Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗ್ಲಾಸಿ ಲುಕ್ ಪಡೆಯಲು ಮುಖದ ಮೇಲಿನ ಕೂದಲನ್ನು ಶೇವ್ ಮಾಡುವುದು ಹೇಗೆ?
ಹೆಣ್ಣುಮಕ್ಕಳು ಸಾಮಾನ್ಯವಾಗಿ ತಲೆಗೂದಲು ಉದ್ದ ಬಯಸುತ್ತಾರೆ, ಆದರೆ ಮುಖದ ಮೇಲೆ ಕೂದಲು ಬೆಳೆಯುವುದನ್ನು ಇಷ್ಟಪಡುವುದಿಲ್ಲ. ಮೃದವಾದ ನೋಟಕ್ಕಾಗಿ ಕೂದಲನ್ನು ವ್ಯಾಕ್ಸಿಂಗ್ ಅಥವಾ ಶೇವ್ ಮಾಡಿ ತೆಗೆದು ಹಾಕಲು ಪ್ರಯತ್ನಿಸುತ್ತಾರೆ. ಆದರೆ ಮುಖ ಅಥವಾ ಕೈ ಕಾಲುಗಳ ಮೇಲೆ ಬೆಳೆದ ಕೂದಲನ್ನು ಶೇವ್ ಮಾಡುವುದರ ಬಗ್ಗೆ ಹಲವಾರು ಆರೋಪಗಳಿವೆ. ಇದರಿಂದ ಕೂದಲು ಬೇಗ ಬೆಳೆಯತ್ತವೆ, ಚರ್ಮ ಒಣಗುತ್ತವೆ ಹೀಗೆ.. ಆದರೆ ಇಲ್ಲಿ ನಾವು ಸುಂದರವಾದ ತ್ವಚೆ ಪಡೆಯಲು ಮುಖವನ್ನು ಹೇಗೆ ಶೇವ್ ಮಾಡಬೇಕೇಂಬುದನ್ನು ವಿವರಿಸಿದ್ದೇವೆ.

ಮುಖದ ಕೂದಲನ್ನು ಶೇವ್ ಮಾಡುವುದರಿಂದ ಆಗುವ ಅನುಕೂಲಗಳು:
- ಇದು ಡೆಡ್ ಸೆಲ್ ಗಳನ್ನು ತೆಗೆದುಹಾಕುವುದು.
- ಮುಚ್ಚಿಹೋಗಿರುವ ರಂಧ್ರಗಳನ್ನು ತೆರೆಯುವುದು.
- ಚರ್ಮ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುವುದು.
- ನಿಮ್ಮ ಮುಖವನ್ನು ಸ್ವಚ್ಛವಾಗಿ ಮತ್ತು ಮೃದುವಾಗಿರಿಸುವುದು.
- ಮೊಡವೆಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುವುದು.
- ವ್ಯಾಕ್ಸ್ ಗೆ ಹೋಲಿಸಿದರೆ ಇದಕ್ಕೆ ಕಡಿಮೆ ಖರ್ಚು ಹಾಗೂ ಯಾವುದೇ ನೋವು ಇರುವುದಿಲ್ಲ.
- ನಿಮ್ಮ ಚರ್ಮವನ್ನು ಎಫ್ಫೋಲಿಯೇಟ್ ಮಾಡುವುದಲ್ಲದೇ, ಫೌಂಡೇಷನ್ ಚೆನ್ನಾಗಿ ಕುಳಿತುಕೊಳ್ಳಲು ಸಹಾಯ ಮಾಡುವುದು.
- ಇದು ತ್ವಚೆಯನ್ನು ಕಾಂತಿಯುತ ಹಾಗೂ ಬೌನ್ಸಿಯಾಗಿ ಮಾಡುವುದು.
- ಡಾರ್ಕ್ ಪ್ರದೇಶಗಳನ್ನು ಸಹ ತೆಳುವಾಗಿಸುವುದು.

ಮುಖವನ್ನು ಶೇವ್ ಮಾಡುವುದರ ಅನಾನುಕೂಲಗಳು:
- ಶೇವ್ ಮಾಡುವುದರಿಂದ ಕೂದಲ ಬೆಳವಣಿಗೆ ತ್ವರಿತವಾಗಿ ಆಗುವುದರಿಂದ ಪ್ರತಿ ಎರಡು ದಿನಕ್ಕೊಮ್ಮೆ ಶೇವ್ ಮಾಡಬೇಕಾಗಬಹುದು.
- ತಪ್ಪಾಗಿ ಶೇವ್ ಮಾಡಿದರೆ, ಅದು ಒಣ ಚರ್ಮಕ್ಕೆ ಕಾರಣವಾಗಬಹುದು.
- ಸೂಕ್ಷ್ಮ ಮತ್ತು ಮೊಡವೆ ಪೀಡಿತ ತ್ವಚೆಯು ಬ್ರೇಕಟ್ಸ್ ಗಳಿಗೆ ಕಾರಣವಾಗಬಹುದು.
- ಪ್ರತಿದಿನ ಆರೈಕೆಯ ಅಗತ್ಯ ಇರುವುದು.

ನಿಮ್ಮ ಮುಖವನ್ನು ಸರಾಗವಾಗಿ ಶೇವ್ ಮಾಡಲು ಈ ಸರಳ ಹಂತಗಳನ್ನು ಅನುಸರಿಸಿ:
ಹಂತ 1: ಶೇವ್ ಪ್ರಾರಂಭವಾಗುವ ಮೊದಲು, ನಿಮ್ಮ ತ್ವಚೆಯನ್ನು ಸಿದ್ಧಪಡಿಸುವುದು ತುಂಬಾ ಮುಖ್ಯ. ಮಾಯಿಶ್ಚರೈಸರ್ ಯುಕ್ತ ಕ ಕ್ಲೆನ್ಸರ್ ಬಳಸಿ, ನಿಮ್ಮ ಮುಖವನ್ನು 5 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ ಒದ್ದೆಯಾದ ಬಟ್ಟೆಯನ್ನು ಬಳಸಿ ತೊಳೆಯಿರಿ.
ಹಂತ 2: ಫೇಸ್ ಟೋನರಿನ ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ಕಾಟನ್ ಪ್ಯಾಡ್ ಬಳಸಿ ನಿಮ್ಮ ಮುಖದಾದ್ಯಂತ ಹಚ್ಚಿಕೊಳ್ಳಿ ಇದರಿಂದ ನಿಮ್ಮ ಮುಖದಿಂದ ಬೆವರು, ಕೊಳಕು, ಎಣ್ಣೆ ಅಥವಾ ಹೆಚ್ಚುವರಿ ಮೇಕ್ಅಪ್ ಹೊರಹೋಗುವುದು.
ಹಂತ 3: ನಿಮ್ಮ ಚರ್ಮವನ್ನು ತೇವಗೊಳಿಸಲು, ರಂಧ್ರಗಳನ್ನು ತೆರೆಯಲು ಮತ್ತು ಶೇವ್ ಮೊದಲು ಮುಖದ ಕೂದಲನ್ನು ಮೃದುಗೊಳಿಸಲು ಫೇಸ್ ಸ್ಟೀಮರ್ ಬಳಸಿ.

ಹಂತ 4:
ನಿಮ್ಮ ಚರ್ಮಕ್ಕೆ ಸೂಕ್ತವಾದ ನಿಮ್ಮ ನೆಚ್ಚಿನ ಎಣ್ಣೆಯ ಕೆಲವು ಹನಿಗಳನ್ನು ಮಸಾಜ್ ಮಾಡಿ ಆದರೆ ಅದು ನಿಮ್ಮ ರಂಧ್ರಗಳನ್ನು ಮುಚ್ಚಿಹೋಗದಂತೆ ನೋಡಿಕೊಳ್ಳಬೇಕು, ರೇಜರ್ ನ ಸಹಾಯಕಕ್ಕಾಗಿ ಮಾತ್ರ ಇದನ್ನು ಬಳಸಲಾಗುವುದು. ನೀವು ಟೀ ಟ್ರೀ ಆಯಿಲ್ ಅಥವಾ ಯಾವುದಾದರೂ ಸಾರಭೂತ ತೈಲವನ್ನು ಬಳಸಬಹುದು.
ಹಂತ 5: ಈಗ ಎಲ್ಲರೂ ಕಾಯುವ ಹಂತ, ಉದ್ದನೆಯ ಬ್ಲೇಡ್ ರೇಜರ್ ಅನ್ನು ಎತ್ತಿಕೊಳ್ಳಿ, ನಿಮ್ಮ ಎಡ ಕೈಯನ್ನು ಬಳಸಿ ನಿಮ್ಮ ಮುಖವನ್ನು ಮೇಲಕ್ಕೆತ್ತಿ, ರೇಜರ್ ಅನ್ನು 45 ಡಿಗ್ರಿ ಕೋನದಲ್ಲಿ ಹಿಡಿದುಕೊಂಡು, ರೇಜರ್ ಅನ್ನು ಸರಾಗವಾಗಿ ಕೆಳಕ್ಕೆ ತಿರುಗಿಸಿ. ಶೇವ್ ಮಾಡುವಾಗ ಶಾಂತವಾಗಿರಿ.
ಹಂತ 6: ನಿಮ್ಮ ಇಡೀ ಮುಖವನ್ನು ಶೇವ್ ಮಾಡಿದ ನಂತರ, ಕಾಟನ್ ಪ್ಯಾಡ್ ಬಳಸಿ ಮುಖವನ್ನು ಒರೆಸಿಕೊಳ್ಳಿ. ಸ್ವಲ್ಪ ತಣ್ಣನೆಯ ಅಲೋವೆರಾ ಜೆಲ್ ಅಥವಾ ರೋಸ್ ವಾಟರ್ ನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿ, ಮತ್ತು ಹೈಡ್ರೇಟ್ ಮಾಡಿ.



Click it and Unblock the Notifications
