Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಚಳಿಗಾಲದಲ್ಲಿ ಫೇಸ್ ಸಿರಮ್ ಖರೀದಿಸುವಾಗ ಈ ಪ್ರಮುಖ ವಿಷಯಗಳನ್ನು ನೆನಪಿಡಿ
ಚಳಿಗಾಲದಲ್ಲಿ ಚರ್ಮಕ್ಕೆ ಹೆಚ್ಚಿನ ಕಾಳಜಿ ಬೇಕು. ಈ ಋತುವಿನಲ್ಲಿ, ತ್ವಚೆಯ ಶುಷ್ಕತೆಯನ್ನು ಹೋಗಲಾಡಿಸಲು ಮತ್ತು ಹೊಳೆಯುವಂತೆ ಮಾಡಲು ಸೀರಮ್ ತುಂಬಾ ಪರಿಣಾಮಕಾರಿಯಾಗಿದೆ. ಚಳಿಗಾಲದಲ್ಲಿ ಸೀರಮ್ ಬಳಸುವುದರಿಂದ ತ್ವಚೆಯು ತೇವಾಂಶದಿಂದ ಕೂಡಿರುತ್ತದೆ, ಜೊತೆಗೆ ತ್ವಚೆಯಲ್ಲಿ ಹೊಳಪು ಇರುವುದು.
ನೀವೇನಾದರೂ ಚಳಿಗಾಲಕ್ಕೆ ಸೀರಮ್ ಖರೀದಿಸಲು ಯೋಚಿಸುತ್ತಿದ್ದರೆ, ಈ ವಿಷಯಗಳನ್ನು ನೆನಪಿನಲ್ಲಿಡಬೇಕು. ಅವುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಸೀರಮ್ ಬಳಕೆ ಹೇಗೆ?:
ಟೋನರ್ ಅನ್ನು ಚರ್ಮಕ್ಕೆ ಹಚ್ಚಿದ ನಂತರ ಫೇಸ್ ಸೀರಮ್ ಅನ್ನು ಹಚ್ಚಬೇಕು. ಮುಖದ ಮೇಲೆ ಸೀರಮ್ ಅನ್ನು ಹಚ್ಚುವುದು ತುಂಬಾ ಸುಲಭ. ಸೀರಮ್ನ ಅಂಗೈಗಳ ಮೇಲೆ ಕೆಲವು ಹನಿಗಳನ್ನು ತೆಗೆದುಕೊಂಡು, ಮುಖದ ಮೇಲೆ ಹಚ್ಚಿ, ನಿಧಾನವಾಗಿ ಉಜ್ಜಿ. ನಂತರ ಮಾಯಿಶ್ಚರೈಸರ್ ಅನ್ನು ಹಚ್ಚುವುದರಿಂದ, ತ್ವಚೆ ಫ್ರೆಶ್ ಹಾಗೂ ಕಾಂತಿಯುತವಾಗುವುದು.

ಚಳಿಗಾಲದಲ್ಲಿ ಸೀರಮ್ ಖರೀದಿಸುವಾಗ ನೆನಪಿಡಬೇಕಾದ ವಿಷಯಗಳು ಹೀಗಿವೆ:
ಆಲ್ ಇನ್ ವನ್ ಸೀರಮ್ ಎಲ್ಲಾ ಚರ್ಮ ಪ್ರಕಾರಕ್ಕೂ ಬೆಸ್ಟ್:
ನೀವು ಸಾಮಾನ್ಯ ಮತ್ತು ಶುಷ್ಕ ಚರ್ಮವನ್ನು ಹೊಂದಿದ್ದರೆ, ಆಲ್ ಇನ್ ವನ್ ಸೀರಮ್ ಖರೀದಿಬೇಕು. ಇದು ಎಲ್ಲಾ ಚರ್ಮದ ಪ್ರಕಾರಕ್ಕೂ ಹೊಂದಿಕೋಳ್ಳುತ್ತದೆ. ಈ ಸೀರಮ್ನಲ್ಲಿ ಹೈಲುರಾನಿಕ್ ಆಸಿಡ್, ಗ್ಲೈಕೋಲಿಕ್ ಆಸಿಡ್, ರೆಟಿನಾಲ್ ಮತ್ತು ವಿಟಮಿನ್ ಸಿ ಇದ್ದು ಇದು ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳನ್ನು ಪರಿಹರಿಸುತ್ತದೆ. ಈ ಸೀರಮ್ನಲ್ಲಿರುವ ವಿಟಮಿನ್ಗಳು ಚರ್ಮಕ್ಕೆ ಹೊಳಪನ್ನು ತರುತ್ತವೆ.

ಚರ್ಮದ ಸಮಸ್ಯೆಗೆ ಅನುಗುಣವಾದ ಸೀರಮ್ ಆಯ್ಕೆಮಾಡಿ:
ಹೌದು, ನಿಮ್ಮ ತ್ವಚೆಗೆ ಎಂತಹ ಸೀರಮ್ ಅವಶ್ಯಕತೆ ಇದೆ ಎಂಬುದನ್ನು ಆಧರಿಸಿ, ಸೀರಮ್ ಆಯ್ಕೆ ಮಾಡಿ. ನಿಮ್ಮ ಚರ್ಮದ ಮೇಲೆ ಕಪ್ಪು ಕಲೆಗಳು ಇದ್ದರೆ, ವಿಟಮಿನ್ ಬಿ 3 ಹೊಂದಿರುವ ಸೀರಮ್ ಅನ್ನು ಬಳಸಬಹುದು. ವಿಟಮಿನ್ ಬಿ 3 ಸೀರಮ್ ನಿಮ್ಮ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ತರುತ್ತದೆ. ಹೀಗೆ ಆಯಾ ಸಮಸ್ಯೆಗೆ ಅನುಗುಣವಾದ ಸೀರಮ್ ಆಯ್ಕೆ ಮಾಡಿ.

ಸೀರಮ್ನ ಪ್ಯಾಚ್ ಪರೀಕ್ಷೆ ಮಾಡಿ:
ನಿಮ್ಮ ತ್ವಚೆಗಾಗಿ ಯಾವುದೇ ಉತ್ಪನ್ನವನ್ನು ಖರೀದಿಸುತ್ತಿದ್ದರೆ, ಮೊದಲು ಅದರ ಪ್ಯಾಚ್ ಪರೀಕ್ಷೆಯನ್ನು ಮಾಡುವುದನ್ನು ಮರೆಯಬೇಡಿ. ಏಕೆಂದರೆ, ಎಲ್ಲಾ ಉತ್ಪನ್ನವು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗುವುದಿಲ್ಲ. ಮುಖಕ್ಕೆ ಹಚ್ಚಿದ ನಂತರ ಆಗುವ ಅನಾಹುತಗಳನ್ನು ಅಥವಾ ಅಲರ್ಜಿಗಳನ್ನು ತಪ್ಪಿಸಲು ಮೊದಲು ಪ್ರಯಾಚ್ ಮಾಡಿಕೊಳ್ಳುವುದು ಉತ್ತಮ. ಆದ್ದರಿಂದ ತ್ವಚೆಯ ಆರೈಕೆ ಉತ್ಪನ್ನವನ್ನು ಖರೀದಿಸುವಾಗ ಪ್ಯಾಚ್ ಪರೀಕ್ಷೆಯನ್ನು ಮಾಡಿಕೊಳ್ಳಿ.

ಸೆನ್ಸಿಟಿವ್ ಸ್ಕಿನ್ ಹೊಂದಿದ್ದರೆ, ತಜ್ಞರನ್ನು ಸಂಪರ್ಕಿಸಿ:
ಕೆಲವು ಜನರ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ, ಅದರ ಮೇಲೆ ಯಾವುದೇ ಪ್ರಾಡಕ್ಟ್ ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಆದ್ದರಿಂದ ನೀವೇನಾದರೂ ಸೂಕ್ಷ್ಮ ಚರ್ಮವನ್ನು ಹೊಂದಿದ್ದರೆ, ಚರ್ಮಶಾಸ್ತ್ರಜ್ಞರನ್ನು ಸಂಪರ್ಕಿಸಿದ ನಂತರವೇ ಸೀರಮ್ ಅನ್ನು ಆಯ್ಕೆ ಮಾಡಿ.



Click it and Unblock the Notifications
