Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಹದಿಹರೆಯದವರನ್ನು ಕಾಡುವ ಮೊಡವೆಗೆ ಇಲ್ಲಿದೆ ಪರಿಹಾರ
ಹದಿಹರೆಯದ ವಯಸ್ಸಿನಲ್ಲಿ ಮೊಡವೆಗಳು ಸಹಜ. ಹಾರ್ಮೋನ್ ಬದಲಾವಣೆ ಹಾಗೂ ಪ್ರೌಢಾವಸ್ಥೆಯೇ ಇದಕ್ಕೆ ಮುಖ್ಯ ಕಾರಣ. ಇವುಗಳ ಜೊತೆಗೆ ನಮ್ಮ ಜೀವನಶೈಲಿ ಸೇರಿದಂತೆ ನಾನಾ ಅಂಶಗಳು ಪ್ರಭಾವ ಬೀರುತ್ತವೆ. ಆದರೆ, ಇದನ್ನು ನಮ್ಮ ಆಹಾರಪದ್ಧತಿಯ ಮೂಲಕ ಹತೋಟಿಗೆ ತರಬಹುದು. ಏಕೆಂದರೆ ಇದು ಕೂಡ, ಮೊಡವೆ ಉಲ್ಬಣಿಸಲು ಕಾರಣವಾಗಿದೆ. ಆದ್ದರಿಂದ ನಾವಿಂದು, ತಜ್ಞರ ಪ್ರಕಾರ, ಹದಿಹರೆಯದವರಲ್ಲಿ ಕಂಡುಬರುವ ಮೊಡವೆ ಸಮಸ್ಯೆ ಹೋಗಲಾಡಿಸಲು, ಪಾಲಿಸಬೇಕಾದ ಆಹಾರ ಪದ್ಧತಿಗಳ ಬಗ್ಗೆ ಹೇಳಿದ್ದೇವೆ. ಇದು ಮೊಡವೆಯನ್ನು ಕಡಿಮೆಮಾಡಿ, ಸ್ಪಷ್ಟವಾದ ಮುಖವನ್ನು ನೀಡುವುದು.
ಹದಿಹರೆಯದ ವಯಸ್ಸಿನಲ್ಲಿ ಕಂಡುಬರುವ ಮೊಡವೆ ಸಮಸ್ಯೆಯನ್ನು ಕಡಿಮೆಮಾಡಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸಿ:
ಆಗಾಗ ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸುವುದು ತುಂಬಾ ಮುಖ್ಯ. ಏಕೆಂದರೆ ಕಡಿಮೆ ಪ್ರಮಾಣದ ವಿಟಮಿನ್ ಡಿ ಯು ಮೊಡವೆಗೆ ಕಾರಣವಾಗುತ್ತದೆ. ಸರಿಯಾದ ಪ್ರಮಾಣದ ವಿಟಮಿನ್ ಡಿ ಉರಿಯೂತವನ್ನು ಕಡಿಮೆ ಮಾಡುತ್ತದೆ, ಜೊತೆಗೆ ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ ಹಾಗೂ ಟೆಸ್ಟೋಸ್ಟೆರಾನ್ ಅನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಮೊಡವೆ ಮೂಡುವುದನ್ನು ತಡೆಯುತ್ತದೆ.

ಲ್ಯಾಕ್ಟೋಸ್ ತಪ್ಪಿಸಿ:
ಡೈರಿ ಉತ್ಪನ್ನಗಳನ್ನು ಆಹಾರದಿಂದ ಕಡಿತಗೊಳಿಸುವುದು ಮೊಡವೆಗಳನ್ನು ನಿಲ್ಲಿಸಲು ಪ್ರಯೋಜನಕಾರಿಯಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇದರಲ್ಲಿರುವ ಲ್ಯಾಕ್ಟೋಸ್ ಪ್ರಮಾಣವು ಉರಿಯೂತವನ್ನು ಹೆಚ್ಚಿಸಿ, ಮೊಡವೆ ಮೂಡಲು ಕಾರಣವಾಗುತ್ತದೆ. ಆದ್ದರಿಂದ ಡೈರಿ ಉತ್ಪನ್ನಗಳನ್ನು ಕನಿಷ್ಠ ನಾಲ್ಕರಿಂದ ಆರು ವಾರಗಳವರೆಗೆ ತಪ್ಪಿಸಬೇಕು. ಆಗ ನಿಮ್ಮ ಮೊಡವೆಗಳಲ್ಲಿ ನೀವು ವ್ಯತ್ಯಾಸವನ್ನು ನೋಡಬಹುದು.

ಪ್ರೊಟೀನ್ ಸೇವನೆ:
ಪ್ರೋಟೀನ್ ಸೇವನೆಯು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಪ್ರೋಟೀನ್ ಇನ್ಸುಲಿನ್ ಮಟ್ಟವನ್ನು ಅನ್ನು ಕಡಿಮೆ ಮಾಡಿ, ಮೊಡವೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಸಂಸ್ಕರಿಸಿದ ಆಹಾರ ಬೇಡ:
ಸಂಸ್ಕರಿಸಿದ ಬೇಕರಿ ಸಾಮಾಗ್ರಿಗಳನ್ನು ನಿಮ್ಮ ಆಹಾರದಿಂದ ಕಟ್ ಔಟ್ ಮಾಡಿ. ಇವುಗಳು ನಾಲಗೆಗೆ ರುಚಿಯಾಗಿರಬಹುದು, ಆದರೆ, ನಿಮ್ಮ ತ್ವಚೆಗೆ ಒಳ್ಳೆಯದಲ್ಲ. ಆದ್ದರಿಂದ ಸಕ್ಕರೆ ಹೆಚ್ಚಿರುವ ಕೇಕ್, ಡೋನಟ್ಸ್, ಮಫಿನ್ ಮತ್ತು ಕುಕೀಗಳನ್ನು ದೂರ ಮಾಡಬೇಕು. ಇವೆಲ್ಲವೂ ಇನ್ಸುಲಿನ್ ಅನ್ನು ಹೆಚ್ಚಿಸಿ, ಮೊಡವೆಗಳನ್ನು ಉಲ್ಬಣಗೊಳಿಸುತ್ತವೆ.

ವ್ಯಾಯಾಮ ಪ್ರಾರಂಭಿಸಿ:
ವ್ಯಾಯಾಮವನ್ನು ಪ್ರಾರಂಭಿಸುವುದು ಮುಖ್ಯ. ವ್ಯಾಯಾಮವು ಇನ್ಸುಲಿನ್‌ಗೆ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ವ್ಯಾಯಾಮದಿಂದ ರಕ್ತಸಂಚಾರ ಉತ್ತಮವಾಗಿ ಜೀವಕೋಶಗಳಿಗೆ ನವಯೌವನ ಪಡೆಯುವಿಕೆಗೆ ಸಹಾಯ ಮಾಡುತ್ತದೆ. ಜೊತೆಗೆ ಮೊಡವೆಯನ್ನು ಕಡಿಮೆ ಮಾಡುತ್ತದೆ.

ಸಾಕಷ್ಟು ನೀರು ಕುಡಿಯಿರಿ:
ಮೊಡವೆ ಹೋಗಲಾಡಿಸುವಲ್ಲಿ ಖಂಡಿತವಾಗಿಯೂ ನೀರು ನಿರ್ಣಾಯಕ ಪಾತ್ರ ವಹಿಸುತ್ತದೆ. ಪ್ರತಿದಿನ 2-2.5 ಲೀ ನೀರನ್ನು ಕುಡಿಯಲು ಪ್ರಯತ್ನಿಸಿ. ಜೊತೆಗೆ ತಾಜಾ ಹಣ್ಣಿನ ರಸಗಳು ಸೇವಿಸುವುದನ್ನು ಸಹ ಅಭ್ಯಾಸ ಮಾಡಬೇಕು.



Click it and Unblock the Notifications