Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ವಯಸ್ಸಾದಂತೆ ಮುಖ ಸುಕ್ಕಾಗ್ತಿದ್ಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ
ಸುಂದರವಾಗಿ ಕಾಣಲು ಏನೆಲ್ಲಾ ಕಸರತ್ತುಗಳನ್ನ ಮಾಡ್ತೀವಿ. ಅನೇಕರಂತೂ ತಿಂಗಳಲ್ಲಿ ಸಾವಿರಾರು ರೂಪಾಯಿಯನ್ನ ಪಾರ್ಲರ್‌ಗಳಿಗೆ ಇನ್ವೆಸ್ಟ್ ಮಾಡ್ತಾರೆ. ಆದ್ರೆ ಅದನ್ನೆಲ್ಲಾ ಬಿಟ್ಟು ನಾವು ಅಡುಗೆಗೆ ಬಳಸುವ ಸಾಮಾಗ್ರಿಯಿಂದಾನೇ ನಮ್ಮ ಮುಖವನ್ನು ಸುಂದರವಾಗಿ ಹೊಳೆಯುವಂತೆ ಮಾಡಬಹುದು.
ಹೌದು, ಬೀಟ್‌ರೋಟ್ ಬಹು ಉಪಯೋಗಕಾರಿ ತರಕಾರಿಗಳಲ್ಲಿ ಒಂದು. ಎಲ್ಲಾ ರೀತಿಯ ಆರೋಗ್ಯಕಾರಿ ಗುಣವನ್ನು ಹೊಂದಿರುವ ಈ ಬೀಟ್‌ರೋಟ್ ಚರ್ಮದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಒಣಚರ್ಮ ತುಂಬಾನೇ ಸೆನ್ಸಿಟಿವ್ ಅದ್ರಲ್ಲೂ ಡ್ರೈ ಸ್ಕಿನ್ ಹೊಂದಿರುವವರು ಬಹು ಬೇಗ ವಯಸ್ಸಾದಂತೆ ಕಾಣಿಸುತ್ತಾರೆ. ಆದ್ರೆ ನಾವು ಈಗ ಹೇಳೋ ಸಿಂಪಲ್ ಬ್ಯೂಟಿ ಟಿಪ್ಸ್ ಅನ್ನು ನೀವೇನಾದ್ರು ಫಾಲೋ ಮಾಡಿದ್ರೆ ಖಂಡಿತ ನಿಮ್ಮ ಒಣ ಚರ್ಮ ಮತ್ತು ಸುಕ್ಕಿನ ಸಮಸ್ಯೆಗೆ ಪರಿಹಾರ ಸಿಗಲಿದೆ.

ವಿಟಮಿನ್‌ನಿಂದ ಸಮೃದ್ಧವಾಗಿರೋ ಬಿಟ್‌ರೋಟ್
ಬಿಟ್‌ರೋಟ್‌ನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಫೈಬರ್, ವಿಟಮಿನ್, ಮ್ಯಾಗನೀಸ್, ಪೊಟ್ಯಾಶಿಯಂ, ಐರನ್, ವಿಟಮಿನ್ ಸಿ ಹೀಗೆ ಹತ್ತು ಹಲವು ಪೋಷಕಾಂಶಗಳು ನಮಗೆ ಉತ್ತಮ ಆರೋಗ್ಯವನ್ನು ಒದಗಿಸುತ್ತದೆ. ದಿನನಿತ್ಯ ಬಿಟ್‌ರೋಟ್ ಜ್ಯೂಸ್ ಕುಡಿಯುವುದರಿಂದ ರಕ್ತ ಸಂಚಲನ, ರಕ್ತದೊತ್ತಡದಂತಹ ಸಮಸ್ಯೆಯನ್ನು ನಿವಾರಿಸುತ್ತದೆ. ಇನ್ನೂ ಚರ್ಮದ ಕಾಂತಿಯನ್ನು ಹೆಚ್ಚಿಸಲು ಬೀಟ್‌ರೋಟ್‌ಗಿಂತ ಆರೋಗ್ಯಕಾರಿ ಮನೆಮದ್ದು ಬೇರ್ಯಾವುದಿಲ್ಲ.
ಚರ್ಮದ ಪೋಷಣೆಗೆ ಬೀಟ್‌ರೋಟ್ ಮನೆಮದ್ದು
ಒಣಗಿದ ಅಥವಾ ಸುಕ್ಕು ಗಟ್ಟಿದ ತ್ವಚೆ ಯಾವುದೇ ಇರಲಿ ಬಿಟ್‌ರೋಟ್‌ನಿಂದ ಸುಲಭ ಪರಿಹಾರ ಪಡೆಯಲು ಈ ಟಿಪ್ಸ್‌ಗಳನ್ನು ಫಾಲೋ ಮಾಡಿ.

1. ಚರ್ಮದ ಸುಕ್ಕಿನ ಸಮಸ್ಯೆಗೆ ಪರಿಹಾರ
ಬಿಟ್‌ರೋಟ್‌ನಲ್ಲಿ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ನಿಮ್ಮ ಮುಖದಲ್ಲಿರುವ ಅಧಿಕವಾಗಿರುವ ಎಣ್ಣೆಯ ಅಂಶವನ್ನು ಕಡಿಮೆಗೊಳಿಸಿ ಮೊಡವೆಗಳು ಬಾರದಂತೆ ತಡೆಯುತ್ತದೆ. ನೀವು ನಿತ್ಯವು ಬೀಟ್‌ರೋಟ್ ಜ್ಯೂಸ್ ಸೇವನೆ ಮಾಡುವುದರಿಂದ ಸುಕ್ಕು, ಮೊಡವೆ, ಕಪ್ಪುಕಲೆಯಂತಹ ಸಮಸ್ಯೆಗೆ ಪರಿಹಾರ ಸಿಗುತ್ತದೆ.

2. ಮುಖದ ಕಾಂತಿಯನ್ನು ಹೆಚ್ಚು ಮಾಡುತ್ತದೆ
ಪ್ರತಿನಿತ್ಯ ಬೀಟ್‌ರೋಟ್ ಜ್ಯೂಸ್ ಕುಡಿಯುವುದರಿಂದ ಹತ್ತು ಹಲವು ಉಪಯೋಗಗಳಿದೆ. ಮೊದಲನೇಯದ್ದು ರಕ್ತದಲ್ಲಿರುವ ನಿರುಪಯುಕ್ತ ಪದಾರ್ಥವನ್ನು ಹೊರಹಾಕಿ ಶದ್ಧ ರಕ್ತ ಉತ್ಪಾದಿಸಲು ಪ್ರೇರೇಪಿಸುತ್ತದೆ. ಇದರಿಂದಾಗಿ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ವಯಸ್ಸಾದಂತೆ ಚರ್ಮ ತನ್ನ ಕಾಂತಿಯನ್ನು ಕಳೆದುಕೊಂಡು ಬಿಡುತ್ತದೆ. ಇನ್ನೂ ಕೆಲಸದ ಒತ್ತಡದಿಂದ ನಾವು ವಯಸ್ಸಾಸಂತೆ ಕಾಣುತ್ತೇವೆ. ಇಂತಹ ಸಮಯದಲ್ಲಿ ಬಿಟ್‌ರೋಟ್ ಸೇವನೆ ಮಾಡಬೇಕು. ಬೀಟ್‌ರೋಟ್‌ನಲ್ಲಿ ಐರನ್ ಅಂಶ ಅಧಿಕ ಪ್ರಮಾಣದಲ್ಲಿರೋದ್ರಿಂದ ಹಾನಿಯಾದ ಚರ್ಮದ ಕೋಶಗಳನ್ನು ತೆಗೆದು ಹಾಕಿ ಹೊಸ ಕೋಶಗಳ ಉತ್ಪಾದನೆಗೆ ಪ್ರಚೋದಿಸುತ್ತದೆ. ಇದರಿಂದ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

3. ಚರ್ಮದ ಮೇಲಿರುವ ಕಪ್ಪು ಕಲೆಯನ್ನು ಕಡಿಮೆ ಮಾಡುತ್ತದೆ
ಬಿಟ್‌ರೋಟ್‌ನಲ್ಲಿ ವಿಟಮಿನ್ ಸಿ ಅಂಶ ಅಧಿಕ ಪ್ರಮಾಣದಲ್ಲಿದೆ. ಇದು ನಿಮ್ಮ ಚರ್ಮದ ಪಿಗ್ಮೆಂಟೇಶನ್ ಕಡಿಮೆ ಮಾಡಲು ಸಹಕರಿಸುತ್ತದೆ. ಸಂಶೋಧನೆಗಳ ಪ್ರಕಾರ ವಿಟಮಿನ್ ಸಿ ಮೆಲಾನಿನ್ ಉತ್ಪಾದನೆಯನ್ನು ಕಡಿಮೆ ಮಾಡಿ ಅತಿಯಾದ ಪಿಗ್ಮೆಂಟೇಶನ್ ಸಮಸ್ಯೆಯನ್ನು ನಿವಾರಿಸುತ್ತದೆ.

4. ಸೂರ್ಯಕಿರಣದಿಂದಾದ ಹಾನಿಯನ್ನು ಸರಿಪಡಿಸುತ್ತದೆ
ಸಾಮಾನ್ಯವಾಗಿ ಸೂರ್ಯನ ಕಿರಣಕ್ಕೆ ಒಡ್ಡಿದ ಚರ್ಮ ತನ್ನ ನಿಜ ಸ್ವರೂಪವನ್ನು ಕಳೆದುಕೊಂಡು ಡಲ್ ಆಗುತ್ತದೆ. ಇದರ ಜೊತೆಗೆ ಬಣ್ಣವು ಕಂದು ಬಣ್ಣಕ್ಕೆ ತಿರುಗುತ್ತದೆ. ಇಂತಹ ಸಮಯದಲ್ಲಿ ಬೀಟ್‌ರೋಟ್ ಜ್ಯೂಸ್ ಅನ್ನು ಸೇವನೆ ಮಾಡಿದರೆ ಸೂರ್ಯನ ಕಿರಣದಿಂದಾದ ಕಂದು ಬಣ್ಣವನ್ನು ತೊಲಗಿಸಿ ನಿಮ್ಮ ಚರ್ಮಕ್ಕೆ ಕಾಂತಿಯನ್ನು ಒದಗಿಸುತ್ತದೆ.

5. ಚರ್ಮಕ್ಕೆ ನವಚೇತನವನ್ನು ನೀಡುತ್ತದೆ
ವಯಸ್ಸಾದಂತೆ ಚರ್ಮ ಸುಕ್ಕುಗಟ್ಟೋದು ಸಾಮಾನ್ಯ. ಪಾರ್ಲರ್ ಅಥವಾ ಸ್ಕಿಲ್‌ಕೇರ್ ಸಲೂನ್‌ಗಳಲ್ಲಿ ಇದಕ್ಕೆ ಚಿಕಿತ್ಸೆ ಇದ್ದರೂ ಕೂಡ ಅದರಿಂದ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಕೂಡ ಇದೆ. ಹೀಗಾಗಿ ವಿಟಮಿನ್ ಸಿ ಅಂಶ ಹಾಗೂ ಫೈಬರ್ ಅಂಶ ಅಧಿಕವಾಗಿರುವ ಬಿಟ್‌ರೋಟ್ ಸೇವಿಸಿ ಇದು ನಿಮಗೆ ನೈಸರ್ಗಿಕ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ಕಾಣುವ ಬದಲು ನಿಮ್ಮ ತ್ವಚೆ ನವ ಯುವಕರಂತೆ ನಳ ನಳಿಸುತ್ತಿರುತ್ತದೆ.

ಬೀಟ್‌ರೋಟ್‌ನ ಬಳಸುವ ವಿಧಾನ
1. ಸೂರ್ಯನ ಕಿರಣದಿಂದ ಆದ ಕಲೆ ತೊಲಗಿಸುವ ವಿಧಾನ
ಮೊದಲಿಗೆ ಒಂದು ಟೀ ಸ್ಪೂನ್ ಬಿಟ್‌ರೋಟ್ ಜ್ಯೂಸ್ ಮತ್ತು ಒಂದು ಟೇಬಲ್‌ಸ್ಪೂನ್ ಹುಳಿಯಾದ ಕ್ರೀಮ್ ತೆಗೆದುಕೊಳ್ಳಿ ಮತ್ತು ಮುಖದ ತುಂಬಾ ಹಚ್ಚಿ. 15-20 ನಿಮಿಷದ ನಂತರ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ಪಡೆಯುತ್ತೀರಿ.

2. ಮೃದುವಾದ ಚರ್ಮ ಪಡೆಯಿರಿ
ಒಣಚರ್ಮದ ಸಮಸ್ಯೆಯಿಂದ ನೀವೆನಾದರೂ ಬಳಲುತ್ತಿದ್ದರೆ ಹೀಗೆ ಮಾಡಿ. ಒಂದು ಟೀ ಸ್ಪೂನ್ ಹಾಲು, ಕೆಲವು ಹನಿ ಬಾದಾಮಿ ಎಣ್ಣೆ, ಎರಡು ಟೀ ಸ್ಪೂನ್ ಬೀಟ್‌ರೋಟ್ ಜ್ಯೂಸ್ ಮಿಶ್ರಣ ತಯಾರಿಸಿ ಮುಖಕ್ಕೆ ಹಚ್ಚಿರಿ. ಹತ್ತು ನಿಮಿಷದ ನಂತರ ಮುಖ ತೊಳಯಿರಿ. ನಿರಂತರವಾಗಿ ಇದನ್ನು ಮಾಡುತ್ತಿದ್ದರೆ ನಿಮ್ಮ ಚರ್ಮ ಮೃದುತ್ವವನ್ನು ಪಡೆಯುತ್ತದೆ.

3. ಚರ್ಮದ ಸುಕ್ಕು ತೊಲಗಿಸಿ
ಪ್ರತಿನಿತ್ಯ ಸೌತೆಕಾಯಿ ಹಾಗೂ ಬೀಟ್‌ರೋಟ್ ಜ್ಯೂಸ್ ಅನ್ನು ಸಮ ಪ್ರಮಾಣದಲ್ಲಿ ಸೇವಿಸಿ. ನಿಧಾನವಾಗಿ ನಿಮ್ಮ ಚರ್ಮದಲ್ಲಿ ಗಮನಾರ್ಹ ಬದಲಾವಣೆಯನ್ನು ನೀವು ಕಾಣುತ್ತೀರಿ. ಮಂಕಾದ, ಸುಕ್ಕುಗಟ್ಟಿದ ಚರ್ಮವು ಕಾಂತಿಯುತವಾಗಿ ಕಾಣುತ್ತದೆ.
ಅತಿಯಾದರೆ ಅಮೃತವು ವಿಷ ಅಂತಾರಲ್ಲ, ಹಾಗೇ ಪ್ರತಿನಿತ್ಯ ಒಂದು ಲೋಟಕ್ಕಿಂತ ಅಧಿಕ ಬೀಟ್‌ರೋಟ್ ಸೇವನೆ ಒಳ್ಳೆಯದಲ್ಲ. ಇದು ನಿಮ್ಮ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಗೂ ಕಾರಣವಾಗಬಹುದು. ಹಾಗಾಗಿ ಜಾಗರೂಕರಾಗಿರಿ.



Click it and Unblock the Notifications









