Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪಂಚಮುಖಿ ರುದ್ರಾಕ್ಷಿಯಿಂದಾಗುವ ಲಾಭವೇನು ಗೊತ್ತಾ? ನಿಮ್ಮ ಜೀವನ ಬದಲಾಯಿಸುವಷ್ಟು ಶಕ್ತಿ ಇದರಲ್ಲಿದೆ
ರುದ್ರಾಕ್ಷಿ ಧರಿಸುವುದರಿಂದ ಆರೋಗ್ಯಕರ ಲಾಭಗಳ ನೋಡಬಹುದು ಎಂಬುದು ನಿಮಗೂ ತಿಳಿದಿರಬಹುದು. ಹಾಗೆ ಶಿವನ ಸ್ವರೂಪವಾದ ರುದ್ರಾಕ್ಷಿಯನ್ನು ಧರಿಸುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಬಹಳ ಲಾಭಗಳಿವೆ. ಇನ್ನು ರುದ್ರಾಕ್ಷಿಯು ಶಿವನ ಸ್ವರೂಪವಾಗಿರಲಿದೆ. ಅಲ್ಲದೆ ರುದ್ರಾಕ್ಷಿಗಳಲ್ಲೂ ಹಲವು ರೀತಿಯ ವಿಧಗಳಿವೆ.
ರುದ್ರಾಕ್ಷಿಯನ್ನು ಯಾವ ರೀತಿ ಬಳಸಬೇಕು, ಅದನ್ನು ಯಾರು ಧರಿಸಬೇಕು? ಧರಿಸುವ ಹಿಂದಿರುವ ಲಾಭವೇನು? ನಿಯಮಗಳೇನು ಎಂಬುದನ್ನು ಕೂಡ ನಾವು ಅರಿತುಕೊಂಡಿರಬೇಕು. ಅದ್ರಲ್ಲೂ ನಾವಿಂದು ಪಂಚಮುಖಿ ರುದ್ರಾಕ್ಷಿ ಕುರಿತಾಗಿ ತಿಳಿದುಕೊಳ್ಳೋಣ. ಪಂಚಮುಖಿ ರುದ್ರಾಕ್ಷಿಯಿಂದಾಗುವ ಲಾಭವೇನು ಅನ್ನೋದನ್ನು ನೋಡೋಣ.

ರುದ್ರಾಕ್ಷಿಯನ್ನು ಶಿವನ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಶಿವನ ಆರಾಧಕರು ಹೆಚ್ಚಾಗಿ ರುದ್ರಾಕ್ಷಿಯನ್ನು ಧರಿಸುವುದು ನೋಡಬಹುದು. ಧ್ಯಾನ, ತಪಸ್ಸು, ಪೂಜೆ ಮಾಡುವಾಗ ರುದ್ರಾಕ್ಷಿಗಳ ಬಳಸುವುದು ನೋಡಬಹುದು. ಪಂಚಮುಖಿ ರುದ್ರಾಕ್ಷಿಯು ಐದು ನೈಸರ್ಗಿಕ ಭಾಗಗಳು ಅಥವಾ ಮುಖಗಳನ್ನು ಹೊಂದಿರುವ ದೈವಿಕ ಮಣಿಯಾಗಿದೆ. ಪಂಚಮುಖಿ ರುದ್ರಾಕ್ಷಿಯು ಸಾಮಾನ್ಯವಾಗಿ ಎಲ್ಲಾ ಕಡೆ ಸಿಗುವಂತಹ ರುದ್ರಾಕ್ಷಿಯಾಗಿದೆ.
ಪಂಚಮುಖಿ ರುದ್ರಾಕ್ಷಿಯು ಆಧ್ಯಾತ್ಮಿಕ ಹಾಗೂ ಆರೋಗ್ಯಕರ ಪ್ರಗತಿಗೆ ಕಾರಣವಾಗಲಿದೆ ಎಂದು ನಂಬಲಾಗಿದೆ. ಇದು ಆಧ್ಯಾತ್ಮಿಕವಾಗಿ ನಿಮ್ಮನ್ನು ಬಲಗೊಳಿಸುವುದಲ್ಲದೆ ಮಾನಸಿಕ ಶಾಂತಿಗೆ ಇದು ಕಾರಣವಾಗಲಿದೆ. ಸ್ವಯಂ ಸಾಕ್ಷಾತ್ಕಾರಕ್ಕೆ ಹಾಗೆ ಕಾರ್ಯ ಸಿದ್ದಿಗೆ ಇದು ಉತ್ತಮ ಎಂದು ಹೇಳಲಾಗುತ್ತದೆ. ಪಂಚಮುಖಿ ರುದ್ರಾಕ್ಷಿ ಧರಿಸುವುದರಿಂದ ನೀವು ಒತ್ತಡದಿಂದ ಮುಕ್ತರಾಗುತ್ತೀರಿ. ಮಾನಸಿಕ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ಮಾಲೆಯಾಗಿ, ಬ್ರೇಸ್‌ಲೆಟ್ ಆಗಿಯೂ ಧರಿಸಬಹುದು.
ಪಂಚಮುಖಿ ರುದ್ರಾಕ್ಷಿ ಬ್ರೇಸ್‌ಲೆಟ್ ಖರೀದಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
ಪಂಚಮುಖಿ ರುದ್ರಾಕ್ಷಿಯು ಎಲ್ಲರಲ್ಲೂ ಅತ್ಯುತ್ತಮ ಫಲಿತಾಂಶ ನೀಡಲಿದೆ. ಈ ಶಕ್ತಿಶಾಲಿ ಪಂಚಮುಖಿ ರುದ್ರಾಕ್ಷಿ ಬ್ರೇಸ್‌ಲೆಟ್ ಧರಿಸಿದರೆ ಶಾಂತಿ, ಸ್ಪಷ್ಟತೆ ಮತ್ತು ಆಧ್ಯಾತ್ಮಿಕ ರಕ್ಷಣೆಯ ಅನುಭವಿಸಬಹುದು. ನೈಜ ಪಂಚಮುಖಿ ರುದ್ರಾಕ್ಷಿಯಿಂದ ತಯಾರಿಸಲ್ಪಟ್ಟ ಈ ಪವಿತ್ರ ರುದ್ರಾಕ್ಷಿ ಬ್ರೇಸ್‌ಲೆಟ್ ಭಾವನಾತ್ಮಕ ಸಮತೋಲನವನ್ನು ಉತ್ತೇಜಿಸಲು, ಗಮನವನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸಲು ಸಹಕಾರಿಯಾಗಿದೆ.
ಪಂಚಮುಖಿ ರುದ್ರಾಕ್ಷಿಯ ಪ್ರಯೋಜನಗಳು
ವ್ಯವಹಾರ ಬೆಳವಣಿಗೆ, ಮದುವೆ ಮತ್ತು ಸಂಪತ್ತಿನಲ್ಲಿ ಸಹಾಯ ಮಾಡುತ್ತದೆ
ಹಿಂದಿನ ಪಾಪ ಕರ್ಮಗಳಿಂದಲೂ ನೀವು ಮುಕ್ತಿ ಪಡೆಯಲು ಇದು ಸಹಕಾರಿ ಹಾಗೆ ನಕಾರಾತ್ಮಕತೆಯನ್ನು ತೊಡೆದು ಹಾಕುತ್ತದೆ
ದುರ್ಬಲ ಗುರು (ಬ್ರಹಸ್ಪತಿ) ಯಿಂದ ಬಳಲುತ್ತಿರುವ ಜನರಿಗೆ ಪರಿಣಾಮಕಾರಿ ಆಗಿರಲಿದೆ.
ಪಂಚ ಮುಖಿ ರುದ್ರಾಕ್ಷಿಯನ್ನು ಹೇಗೆ ಧರಿಸಬೇಕು?
ಉತ್ತಮ ಸಮಯ: ಬೆಳಿಗ್ಗೆ ಇದನ್ನು ಧರಿಸಿ.
ಶುದ್ಧೀಕರಣ: ಗಂಗಾ ಜಲ ಅಥವಾ ಸಮುದ್ರ ಉಪ್ಪಿನೊಂದಿಗೆ ಶುದ್ಧ ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿ.
ಚೈತನ್ಯ ತುಂಬಿಸಿ: ಧರಿಸುವ ಮೊದಲು 11 ಬಾರಿ "ಓಂ ನಮಃ ಶಿವಾಯ" ಎಂದು ಜಪಿಸಿ.
'ಓಂ ಹ್ರೀಂ ನಮಃ' ಅಥವಾ 'ಓಂ ನಮಃ ಶಿವಾಯ' ಈ ಎರಡು ಮಂತ್ರಗಳನ್ನು ಪಠಿಸಬೇಕು. ಈ ಮಂತ್ರಗಳನ್ನು ಪಠಿಸುತ್ತಾ ರುದ್ರಾಕ್ಷಿಯನ್ನು ಧರಿಸಿದರೆ ರುದ್ರಾಕ್ಷಿಯ ಶಕ್ತಿಯು ಸಕ್ರಿಯಗೊಳ್ಳುತ್ತದೆ. ಹಾಗೆ ಪಂಚಮುಖಿ ರುದ್ರಾಕ್ಷಿಯನ್ನು ಧರಿಸಲು ಅತ್ಯಂತ ಶುಭವಾದ ದಿನ ಸೋಮವಾರ ಅಥವಾ ಗುರುವಾರವೆಂದು ಹೇಳಲಾಗುತ್ತದೆ.
(ಹಕ್ಕು ನಿರಾಕರಣೆ: ಈ ಲೇಖನವು ಪ್ರಾಯೋಜಿತ ಲಿಂಕ್‌ಗಳನ್ನು ಒಳಗೊಂಡಿದೆ. ಈ ಮೂಲಕ ನೀವು ಏನಾದರು ಖರೀದಿಸಿದರೆ ನಿಮಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಾವು ಸಣ್ಣ ಕಮಿಷನ್ ಗಳಿಸಬಹುದು. ಖರೀದಿಸುವ ಮೊದಲು ದಯವಿಟ್ಟು ಎಲ್ಲಾ ಉತ್ಪನ್ನ ವಿವರಗಳು ಮತ್ತು ವಿಮರ್ಶೆಗಳನ್ನು ಪರಿಶೀಲಿಸಿ. ನಿಮ್ಮ ಖರೀದಿಯಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ನಾವು ಜವಾಬ್ದಾರರಲ್ಲ.)



Click it and Unblock the Notifications
