Latest Updates
-
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು!
ಈ ಸಲಹೆಗಳನ್ನು ಅನುಸರಿಸಿದರೆ, ಮೊಡವೆ ಹತೋಟಿಗೆ ಬರುವುದರಲ್ಲಿ ಸಂಶಯವಿಲ್ಲ
ಹೆಂಗಳೆಯರ ನಿದ್ದೆಕೆಡಿಸುವ ವಿಚಾರಗಳಲ್ಲಿ ಮುಖದಲ್ಲಿ ಮೊಡವೆಯಿರುವುದು ಕೂಡ ಒಂದಾಗಿದೆ. ಅದೂ ಎಣ್ಣೆಯುಕ್ತ ತ್ವಚೆಯುಳ್ಳವರ ಪಾಡು ಹೇಳತೀರದು, ಏಕೆಂದರೆ ಇತರ ಚರ್ಮಕ್ಕೆ ಹೋಲಿಸಿದರೆ, ಎಣ್ಣೆಯುಕ್ತ ತ್ವಚೆ ಹೊಂದಿರುವವರೇ ಈ ಮೊಡವೆ ಸಮಸ್ಯೆಗೆ ಹೆಚ್ಚು ಗುರಿಯಾಗುವುದು. ಇಂತಹವರು ಮೊಡವೆಗಳಿಂದ ದೂರವಿರಬೇಕಾದರೆ ಕೆಲವೊಂದು ಪ್ರಮುಖ ಸಲಹೆಗಳನ್ನು ಪಾಲಿಸಬೇಕಾಗುತ್ತದೆ.
ಹಾಗಾದರೆ, ಎಣ್ಣೆಯುಕ್ತ ತ್ವಚೆ ಹೊಂದಿರುವವರು ಮೊಡವೆಯಿಂದ ಮುಕ್ತಿ ಪಡೆಯಲು ತೆಗೆದುಕೊಳ್ಳಬೇಕಾದ ಆರೈಕೆ ಕ್ರಮಗಳಾವುವು ನೋಡಿಕೊಂಡು ಬರೋಣ.
ಮೊಡವೆಯುಕ್ತ ತ್ವಚೆ ಹೊಂದಿರುವವರು ಪಾಲಿಸಬೇಕಾದ ಸಲಹೆಗಳನ್ನ ಈ ಕೆಳಗೆ ನೀಡಲಾಗಿದೆ:

ಮೊಡವೆಗಳು ಹೇಗೆ ಉಂಟಾಗುತ್ತವೆ?:
ಚರ್ಮದಿಂದ ಉತ್ಪತ್ತಿಯಾಗುವ ಎಣ್ಣೆಯ ಅಂಶ ಮತ್ತು ಚರ್ಮದ ಮೇಲಿನ ಸತ್ತ ಜೀವ ಕೋಶಗಳು ಮುಖದ ಮೇಲೆ ಮೂಡಿ ಬರುವ ಸಣ್ಣ ಸಣ್ಣ ಕೂದಲುಗಳನ್ನು ಮೂಡಿ ಬರದಂತೆ ಅಲ್ಲೇ ತಡೆಯುತ್ತವೆ. ಈ ರೀತಿ ಮಾಡುವುದರಿಂದ ಚರ್ಮದ ಮೇಲೆ ಉರಿಯೂತ ಉಂಟಾಗಿ ಮೊಡವೆಗಳ ರೂಪದಲ್ಲಿ ಕಾಣುತ್ತವೆ.

ಮೊಡವೆ ತಡೆಯಲು ಈ ಕೆಳಗಿನ ಕೆಲವು ಸಾಮಾನ್ಯ ಸಲಹೆಗಳನ್ನು ಅನುಸರಿಸಿ:
ದಿನಕ್ಕೆ ಎರಡು ಬಾರಿ ಮುಖ ತೊಳೆಯಿರಿ:
ಯಾವುದೇ ಚರ್ಮ ಪ್ರಕಾರವಾಗಿರಲಿ, ಸ್ವಚ್ಛತೆಯು ಯಾವಾಗಲೂ ಮೊದಲಿರಬೇಕು. ದಿನಕ್ಕೆ ಎರಡು ಬಾರಿ ನಿಮ್ಮ ತ್ವಚೆಯನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ, ವಿಶೇಷವಾಗಿ ನೀವು ಮೊಡವೆಗಳನ್ನು ಹೊಂದಿದ್ದರೆ. ಎರಡು ಬಾರಿ ಮುಖ್ ತೊಳೆಯುವುದರಿಂದ ಯಾವುದೇ ಮಾಲಿನ್ಯಕಾರಕಗಳು, ಎಣ್ಣೆ ಮತ್ತು ಧೂಳನ್ನು ತೆಗೆದುಹಾಕಬಹುದು. ಇಲ್ಲವಾದಲ್ಲಿ ಈ ಕೊಳಗಳು, ಚರ್ಮದ ರಂಧ್ರಗಳನ್ನು ನಿರ್ಬಂಧಿಸಿ, ವೈಟ್‌ಹೆಡ್‌ಗಳು ಮತ್ತು ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ. ಇದಕ್ಕಾಗಿ ನೀವು ಮೊಡವೆ ವಿರುದ್ಧ ಹೋರಾಡುವ ವಿಶೇಷ ಫೇಸ್ ವಾಶ್ ಬಳಸುವ ಅವಶ್ಯಕತೆಯಿಲ್ಲ.

ಮುಖವನ್ನು ಮುಟ್ಟಬೇಡಿ ಅಥವಾ ಮೊಡವೆಗಳನ್ನು ಉಜ್ಜಬೇಡಿ:
ಸಹಜವಾಗಿ, ಇದನ್ನ ಮಾಡಿಯೇ ಮಾಡುತ್ತೇವೆ. ಆದರೆ ಇದು ತಪ್ಪು. ಮೊಡವೆಗಳನ್ನು ತೆಗೆಯುವುದು, ಹಿಸುಕುವುದು ಮತ್ತು ಉಜ್ಜುವ ಮೂಲಕ ಅದು ಮತ್ತಷ್ಟು ಹೆಚ್ಚಾಗುತ್ತದೆ. ಮೊಡವೆಯನ್ನು ಹಿಸುಕುವುದರಿಂದ, ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಮುಖದಿಂದ ನಿಮ್ಮ ಕೈಯನ್ನು ದೂರವಿಡುವುದು ಉತ್ತಮ. ಪದೇಪದೇ ಮುಖವನ್ನು ಮುಟ್ಟುವುದರಿಂದ, ಕೈಯಲ್ಲಿರುವ ಕೊಳೆ ತ್ವಚೆ ಸೇರಿ, ಮೊಡವೆ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ.

ಟೋನರ್, ಮಾಯಿಶ್ಚರೈಸರ್ ಬಳಸಿ, ಸ್ಕ್ರಬ್ಬಿಂಗ್ ಬಿಡಬೇಡಿ:
ಮೊಡವೆ ಪೀಡಿತ ತ್ವಚೆಯನ್ನು ತೊಳೆದ ನಂತರ, ಏನು ಮಾಡುತ್ತೀರಿ ಎಂಬುದು ಸಹ ಬಹಳ ಮುಖ್ಯ. ತ್ವಚೆಯನ್ನು ಎಫ್ಫೋಲಿಯೇಟ್ ಮಾಡಿದ ನಂತರ, ಅದನ್ನು ರಿಫ್ರೆಶ್ ಮಾಡಲು ಮತ್ತು ಆರ್ಧ್ರಕಗೊಳಿಸಲು ಟೋನರ್ ಮತ್ತು ಮಾಯಿಶ್ಚರೈಸರ್ ಬಳಸುವುದು ನಿರ್ಣಾಯಕವಾಗಿದೆ. ಮೊಡವೆಗಳು ಉಲ್ಬಣಗೊಳ್ಳುವುದನ್ನು ತಡೆಯುವಲ್ಲಿ ಇದು ಒಂದು ಪ್ರಮುಖ ಹಂತವಾಗಿದೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರ, ಟೋನರ್, ಸೀರಮ್ ಮತ್ತು ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ. ಈ ಮೂರು ಅಂಶಗಳು ನಿಮ್ಮ ತ್ವಚೆಯನ್ನು ಕೂಲ್ ಮಾಡಲು ಸಹಾಯ ಮಾಡುತ್ತವೆ.

ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ:
ನಾವು ಸೇವಿಸುವ ಆಹಾರ ಮತ್ತು ಮೊಡವೆಗಳ ನಡುವಿನ ಲಿಂಕ್ ಇದೆ. ಆದ್ದರಿಂದ ಆರೋಗ್ಯ ಪೂರ್ಣ ಆಹಾರ ಸೇವಿಸಿ. ಹುರಿದ ಎಣ್ಣೆಯುಕ್ತ ಆಹಾರವನ್ನು ಹೆಚ್ಚು ಸೇವಿಸಿದರೆ, ತೂಕದ ಜೊತೆಗೆ ನಿಮ್ಮ ಮುಖದ ಸೌಂದರ್ಯವೂ ಮಾಯವಾಗಿ ಮೊಡವೆಗಳ ಆಗಮನಕ್ಕೆ ಕಾರಣವಾಗುತ್ತದೆ. ಆದ್ದರಿಂದ ಹಣ್ಣು-ತರಕಾರಿ ಮಿಶ್ರಿತ ಆಹಾರಗಳನ್ನು ಹೆಚ್ಚೆಚ್ಚು ಸೇವಿಸುವುದು ಉತ್ತಮ. ಜೊತೆಗೆ ಸಾಕಷ್ಟು ನೀರು ಕುಡಿಯಿರಿ.



Click it and Unblock the Notifications