Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಚಳಿಗಾಲದಲ್ಲಿ ಈ ಬ್ಯೂಟಿ ಪ್ರಾಡೆಕ್ಟ್ಸ್ ಬಳಸಲೇಬಾರದು
ಬೇಸಿಗೆ, ಮಳೆಗಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ತ್ವಚೆ ಸಮಸ್ಯೆ ಸ್ವಲ್ಪ ಹೆಚ್ಚಾಗಿಯೇ ಕಂಡು ಬರುತ್ತದೆ. ನಿಮ್ಮದು ಒಣ ತ್ವಚೆ ಆಗಿರದಿದ್ದರೂ ಕೂಡ ತ್ವಚೆ ಒಣಗುವುದು. ಇನ್ನು ಒಣ ತ್ವಚೆಯವರಿಗೆ ತ್ವಚೆಯಲ್ಲಿ ಉರಿ, ಪಾದಗಳಲ್ಲಿ ಬಿರುಕು ಮುಂತಾದ ತೊಂದರೆ ಉಂಟಾಗುವುದು. ಆದ್ದರಿಂದ ಚಳಿಗಾಲದಲ್ಲಿ ತುಸು ಹೆಚ್ಚಾಗಿಯೇ ತ್ವಚೆ ಆರೈಕೆ ಮಾಡಬೇಕಾಗುತ್ತದೆ. ಈ ಸಮಯದಲ್ಲಿ ನಾವು ಬಳಸುವ ಸೌಂದರ್ಯವರ್ಧಕಗಳು ಅಂದರೆ ಬ್ಯೂಟಿ ಪ್ರಾಡೆಕ್ಟ್ಸ್ ಇವುಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.

ಅದರೆ ಹೆಚ್ಚಿಹನವರು ಇಲ್ಲೇ ತಪ್ಪು ಮಾಡುತ್ತಾರೆ, ಕಾಲಕ್ಕೆ ತಕ್ಕಂತೆ ತಮ್ಮ ಕ್ರೀಮ್, ಮಾಯಿಶ್ಚರೈಸರ್, ಸೋಪುಗಳಲ್ಲಿ ಬದಲಾವಣೆ ತರುವುದಿಲ್ಲ. ಇಲ್ಲಿ ನಾವು ನಿಮ್ಮ ತ್ವಚೆ ಸೌಂದರ್ಯ ರಕ್ಷಣೆ ಮಾಡಲು ಚಳಿಗಾಲದಲ್ಲಿ ಯಾವ ಬಗೆಯ ಸೌಂದರ್ಯವರ್ಧಕಗಳನ್ನು ಬಳಸಬಾರದು ಎಂದು ಟಿಪ್ಸ್ ನೀಡಿದ್ದೇವೆ ನೋಡಿ:

ಆಲ್ಕೋಹಾಲ್(ಮದ್ಯ) ಇರುವ ಸೌಂದರ್ಯ ವರ್ಧಕ
ಆಲ್ಕೋಹಾಲ್ ಇರುವ ಸೌಂದರ್ಯವರ್ಧಕ ಬಳಸಿದರೆ ತ್ವಚೆ ಮತ್ತಷ್ಟು ಒಣಗುವುದು. ಅದರಲ್ಲೂ ಒಣ ತ್ವಚೆಯವರು ಆಲ್ಕೋಹಾಲ್ ಅಂಶವಿರುವ ಸೌಂದರ್ಯವರ್ಧಕಗಳನ್ನು ಬಳಸಲೇಬಾರದು. ಆದ್ದರಿಂದ ಯಾವುದೇ ಸೌಂದರ್ಯವರ್ಧಕ ಕೊಳ್ಳುವಾಗ ಅವುಗಳಲ್ಲಿ ಆಲ್ಕೋಹಾಲ್ ಅಂಶವಿದೆಯೇ ಎಂದು ಪರೀಕ್ಷಿಸಿ ಕೊಂಡುಕೊಳ್ಳುವುದು ಒಳ್ಳೆಯದು. ಆಲ್ಕೋಹಾಲ್ ಅಂಶವಿರುವ ಟೋನರ್ ತ್ವಚೆಯಲ್ಲಿರುವ ಕೊಳೆಯಂಶವನ್ನು ಸುಲಭವಾಗಿ ತೆಗೆಯುವುದಾದರೂ ಈ ರೀತಿಯ ವಸ್ತುಗಳು ಚಳಿಗಾಲಕ್ಕೆ ಸೂಕ್ತವಲ್ಲ.

ಸೋಪ್
ಕೆಲವರು ಫೇಸ್ ವಾಶ್ ಬಳಸುವುದಿಲ್ಲ, ಮುಖಕ್ಕೆ ಕೂಡ ಮೈಗೆ ಹಚ್ಚುವ ಸೋಪ್ ಬಳಸುತ್ತಾರೆ. ಆದರೆ ನಿಮ್ಮ ತ್ವಚೆ ಒಣಗಿದ್ದರೆ ಸೋಪ್ ಬಳಸುವುದರಿಂದ ಮತ್ತಷ್ಟು ಒಣಗುವುದು. ಇದರಿಂದ ಮುಖ ಉರಿಯುವುದು. ಸೋಪ್‌ನಲ್ಲಿ pH ಪ್ರಮಾಣ ನಿಮ್ಮ ತ್ವಚೆಯಲ್ಲಿ ಇರುವುದಕ್ಕಿಂತಲೂ ಅಧಿಕವಿರುತ್ತದೆ. ಆದ್ದರಿಂದ ಮುಖಕ್ಕೆ ಸೋಪ್ ಹಚ್ಚಿದಾಗ ಮುಖದಲ್ಲಿರುವ ತೇವಾಂಶವನ್ನು ತೆಗೆಯುವುದು. ಆದ್ದರಿಂದ ಚಳಿಗಾಲದಲ್ಲಿ ಸೋಪ್‌ಗಿಂತ ಫೇಸ್‌ವಾಸ್ ಬಳಸುವುದು ಉತ್ತಮ.

ಅಧಿಕ ಬಾರಿ ಸ್ಕ್ರಬ್ಬ್ರರ್ ಬಳಸುವುದು
ಚಳಿಗಾಲದಲ್ಲಿ ಮುಖದ ಆರೈಕೆಗೆ ಎಕ್ಸ್ಫೋಲೆಟ್ ಮಾಡಬೇಕು, ಅದಕ್ಕೆ ಸ್ಕ್ರಬ್ಬರ್ ಬಳಸುವುದು ಒಳ್ಳೆಯದು. ಇದರಿಂದ ನಿರ್ಜೀವ ತ್ವಚೆಯನ್ನು ತೆಗೆಯಬಹುದು, ತ್ವಚೆ ಆಳದಿಂದ ಕ್ಲೆನ್ಸ್ ಆಗುತ್ತದೆ. ಆದರೆ ಚಳಿಗಾಲದಲ್ಲಿ ಎಕ್ಸ್‌ಫೋಲೆಟ್ ಮಾಡುವಾಗ ಈ ಕಾಲಕ್ಕೆ ಸೂಕ್ತವಾಗುವಂತೆ ಎಕ್ಸ್‌ಫೋಲೆಟ್ ಮಾಡಿ. ಅಂದರೆ ವಾರದಲ್ಲಿ ಒಂದು ಬಾರಿಯಷ್ಟೇ ಬಳಸಿ. ವಾರದಲ್ಲಿ 2-3 ಬಾರಿ ಬಳಸಬೇಡಿ. ಆಗಾಗ ಕ್ಲೆನ್ಸಿಂಗ್ ಮಾಡಿದರೆ ತ್ವಚೆ ಹಾಲಾಗಬಹುದು, ಹುಷಾರ್!

ಪೌಡರ್ ಹಚ್ಚುವುದು
ಚಳಿಗಾಲದಲ್ಲಿ ತ್ವಚೆ ಡ್ರೈಯಾಗಿರುತ್ತದೆ, ಇದಕ್ಕೆ ಪೌಡರ್ ಹಚ್ಚಿದರೆ ಮತ್ತಷ್ಟು ಡ್ರೈಯಾಗುವುದು ಹಾಗೂ ಬಿಳಿ ಬಿಳಿ ಕಾಣುವುದು. ಪೌಡರ್ ಫೌಂಡೇಷನ್, ಬ್ಲಷರ್ ಮುಂತಾದ ವಸ್ತುಗಳನ್ನು ಬಳಸಬೇಡಿ. ಚಳಿಗಾಲದಲ್ಲಿ ತ್ವಚೆ ಸ್ವಲ್ಪ ಎಣ್ಣೆ-ಎಣ್ಣೆಯಾಗಿಡುವ ಕ್ರೀಮ್ ಬಳಸಿ ಹಾಗೂ ಮಾಯಿಶ್ಚರೈಸರ್ ಕೂಡ ಒಣ ತ್ವಚೆಗೆ ಬಳಸುವಂತಾಗಿರಲಿ. ಪೌಡರ್ ಬಳಕೆ ಬದಲು ಕ್ರೀಮ್ ಬಳಕೆ ಚಳಿಗಾಲಕ್ಕೆ ಸೂಕ್ತವಾಗಿದೆ.

ಕ್ಲೇ ಫೇಸ್ ಮಾಸ್ಕ್
ಕ್ಲೇ ಮಾಸ್ಕ್ ತುಂಬಾ ಜನಪ್ರಿಯವಾದ ಸೌಂದರ್ಯವರ್ಧಕವಾಗಿದೆ. ಇದು ತ್ವಚೆಯಲ್ಲಿರುವ ಎಣ್ಣೆಯಂಶ ಹೀರಿಕೊಂಡು ಮುಖದ ತ್ವಚೆಯನ್ನು ಆಳದಿಂದ ಕ್ಲೆನ್ಸ್ ಮಾಡುತ್ತದೆ. ಆದರೆ ಈ ಕ್ಲೇ ಮಾಸ್ಕ್ ಚಳಿಗಾಲಕ್ಕೆ ಸೂಕ್ತವಲ್ಲ. ಚಳಿಗಾಲದಲ್ಲಿ ಮುಲ್ತಾನಿಮಿಟಿ ಬಳಸುವ ಬದಲು ಹಣ್ಣಿನ ಫೇಸ್ ಮಾಸ್ಕ್ ಬಳಸುವುದು ಒಳ್ಳೆಯದು. ಇದರಿಂದ ತ್ವಚೆಯಲ್ಲಿ ತೇವಾಂಶ ಉಳಿಯುತ್ತದೆ ಹಾಗೂ ತ್ವಚೆ ಆಕರ್ಷಕವಾಗಿ ಕಾಣುವುದು.

ತುಂಬಾ ಸುವಾಸನೆ ಇರುವ ಸೌಂದರ್ಯವರ್ಧಕಗಳು
ತುಂಬಾ ಸುವಾಸನೆ ಬೀರುವ ಸೌಂದರ್ಯವರ್ಧಕಗಳು ಇಷ್ಟವಾಗುತ್ತವೆ ಆದರೆ ಅದು ಒಣ ತ್ವಚೆಗೆ ಸೂಕ್ತವಲ್ಲ. ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ಸುವಾಸನೆ ಇರುವ ಸೌಂದರ್ಯವರ್ಧಕಗಳನ್ನು ಬಳಸಲೇಬೇಡಿ. ಇವುಗಳನ್ನು ಬಳಸುವುದರಿಂದ ತ್ವಚೆ ಮತ್ತಷ್ಟು ಒಣಗಿ ನೋವು ಉಂಟಾಗುವುದು. ಇದರಿಂದ ತ್ವಚೆಯಲ್ಲಿ ಉರಿ, ನೋವು ಕೂಡ ಉಂಟಾಗುವುದು. ಆದಷ್ಟು ಸುವಾಸನೆ ಕಡಿಮೆ ಇರುವ ಕ್ರೀಮ್, ಬಾಡಿ ಲೋಷನ್, ಮಾಯಿಶ್ಚರೈಸರ್ ಬಳಸುವುದು ಒಳ್ಳೆಯದು.



Click it and Unblock the Notifications











