ಮುಖದ ಅಂದ-ಚೆಂದ ಹೆಚ್ಚಿಸುವ ಮಜ್ಜಿಗೆಯ ಫೇಸ್ ಪ್ಯಾಕ್!

Posted By: Hemanth
Subscribe to Boldsky

ಹಾಲಿನ ಪ್ರತಿಯೊಂದು ಉತ್ಪನ್ನಗಳು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಲಿನ ಉತ್ಪನ್ನಗಳಲ್ಲಿ ನಮ್ಮೆ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಸಿಗುವುದು ಮಾತ್ರವಲ್ಲದೆ, ಹಲವಾರು ರೀತಿಯ ಅನಾರೋಗ್ಯಗಳು ದೂರವಿಡಲು ಇದು ನೆರವಾಗುವುದು. ಇದರಲ್ಲಿ ಪ್ರಮುಖವಾಗಿ ಮಜ್ಜಿಗೆಯು ಬೇಸಿಗೆಯಲ್ಲಿ ದೇಹಕ್ಕೆ ತುಂಬಾ ಒಳ್ಳೆಯದು. ಇದು ದೇಹವನ್ನು ತಂಪಾಗಿರಿಸುವ ಜತೆಗೆ ಚರ್ಮಕ್ಕೂ ಇದರಿಂದ ಹಲವಾರು ಲಾಭಗಳು ಇವೆ. ಮಜ್ಜಿಗೆ ಲ್ಯಾಕ್ಟಿಕ್ ಆ್ಯಸಿಡ್ ಇರುವುದರಿಂದ ಇದು ಹಲವಾರು ಚರ್ಮ ಸಂಬಂಧಿಗೆ ಕಾಯಿಲೆಗಳಿಗೆ ಪರಿಣಾಮಕಾರಿ. ಬಿಸಿಲಿನಿಂದ ಆಗಿರುವ ಕಲೆಗಳು, ಕಪ್ಪುಕಲೆಗಳೂ ಮತ್ತು ಗಾಢ ಕಲೆಗಳನ್ನು ತೆಗೆದುಹಾಕಲು ಮಜ್ಜಿಗೆಯು ಕೆಲಸ ಮಾಡಲಿದೆ.

ಬ್ಲೀಚಿಂಗ್ ಗುಣವಿರುವ ಮಜ್ಜಿಗೆಯು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು. ಇದರಿಂದ ಚರ್ಮವು ತುಂಬಾ ಆರೋಗ್ಯಪೂರ್ಣ ಹಾಗೂ ಸ್ವಚ್ಛವಾಗಿ ಕಾಣಿಸುವುದು. ಮಜ್ಜಿಗೆಯನ್ನು ನಿಮ್ಮ ಸೌಂದರ್ಯವರ್ಧಕವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಫೇಸ್ ಪ್ಯಾಕ್ ಮೂಲಕವಾಗಿ ಇದನ್ನು ಬಳಸಬಹುದು. ಮಜ್ಜಿಗೆಯು ನಿಮ್ಮ ತ್ವಚೆಯ ಸೌಂದರ್ಯ ವೃದ್ಧಿಸಲು ಹೇಗೆ ಕೆಲಸ ಮಾಡುವುದು ಎಂದು ತಿಳಿಯಿರಿ.

ಚರ್ಮದ ಬಣ್ಣ ಬಿಳಿಯಾಗಿಸಲು

ಚರ್ಮದ ಬಣ್ಣ ಬಿಳಿಯಾಗಿಸಲು

ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಮ್ಲವು ಇರುವುದರಿಂದ ಇದು ಚರ್ಮದ ಬಣ್ಣವನ್ನು ಬಿಳಿಯಾಗಿರುವುದು. ಇದರಿಂದಾಗಿ ತ್ವಚೆಯು ಕಾಂತಿ ಪಡೆಯುವುದು.

*ಒಂದು ಚಮಚ ಮಜ್ಜಿಗೆ ಮತ್ತು ಇದಕ್ಕೆ ಚಿಟಿಕೆ ಅರಶಿನ ಹಾಕಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ಬಳಿಕ ನಿಧಾನವಾಗಿ ಮಸಾಜ್ ಮಾಡುತ್ತಾ ಸಾಮಾನ್ಯ ನೀರಿನಿಂದ ತೊಳೆಯಿರಿ. ಪ್ರತಿನಿತ್ಯ ಈ ವಿಧಾನವನ್ನು ಎರಡು ವಾರಗಳ ತನಕ ಬಳಸಿದರೆ ಫಲಿತಾಂಶ ಖಚಿತ.

ಕಪ್ಪು ಕಲೆ ನಿವಾರಣೆಗೆ

ಕಪ್ಪು ಕಲೆ ನಿವಾರಣೆಗೆ

ಮಜ್ಜಿಗೆಯಲ್ಲಿ ಕಿತ್ತುಹಾಕುವಂತಹ ಗುಣವಿದೆ. ಇದು ಕಪ್ಪು ಕಲೆಗಳನ್ನು ತೆಗೆದುಹಾಕುವುದು ಅಥವಾ ನೈಸರ್ಗಿಕವಾಗಿ ತ್ವಚೆಗೆ ಕಾಂತಿ ನೀಡುವುದು.

*ಎರಡು ಚಮಚ ಕಿತ್ತಳೆ ಸಿಪ್ಪೆಯ ಹುಡಿಯನ್ನು ಒಂದು ಪಿಂಗಾಣಿಗೆ ಹಾಕಿ ಮತ್ತು ಅದಕ್ಕೆ ಬೇಕಾದಷ್ಟು ಮಜ್ಜಿಗೆ ಹಾಕಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಬಿಸಿಲಿನಿಂದಾದ ಕಲೆ ನಿವಾರಣೆಗೆ

ಬಿಸಿಲಿನಿಂದಾದ ಕಲೆ ನಿವಾರಣೆಗೆ

ಕಚ್ಚಾ ಮಜ್ಜಿಗೆಯನ್ನು ತ್ವಚೆಗೆ ಹಚ್ಚಿಕೊಳ್ಳಿ. ಬೇರೆ ಸಾಮಗ್ರಿಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯಬಹುದು.

*1/4 ಚಮಚ ಮಜ್ಜಿಗೆ ತೆಗೆದುಕೊಳ್ಳಿ. ಅದಕ್ಕೆ ಅರ್ಧ ಟೊಮೆಟೋ ಹಾಕಿಕೊಂಡು ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ ಹಾಗೂ ಬಿಸಿಲಿನ ಕಲೆಗಳು ಇರುವ ಜಾಗಕ್ಕೆ ಹಚ್ಚಿಕೊಳ್ಳಿ. 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಸಲ ಇದನ್ನು ಬಳಸಿ.

*ಜೇನುತುಪ್ಪ ಮತ್ತು ಮಜ್ಜಿಗೆ ಮತ್ತೊಂದು ಮನೆಮದ್ದು. ಎರಡು ಚಮಚ ಮಜ್ಜಿಗೆಗೆ ಎರಡು ಚಮಚ ಜೇನುತುಪ್ಪ ಹಾಕಿ. 5 ನಿಮಿಷ ಹಾಗೆ ಮಸಾಜ್ ಮಾಡಿ ಮತ್ತು 15 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ತೊಳೆಯಿರಿ. ಪ್ರತಿನಿತ್ಯ ಹೀಗೆ ಮಾಡಿದರೆ ಫಲಿತಾಂಶ ಖಚಿತ.

ಒಣ ಚರ್ಮಕ್ಕಾಗಿ

ಒಣ ಚರ್ಮಕ್ಕಾಗಿ

ಒಣ ಹಾಗೂ ಚರ್ಮ ಕಿತ್ತುಬರುವ ತ್ವಚೆಯಿದ್ದರೆ ಅದಕ್ಕೆ ಇದು ತುಂಬಾ ಒಳ್ಳೆಯದು.

ಬಾಳೆಹಣ್ಣಿನ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಒಂದು ಚಮಚ ಮಜ್ಜಿಗೆಗೆ ಇದನ್ನು ಬೆರೆಸಿಕೊಂಡು ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ. 20 ನಿಮಿಷ ಕಾಲ ಹಾಗೆ ಬಿಡಿ ಮತ್ತು ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮ ಕಿತ್ತೊಗೆಯುವುದನ್ನು ನಿಲ್ಲಿಸುವುದು ಮತ್ತು ತ್ವಚೆಯು ಕಾಂತಿಯುತವಾಗಿ ಕಾಣುವಂತೆ ಮಾಡುವುದು.

ಶುದ್ಧೀಕರಿಸುವುದು

ಶುದ್ಧೀಕರಿಸುವುದು

ಮಜ್ಜಿಗೆಯು ಬ್ಯಾಕ್ಟೀರಿಯಾವನ್ನು ಕೊಂದು ಕಲ್ಮಷ ತೆಗೆಯುವುದು ಮತ್ತು ಇದರ ಬಳಿಕ ಸತ್ತ ಚರ್ಮದ ಕೋಶ ತೆಗೆದುಹಾಕುವುದು. ಇದರಿಂದ ಚರ್ಮವು ತುಂಬಾ ಸ್ವಚ್ಛ ಹಾಗೂ ಆರೋಗ್ಯವಾಗಿರುವುದು.

*3 ಚಮಚ ಮಜ್ಜಿಗೆಯನ್ನು ಒಂದು ಪಿಂಗಾಣಿಗೆ ಹಾಕಿ. ಇದಕ್ಕೆ ಒಂದು ಚಮಚ ಆಲಿವ್ ತೈಲ, ಬಾದಾಮಿ ತೈಲ ಮತ್ತು ಕೆಲವು ಹನಿ ರೋಸ್ ವಾಟರ್ ಹಾಕಿ ಮಿಶ್ರಣ ಮಾಡಿ. ಇದರಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಚರ್ಮದಲ್ಲಿರುವ ಕಲ್ಮಷವು ಮಾಯವಾಗುವುದು. 15 ನಿಮಿಷ ಕಾಲ ತ್ವಚೆಯಲ್ಲಿ ಈ ಮಿಶ್ರಣವನ್ನು ಇಟ್ಟುಕೊಂಡು ಬಳಿಕ ತಣ್ಣೀರಿನಿಂದ ತೊಳೆಯಿರಿ. ಬಳಲಿ ಬಂದ ಬಳಿಕ ಪ್ರತಿನಿತ್ಯ ಹೀಗೆ ಮಾಡಿದರೆ ತುಂಬಾ ಒಳ್ಳೆಯದು.

English summary

Ultimate benefits of buttermilk for beauty

Buttermilk is something which can be found in every household in India. It's one of the best natural and healthy drinks that we prefer to have during the summers. Apart from being a refreshing beverage, buttermilk also has several beauty benefits. It works amazing on the skin. Since buttermilk is enriched in lactic acid, it is one solution for several skin-related issues.
Story first published: Wednesday, March 14, 2018, 9:00 [IST]