Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಬೆನ್ನಿನಲ್ಲಿ ಮೊಡವೆಯಾಗಲು ಕಾರಣವೇನು? ಅದನ್ನು ಕಡಿಮೆ ಮಾಡುವುದು ಹೇಗೆ?
ಮುಖದಲ್ಲಿ ಮೊಡವೆ ಎಷ್ಟು ತೊಂದರೆ ನೀಡುವುದೋ ಅಷ್ಟೇ ಕಷ್ಟವನ್ನು ಬೆನ್ನಿನಲ್ಲಾದ ಮೊಡವೆಯೂ ನೀಡುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ಬಟ್ಟೆ ಧರಿಸುವಾಗ ಬೆನ್ನಿನ ಬಾಗದಲ್ಲಿ ಮೊಡವೆ ಇದ್ದರೆ, ಮುಜುಗರಕ್ಕೆ ಒಳಗಾಗುತ್ತಾರೆ.
ಚರ್ಮವನ್ನು ಸರಿಯಾಗಿ ಆರೈಕೆ ಮಾಡದಿದ್ದಾಗ ಮೊಡವೆಗಳು ಅಥವಾ ಗುಳ್ಳೆಗಳು ಬೆನ್ನಿನಲ್ಲಿ ಉಂಟಾಗುತ್ತವೆ. ಆದ್ದರಿಂದ ಆರೈಕೆ ತುಂಬಾ ಮುಖ್ಯ. ಈ ಮೊಡವೆಗಳಿಗೆ ರಾಸಾಯನಿಕಯುಕ್ತ ಔಷಧಿಗಳನ್ನು ಬಳಸುವ ಬದಲು ಮನೆಮದ್ದಿನಲ್ಲಿಯೇ ಅದನ್ನು ಗುಣಪಡಿಸುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ. ಅದಕ್ಕೂ ಮುನ್ನು ಬೆನ್ನಿನಲ್ಲಿ ಬೀಳುವ ಮೊಡವೆಗೆ ಕಾರಣವೇನು ನೋಡೋಣ.

ಬೆನ್ನಿನಲ್ಲಿ ಮೊಡವೆ ಬರಲು ಕಾರಣವೇನು?:
ಅಣುವಂಶೀಯತೆ: ಮೊಡವೆಗಳ ತೊಂದರೆ ನಿಮ್ಮ ಕುಟುಂಬದಲ್ಲಿಯೇ ಇರಬಹುದು.
ಔಷಧಗಳ ಪರಿಣಾಮ: ಕೆಲವು ಔಷಧಿಗಳ ಅಡ್ಡ ಪರಿಣಾಮವಾಗಿ ಮೊಡವೆಗಳು ಬೆಳೆಯಬಹುದು.
ಹಾರ್ಮೋನುಗಳ ಬದಲಾವಣೆ: ಹದಿಹರೆಯದವರಲ್ಲಿ ಹಾರ್ಮೋನುಗಳ ಬದಲಾವಣೆಯು ಹೆಚ್ಚಾಗಿ ಮೊಡವೆಗಳಿಗೆ ಕಾರಣವಾಗಿದೆ. ಆದರೆ ಪ್ರೌಡಾವಸ್ಥೆಯನ್ನು ದಾಟಿದ ಮಹಿಳೆಯರಿಗೆ, ಋತುಸ್ರಾವ ಮತ್ತು ಗರ್ಭಾವಸ್ಥೆಯಲ್ಲಿ ಸಂಭವಿಸುವ ಹಾರ್ಮೋನುಗಳ ಬದಲಾವಣೆಗೆ ಸಂಬಂಧಿಸಿರಬಹುದು.
ಬೆವರು: ಬೆವರು, ವಿಶೇಷವಾಗಿ ಅದು ಬಿಗಿಯಾದ ಬಟ್ಟೆಯನ್ನು ಧರಿಸಿದಾಗ ಮೊಡವೆಗಳು ಇನ್ನಷ್ಟು ಹದಗೆಡಿಸಬಹುದು.
ಒತ್ತಡ: ಒತ್ತಡವು ಮೊಡವೆಗೆ ನೇರ ಕಾರಣವಲ್ಲ ಆದರೆ ಒಂದು ಕಾರಣವಾಗಬಹುದು.
ಆಹಾರ: ನಾವು ತಿನ್ನುವ ಆಹಾರಗಳು ಮೊಡವೆಗಳಿಗೆ ಸಂಬಂಧಿಸಿರಬಹುದು ಎಂದು ಕೆಲವು ಸಂಶೋಧನೆಗಳು ಸಾಬೀತು ಪಡಿಸಿವೆ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿಯ ಪ್ರಕಾರ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕೆಲವು ಕಾರ್ಬೋಹೈಡ್ರೇಟ್‌ಗಳು (ಉದಾ. ಬಿಳಿ ಬ್ರೆಡ್, ಆಲೂಗಡ್ಡೆ ಚಿಪ್ಸ್) ಕೂಡ ಮೊಡವೆಗಳಿಗೆ ಕಾರಣವಾಗಬಹುದು. ಕೆಲವರಿಗೆ, ಡೈರಿ ಉತ್ಪನ್ನಗಳು ಕೂಡ ಒಂದು ಪ್ರಚೋದಕವಾಗಿರಬಹುದು.

ಬೆನ್ನಿನ ಮೊಡವೆಗಳಿಗೆ ನೀವೇ ಮಾಡಿಕೊಳ್ಳಬಹುದಾದ ಪ್ಯಾಕ್ :
ಬೇಕಾಗುವ ಪದಾರ್ಥಗಳು:
1 ಟೊಮೆಟೊ
1 ಚಮಚ ಅಕ್ಕಿ ಪುಡಿ
1 ಚಮಚ ಕಡಲೆಹಿಟ್ಟು
1/2 ಚಮಚ ಅರಿಶಿನ ಪುಡಿ

ತಯಾರಿಸುವ ವಿಧಾನ:
ಒಂದು ಪ್ಲೇಟ್ ನಲ್ಲಿ ಟೊಮೆಟೊ ತಿರುಳನ್ನು ತೆಗೆಯಿರಿ. ಅದಕ್ಕೆ ಒಂದು ಚಮಚ ಅಕ್ಕಿ ಪುಡಿ, ಕಡಲೆಹಿಟ್ಟು ಮತ್ತು ಅರ್ಧ ಚಮಚ ಅರಿಶಿನವನ್ನು ಸೇರಿಸಿ, ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ನಿಮ್ಮ ಬೆನ್ನಿಗೆ ಹಚ್ಚಿ, ಸ್ವಲ್ಪ ಸ್ಕ್ರಬ್ ಮಾಡಿ, ಆಗ ಅದು ಹೀರಿಕೊಳ್ಳಲು ಪ್ರಾರಂಭಿಸುತ್ತದೆ. ಇದನ್ನು 30 ನಿಮಿಷಗಳ ಕಾಲ ಬಿಡಿ. ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಂತರ ಹಾಲಿನ ಕೆನೆ ಅಥವಾ ಆಲಿವ್ ಎಣ್ಣೆಯನ್ನು ಹಚ್ಚಿ.

ಫಲಿತಾಂಶ ಹೇಗಿರುತ್ತದೆ?:
ಟೊಮೆಟೊಗಳಲ್ಲಿರುವ ವಿಟಮಿನ್‌ಗಳು ಚರ್ಮವನ್ನು ಸಮತೋಲನಗೊಳಿಸಲು, ಕಾಂತಿಯುತವಾಗಿಸಲು ಮತ್ತು ಮೊಡವೆಗಳನ್ನು ದೂರಮಾಡಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ಟೋನ್ ಮಾಡುವುದು ಜೊತೆಗೆ ಮೊಡವೆಗಳಿಗೆ ಕಾರಣವಾಗುವ ಎಲ್ಲಾ ಬ್ಯಾಕ್ಟೀರಿಯಾಗಳನ್ನು ತೊಡೆದುಹಾಕುತ್ತದೆ. ಅರಿಶಿನವು ಉರಿಯೂತದ ಮತ್ತು ನಂಜುನಿರೋಧಕವಾಗಿ ಕೆಲಸಮಾಡುತ್ತದೆ. ಕಡಲೆಹಿಟ್ಟು ಮತ್ತು ಅಕ್ಕಿ ಹುಡಿ ಉತ್ತಮವಾದ ಎಕ್ಸ್‌ಫೋಲಿಯೇಟರ್ ಹಾಗೂ ಸ್ಕಿನ್ ಬ್ರೈಟ್ನರ್ ಆಗಿದ್ದು, ನಿಮ್ಮ ಬೆನ್ನನ್ನು ಪುನಶ್ಚೇತನಗೊಳಿಸುವಂತೆ ಮಾಡುತ್ತದೆ, ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಬೆನ್ನಿನ ಮೊಡವೆಗೆ ಇತರ ಸಲಹೆಗಳು:
ವ್ಯಾಯಾಮ ಮಾಡಿದ ನಂತರ ಸ್ನಾನ ಮಾಡಿ: ಇದರಿಂದ ಕೊಳೆ, ಬೆವರು ನಿಮ್ಮ ಬೆನ್ನಿನಲ್ಲಿ ಶೇಖರಣೆಯಾಗುವುದಿಲ್ಲ.ಜೊತೆಗೆ ವ್ಯಾಯಾಮಕ್ಕೆ ಬಳಸಿದ ಬಟ್ಟೆಯನ್ನ್ ಶುಭ್ರಗೊಳಿಸಬೇಕು. ಬೆವರಿನಿಂದ ಮೊಡವೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಸಡಿಲವಾದ ಬಟ್ಟೆ ಧರಿಸಿ: ಹೌದು, ಬಿಗಿಯಾದ ಬಟ್ಟೆಯಿಂದ ಮೊಡವೆ ಅಥವಾ ಗುಳ್ಳೆಗಳು ಉಂಟಾಗುತ್ತವೆ. ಆದ್ದರಿಂದ ವ್ಯಾಯಾಮ ಮಾಡುವಾಗ ಅಥವಾ ಇತರ ಬೆವರುವ ಸಂದರ್ಭಗಳಲ್ಲಿ ಸಡಿಲವಾದ ಬಟ್ಟೆಯನ್ನು ಧರಿಸಿ.
ಕೂದಲು ಬೆನ್ನಿಗೆ ತಾಗದಂತೆ ನೋಡಿಕೊಳ್ಳಿ: ಉದ್ದನೆಯ ಕೂದಲು ನಿಮ್ಮ ಬೆನ್ನಿನ ಚರ್ಮಕ್ಕೆ ಎಣ್ಣೆ ಮತ್ತು ಕೊಳೆಯನ್ನು ಸೇರಿಸುವುದರಿಂದ ಮೊಡವೆಗಳು ಕಾಣಿಸಿಕೊಳ್ಳಬಹುದು. ನಿಮ್ಮ ಕೂದಲನ್ನು ನಿಯಮಿತವಾಗಿ ತೊಳೆಯಿರಿ ಮತ್ತು ಬೆವರುವ ಸಮಯದಲ್ಲಿ ಬನ್ ಅಥವಾ ಪೋನಿಟೇಲ್‌ನಲ್ಲಿ ಹಾಕಿ. ಶ್ಯಾಂಪ್ಯೂ ಹಾಗೂ ಕಂಡೀಷನರ್ ಬೆನ್ನಿಗೆ ಬೀಳದಂತೆ ನೋಡಿಕೊಳ್ಳಿ.



Click it and Unblock the Notifications











