Latest Updates
-
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ!
ಐಸಿಡಬ್ಲ್ಯೂ 2014: ರೋಹಿತ್ ಬಾಲಾ ಅವರ ಮನಸೆಳೆಯುವ ಸಂಗ್ರಹ
ಐಸಿಡಬ್ಲ್ಯೂ 2014 ರ ಮೂರನೇ ದಿನದಂದು, ರೋಹಿತ್ ಬಾಲಾ ವಿನ್ಯಾಸದ ಹೆಚ್ಚು ಗ್ಲಾಮರಸ್ ಮತ್ತು ಸ್ಟೈಲ್‌ಗಳಿಂದ ಕೂಡಿದ ವಸ್ತ್ರ ಸಂಗ್ರಹವನ್ನು ನಾವು ನೋಡಿದೆವು. ರಾಂಪ್ ಮೇಲೆ, ರೋಹಿತ್ ಬಾಲಾರ ಹೊಸ ಹೊಸ ವಿನ್ಯಾಸಗಳು ಮನಸೆಳೆದವು. ಪುರುಷ ಮತ್ತು ಮಹಿಳಾ ರೂಪದರ್ಶಿಗಳು ಇವರ ಸಂಗ್ರಹದ ಉಡುಗೆಗೆ ಹೆಜ್ಜೆ ಹಾಕಿದ್ದು ಕಣ್ಣಿಗೆ ಆನಂದವನ್ನೇ ಉಂಟುಮಾಡಿತ್ತು.
ಐಸಿಡಬ್ಲ್ಯೂ 2014 ನಲ್ಲಿ, ಪುರುಷ ಮಾಡೆಲ್‌ಗಳು ಟರ್ಬನ್‌ಗಳನ್ನು ಧರಿಸಿದ್ದರು. ಭಾರತೀಯ ಶೈಲಿಯ ಮದುಮಗನ ಉಡುಗೆಯಾಗಿರುವ ಇದು, ಪ್ರತಿಯೊಂದೂ ಕೂಡ ಕಣ್ಮನ ಸೆಳೆಯುವಂತಿದ್ದವು. ಬಂದಾಗಲಾ ಸೂಟ್‌ಗಳನ್ನು ಚಿನ್ನ ಮತ್ತು ಅತಿ ಮುಖ್ಯ ಮುದ್ರಣಗಳಿಂದ ವಿನ್ಯಾಸಗೊಳಿಸಲಾಗಿದ್ದು ರಾಂಪ್ ಮೇಲೆ ಇದು ಸ್ಟನ್ನಿಂಗ್ ಆಗಿತ್ತು ಎಂದೇ ಹೇಳಬಹುದು. ಐಸಿಡಬ್ಲ್ಯೂನಲ್ಲಿ ರೋಹಿತ್ ಬಾಲಾ ಬಳಸಿದ ಬಣ್ಣಗಳು ಮಾತ್ರ ಅತಿ ರಂಜನೀಯವಾಗಿದ್ದವು. ಬನ್ನಿ ರೋಹಿತ್ ಬಾಲಾ ಅವರ ಮನಸೆಳೆಯುವ ಸಂಗ್ರಹ ಫೋಟೊಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ಐಸಿಡಬ್ಲ್ಯೂ 2014 ಅಂಜು ಮೋದಿಯ ಕಣ್ಸೆಳೆಯುವ ವಿನ್ಯಾಸ

ಬಿಳಿ ಮತ್ತು ಚಿನ್ನದ ಸ್ಪರ್ಶ
ಐಸಿಡಬ್ಲ್ಯೂ 2014 ರ ಮೂರನೇ ದಿನದಂದು ಬಿಳಿ ಮತ್ತು ಚಿನ್ನದ ಸ್ಪರ್ಶ ಉಡುಗೆಗೆ ಮಾಡಲಾಗಿತ್ತು. ಪ್ರತಿಯೊಬ್ಬ ಮಾಡೆಲ್‌ಗಳೂ ಕೂಡ ಸ್ಟೈಲ್‌ನಲ್ಲೇ ಹೆಜ್ಜೆಯನ್ನು ಹಾಕಿದ್ದರು. ಬಿಳಿ ಹಿನ್ನಲೆ ಮತ್ತು ಚಿನ್ನದ ಜರ್ದೋಸಿ ಪ್ಯಾಟ್ರನ್‌ಗಳು ಸೊಗಸಾಗಿದ್ದವು.

ತಮ್ಮ ಮಾಡಲೆಗಳೊಂದಿಗೆ ರೋಹಿತ್ ಬಾಲಾ
ವಿನ್ಯಾಸಕ ರೋಹಿತ್ ಬಾಲಾ ಕೂಡ ತಮ್ಮ ಮಾಡೆಲ್‌ಗಳೊಂದಿಗೆ ಧಿರಿಸನ್ನು ಧರಿಸಿ ಡ್ಯಾಶಿಂಗ್ ಆಗಿ ಕಂಡುಬಂದಿದ್ದಾರೆ.

ಪ್ಲಂಗಿಂಗ್ ನೆಕ್‌ಲೈನ್
ರೋಹಿತ್ ಬಾಲಾರ ರಚನೆಯಲ್ಲಿ ಹೆಚ್ಚಿನ ಪ್ಲಂಗಿಂಗ್ ನೆಕ್‌ಲೈನ್ ಅನ್ನು ನಮಗೆ ಕಾಣಬಹುದಾಗಿದೆ. ಕೀ ಹೋಲ್ ಮಾದರಿ, ಡೀಪ್ ನೆಕ್ಸ್ ಮಾದರಿಗಳು ನಿಜಕ್ಕೂ ಅದ್ಭುತವಾಗಿದ್ದವು.

ಮುದ್ರಣ
ಮುದ್ರಣಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದ್ದವು. ಇದು ಒಂದೇ ಬಣ್ಣವನ್ನು ಹೊಂದಿರದೇ, ಬೇರೆ ಬೇರೆ ಬಣ್ಣಗಳನ್ನು ಹೊಂದಿವೆ.

ಆಭರಣಗಳು
ಈ ಸೂಟ್‌ಗಳಿಗೆ ಹೊಂದಿಕೊಳ್ಳುವಂತಹ ಆಭರಣಗಳನ್ನೇ ಇವರು ಧರಿಸಿದ್ದಾರೆ. ಮುತ್ತು, ಚಿನ್ನ ಮತ್ತು ಕಲ್ಲುಗಳಿಂದ ಅಲಂಕೃತ ಭಾರತೀಯ ಧಿರಿಸು ಇದಾಗಿದೆ.

ಪುರುಷ/ಮಹಿಳಾ ರೂಪದರ್ಶಿಯರು
ಪುರುಷರು ಮತ್ತು ಮಹಿಳಾ ರೂಪದರ್ಶಿಯರ ನಡುವಣ ಪೈಪೋಟಿಯನ್ನು ನಮಗೆ ಇಲ್ಲಿ ಕಾಣಬಹುದಾಗಿದೆ. ಎಲ್ಲರೂ ಒಂದೇ ಬಣ್ಣದ ಉಡುಗೆಗಳನ್ನು ಧರಿಸಿದ್ದರೂ ಅದನ್ನು ವಿಭಿನ್ನವಾಗಿ ಪ್ರದರ್ಶಿಸಿದ್ದಾರೆ.

ರೋಹಿತ್ ಬಾಲಾರ ಕಣ್ಮನ ಸೆಳೆಯುವ ಸಂಗ್ರಹ
ಐಸಿಡಬ್ಲ್ಯೂ 2014 ರ ಮೂರನೇ ದಿನದಂದು, ಈ ಬಣ್ಣಗಳು ಪ್ರದರ್ಶನಗೊಂಡ ಸಂದರ್ಭದಲ್ಲಿ, ನೆರೆದಿದ್ದ ಜನ ಹೆಚ್ಚು ಹರ್ಷವನ್ನು ವ್ಯಕ್ತಪಡಿಸಿದರು. ಅದ್ಭುತ ಬಣ್ಣ ಮತ್ತು ಚಿನ್ನದ ಸ್ಪರ್ಶ ನಿಜಕ್ಕೂ ಕಣ್ಣಿಗೆ ವರ್ಣರಂಜಿತವಾಗಿದೆ.



Click it and Unblock the Notifications