For Quick Alerts
ALLOW NOTIFICATIONS  
For Daily Alerts

ಯೋಗ ದಿರಿಸಿನಲ್ಲಿ ಮಲೈಕಾ ಇನ್ನೂ ಸೂಪರ್ ಆಗಿ ಕಾಣುತ್ತಿದ್ದಾರೆ!

By Jaya sybramanya
|

ಬಾಲಿವುಡ್ ಅಂಗಣದಲ್ಲಿ ಇತ್ತೀಚೆಗೆ ತಾಯಂದಿರು ಚಿರಯವ್ವೌನದಿಂದ ಮಿಂಚುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ಐಶ್ವರ್ಯಾ, ಟ್ವಿಂಕಲ್ ಖನ್ನಾ, ರವೀನಾ ಟಂಡನ್, ಜೆನಿಲಿಯಾ ಇವರೆಲ್ಲರೂ ಮಕ್ಕಳ ತಾಯಂದಿರಾಗಿದ್ದರೂ ಇಂದಿಗೂ ತಮ್ಮ ಹಿಂದಿನ ಹೊಳಪನ್ನು ಬಿಡದೆ ಇನ್ನಷ್ಟು ಕಂಗೊಳಿಸುತ್ತಾ ಕಣ್ಣು ಕುಕ್ಕುತ್ತಿದ್ದಾರೆ. ಇದೀಗ ಇವರ ಸರದಿಗೆ ಮಲೈಕಾ ಅರೋರಾ ಖಾನ್ ಕೂಡ ಬಂದಿದ್ದಾರೆ. ಮಲೈಕಾ ಇಂದು ಬಾಲಿವುಡ್‌ನಲ್ಲಿ ಬೇಡಿಕೆಯ ನಟಿ ಎಂದೆನಿಸಿಕೊಂಡಿರುವುದು ಅವರು ಅನುಸರಿಸುವ ಫಿಟ್‌ನೆಸ್ ಕ್ರಮದಿಂದಾಗಿದೆ.

ಆಕೆ ಫಿಟ್‌ನೆಸ್ ವಿಷಯಕ್ಕೆ ಬಂದಾಗ ಹೆಚ್ಚು ಕಟ್ಟುನಿಟ್ಟಾಗಿದ್ದು ಇದಕ್ಕಾಗಿ ಮಾಡುವ ಸ್ಟೈಲ್‌ನಲ್ಲಿ ಕೂಡ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದಾರೆ. ತಮ್ಮ ಎಂದಿನ ದಿನಚರಿಯಾದ ಯೋಗ ತರಗತಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಲೈಕಾ ಕ್ಯಾಮೆರಾ ಕಣ್ಣಿಗೆ ಬಿದಿದ್ದಾರೆ. ರೇಸರ್ ಬ್ಯಾಕ್ ಕ್ರಾಪ್ ಟಾಪ್ ಮತ್ತು ಸ್ಕಿನ್ ಟೈಟ್ ಫುಲ್ ಪ್ಯಾಂಟ್‌ ಧರಿಸಿದ್ದ ಮಲೈಕಾ ಈ ಉಡುಗೆಯಲ್ಲಿ ಕೂಡ ಸ್ಟೈಲ್ ಆಗಿ ಕಂಡುಬಂದಿದ್ದರು.

ಕೂದಲನ್ನು ಎತ್ತಿಕಟ್ಟಿ ತುರುಬು ಹಾಕಿದ್ದ ಮಲೈಕಾ ತಂಪು ಕನ್ನಡಕ ಧರಿಸಿ ಸರಳವಾಗಿ ಕಂಡುಬಂದಿದ್ದರು. ಅದಾಗ್ಯೂ ಅವರ ಹಾಟ್ ಲುಕ್ ಮಾತ್ರ ಎಂಥವರನ್ನೂ ನಾಚಿಸುವಂತಿತ್ತು. ಅವರ ಫಿಟ್ ಬಾಡಿ ಎಲ್ಲಾ ತಾಯಂದಿರಿಗೂ ಮಾರ್ಗದರ್ಶಿ ಎಂದೆನಿಸಲಿದೆ.

English summary

Malaika Arora Is The Stylish Fitness Queen In Her Yoga Attire

If you have to name one fitness style freak of Bollywood, whom would you choose? For us, the first name that strikes our minds is Malaika Arora. She not only sets us fitness goals, her style for fitness and for everything is perfect to the 'T''. We spotted her on the way out of her yoga classes and she was looking as 'fit and hot' as ever. She was wearing a racer back crop top and skin-fit full pants for her traditional workout regime.
Story first published: Tuesday, June 20, 2017, 23:36 [IST]
X