Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಐಐಜೆಡಬ್ಲ್ಯೂ 2014: ಹೊಳೆಯುವ ಮಿಂಚಾದ ಸನ್ನಿ ಲಿಯೋನ್!
ಐಐಜೆಡಬ್ಲ್ಯೂ ಇದುವರೆಗೂ ಆಕರ್ಷಕ ತಾರಾ ಮೆರುಗಿನಿಂದ ಕೂಡಿತ್ತು ಎಂದೇ ಹೇಳಬಹುದು. ಭಾರತ ಅಂತರಾಷ್ಟ್ರೀಯ ಚಿನ್ನಾಭರಣ ವಾರ 2014 ರ ಪ್ರಥಮ ದಿನವನ್ನು ಸನ್ನಿ ಲಿಯೋನ್ ಸುಮಿತ್ ಜ್ಯುಯೆಲ್ಸ್ ಅವರ ಅಪಾಲಾ ಸಂಗ್ರಹಕ್ಕಾಗಿ ರಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಆಕೆಯ ಉಪಸ್ಥಿಯಲ್ಲಿ ಅಲ್ಲಿ ಮಿಂಚಿನ ಸಂಚಾರವೇ ಉಂಟಾಯಿತು ಎಂದೇ ಹೇಳಬಹುದು. ಆಕರ್ಷಕ ಕಪ್ಪು ಲೇಸ್ ಗೌನ್ ಅನ್ನು ಧರಿಸಿದ್ದ ಸನ್ನಿ ಅಪ್ಸರೆಯಂತೆ ಕಾಣುತ್ತಿದ್ದರು.
ಗೌನ್‌ನಲ್ಲಿ ಹಾಟ್ ಆಗಿ ಕಂಡುಬಂದ ಸನ್ನಿ ಅಪಾಲಾ ಆಭರಣಗಳ ಮೇಳಕ್ಕೆ ಉತ್ತಮವಾಗಿ ಹೆಜ್ಜೆ ಹಾಕಿದ್ದಾರೆ. ಬೇರೆ ಬೇರೆ ವಿನ್ಯಾಸದ ಆಭರಣಗಳನ್ನು ತೊಟ್ಟ ಮನವನ್ನು ಕದಿಯುವ ನೋಟವನ್ನು ಬೀರಿರುವ ಸನ್ನಿ ರಾಂಪ್‌ನಲ್ಲೂ ಸೈ ಎನ್ನಿಸಿಕೊಂಡಿದ್ದಾರೆ. ಸನ್ನಿ ಮತ್ತು ಇತರ ರೂಪದರ್ಶಿಯರು ಅಪಾಲಾಕ್ಕೆ ಹೆಜ್ಜೆ ಹಾಕಿದ ಪರಿಯನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನಾವು ನಿಮಗಾಗಿ ನೀಡಿದ್ದು ಇಲ್ಲಿ ನೋಟ ಹರಿಸಿ.
ಅನಾರ್ಕಲಿ ಡ್ರೆಸ್‌ನಲ್ಲಿ ಕಣ್ಮನ ಸೆಳೆದ ಸನ್ನಿ ಲಿಯೋನ್

ಟ್ರೈಬಲ್ ರಾಣಿ
ರೋಯಲ್ ಟ್ರೈಬ್ ಆಗಿ ಕಾಣಿಸಿಕೊಂಡಿರುವ ಸನ್ನಿ ರಾಣಿಯಂತೆ ಇಲ್ಲಿ ಮಿಂಚಿದ್ದಾರೆ.

ಬಾಜುಬಂದ್
ಸನ್ನಿ ತನ್ನ ಮೇಲ್ಭುಜಕ್ಕೆ ಧರಿಸಿರುವ ಆಭರಣ ಬಾಜುಬಂದ್ ಆಗಿದ್ದು ಗಟ್ಟಿಯಾದ ಚಿನ್ನದಿಂದ ಮಾಡಿದ್ದಾಗಿದೆ.

ಪರಂಡಿ
ಸನ್ನಿಯ ನೆಕ್ಲೇಸ್‌ಗೆ ಹಸಿರು ಪರಂಡಿಯನ್ನು ಜೋಡಿಸಲಾಗಿದೆ. ಇದು ಅತೀ ವಿಶಿಷ್ಟವಾಗಿ ಕಂಡುಬಂದಿದೆ.

ತಿಯಾರಾ
ಮೂರು ಪದರದ ತ್ರಿಯಾರಾವನ್ನು ಸನ್ನಿ ತಮ್ಮ ಕೇಶಕ್ಕೆ ಅಲಂಕರಿಸಿಕೊಂಡಿದ್ದಾರೆ.

ಬೆಳ್ಳಿಯ ಪ್ಲೇಟ್
ಪೂರ್ಣವಾಗಿ ಸಾಂಪ್ರದಾಯಕ್ಕೆ ಸಂಬಂಧಿಸಿದ ಆಭರಣಗಳನ್ನು ಈ ಕನ್ಯೆ ಇಲ್ಲಿ ಪ್ರದರ್ಶಿಸಿದ್ದಾರೆ.

ಹಿಂಭಾಗದ ನೆಕ್ಲೇಸ್
ಹಿಂಭಾಗಕ್ಕೆ ಆಭರಣಗಳನ್ನು ಧರಿಸಿಕೊಳ್ಳುವ ಕ್ರಮ ಈಗಲೂ ಇದೆ. ಚಿತ್ರದಲ್ಲಿ ಸುಂದರವಾದ ಹಿಂಭಾಗ ಆಭರಣವನ್ನು ಈ ರೂಪದರ್ಶಿ ಧರಿಸಿದ್ದಾರೆ.

ಸ್ಪೈಕ್ ಮತ್ತು ನೀಲಿ ಮೆಟಲ್
ಸ್ಪೈಕ್ಸ್ ಆಭರಣ ಶೈಲಿಯಲ್ಲೇ ಅತ್ಯಂತ ಹಳೆಯದಾಗಿದೆ. ನೀಲಿ ಕಲ್ಲಿನಿಂದ ಹೊಳೆಯುತ್ತಿರುವ ಈ ಸ್ಪೈಕ್ಸ್ ಆಭರಣ ಮನಸೂರೆಗೊಳ್ಳುವಂತಿದೆ.

ರೋಯಲ್ ಎಲಿಫೆಂಟ್
ಆಭರಣದ ವಿನ್ಯಾಸ ಹಳೆಯದಾಗಿದ್ದರೂ ಇದು ಆಕರ್ಷಕವಾಗಿದೆ ಮತ್ತು ಅದ್ಧೂರಿಯಾಗಿ ಕಣ್ಸೆಳೆಯುವಂತಿದೆ.

ಕಿವಿಯಾಭರಣ
ಮಹಿಳೆಯರ ಕಿವಿಯಾಭರಣಗಳು ಇದೀಗ ಫ್ಯಾಶನ್ ಆಗಿಬಿಟ್ಟಿದೆ. ಇಯರ್ ಕಫ್‌ಗಳು ಸಾಂಪ್ರದಾಯಿಕವಾಗಿದ್ದರೂ ಇತ್ತೀಚೆಗೆ ಫ್ಯಾಶನ್ ಆಗಿಬಿಟ್ಟಿದೆ.

ಬೆಳ್ಳಿಯ ಹಾರ
ಅದ್ಧೂರಿ ಚಿನ್ನದ ನೆಕ್ಲೇಸ್ ಅನ್ನು ಧರಿಸಿರುವ ಈ ರೂಪದರ್ಶಿ ಆಕರ್ಷಕವಾಗಿರುವ ಬೆಳ್ಳಿಯ ಹಾರವನ್ನು ಧರಿಸಿಕೊಂಡಿದ್ದಾರೆ. ಬೆಳ್ಳಿ ಖಡ್ಗವನ್ನೂ ಧರಿಸಿ ಅಲಂಕಾರವನ್ನು ಪರಿಪೂರ್ಣಗೊಳಿಸಿದ್ದಾರೆ.



Click it and Unblock the Notifications
