Latest Updates
-
ನವರಾತ್ರಿ ಸಂಭ್ರಮ: ಕೇವಲ 30 ನಿಮಿಷದಲ್ಲಿ ಪರಿಸರಸ್ನೇಹಿ ಪೂಜಾ ಮಂಟಪ ಅಲಂಕರಿಸುವ ಸುಲಭ ಟಿಪ್ಸ್! -
ನವರಾತ್ರಿ ಉಪವಾಸ: ಗಾರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯಕರ ಡಯಟ್ ಪ್ಲಾನ್ ಇಲ್ಲಿದೆ -
ನವರಾತ್ರಿ ಗರ್ಬಾ ಡ್ರೆಸ್ ರೆಡಿ ಇಲ್ಲವೇ? ಬೆಂಗಳೂರು, ಮುಂಬೈ, ಅಹಮದಾಬಾದ್ನಲ್ಲಿ ಬಾಡಿಗೆಗೆ ಪಡೆಯಲು ಬೆಸ್ಟ್ ಸ್ಥಳಗಳು ಮತ್ತು ಟಿಪ್ಸ್ ಇಲ್ಲಿದೆ! -
ನವರಾತ್ರಿ ಉಪವಾಸದ ಆಯಾಸ, ಕಾಲು ನೋವು ಕಾಡ್ತಿದೆಯಾ? ಗರ್ಬಾ ಡ್ಯಾನ್ಸ್ಗೆ ಸಿದ್ಧರಾಗಲು ಇಲ್ಲಿದೆ 8 ನಿಮಿಷಗಳ ಮ್ಯಾಜಿಕ್ ವರ್ಕೌಟ್ -
ನವರಾತ್ರಿ ಗರ್ಬಾ ಸಂಭ್ರಮ: ನಕಲಿ ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆಡಿ! -
ದೆಹಲಿ AQI ಏರಿಕೆ: ಮನೆಯೊಳಗೆ 'ಏರ್ ಶೀಲ್ಡ್' ಸಿದ್ಧಪಡಿಸಿ, ಕೇವಲ 20 ನಿಮಿಷದಲ್ಲಿ ಧೂಳಿನಿಂದ ಬಚಾವಾಗಿ! -
ನವರಾತ್ರಿ ಹಬ್ಬದ ಸಂಭ್ರಮ: ಕುತ್ತು ಹಿಟ್ಟು, ಸಿಹಿ ತಿಂಡಿ ಕೊಳ್ಳುವಾಗ ಈ ತಪ್ಪು ಮಾಡಬೇಡಿ! -
ಶಾರ್ದೀಯ ನವರಾತ್ರಿ 2026: ಘಟಸ್ಥಾಪನೆ ಮುಹೂರ್ತ, ಬಣ್ಣಗಳ ಪಟ್ಟಿ ಮತ್ತು ಹಬ್ಬದ ಫ್ಯಾಷನ್ ಟಿಪ್ಸ್ ಇಲ್ಲಿದೆ! -
ಮಂಡಿ ನೋವಿನ ಚಿಂತೆಯೇ ಬೇಡ: ಗರ್ಬಾ ಆಡುವ ಮುನ್ನ ಈ 7 ನಿಮಿಷದ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು!
ಹೋಳಿ 2023:ತ್ವಚೆ ಅಲರ್ಜಿ ತಡೆಗಟ್ಟಲು ಹೀಗೆ ಮಾಡಿ ಈ ಹೋಳಿ ಸಂಭ್ರಮಿಸಿ
ಬಣ್ಣದ ಹಬ್ಬ ಹೋಳಿಯಲ್ಲಿ ಬಣ್ಣದಲ್ಲಿ ಮಿಂದೇಳುವುದು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಒಬ್ಬರಿಗೊಬ್ಬರು ಬಣ್ಣವನ್ನು ಎರಚುತ್ತಾ ನಕ್ಕು ನಲಿದು ಸಂಭ್ರಮಿಸುತ್ತೇವೆ.

ಹೋಳಿಯಲ್ಲಿ ಎರಚುವ ಆಕರ್ಷಕ ಬಣ್ಣದಂತೆ ನಿಮ್ಮ ಬದುಕು ಕೂಡ ತುಂಬಾ ಆಕರ್ಷಕವಾಗಿರಲಿ ಎಂದು ಮನಸಾರೆ ಹರಿಸುತ್ತೇವೆ. ಆದರೆ ಬಣ್ಣದ ಹಬ್ಬದಲ್ಲಿ ತುಂಬಾನೇ ಎಚ್ಚರವಹಿಸಬೇಕು. ನೀವು ಹೋಳಿ ಆಡಲು ಬಳಸುವ ಬಣ್ಣದ ಬಗ್ಗೆ ಎಚ್ಚರವಹಿಸಬೇಕು.
ಆದಷ್ಟೂ ಆರ್ಗಾನಿಕ್ ಕಲರ್ ಬಳಸಬೇಕು. ಕಡಿಮೆ ಬೆಲೆಗೆ ಪೌಡರ್ ಸಿಕ್ಕಿದೆ ಎಂದು ಕೆಮಿಕಲ್ ಹಾಕಿರುವ ಬಣ್ಣದಲ್ಲಿ ಹೋಳಿಯಾಡಿದರೆ ಹೋಳಿಯಾಡಿ ಕೆಲವೇ ಗಂಟೆಗಳಲ್ಲಿ ಮೈಯಲ್ಲಿ ಬೊಬ್ಬೆಗಳು ಏಳುವುದು, ತುರಿಕೆ ಪ್ರಾರಂಭವಾಗುವುದು. ಆದ್ದರಿಂದ ಬಣ್ಣದ ಹಬ್ಬದಲ್ಲಿ ಸ್ವಲ್ಪ ಎಚ್ಚರಿಕೆವಹಿಸುವುದು ಒಳ್ಳೆಯದು.
ಅದರಲ್ಲೂ ಮಕ್ಕಳು ಹೋಳಿಯಾಡುವುದಾದರೆ ಅವರಿಗೆ ಕಡ್ಡಾಯವಾಗಿ ಆರ್ಗಾನಿಕ್ ಬಣ್ಣವೇ ನೀಡಿ, ಏಕೆಂದರೆ ಅವರ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತದೆ, ಬೇಗನೆ ತ್ವಚೆ ಅಲರ್ಜಿ ಉಂಟಾಗುವುದು.
ನೀವು ಈ ರೀತಿಯ ಮುನ್ನೆಚ್ಚರಿಕೆವಹಿಸಿದರೆ ಬಣ್ಣದ ಹಬ್ಬವನ್ನು ಯಾವುದೇ ಭಯವಿಲ್ಲದೆ ಸಂಭ್ರಮಿಸಬಹುದು:
ಆರ್ಗಾನಿಕ್ ಬಣ್ಣ ಬಳಸಿ: ಹೋಳಿಗೆ ನೀವು ಆರ್ಗಾನಿಕ್ ಬಣ್ಣವೇ ಬಳಸಿ, ಇನ್ನು ತ್ವಚೆ ಅಲರ್ಜಿ ಇರುವವರು ಬಣ್ಣದ ನೀರಿನಲ್ಲಿ ಆಡುವುದಕ್ಕಿಂತ ಪುಡಿಯಲ್ಲಿ ಆಡಿ, ಪುಡಿ ಬೇಗನೆ ಹೋಗುತ್ತದೆ, ಬಣ್ಣದ ನೀರಾದರೆ ತ್ವಚೆಗೆ ತುಂಬಾನೇ ಅಂಟಿಕೊಳ್ಳುತ್ತದೆ.
* ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ: ಹೋಳಿ ಆಡಲು ಹೋಗುವ ಮುನ್ನ ನೀರು ಕುಡಿಯಿರಿ. ಇನ್ನು ಹೋಳಿಯಾಡಲು ಹೋಗುವಾಗಲೂ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗಿ , ಬಾಯಾರಿಕೆಯಾದಾಗ ಕುಡಿಯಿರಿ.
* ತುಂಬು ತೋಳಿನ ಬಟ್ಟೆ ಧರಿಸಿ: ನಿವು ಹೋಳಿಯಾಟ ಆಡುವ ಮುನ್ನ ತುಂಬು ತೋಳಿನ ಬಟ್ಟೆ ಧರಿಸಿದರೆ ನಿಮಗೆ ಹೆಚ್ಚು ರಕ್ಷಣೆ ಸಿಗುತ್ತದೆ. ಬೇಗನೆ ಒಣಗುವ ಬಟ್ಟೆ ಧರಿಸಿ, ಲೈಟ್ ಫ್ಯಾಬ್ರಿಕ್ ಬೇಗನೆ ಒಣಗುತ್ತದೆ. ಜೀನ್ಸ್, ಡೆನಿಮ್, ಸಿಂಥೆಟಿಕ್, ಕಾಟನ್ ಬಟ್ಟೆ ಧರಿಸಬೇಡಿ, ಇವುಗಳು ಮೈಗೆ ಅಂಟಿಕೊಳ್ಳುತ್ತದೆ ಜಿತೆಗೆ ಬೇಗನೆ ಒಣಗುವುದಿಲ್ಲ.
* ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿ
ನೀವು ಹೋಳಿ ಆಡುವ ಮುನ್ನ ತಲೆಗೆ ಎಣ್ಣೆ ಹಚ್ಚಿ, ಇಲ್ಲದಿದ್ದರೆ ಕೂದಲಿಗೆ ಹಾನಿಯಾಗಬಹುದು. ಇನ್ನು ಎಣ್ಣೆ ಹಚ್ಚಿದರೆ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆದರೆ ಕೂದಲಿನಲ್ಲಿ ಬಣ್ಣ ಉಳಿಯುವುದು ತಡೆಗಟ್ಟಬಹುದು.
* ತುಟಿಗೆ ಲಿಪ್‌ಬಾಮ್ ಹಚ್ಚಿ: ನೀವು ಬಣ್ಣ ಎರಚಾಡುವ ಮುನ್ನ ತುಟಿಗೆ ಲಿಪ್‌ಬಾಮ್ ತುಂಬಾ ಹಚ್ಚಿ
* ಉಗುರುಗಳಿಗೆ ನೇಲ್ ಪಾಲಿಷ್ ಹಚ್ಚಿ: ಉಗುರುಗಳಿಗೆ ಡಬಲ್ ಕೋಟ್ ನೇಲ್ ಪಾಲಿಷ್ ಹಚ್ಚಿ.
ಯಾವುದೇ ಫೇಶಿಯಲ್ ಮಾಡಿಸಿದ್ದರೆ ಹೋಳಿ ಆಡಬೇಡಿ
ಫೇಶಿಯಲ್ ಮಾಡಿಸಿದ್ದರೆ ಅಥವಾ ಸ್ಕಿನ್ ಕೇರ್ ಟ್ರೇಟ್ಮೆಂಟ್ ತೆಗೆದುಕೊಳ್ಳುತ್ತಿದ್ದರೆ ಬಣ್ಣದ ಆಟ ನೋಡಿ, ಆಡಬೇಡಿ, ಒಂದು ವೇಳೆ ನೀವು ಬಣ್ಣದ ನೀರು ಅಥವಾ ಪುಡಿಯಲ್ಲಿ ಆಡಿದರೆ ತ್ವಚೆ ಅಲರ್ಜಿ ತಪ್ಪಿದ್ದಲ್ಲ.
ಸ್ನಾನದ ಬಳಿಕ ಮಾಯಿಶ್ಚರೈಸರ್ ಹಚ್ಚಿ'
ನೀವು ಬಂದು ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡಿ ನಂತರ ಮೈಗೆ ಮಾಯಿಶ್ಚರೈಸರ್ ಹಚ್ಚಿ, ಹೀಗೆ ಮಾಡಿದರೆ ತ್ವಚೆ ಸಮಸ್ಯೆ ತಡೆಗಟ್ಟಬಹುದು.
ಕೊನೆಯದಾಗಿ: ಬಣ್ಣದ ಹಬ್ಬವನ್ನು ಸಂತೋಷದಿಂದ ಸಂಭ್ರಮಿಸಿ, ಆದರೆ ತ್ವಚೆ ಬಗ್ಗೆ ಇರಲಿ ಜಾಗ್ರತೆ.



Click it and Unblock the Notifications


