲಿನಿ, ರೇಖಾ, ಜಯಪ್ರದ ಮೊದಲಾದ ಸಿನಿ ತಾರೆಯನ್ನು ಹೆಸರಿಸಬಹುದಾಗಿದೆ.

ಈಗ ಇನ್ನೊಬ್ಬ ಸುಂದರಿ ಶ್ರೀದೇವಿ ಕೂಡ ತಮ್ಮ ಇಳಿಹರೆಯವನ್ನು ಮರೆಮಾಚಿ ಬಾಲಿವುಡ್‌ನ ತರುಣಿಯರನ್ನು ನಾಚಿಸುಂತಹ ಸೌಂದರ್ಯದ ಬೆಡಗಿನಿಂದ ಕಂಗೊಳಿಸುತ್ತಿದ್ದಾರೆ. ತಮ್ಮ ಸೌಂದರ್ಯವನ್ನು ಒಂದಿನಿತೂ ಕುಂದದಂತೆ ಕಾಪಾಡಿಕೊಂಡು ಬರುತ್ತಿರುವ ಶ್ರೀದೇವಿ ಯಾವುದೇ ದಿರಿಸಿನಲ್ಲೂ ಯಾವುದೇ ಮೇಕಪ್‌ನಲ್ಲಿ ಕೂಡ ಮೀರಿಸುವ ಚೆಲುವನ್ನು ಬಹಿರಂಗಪಡಿಸುತ್ತಿದ್ದಾರೆ.
ಇತ್ತೀಚೆಗೆ ತಮಿಳು ಚಿತ್ರ 'ಪುಲಿ'ಯಲ್ಲೂ ಕೂಡ ನಟಿಸಿ ತಮ್ಮ ಅಂದವನ್ನು ಇನ್ನೊಮ್ಮೆ ಜಗಜ್ಜಾಹೀರುಗೊಳಿಸಿದ್ದಾರೆ. ಅಂತೂ ಶ್ರೀದೇವಿ ತಮ್ಮ ಅಂದವನ್ನು ಕಾಪಾಡಿಕೊಳ್ಳಲು ಸಖತ್ತಾಗಿ ವರ್ಕೌಟ್ ಅನ್ನು ಮಾಡುತ್ತಿದ್ದಾರೆ ಎಂದು ಹೇಳಲು ಅಡ್ಡಿಯೇನಿಲ್ಲ.
ಇತ್ತೀಚೆಗೆ ಶ್ರೀದೇವಿ ತಮ್ಮ ಅಂದವನ್ನು ಪ್ರಸ್ತುತಪಡಿಸಿರುವುದು ನೆಲಮುಟ್ಟುವ ಉದ್ದವನ್ನು ಹೊಂದಿರುವ ಗಾಢ ಹಳದಿ ದಿರಿಸಿನಲ್ಲಾಗಿದೆ. ಇದು ವೃತ್ತಾಕಾರದ ಕುತ್ತಿಗೆ ವಿನ್ಯಾಸವನ್ನು ಪಡೆದುಕೊಂಡಿದ್ದು ಗೌನ್ ಕೆಳಭಾಗದಲ್ಲಿ ನೆರಿಗೆಗಳನ್ನು ಹೊಂದಿದೆ. ಸರಳವಾಗಿ ಸುಂದರವಾಗಿ ಕಾಣುತ್ತಿರುವ ಗೌನ್ ಶ್ರೀದೇವಿಗೆ ಅಂದವಾಗಿ ಕಾಣುತ್ತಿದೆ. ಈ ದಿರಿಸಿಗಾಗಿ ಶ್ರೀದೇವಿ ಪೋನಿಟೇಲ್ ಕೇಶವಿನ್ಯಾಸವನ್ನು ಆಯ್ದುಕೊಂಡಿದ್ದು ಶ್ರೀದೇವಿಯ ಅಂದವನ್ನು ಇದು ಎದ್ದುಗಾಣಿಸಿದೆ.
ಇನ್ನೊಂದು ನೋಟದಲ್ಲಿ ಶ್ರೀದೇವಿ ಬಿಳಿ ಬಣ್ಣದ ಉದ್ದನೆಯ ಗೌನ್ ಅನ್ನು ಧರಿಸಿದ್ದು ಇದು ಬಿಳಿ ಸ್ಕರ್ಟ್ ಮತ್ತು ಬಿಳಿ ಶರ್ಟ್‌ನಿಂದ ಮೋಡಿ ಮಾಡುವಂತಿದೆ. ಎತ್ತರದ ಪೋನಿಟೇಲ್‌ನಲ್ಲಿ ಕೇಶಾಲಂಕಾರವನ್ನು ಮಾಡಿಕೊಂಡಿರುವ ಶ್ರೀದೇವಿ ಅದ್ಭುತ ಸುಂದರಿಯಾಗಿ ಕಾಣುತ್ತಿದ್ದಾರೆ.



Click it and Unblock the Notifications



