Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಎಣ್ಣೆಯುಕ್ತ ಚರ್ಮವಿರುವವರ ಎಲ್ಲಾ ತ್ವಚೆ ಸಮಸ್ಯೆಗಳಿಗೆ ರಾಮಾಬಾಣ ಪೇರಳೆ ಎಲೆ
ಎಣ್ಣೆಯುಕ್ತ ಚರ್ಮ ಹೊಂದಿರುವರು ತಮ್ಮ ತ್ವಚೆಯ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಕಾಗುವುದಿಲ್ಲ. ಆಗಾಘ ಉಂಟಾಗುವ ಮೊಡವೆ, ಅದರಿಂದಾಗುವ ಕಲೆ, ಬ್ಲಾಕ್ ಹೆಡ್ಸ್ ಗಳು ನಿಮ್ಮನ್ನು ತಲೆನೋವಿಗೆ ದೂಡಿರುತ್ತದೆ. ಆದರೆ ಎಣ್ಣೆಯುಕ್ತ ತ್ವಚೆ ಹೊಂದಿರುವವರ ಮುಖದ ಸಮಸ್ಯೆಗಳಿಗೆಲ್ಲಾ ಪೇರಳೆ ಎಲೆ ಸಹಾಯ ಮಾಡುವುದೆಂದರೆ ಆಶ್ಚರ್ಯ ಆಗ್ತಾ ಇದೀಯಾ?
ಹೌದು, ಇದುವರೆಗೆ ಪ್ರಯೋಜನವಿಲ್ಲ ಎಂದು ಎಸೆಯುತ್ತಿದ್ದ ಪೇರಳೆ ಎಲೆಯಲ್ಲಿ ನಿಮ್ಮ ತ್ವಚೆ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಇದೆ. ಇದರಿಂದ ಮೊಡವೆಗಳು ಕಡಿಮೆಯಾಗುವುದಲ್ಲದೇ, ಹೊಳೆಯುವಂತೆಯೂ ಮಾಡುತ್ತದೆ. ಅದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಎಣ್ಣೆಯುಕ್ತ ಚರ್ಮ ಹೊಂದಿರುವವರಿಗಾಗಿ ಪೇರಳೆ ಎಲೆಯ ಮೂರು ರೀತಿಯ ಫೇಸ್ ಪ್ಯಾಕ್ ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಪೇರಳೆ ಎಲೆಯಲ್ಲಿರುವ ಗುಣಗಳು:
ನಮ್ಮಲ್ಲಿ ಹಲವರಿಗೆ ಪೇರಳೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದಿದೆ ಆದರೆ ಅದರ ಎಲೆಗಳು ಸಹ ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ತಿಳಿದಿರಲಿಕ್ಕಿಲ್ಲ. ತಾಜಾ ಪೇರಳೆ ಎಲೆಗಳು ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದನ್ನು ನೈಸರ್ಗಿಕ ನೋವು ನಿವಾರಕ ಎಂದು ಪರಿಗಣಿಸಲಾಗುತ್ತದೆ. ಕ್ಯಾರೆಟಿನಾಯ್ಡ್‌ಗಳು, ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಟ್ಯಾನಿನ್‌ಗಳಂತಹ ಪೇರಲದಲ್ಲಿರುವ ರಾಸಾಯನಿಕಗಳು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಹಳ ಪರಿಣಾಮಕಾರಿ. ಜೊತೆಗೆ ತ್ವಚೆ ಹಾಗೂ ಕೂದಲಿನ ಸಮಸ್ಯೆಗೂ ರಾಮಬಾಣ ಈ ಪೇರಳೆ ಎಲೆಗಳು.

ಮುಖದ ಎಣ್ಣೆ ಕಡಿಮೆ ಮಾಡಲು ಈ ಪ್ಯಾಕ್:
ನಿಮ್ಮ ತ್ವಚೆಯು ತುಂಬಾ ಎಣ್ಣೆಯುಕ್ತವಾಗಿದ್ದರೆ, ಚರ್ಮದ ಮೇಲಿನ ಮೇದೋಗ್ರಂಥಿಗಳ ಸ್ರಾವ (ಎಣ್ಣೆ) ಉತ್ಪಾದನೆಯನ್ನು ನಿಯಂತ್ರಿಸಲು ಮತ್ತು ನಿಮ್ಮ ಚರ್ಮವನ್ನು ಸ್ವಚ್ಛವಾಗಿಡಲು ಪೇರಳೆ ಎಲೆಯ ಈ ಫೇಸ್ ಪ್ಯಾಕ್ ಸಹಾಯ ಮಾಡುತ್ತದೆ.
ಬೇಕಾಗಿರುವ ಪದಾರ್ಥ:
ಪೇರಳೆ ಎಲೆಗಳು
2 ಚಮಚ ತಾಜಾ ನಿಂಬೆ ರಸ
5 ಚಮಚ ನೀರು
ತಯಾರಿ ವಿಧಾನ:
ಎಲೆಗಳಿಗೆ ನೀರನ್ನು ಬೆರೆಸಿ ಪೇಸ್ಟ್ ಮಾಡಿ. ಈಗ ಈ ಪೇಸ್ಟ್ ನ 2 ಚಮಚ ತೆಗೆದುಕೊಂಡು ಅದಕ್ಕೆ 2 ಚಮಚ ತಾಜಾ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ. ಅರ್ಧ ಘಂಟೆಯವರೆಗೆ ಬಿಡಿ. ತಂಪಾದ ನೀರಿನಿಂದ ತೊಳೆಯಿರಿ. ಉಳಿದಿರುವ ಪೇಸ್ಟ್ ಅನ್ನು (ನಿಂಬೆ ರಸ ಬೆರೆಸದೇ ಇರುವುದು) 2-3 ದಿನಗಳವರೆಗೆ ಬಳಸಬಹುದು. ಅದನ್ನು ಫ್ರಿಡ್ಜನಲ್ಲಿಟ್ಟು, ಪ್ರತಿದಿನ ಬಳಸಬಹುದು.

ಮೊಡವೆಗಳನ್ನು ಕಡಿಮೆ ಮಾಡಲು ಈ ಫೇಸ್ ಪ್ಯಾಕ್ :
ಮೊಡವೆಗಳು ಚರ್ಮದ ಮೇಲಿನ ಉರಿಯೂತದ ಜೊತೆಗೆ ಬ್ಯಾಕ್ಟೀರಿಯಾದ ಸೋಂಕನ್ನು ಇರುವುದನ್ನು ಸೂಚಿಸುತ್ತದೆ. ಪೇರಳೆ ಎಲೆಗಳು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿವೆ. ಹಾಗಾಗಿ, ಮೊಡವೆ ಮತ್ತು ಕಪ್ಪು ಕಲೆಗಳಿಗೆ ಒಳಗಾಗಿರುವುದನ್ನು ತಡೆಯಲು ಇವು ಒಳ್ಳೆಯದು.
ಬೇಕಾಗಿರುವುದು:
ಬೆರಳೆಣಿಕೆಯಷ್ಟು ಪೇರಲ ಎಲೆಗಳು
ಚಿಟಿಕೆ ಅರಿಶಿನ
1 ಚಮಚ ಅಲೋವೆರಾ ಜೆಲ್
5 ಚಮಚ ನೀರು
ತಯಾರಿ ವಿಧಾನ:
ಪೇರಳೆ ಎಲೆಗಳನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಒಂದು ಚಮಚ ಈ ಪೇಸ್ಟನ್ನು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಅಲೋವೆರಾ ಜೆಲ್ ಸೇರಿಸಿ. ಈ ಮಿಶ್ರಣವನ್ನು ತ್ವಚೆಯ ಮೇಲೆ ಹಚ್ಚಿ. 20 ನಿಮಿಷಗಳ ಕಾಲ ಬಿಡಿ. ತಂಪಾದ ನೀರಿನಿಂದ ತೊಳೆಯಿರಿ. ಉಳಿದ ಪೇಸ್ಟ್ ಅನ್ನು ಫ್ರಿಡ್ಜನಲ್ಲಿಟ್ಟು 2-3 ದಿನಗಳವರೆಗೆ ಬಳಸಿ. ನೀವು ಈ ಪ್ಯಾಕ್ ಅನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಬಳಸಬಹುದು.

ಕಿರಿಕಿರಿಯುಕ್ತ ಚರ್ಮದ ನಿವಾರಣೆಗಾಗಿ ಈ ಫೇಸ್ ಪ್ಯಾಕ್:
ನಿಮ್ಮ ತ್ವಚೆಯು ಕೆಂಪು ಗುಳ್ಳೆ ಅಥವಾ ತುರಿಕೆಗೆ ಒಳಗಾಗುತ್ತಿದೆಯೇ? ಪೇರಳೆ ಎಲೆಗಳನ್ನು ಬಳಸಿ ಮತ್ತು ಕಿರಿಕಿರಿಯನ್ನು ಪರಿಣಾಮಕಾರಿಯಾಗಿ ಕಡಿಮೆಯಾಗುವುದನ್ನು ನೀವೇ ನೋಡಿ.
ಬೇಕಾಗಿರುವುದು:
ಬೆರಳೆಣಿಕೆಯಷ್ಟು ಪೇರಲ ಎಲೆಗಳು
1 ಕಪ್ ನೀರು
ತಯಾರಿ ವಿಧಾನ:
10 ನಿಮಿಷಗಳ ಕಾಲ ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ ಮತ್ತು ಎಲೆಗಳನ್ನು ತೆಗೆದು, ನೀರನ್ನು ಸೋಸಿಕೊಳ್ಳಿ. ನೀರು ತಣ್ಣಗಾಗಲು ಬಿಡಿ. ಈಗ ಈ ತಣಿದ ನೀರನ್ನು ಸ್ಪ್ರೇ ಬಾಟಲಿಗೆ ಹಾಕಿ, ನಿಮ್ಮ ತ್ವಚೆಯ ಮೇಲೆ ಸಿಂಪಡಿಸಿ. ಸೊಳ್ಳೆ ಕಡಿತದಿಂದಾದ ಕಿರಿಕಿರಿ ಅಥವಾ ಉರಿಯೂತಕ್ಕೆ ಇದನ್ನು ಬಳಸಬಹುದು. ಈ ಎಲೆಯ ನೀರು ತ್ವಚೆಯ ಕಿರಿಕಿರಿಯನ್ನು ಶಮನಗೊಳಿಸುತ್ತದೆ.
ಆದ್ದರಿಂದ ಮುಂದಿನ ಬಾರಿ ನೀವು ಮನೆಗೆ ಪೇರಳೆಯನ್ನು ತಂದರೆ, ಅದರಲ್ಲಿ ಎಲೆಗಳಿದ್ದರೆ, ಆ ಎಲೆಗಳನ್ನು ಎಸೆಯಬೇಡಿ. ಅವುಗಳನ್ನು ಸಂಗ್ರಹಿಸಿ. ನಿಮ್ಮ ಚರ್ಮದ ಆರೈಕೆಗಾಗಿ ಬಳಸಿ. ಇವು ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಆರಾಮದಾಯಕವಾಗಿಡಲು ಪ್ರಕೃತಿ ನೀಡಿದ ಅದ್ಭುತ ಪರಿಹಾರಗಳಾಗಿವೆ.



Click it and Unblock the Notifications