Latest Updates
-
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ತ್ವರಿತವಾಗಿ ಮುಖದ ಸೌಂದರ್ಯ ಹೆಚ್ಚಿಸುವ ನೈಸರ್ಗಿಕವಾದ ಹಾಗೂ ಅಗ್ಗದ ಫೇಸ್ ಪ್ಯಾಕ್‌ಗಳು
ಮುಖವು ಸುಂದರ ಹಾಗೂ ಕಾಂತಿಯುತವಾಗಿ ಕಾಣಬೇಕಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆಯು ಪ್ರತಿಯೊಬ್ಬ ಮಹಿಳೆಯು ಕೇಳುವರು. ಇದಕ್ಕೆ ಸರಿಯಾದ ಉತ್ತರವೆಂದರೆ ನೈಸರ್ಗಿಕವಾಗಿರುವಂತಹ ಫೇಸ್ ಮಾಸ್ಕ್ ಗಳನ್ನು ಬಳಸಿಕೊಳ್ಳುವುದು. ಆದರೆ ಫೇಸ್ ಮಾಸ್ಕ್ ಗಳನ್ನು ಮನೆಯಲ್ಲಿ ತಯಾರಿಸಿಕೊಳ್ಳಲು ಪುರುಸೊತ್ತು ಇಲ್ಲದೆ ಇರುವ ಕಾರಣದಿಂದಾಗಿ ಮಹಿಳೆಯರು ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಉತ್ಪನ್ನಗಳಿಗೆ ಮೊರೆ ಹೋಗುವರು. ಆದರೆ ಮಾರುಕಟ್ಟೆಯಲ್ಲಿ ನೂರಾರು ವಿಧದ ಉತ್ಪನ್ನಗಳು ಲಭ್ಯವಿರುವುದು. ಇದರಿಂದ ಸರಿಯಾದ ಆಯ್ಕೆ ಮತ್ತು ಬಜೆಟ್ ಗೆ ಹೊಂದಿಕೊಳ್ಳುವುದನ್ನು ಆಯ್ಕೆ ಮಾಡುವುದು ತುಂಬಾ ಕಠಿಣ.

ತ್ವಚೆಯ ಆರೈಕೆಗಾಗಿ ದುಬಾರಿ ಖರ್ಚು ಮಾಡಬೇಕಾ ಎಂದು ಪ್ರಶ್ನಿಸಿದರೆ, ಖಂಡಿತವಾಗಿಯೂ ಇಲ್ಲ. ನೀವು ತ್ವಚೆಯ ಆರೈಕೆಗೆ ಅದ್ಭುತವಾಗಿರುವ ಉತ್ಪನ್ನಗಳನ್ನು ಹುಡುಕುತ್ತಾ ಇದ್ದರೆ ಆಗ ಖಂಡಿತವಾಗಿಯೂ ಇದು ನಿಮ್ಮ ಕಿಸೆ ಖಾಲಿ ಮಾಡದು. ಯಾಕೆಂದರೆ ನಾವು ನಿಮಗೆ ಇಲ್ಲಿ ತುಂಬಾ ನೈಸರ್ಗಿಕವಾದ, ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವ ಕೆಲವು ಫೇಸ್ ಪ್ಯಾಕ್ ಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ತುಂಬಾ ಕಡಿಮೆ ಖರ್ಚಿನಲ್ಲಿ ಮುಖದ ಕಾಂತಿಯನ್ನು ನೈಸರ್ಗಿಕವಾಗಿ ವೃದ್ಧಿಸುವ ಕೆಲವು ಫೇಸ್ ಪ್ಯಾಕ್ ಗಳು ತುಂಬಾ ಪರಿಣಾಮಕಾರಿಯಾಗಿ ಇರಲಿದೆ. ಅದು ಯಾವುದು ಎಂದು ನೀವು ಈ ಲೇಖನ ಓದುತ್ತಾ ತಿಳಿಯಿರಿ.

ಮುಲ್ತಾನಿ ಮಿಟ್ಟಿ
ಮುಲ್ತಾಣಿ ಮಿಟ್ಟಿಯು ಚರ್ಮವನ್ನು ಶುದ್ಧೀಕರಿಸುವುದು, ಎಣ್ಣೆ ಹೀರಿಕೊಳ್ಳುವುದು, ಕೊಳೆ ತೆಗೆಯುವುದು ಮತ್ತು ಶುಭ್ರವಾದ ಚರ್ಮ ನಿಮಗೆ ನೀಡುವುದು. ಮುಲ್ತಾನಿ ಮಿಟ್ಟಿಯನ್ನು ಫೇಸ್ ಪ್ಯಾಕ್ ಅಥವಾ ಟೋನರ್ ಆಗಿ ಬಳಸಬಹುದು. ಇದು ಮೊಡವೆ, ಕಲೆ ಮತ್ತು ಬೊಕ್ಕೆ ನಿವಾರಿಸುವುದು. ಇದು ಸತ್ತ ಚರ್ಮವನ್ನು ತೆಗೆಯುವುದು ಮತ್ತು ಇದರಿಂದಾಗಿ ಚರ್ಮವು ತುಂಬಾ ತಾಜಾ ಹಾಗೂ ಮೃಧುವಾಗಿರುವುದು. ರಕ್ತ ಸಂಚಾರವು ಉತ್ತಮವಾಗಿ ಆಗಲು ಇದು ನೆರವಾಗುವುದು. ಇದನ್ನು ಚರ್ಮದ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಬಳಸಿಕೊಳ್ಳಬಹುದು.
ಬೇಕಾಗುವ ಸಾಮಗ್ರಿಗಳು
•1 ಚಮಚ ಮುಲ್ತಾನಿ ಮಿಟ್ಟಿ
•1 ಚಮಚ ಕಡಲೆ ಹಿಟ್ಟು
•1 ಚಮಚ ಶ್ರೀಗಂಧದ ಹುಡಿ
•2 ಚಮಚ ರೋಸ್ ವಾಟರ್
ಬಳಸುವ ವಿಧಾನ
•ಮುಲ್ತಾನಿ ಮಿಟ್ಟಿ, ಕಡಲೆ ಹಿಟ್ಟು, ಶ್ರೀಗಂಧದ ಹುಡಿ, ರೋಸ್ ವಾಟರ್ ನ್ನು ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿ.
•ಮುಖವನ್ನು ತೊಳೆದುಕೊಳ್ಳಿ, ಅದು ಒಣಗಿದ ಬಳಿಕ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ.
•10-15 ನಿಮಿಷ ಕಾಲ ಪೇಸ್ಟ್ ಹಾಗೆ ಒಣಗಲು ಬಿಡಿ.
•ಇದು ಸರಿಯಾಗಿ ಒಣಗಲಿ.
•ತಣ್ಣೀರಿನಿಂದ ಮುಖ ತೊಳೆಯಿರಿ.
•ವಾರದಲ್ಲಿ 2-3 ಸಲ ಈ ಪ್ಯಾಕ್ ಬಳಸಿಕೊಳ್ಳಿ ಮತ್ತು ನಿಮಗೆ ಅದ್ಭುತ ಫಲಿತಾಂಶ ಕಂಡುಬರುವುದು.

ಅಲೋವೆರಾ
ಅಲೋವೆರಾವು ಹಲವಾರು ರೀತಿಯ ಚರ್ಮದ ಸಮಸ್ಯೆಗಳಿಗೆ ಪರಿಣಾಮಕಾರಿ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಾಗಿರುವ ವಿಟಮಿನ್ ಎ, ಸಿ ಮತ್ತು ಇ ಇದೆ. ಇದರಲ್ಲಿ ಇರುವಂತಹ ಚಿಕಿತ್ಸಕ ಗುಣದಿಂದಾಗಿ ಚರ್ಮವು ವಿಕಿರಣ ಹಾನಿಗೆ ಒಳಗಾಗುವುದನ್ನು ತಪ್ಪಿಸುವುದು. ವಯಸ್ಸಾಗುವ ಲಕ್ಷಣ ತಡೆಯುವ, ಉರಿಯೂತ ಶಮನಕಾರಿ ಮತ್ತು ನಂಜುನಿರೋಧಕ ಗುಣಗಳು ಇದರಲ್ಲಿ ಇದೆ.
ಬೇಕಾಗುವ ಸಾಮಗ್ರಿಗಳು
1 ಚಮಚ ಅಲೋವೆರಾ
ಬಳಸಿಕೊಳ್ಳುವ ವಿಧಾನ
•ನಿಮ್ಮ ಮುಖವನ್ನು ಫೇಸ್ ವಾಶ್ ಬಳಸಿಕೊಂಡು ತೊಳೆಯಿರಿ ಮತ್ತು ಒಣಗಲು ಬಿಡಿ.
•ಅಲೋವೆರಾ ಲೋಳೆಯನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು ಕೆಲವು ನಿಮಿಷ ಕಾಲ ಹಾಗೆ ನಿಧಾನವಾಗಿ ಮಸಾಜ್ ಮಾಡಿ.
•ರಾತ್ರಿಯಿಡಿ ನೀವು ಇದನ್ನು ಹಾಗೆ ಬಿಡಿ ಮತ್ತು ಬೆಳಗ್ಗೆ ಎದ್ದ ಬಳಿಕ ಮುಖ ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ಪ್ರತಿನಿತ್ಯ ಹೀಗೆ ಮಾಡಿ.

ಬೇವಿನ ಎಣ್ಣೆ
ಬೇಕಾಗುವ ಸಾಮಗ್ರಿಗಳು
1 ಚಮಚ ಬೇವಿನ ಎಣ್ಣೆ
1 ಹತ್ತಿ ಉಂಡೆ
ಬಳಸುವ ವಿಧಾನ
•ಬೇವಿನ ಎಣ್ಣೆಯಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಳ್ಳಿ.
•ಮುಖವನ್ನು ಸರಿಯಾಗಿ ತೊಳೆದುಕೊಂಡು ಒಣಗಿಸಲು ಬಿಡಿ.
•ಹತ್ತಿ ಉಂಡೆ ಬಳಸಿಕೊಂಡು ಬೇವಿನ ಎಣ್ಣೆ ಮುಖಕ್ಕೆ ಹಚ್ಚಿಕೊಳ್ಳಿ.
•20 ನಿಮಿಷ ಕಾಲ ಹಾಗೆ ಬಿಡಿ.
•ಬಿಸಿ ನೀರಿನಿಂದ ಮುಖ ತೊಳೆಯಿರಿ.
•ಉತ್ತಮ ಫಲಿತಾಂಶಕ್ಕಾಗಿ ಪ್ರತಿನಿತ್ಯ ಹೀಗೆ ಮಾಡಿ.

ಶ್ರೀಗಂಧದ ಹುಡಿ
ಶ್ರೀಗಂಧದ ಹುಡಿಯು ಮುಖದ ಮೇಲಿನ ಮೊಡವೆ, ಕಲೆ, ಬ್ಲ್ಯಾಕ್ ಹೆಡ್, ಬಿಸಿಲಿನ ಕಲೆ ತೆಗೆಯಲು ನೆರವಾಗುವುದು ಮತ್ತು ಚರ್ಮವನ್ನು ಮೊಶ್ಚಿರೈಸ್ ಮಾಡುವುದು. ಎಣ್ಣೆಯುಕ್ತ ಚರ್ಮವಿದ್ದರೆ ಆಗ ಶ್ರೀಗಂಧದ ಹುಡಿಯು ನಿಮಗೆ ತುಂಬಾ ನೆರವಿಗೆ ಬರಲಿದೆ.
ಬೇಕಾಗುವ ಸಾಮಗ್ರಿಗಳು
•2 ಚಮಚ ಶ್ರೀಗಂಧದ ಹುಡಿ
•2-3 ಚಮಚ ರೋಸ್ ವಾಟರ್
ಬಳಸುವ ವಿಧಾನ
•ರೋಸ್ ವಾಟರ್ ಜತೆಗೆ ಶ್ರೀಗಂಧದ ಹುಡಿ ಬೆರೆಸಿಕೊಂಡು ಪೇಸ್ಟ್ ಮಾಡಿ.
•ಮುಖವನ್ನು ತೊಳೆದುಕೊಳ್ಳಿ ಮತ್ತು ಒಣಗಲು ಬಿಡಿ.
•ಮುಖ ಮತ್ತು ಕುತ್ತಿಗೆಗೆ ಈ ಪೇಸ್ಟ್ ನ್ನು ಸರಿಯಾಗಿ ಹಚ್ಚಿಕೊಳ್ಳಿ.
•10-15 ನಿಮಿಷ ಕಾಲ ಹಾಗೆ ಬಿಡಿ. ಅದು ಸಂಪೂರ್ಣವಾಗಿ ಒಣಗಲಿ.
•ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ.
•ವಾರದಲ್ಲಿ 1 ಅಥವಾ 2 ಸಲ ಬಳಸಿದರೆ ಆಗ ಬೇಕಾದ ಫಲಿತಾಂಶ ಪಡೆಯಬಹುದು.

ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಯುವಿ ಕಿರಣಗಳಿಂದ ತ್ವಚೆಗೆ ಆಗಿರುವಂತಹ ಹಾನಿಯನ್ನು ತಡೆಯಲು ಇದು ತುಂಬಾ ನೆರವಾಗುವುದು. ಇದರಲ್ಲಿ ವಿಟಮಿನ್ ಎ ಕೂಡ ಸಮೃದ್ಧವಾಗಿದೆ ಮತ್ತು ಇದು ಮೊಡವೆ ನಿವಾರಣೆ ಮಾಡಲು ಸಹಕಾರಿ. ಬಿಸಿಲಿನಿಂದ ಸುಟ್ಟ ಕಲೆ ನಿವಾರಿಸುವುದು ಮತ್ತು ಚಿಕಿತ್ಸಕ ಗುಣ ಇರುವಂತಹ ಇದು ಗಾಯಗಳನ್ನು ಕೂಡ ಗುಣಪಡಿಸುವುದು. ಬಾದಾಮಿ ಎಣ್ಣೆಯಲ್ಲಿ ಎರಡು ವಿಧಗಳಿವೆ. ಒಂದು ಕಹಿ ಬಾದಾಮಿ ಎಣ್ಣೆ ಮತ್ತು ಇನ್ನೊಂದು ಸಿಹಿ ಬಾದಾಮಿ ಎಣ್ಣೆ. ನೀವು ತ್ವಚೆಗೆ ಬಳಸುವಾಗ ಸಿಹಿ ಬಾದಾಮಿ ಎಣ್ಣೆ ಬಳಸಿಕೊಳ್ಳಿ.
ಬೇಕಾಗುವ ಸಾಮಗ್ರಿಗಳು
•ಕೆಲವು ಹನಿ ಸಿಹಿ ಬಾದಾಮಿ ಎಣ್ಣೆ
ಬೇಕಾಗುವ ಸಾಮಗ್ರಿಗಳು
•ಮೊದಲು ಮುಖ ತೊಳೆದು, ಬಳಿಕ ಒಣಗಿಸಿಕೊಳ್ಳಿ.
•ಕೆಲವು ಹನಿ ಬಾದಾಮಿ ಎಣ್ಣೆಯನ್ನು ಅಂಗೈಗೆ ಹಾಕಿಕೊಳ್ಳಿ.
•ಈ ಎಣ್ಣೆಯನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ.
•ವಾರದಲ್ಲಿ 3-4 ದಿನ ಇದನ್ನು ಬಳಸಿ.

ಮೊರಿಂಗಾ ಹುಡಿ
ಮೊರಿಂಗಾ ಹುಡಿಯಲ್ಲಿ ವಿಟಮಿನ್ ಎ, ಸಿ ಮತ್ತು ಇ ಇದೆ. ಇದರಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್, ಅಮಿನೋ ಆಮ್ಲ ಮತ್ತು ಕಬ್ಬಿನಾಂಶವಿದೆ. ಇದು ತ್ವಚೆಯಲ್ಲಿನ ಮೊಡವೆ ನಿವಾರಣೆ ಮಾಡುವುದು ಮತ್ತು ದೇಹದ ವಿಷಕಾರಿ ಅಂಶ ತೆಗೆಯುವುದು. ಇದರಿಂದ ಚರ್ಮದ ದೊಡ್ಡ ರಂಧ್ರಗಳನ್ನು ಕುಗ್ಗಿಸಲು ನೆರವಾಗುವುದು.
ಬೇಕಾಗುವ ಸಾಮಗ್ರಿಗಳು
•½ ಚಮಚ ಮೊರಿಂಗಾ ಹುಡಿ
•1 ಚಮಚ ಜೇನುತುಪ್ಪ
•½ ಚಮಚ ಲಿಂಬೆ ರಸ
•1 ಚಮಚ ರೋಸ್ ವಾಟರ್
ಬಳಸಿಕೊಳ್ಳುವುದು ಹೇಗೆ?
•ದಪ್ಪಗಿನ ಪೇಸ್ಟ್ ಮಾಡಲು ಎಲ್ಲವನ್ನು ಸರಿಯಾಗಿ ಒಂದು ಪಿಂಗಾಣಿಯಲ್ಲಿ ಮಿಶ್ರಣ ಮಾಡಿಕೊಳ್ಳಿ.
•ಮುಖ ತೊಳೆಯಿರಿ ಮತ್ತು ಒಣಗಲು ಬಿಡಿ.
•ಮುಖಕ್ಕೆ ಈ ಪೇಸ್ಟ್ ನ್ನು ಹಚ್ಚಿಕೊಳ್ಳಿ.
•10 ನಿಮಿಷ ಕಾಲ ಹಾಗೆ ಬಿಡಿ.
•ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
•ಮುಖವನ್ನು ಒರೆಸಿಕೊಂಡು ಒಣಗಿಸಿ.
•ಮುಖಕ್ಕೆ ಮೊಶ್ಚಿರೈಸರ್ ಹಚ್ಚಿ.

ಜೇನುತುಪ್ಪ
ಜೇನುತುಪ್ಪವು ಮೊಡವೆ ನಿವಾರಣೆ ಮಾಡಲು, ಮೊಡವೆಯಿಂದಾಗಿ ಗಾಯ ಗುಣಪಡಿಸಲು, ಸತ್ತ ಚರ್ಮ ಕಿತ್ತುಹಾಕಲು ಮತ್ತು ರಂಧ್ರಗಳನ್ನು ಶುದ್ಧೀಕರಿಸಲು ಇದು ನೆರವಾಗುವುದು. ಇದರಲ್ಲಿ ಉರಿಯೂತ ಶಮನಕಾರಿ, ಬ್ಯಾಕ್ಟೀರಿಯಾ ವಿರೋಧಿ, ನಂಜುನಿರೋಧಕ ಮತ್ತು ಚಿಕಿತ್ಸಕ ಗುಣಗಳು ಇವೆ.
ಬೇಕಾಗುವ ಸಾಮಗ್ರಿಗಳು
•1 ಚಮಚ ಜೇನುತುಪ್ಪ
•½ ಚಮಚ ಲಿಂಬೆ ರಸ
•2 ಚಮಚ ಶ್ರೀಗಂಧದ ಹುಡಿ
•ರೋಸ್ ವಾಟರ್
ಬಳಸುವ ವಿಧಾನ
•ಜೇನುತುಪ್ಪ, ಲಿಂಬೆ ರಸ ಮತ್ತು ಶ್ರೀಗಂಧದ ಹುಡಿಯನ್ನು ಒಂದು ಪಿಂಗಾಣಿಯಲ್ಲಿ ಹಾಕಿ ಮಿಶ್ರಣ ಮಾಡಿ. ಇದಕ್ಕೆ ಬಳಿಕ ರೋಸ್ ವಾಟರ್ ಹಾಕಿ ಪೇಸ್ಟ್ ಮಾಡಿ.
•ಮುಖ ತೊಳೆದುಕೊಂಡು ಒರೆಸಿ, ಒಣಗಿಸಿ.
•ಈಗ ಕುತ್ತಿಗೆ ಹಾಗೂ ಮುಖಕ್ಕೆ ಸರಿಯಾಗಿ ಈ ಪೇಸ್ಟ್ ನ್ನು ಹಚ್ಚಿಕೊಳ್ಳಿ.
•10-15 ನಿಮಿಷ ಕಾಲ ಹಾಗೆ ಬಿಟ್ಟು, ಅದು ಸರಿಯಾಗಿ ಒಣಗಲು ಬಿಡಿ.
•ನೀರಿನಿಂದ ಮುಖ ತೊಳೆಯಿರಿ.
•ವಾರದಲ್ಲಿ 2-3 ಸಲ ನೀವು ಇದನ್ನು ಬಳಸಿಕೊಳ್ಳಿ.

ಅರಿಶಿನ
ಅರಿಶಿನದಲ್ಲಿ ಕರ್ಕ್ಯುಮಿನ್, ಪಾಲಿಫೆನಾಲ್ ಎನ್ನುವಂತಹ ಉರಿಯೂತ ಶಮನಕಾರಿ ಅಂಶಗಳು ಇವೆ ಮತ್ತು ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಕೂಡ ಸಮೃದ್ಧವಾಗಿದೆ. ಇದು ಕಲೆಗಳನ್ನು ನಿವಾರಣೆ ಮಾಡುವುದು, ಗಾಯ ಒಣಗಿಸುವುದು ಮತ್ತು ಸುಟ್ಟ ಕಲೆ ನಿವಾರಿಸುವುದು. ಇದರಲ್ಲಿ ವಯಸ್ಸಾಗುವ ಲಕ್ಷಣಗಳನ್ನು ತಡೆಯುವ ಗುಣವಿದೆ. ಮೊಸರು ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮತ್ತು ಮೊಡವೆ, ಬೊಕ್ಕೆ ಮತ್ತು ಕಲೆಗಳ ನಿವಾರಣೆ ಮಾಡುವುದು.
ತಯಾರಿಸಲು ಬೇಕಾಗುವ ಸಾಮಗ್ರಿಗಳು
•ಒಂದು ಚಮಚ ಅರಶಿನ ಹುಡಿ
•1 ಚಮಚ ಮೊಸರು
•1 ಚಮಚ ಶ್ರೀಗಂಧದ ಹುಡಿ
•2 ಚಮಚ ಕಡಲೆ ಹಿಟ್ಟು
ಬಳಸಿಕೊಳ್ಳುವ ವಿಧಾನ ಹೇಗೆ?
•ಎಲ್ಲಾ ನಾಲ್ಕು ಸಾಮಗ್ರಿಗಳನ್ನು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿ.
•ಮುಖ ತೊಳೆಯಿರಿ ಮತ್ತು ಒಣಗಿಸಿಕೊಳ್ಳಿ.
•10-15 ನಿಮಿಷ ಕಾಲ ಮುಖದ ಮೇಲೆ ಹಾಗೆ ಬಿಡಿ ಅಥವಾ ಅದು ಒಣಗುವ ತನಕ.
•ಫೇಸ್ ವಾಶ್ ಬಳಸಿಕೊಂಡು ಮುಖ ತೊಳೆಯಿರಿ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ಚರ್ಮಕ್ಕೆ ಪೋಷಣೆ ನೀಡಲು ತುಂಬಾ ಸಹಕಾರಿ. ತೆಂಗಿನ ಎಣ್ಣೆಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣವು ಮೊಡವೆ ನಿವಾರಣೆ ಮಾಡಲು ನೆರವಾಗುವುದು. ಇದು ತ್ವಚೆಗೆ ಮೊಶ್ಚಿರೈಸ್ ನೀಡುವುದು ಮತ್ತು ಚರ್ಮವನ್ನು ಶುದ್ಧೀಕರಿಸುವುದು.
ತಯಾರಿಸಲು ಬೇಕಾದ ಸಾಮಗ್ರಿಗಳು
*1 ಚಮಚ ತೆಂಗಿನ ಎಣ್ಣೆ
*2-3 ಹನಿ ಚಾ ಮರದ ಎಣ್ಣೆ
ತಯಾರಿಸುವ ವಿಧಾನ
•ತೆಂಗಿನ ಎಣ್ಣೆಯನ್ನು ಚಾ ಮರದ ಎಣ್ಣೆಯ ಜತೆಗೆ ಮಿಶ್ರಣ ಮಾಡಿಕೊಳ್ಳಿ.
•ಮುಖ ತೊಳೆಯಿರಿ ಮತ್ತು ಒರೆಸಿ, ಒಣಗಿಸಿಕೊಳ್ಳಿ.
•ಮಲಗುವ ಮುನ್ನ ಕೆಲವು ಹನಿ ಎಣ್ಣೆಯ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಳ್ಳಿ.
•ರಾತ್ರಿಯಿಡಿ ಹಾಗೆ ಇರಲಿ.
•ಬೆಳಗ್ಗೆ ಎದ್ದ ಬಳಿಕ ನೀರಿನಿಂದ ಮುಖ ತೊಳೆಯಿರಿ.
•ಎರಡು ದಿನಕ್ಕೊಮ್ಮೆ ಇದನ್ನು ನೀವು ಬಳಸಿಕೊಳ್ಳಿ.
Most Read: ಫೇಶಿಯಲ್‌ಗೆ ಅನಾವಶ್ಯಕ ಹಣ ಖರ್ಚು ಮಾಡುವುದನ್ನು ಇಂದೇ ನಿಲ್ಲಿಸಿ!

ಕಡಲೆಹಿಟ್ಟು
ಕಡಲೆ ಹಿಟ್ಟಿನಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಮತ್ತು ಕೊಬ್ಬಿನಾಮ್ಲಗಳೂ ಇವೆ. ಇದನ್ನು ಬಳಸಿಕೊಂಡು ಮೊಡವೆ, ಬೊಕ್ಕೆ ಮತ್ತು ಬಿಸಿಲಿನಿಂದ ಆಗಿರುವ ಕಲೆ ನಿವಾರಣೆ ಮಾಡಬಹುದು. ಇದು ಚರ್ಮವನ್ನು ಶುದ್ಧೀಕರಿಸುವುದು, ಸತ್ತ ಚರ್ಮ ತೆಗೆಯುವುದು ಮತ್ತು ಚರ್ಮದ ಕಾಂತಿ ಹೆಚ್ಚಿಸುವುದು. ಲಿಂಬೆ ರಸದಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ ಮತ್ತು ಇದು ಮೊಡವೆ ಕಲೆಗಳು, ಬೊಕ್ಕೆ ಮತ್ತು ಬ್ಲ್ಯಾಕ್ ಹೆಡ್ ಗಳ ನಿವಾರಣೆ ಮಾಡುವುದು.
ಬೇಕಾಗುವ ಸಾಮಗ್ರಿಗಳು
1 ಚಮಚ ಕಡಲೆ ಹಿಟ್ಟು
ಕೆಲವು ಹನಿ ಲಿಂಬೆ ರಸ
1 ಚಮಚ ಹಾಲಿನ ಕೆನೆ
ಬಳಸುವ ವಿಧಾನ
•ಕಡಲೆ ಹಿಟ್ಟು, ಹಾಲಿನ ಕನೆ ಮತ್ತು ಲಿಂಬೆ ರಸವನ್ನು ಒಂದು ಪಿಂಗಾಣಿಯಲ್ಲಿ ಹಾಕಿಕೊಂಡು ಮೆತ್ತಗಿನ ಪೇಸ್ಟ್ ಮಾಡಿಕೊಳ್ಳಿ.
•ಮುಖ ತೊಳೆಯಿರಿ ಮತ್ತು ಒರೆಸಿ, ಒಣಗಿಸಿ.
•ಮುಖ ಮತ್ತು ಕುತ್ತಿಗೆಗೆ ಇದನ್ನು ಹಚ್ಚಿಕೊಳ್ಳಿ.
•ಇದು ಸಂಪೂರ್ಣವಾಗಿ ಒಣಗುವ ತನಕ ಅಥವಾ 15-30 ನಿಮಿಷ ಕಾಲ ಹಾಗೆ ಬಿಡಿ.
•ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಕಾಫಿ
ಕಾಫಿಯಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಇದೆ. ಇದು ಮೊಡವೆಗಳು ಮತ್ತು ಕಪ್ಪು ವೃತ್ತಗಳನ್ನು ನಿವಾರಣೆ ಮಾಡುವುದು. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ವಯಸ್ಸಾಗುವ ಲಕ್ಷಣ ತಡೆಯುವ ಗುಣವಿದೆ. ಇದು ಸತ್ತ ಚರ್ಮವನ್ನು ಕಿತ್ತು ಹಾಕುವುದು ಮತ್ತು ಬಿಸಿಲಿನಿಂದ ಆಗಿರುವ ಕಲೆಯಿಂದ ರಕ್ಷಿಸುವುದು. ಕಾಫಿಯು ರಕ್ತದೊತ್ತಡವನ್ನು ಉತ್ತಮಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.
ಬೇಕಾಗುವ ಸಾಮಗ್ರಿಗಳು
1 ಚಮಚ ಕಾಫಿ ಹುಡಿ
1 ಚಮಚ ಜೇನುತುಪ್ಪ
1 ಚಮಚ ಮೊಸರು
ತಯಾರಿಸುವ ಮತ್ತು ಬಳಸುವ ವಿಧಾನ
•ಕಾಫಿ ಹುಡಿಯನ್ನು ಜೇನುತುಪ್ಪ ಮತ್ತು ಮೊಸರಿನ ಜತೆಗೆ ಮಿಶ್ರಣ ಮಾಡಿ ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.
•ಮುಖ ತೊಳೆಯಿರಿ ಮತ್ತು ಅದನ್ನು ಒರೆಸಿ ಒಣಗಿಸಿಕೊಳ್ಳಿ.
•ಮುಖ ಹಾಗೂ ಕುತ್ತಿಗೆಗೆ ಈ ಪೇಸ್ಟ್ ನ್ನು ಹಚ್ಚಿಕೊಳ್ಳಿ.
•20 ನಿಮಿಷ ಕಾಲ ಹಾಗೆ ಬಿಡಿ.
•ಸಾಮಾನ್ಯ ನೀರಿನಿಂದ ಮುಖ ತೊಳೆಯಿರಿ.
•ಮುಖ ಸರಿಯಾಗಿ ಒಣಗಿದ ಬಳಿಕ ಸ್ವಲ್ಪ ಮೊಶ್ಚಿರೈಸರ್ ಹಚ್ಚಿಕೊಳ್ಳಿ.
•ಉತ್ತಮ ಫಲಿತಾಂಶ ಪಡೆಯಲು ನೀವು ವಾರದಲ್ಲಿ ಒಂದು ಸಲ ಇದನ್ನು ಬಳಸಿ

ದಾಲ್ಚಿನ್ನಿ
ದಾಲ್ಚಿನ್ನಿಯಲ್ಲಿ ಮೊಡವೆ ವಿರುದ್ಧ ಹೋರಾಡುವಂತಹ ಕೆಲವೊಂದು ಆ್ಯಂಟಿಆಕ್ಸಿಡೆಂಟ್ ಗಳು ಇವೆ. ಇದರಲ್ಲಿ ಸೂಕ್ಷ್ಮಾಣು ವಿರೋಧಿ, ನಂಜುನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ.
ತಯಾರಿಗೆ ಬೇಕಾಗುವ ಸಾಮಗ್ರಿಗಳು
1 ಚಮಚ ದಾಲ್ಚಿನಿ ಹುಡಿ
2 ಚಮಚ ಜೇನುತುಪ್ಪ
ತಯಾರಿ ಮತ್ತು ಬಳಸುವ ವಿಧಾನ
•ದಾಲ್ಚಿನಿ ಹುಡಿ ಮತ್ತು ಜೇನುತುಪ್ಪವನ್ನು ಪಿಂಗಾಣಿಯಲ್ಲಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ.
•ಮುಖ ತೊಳೆಯಿರಿ ಮತ್ತು ಒರೆಸಿ, ಒಣಗಿಸಿಕೊಳ್ಳಿ.
•ಮುಖದ ಮೇಲೆ ಪೇಸ್ಟ್ ಹಚ್ಚಿಕೊಳ್ಳಿ.
•10-15 ನಿಮಿಷ ಕಾಳ ಹಾಗೆ ಬಿಡಿ.
•ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.
•ವಾರದಲ್ಲಿ ಒಂದು ಸಲ ಇದನ್ನು ಬಳಸಿ.
ಸೂಚನೆ: ದಾಲ್ಚಿನಿಯು ಚರ್ಮಕ್ಕೆ ಕಿರಿಕಿರಿ ಉಂಟು ಮಾಡಬಹುದು. ಇದರಿಂದ ಚರ್ಮವು ಸೂಕ್ಷ್ಮವಾಗಿದ್ದರೆ ಆಗ ನೀವು ಇದನ್ನು ಬಳಸುವ ಮೊದಲು ದೇಹದ ಯಾವುದಾದರೂ ಭಾಗಕ್ಕೆ ಇದನ್ನು ಹಚ್ಚಿಕೊಂಡು ನೋಡಿ.

ಟೊಮೆಟೊ
ಫ್ರೀ ರ್ಯಾಡಿಕಲ್ ನಿಂದ ಆಗುವ ಹಾನಿ ತಪ್ಪಿಸಲು ಟೊಮೆಟೊ ತುಂಬಾ ಸಹಕಾರಿಯಾಗಿದೆ. ಟೊಮೆಟೊವು ವಿಟಮಿನ್ ಸಿ ಮತ್ತು ಪೊಟಾಶಿಯಂನಿಂದ ಸಮೃದ್ಧವಾಗಿದೆ. ಇದು ಚರ್ಮಕ್ಕೆ ಕಾಂತಿ ನೀಡುವುದು. ಇದು ತ್ವಚೆ ಮೇಲಿನ ಮೊಡವೆ, ಬ್ಲ್ಯಾಕ್ ಹೆಡ್ ಮತ್ತು ವೈಟ್ ಹೆಡ್ ನಿವಾರಣೆ ಮಾಡುವುದು. ಇದು ಚರ್ಮದ ರಂಧ್ರಗಳನ್ನು ತೆರೆಯುವುದು ಮತ್ತು ಇದು ನೈಸರ್ಗಿಕ ಬ್ಲೀಚಿಂಗ್ ಗುಣ ಹೊಂದಿದೆ.
ಬೇಕಾಗುವ ಸಾಮಗ್ರಿಗಳು
2 ಚಮಚ ಟೊಮೆಟೊ ತಿರುಳು
1 ಚಮಚ ಜೇನುತುಪ್ಪ
ತಯಾರಿ ಮತ್ತು ಬಳಸುವ ವಿಧಾನ
•ಟೊಮೆಟೊ ತಿರುಳು ಮತ್ತು ಜೇನುತುಪ್ಪವನ್ನು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ.
•ಮುಖ ತೊಳೆಯಿರಿ ಮತ್ತು ಒರೆಸಿಕೊಂಡು, ಒಣಗಿಸಿ.
•ಈ ಪೇಸ್ಟ್ ನ್ನು ಈಗ ಮುಖದ ಮೇಲೆ ಹಚ್ಚಿಕೊಳ್ಳಿ.
•15ನಿಮಿಷ ಹಾಗೆ ಬಿಡಿ ಅಥವಾ ಒಣಗುವ ತನಕ.
•ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.
•ವಾರದಲ್ಲಿ ಎರಡು ಸಲ ಬಳಸಿ.
ಈ ಎಲ್ಲಾ ನೈಸರ್ಗಿಕ ಫೇಸ್ ಮಾಸ್ಕ್ ಗಳನ್ನು ಬಳಸಿಕೊಂಡು ಮುಖದ ಕಾಂತಿ ಪಡೆಯಿರಿ. ಈ ಎಲ್ಲಾ ಸಾಮಗ್ರಿಗಳು ರಾಸಾಯನಿಕದಿಂದ ಮುಕ್ತವಾಗಿದೆ. ಇದರಿಂದ ಯಾವುದೇ ರೀತಿಯಿಂದಲೂ ಚರ್ಮಕ್ಕೆ ಹಾನಿಯಾಗದು.



Click it and Unblock the Notifications











