Latest Updates
-
ದಸರಾ ಟ್ರಾಫಿಕ್ ಜಾಮ್: ತಡವಾದರೂ ಸಂಬಂಧ ಹಾಳಾಗದಂತೆ ನಿಭಾಯಿಸಲು ಇಲ್ಲಿದೆ 90 ಸೆಕೆಂಡ್ಗಳ ಸ್ಕ್ರಿಪ್ಟ್ -
ವಿಜಯದಶಮಿ ಸಂಭ್ರಮ: ಕೊನೆ ನಿಮಿಷದಲ್ಲಿ ಮನೆಯನ್ನು ಆಕರ್ಷಕವಾಗಿಸಲು 5 ಸಿಂಪಲ್ ಎಕೋ-ಫ್ರೆಂಡ್ಲಿ ಐಡಿಯಾಗಳು -
ಮೂಳೆಗಳ ಆರೋಗ್ಯಕ್ಕೆ ಬಜೆಟ್ ಸ್ನೇಹಿ ಆಹಾರ: ಆಸ್ಟಿಯೋ ಪೋರೋಸಿಸ್ ತಡೆಯಲು ಇಂದೇ ಈ ಬದಲಾವಣೆ ಮಾಡಿ! -
ಮೈಸೂರು ದಸರಾ 2026: ಪಂಜಿನ ಕವಾಯತು ಮತ್ತು ಡ್ರೋನ್ ಶೋ ವೀಕ್ಷಿಸಲು ಇಲ್ಲಿದೆ ಕಂಪ್ಲೀಟ್ ಗೈಡ್! -
ದೇವಸ್ಥಾನದ ಉದ್ದದ ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ನೋವು ಮರೆಸುವ 7 ನಿಮಿಷದ ಮ್ಯಾಜಿಕ್ ಟಿಪ್ಸ್ ಇಲ್ಲಿದೆ! -
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್!
ಮುಖದ ಹೊಳಪು ಮರಳಿ ಬರಲು ಬಳಸಿ ಈ ಖರ್ಜೂರದ ಫೇಸ್ ಪ್ಯಾಕ್
ಕಬ್ಬಿಣ, ವಿಟಮಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್ ಇತ್ಯಾದಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಖರ್ಜೂರವು ದೇಹಕ್ಕೆ ತ್ವರಿತ ಶಕ್ತಿಯನ್ನು ನೀಡುತ್ತದೆ. ಆದರೆ, ಇದು ಸೌಂದರ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ತಿಳಿದಿದೆಯೇ?. ಖರ್ಜೂರದ ವಿವಿಧ ಫೇಸ್ ಪ್ಯಾಕ್ಗಳಿಂದ ನೀವು ಕಾಂತಿಯುತ ಹೊಳಪನ್ನು ಮರಳಿ ಪಡೆಯಬಹುದು. ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಈ ಸ್ಟೋರಿ ಓದಿ.
ಮುಖದ ಹೊಳಪು ಮರಳಿ ಪಡೆಯಲು ಖರ್ಜೂರದ ಫೇಸ್ ಪ್ಯಾಕ್ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಖರ್ಜೂರ- ಅರಿಶಿನದ ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥಗಳು:
ಎರಡು ಖರ್ಜೂರ, ಕಾಲು ಕಪ್ ಹಾಲು, ಚಿಟಿಕೆ ಅರಿಶಿನ ಪುಡಿ
ಬಳಸುವ ವಿಧಾನ:
ಖರ್ಜೂರವನ್ನು ಚೆನ್ನಾಗಿ ತೊಳೆದು ಗ್ರೈಂಡರ್ನಲ್ಲಿ ರುಬ್ಬಿಕೊಳ್ಳಿ. ರುಬ್ಬಿದ ಖರ್ಜೂರಕ್ಕೆ ಅರಿಶಿನ-ಹಾಲು ಮಿಶ್ರಣ ಮಾಡಿ ಮತ್ತು ತಯಾರಿಸಿದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಸುಮಾರು 20 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಈಗ ಚರ್ಮದ ಮೇಲೆ ಹೊಳಪು ಕಾಣಿಸುತ್ತದೆ.

ಖರ್ಜೂರ - ಅಲೋವೆರಾ ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥ:
ಮೂರರಿಂದ ನಾಲ್ಕು ಖರ್ಜೂರ, ಅರ್ಧ ಕಪ್ ಹಾಲು, ಒಂದು ಚಮಚ ಅಲೋವೆರಾ ಜೆಲ್
ಬಳಸುವ ವಿಧಾನ:
ಖರ್ಜೂರವನ್ನು ತೊಳೆದು ಹಾಲಿನಲ್ಲಿ ನೆನೆಸಿಡಿ. ಅರ್ಧ ಗಂಟೆಯ ನಂತರ ಎರಡೂ ವಸ್ತುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದಕ್ಕೆ ಅಲೋವೆರಾ ಜೆಲ್ ಅನ್ನು ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ. ಕೆಲವೇ ದಿನಗಳಲ್ಲಿ ವ್ಯತ್ಯಾಸವನ್ನು ಗಮನಿಸಲು ಪ್ರಾರಂಭಿಸುತ್ತೀರಿ.

ಖರ್ಜೂರ- ಕ್ರೀಮ್- ನಿಂಬೆ ಫೇಸ್ ಮಾಸ್ಕ್:
ಬೇಕಾಗುವ ಪದಾರ್ಥಗಳು:
ನಾಲ್ಕೈದು ಖರ್ಜೂರ, ಒಂದು ಚಮಚ ತಾಜಾ ಕ್ರೀಮ್, ಸ್ವಲ್ಪ ಹಾಲು, ಒಂದು ಚಮಚ ನಿಂಬೆ ರಸ
ಬಳಸುವ ವಿಧಾನ:
ತೊಳೆದ ಖರ್ಜೂರವನ್ನು ರಾತ್ರಿಯಿಡೀ ಹಾಲಿನಲ್ಲಿ ನೆನೆಸಿಡಿ. ಬೆಳಗ್ಗೆ ಅದಕ್ಕೆ ಕೆನೆ ಬೆರೆಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಸಿದ್ಧಪಡಿಸಿದ ಪೇಸ್ಟ್ಗೆ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೊಮ್ಮೆ ಈ ಮುಖವಾಡವನ್ನು ಬಳಸಿ.

ಖರ್ಜೂರ - ರವೆ ಫೇಸ್ ಮಾಸ್ಕ್ :
ಬೇಕಾಗುವ ಪದಾರ್ಥಗಳು:
ತೊಳೆದ ನಂತರ ತೆಗೆದ ಬೀಜಗಳು 4-5 ಖರ್ಜೂರ, ಒಂದು ಚಮಚ ರವೆ, ಎರಡು ಚಮಚ ಜೇನುತುಪ್ಪ, ಅರ್ಧ ಕಪ್ ಹಾಲು
ಬಳಸುವ ವಿಧಾನ:
ಬಿಸಿ ಹಾಲಿನಲ್ಲಿ ಖರ್ಜೂರವನ್ನು ನೆನೆಸಿ ಅರ್ಧ ಗಂಟೆಯ ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಇ ರುಬ್ಬಿದ ಖರ್ಜೂರಕ್ಕೆ ರವೆ-ಜೇನುತುಪ್ಪ ಸೇರಿಸಿ ಇನ್ನೂ ಎರಡು ನಿಮಿಷ ರುಬ್ಬಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. 10-15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.



Click it and Unblock the Notifications
