ಎಣ್ಣೆಯುಕ್ತ ತ್ವಚೆಯ ಸಮಸ್ಯೆ ಇದ್ದರೆ, ಅಡುಗೆಮನೆಯ ಅರಿಶಿನ ಪ್ರಯತ್ನಿಸಿ!

ಕಲೆ ಮುಕ್ತ, ಸುಂದರ ಹಾಗೂ ಕಾಂತಿಯುತ ತ್ವಚೆಯು ಪ್ರತಿಯೊಬ್ಬರಿಗೂ ಬೇಕಾಗಿರುವುದು. ಅದರಲ್ಲೂ ಎಣ್ಣೆಯಂಶವಿರುವಂತಹ ತ್ವಚೆಯಿದ್ದರೆ ಆಗ ತುಂಬಾ ಕಷ್ಟಪಡಬೇಕಾಗುತ್ತದೆ. ಯಾಕೆಂದರೆ ಯಾರಿಗೂ ಈ ಜಿಡ್ಡಿನ ಸ್ಥಿತಿಯು ಬೇಕಾಗಿರುವುದಿಲ್ಲ. ಎಣ್ಣೆಯಂಶವಿರುವಂತಹ ತ್ವಚೆ ನಿವಾರಣೆ ಮಾಡಲು ಹಲವಾರು ರೀತಿಯಿಂದ ಪ್ರಯತ್ನಿಸುತ್ತಾರೆ.

ಎಣ್ಣೆಯಂಶವಿರುವಂತಹ ತ್ವಚೆಯು ಹೆಚ್ಚಿನ ಕೀಟಾಣುಗಳನ್ನು ಆಹ್ವಾನಿಸವುದು ಮತ್ತು ಇದು ಬ್ಯಾಕ್ಟೀರಿಯಾಗಳಿಗೆ ಆವಾಸ ಸ್ಥಾನವಾಗಿರುವುದು. ಈ ಕಾರಣದಿಂದಾಗಿ ಮುಖದ ಮೇಲೆ ಮೊಡವೆಗಳು, ಬೊಕ್ಕೆಗಳು ಮೂಡುವುದು. ಸಮಸ್ಯೆಯು ಮತ್ತಷ್ಟು ಕೆಡುವುದು. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಅಡುಗೆ ಮನೆಯಲ್ಲಿ ಇರುವಂತಹ ಸಾಮಗ್ರಿಯೊಂದು ಪರಿಣಾಮಕಾರಿಯಾದ ಪರಿಹಾರ ನೀಡುವುದು ಎಂದು ನಿಮಗೆ ತಿಳಿದಿದೆಯಾ? ಹಾಗಾದರೆ ನೀವು ಚಿಂತೆ ಮಾಡಬೇಡಿ. ನೀವು ಅಡುಗೆ ಮನೆಯಲ್ಲಿ ಇರುವಂತಹ ಅರಿಶಿನವನ್ನು ಬಳಸಿಕೊಳ್ಳಿ.

turmeric

ಈಗಾಗಲೇ ನಮಗೆಲ್ಲರಿಗೂ ತಿಳಿದಿರುವಂತೆ ಅರಿಶಿನಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಆಹಾರಕ್ಕೆ ಇದು ಸುವಾಸನೆ ಹಾಗೂ ಬಣ್ಣ ನೀಡುವ ಜತೆ ಗಾಯ ಗುಣಪಡಿಸುವುದು ಮತ್ತು ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಇದು ಎಣ್ಣೆಯಂಶವಿರುವ ತ್ವಚೆಯ ನಿವಾರಣೆಗೆ ನೆರವಾಗುವುದು.

ತ್ವಚೆಗೆ ಅರಿಶಿನದ ಲಾಭಗಳು

ತ್ವಚೆಗೆ ಅರಿಶಿನದ ಲಾಭಗಳು

* ಇದರಲ್ಲಿ ಇರುವಂತಹ ಬ್ಯಾಕ್ಟೀರಿಯ ವಿರೋಧಿ ಗುಣಗಳು ತೆರೆದುಕೊಂಡಿರುವ ರಂಧ್ರಗಳು ಮತ್ತು ಬೊಕ್ಕೆಗಳನ್ನು ನಿವಾರಣೆ ಮಾಡುವುದು. ಬ್ಯಾಕ್ಟೀರಿಯಾವು ವಂಶ ಬೆಳೆಸದಂತೆ ಇದು ತಡೆಯವುದು. ಇದರಿಂದ ಚರ್ಮಕ್ಕೆ ನೆರವಾಗುವುದು.

* ಇದರಲ್ಲಿ ಇರುವಂತಹ ಕಿತ್ತುಹಾಕುವ ಗುಣವು ಚರ್ಮವನ್ನು ಶುದ್ಧೀಕರಿಸುವುದು.

* ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯಂಶವನ್ನು ಇದು ತೆಗೆದು ತಾಜಾ ಹಾಗೂ ಹೊಸ ಚರ್ಮದ ಭಾವನೆ ನೀಡುವುದು.

* ಅತಿಯಾಗಿ ಮೇದೋಗ್ರಂಥಿಯು ಉತ್ಪತ್ತಿ ಮಾಡುವುದನ್ನು ತಡೆಯುವ ಅರಶಿನವು ಚರ್ಮದಲ್ಲಿ ಜಮೆಯಾಗುವಂತಹ ಎಣ್ಣೆಯನ್ನು ತಡೆಯುವುದು.

ಎಣ್ಣೆಯಂಶವಿರುವ ತ್ವಚೆಗೆ ಅರಶಿನದ ವಿವಿಧ ರೀತಿಯ ಪ್ಯಾಕ್ ಗಳು

ಎಣ್ಣೆಯಂಶವಿರುವ ತ್ವಚೆಗೆ ಅರಶಿನದ ವಿವಿಧ ರೀತಿಯ ಪ್ಯಾಕ್ ಗಳು

ಅರಿಶಿನ, ಲಿಂಬೆರಸ ಮತ್ತು ಕಡಲೆಹಿಟ್ಟು ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

*1 ಚಮಚ ಅರಿಶಿನ ಹುಡಿ

*1 ಚಮಚ ಲಿಂಬೆರಸ

*2-3 ಚಮಚ ಕಡಲೆಹಿಟ್ಟು

ವಿಧಾನ

ವಿಧಾನ

1. ಪಿಂಗಾಣಿ ತೆಗೆದುಕೊಂಡು ಅದರಲ್ಲಿ ಅರಶಿನ, ಕಡಲೆಹಿಟ್ಟು ಮತ್ತು ಲಿಂಬೆರಸ ಹಾಕಿ ಮಿಶ್ರಣ ಮಾಡಿ.

2. ಅಗತ್ಯಕ್ಕೆ ಅನುಗುಣವಾಗಿ ನೀರು ಹಾಕಿಕೊಂಡು ಸ್ವಲ್ಪ ದಪ್ಪಗಿನ ಪೇಸ್ಟ್ ಮಾಡಿ. ನೀರಿನ ಪ್ರಮಾಣವು ಹೆಚ್ಚು ಬೇಡ. ಯಾಕೆಂದರೆ ನೀವು ಇದನ್ನು ಹಚ್ಚಿಕೊಂಡಾಗ ಅದು ಕುತ್ತಿಗೆ ಕೆಳಗೆ ಹರಿದು ಬರಬಹುದು.

3. ಫೇಸ್ ಪ್ಯಾಕ್ ಬ್ರಷ್ ನಿಂದ ಇದನ್ನು ಮುಖಕ್ಕೆ ಹಚ್ಚಿಕೊಂಡು ಸುಮಾರು 12-15 ನಿಮಿಷ ಕಾಲ ಹಾಗೆ ಬಿಡಿ.

4. ಇದು ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ ಮತ್ತು ಟವೆಲ್ ನಿಂದ ಒರೆಸಿಕೊಳ್ಳಿ.

5. ವಾರದಲ್ಲಿ ಎರಡು ಸಲ ಇದನ್ನು ನೀವು ಬಳಸಿಕೊಂಡರೆ ಆಗ ಚರ್ಮದಲ್ಲಿನ ಎಣ್ಣೆಯಂಶವು ಕಡಿಮೆಯಾಗುವುದನ್ನು ನೀವು ಕಾಣಬಹುದು.

6. ಎಚ್ಚರಿಕೆ: ಕೆಲವು ಜನರಿಗೆ ಅರಶಿನದ ಅಲರ್ಜಿ ಇರಬಹುದು ಮತ್ತು ತುರಿಕೆ ಉಂಟಾಗಬಹುದು. ಇದರಿಂದ ಮೊದಲು ಇದನ್ನು ತಿಳಿದುಕೊಂಡು ಅರಶಿನ ಬಳಸಿ.

ಈ ಫೇಸ್ ಪ್ಯಾಕ್ ನಿಮಗೆ ತುಂಬಾ ನೆರವಾಗಲಿದೆ. ಯಾಕೆಂದರ ಇದರಲ್ಲಿ ಇರುವಂತಹ ಲಿಂಬೆರಸದ ಆಮ್ಲೀಯ ಗುಣವು ಅತಿಯಾದ ಎಣ್ಣೆಯಂಶವನ್ನು ತೆಗೆಯುವುದು ಮತ್ತು ಅರಶಿನ ಕೂಡ ನೈಸರ್ಗಿಕ ಕಿತ್ತುಹಾಕುವ ಗುಣ ಹೊಂದಿದೆ.

ಅರಿಶಿನ, ಲಿಂಬೆ ಮತ್ತು ಮೊಸರಿನ ಫೇಸ್ ಪ್ಯಾಕ್

ಅರಿಶಿನ, ಲಿಂಬೆ ಮತ್ತು ಮೊಸರಿನ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

*1/2 ಚಮಚ ಅರಶಿನ ಹುಡಿ

*1 ಚಮಚ ಲಿಂಬೆರಸ

*11/2 ಚಮಚ ಮೊಸರು

ವಿಧಾನ

1. ಒಂದು ಪಿಂಗಾಣಿ ತೆಗೆದುಕೊಳ್ಳಿ ಮತ್ತು ಅರಶಿನ ಹುಡಿ, ಮೊಸರು ಮತ್ತು ಲಿಂಬೆರಸ ಮಿಶ್ರಣ ಮಾಡಿ.

2. ಮೊಸರು ದ್ರವರೂಪದಲ್ಲಿರುವ ಕಾರಣದಿಂದ ನೀರಿನ ಅಗತ್ಯವಿಲ್ಲ. ದಪ್ಪಗಿನ ಪೇಸ್ಟ್ ಮಾಡಿ ಮತ್ತು ಮುಖ ಹಾಗೂ ಕುತ್ತಿಗೆ ಫೇಸ್ ಪ್ಯಾಕ್ ಬ್ರಷ್ ಬಳಸಿಕೊಂಡು ಇದನ್ನು ಹಚ್ಚಿಕೊಳ್ಳಿ.

3. 10-15 ನಿಮಿಷ ಕಾಲ ಹಾಗೆ ಬಿಡಿ ಮತ್ತು ಒಣಗಲಿ.

4. ಇದು ಒಣಗಿದ ಬಳಿಕ ತಣ್ಣಗಿನ ಅಥವಾ ಉಗುರುಬೆಚ್ಚಗಿನ ನೀರು ಬಳಸಿಕೊಂಡು ತೊಳೆಯಿರಿ. ಇದರ ಬಳಿಕ ಟವೆಲ್ ನಿಂದ ಒರೆಸಿಕೊಳ್ಳಿ.

5. ವಾರದಲ್ಲಿ ಎರಡು ಅಥವಾ ಮೂರು ಸಲ ಫೇಸ್ ಪ್ಯಾಕ್ ಬಳಸಿದರೆ ಫಲಿತಾಂಶ ಸಿಗುವುದು.

ಈ ಫೇಸ್ ಪ್ಯಾಕ್ ಅದ್ಭುತವಾಗಿ ಕೆಲಸ ಮಾಡುವುದು. ಯಾಕೆಂದರೆ ಲಿಂಬೆಯಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವಿದೆ. ಇದು ಚರ್ಮದ ಸತ್ತಕೋಶಗಳನ್ನು ಕಿತ್ತುಹಾಕುವುದು ಮತ್ತು ತ್ವಚೆಯ ಹೆಚ್ಚುವರಿ ಎಣ್ಣೆಯಂಶವನ್ನು ತೆಗೆಯುವುದು. ಮೊಸರಿನಲ್ಲಿ ಸಂಕೋಚನ ಗುಣವಿದ್ದು, ಇದು ರಂಧ್ರಗಳು ಕುಗ್ಗಲು ನೆರವಾಗುವುದು. ಅದೇ ರೀತಿ ಮುಖದಲ್ಲಿನ ಅತಿಯಾದ ಎಣ್ಣೆಯಂಶವನ್ನು ತೆಗೆಯುವುದು.

ಅರಿಶಿನ ಮತ್ತು ಸೌತೆಕಾಯಿ ಫೇಸ್ ಪ್ಯಾಕ್

ಅರಿಶಿನ ಮತ್ತು ಸೌತೆಕಾಯಿ ಫೇಸ್ ಪ್ಯಾಕ್

ಬೇಕಾಗುವ ಸಾಮಗ್ರಿಗಳು

*1 ಚಮಚ ಅರಿಶಿನ ಹುಡಿ

*1/2 ಚಮಚ ಸೌತೆಕಾಯಿ ರಸ

ವಿಧಾನ

1. ಒಂದು ಪಿಂಗಾಣಿ ತೆಗೆದುಕೊಂಡು ಅರಶಿನ ಹುಡಿ ಮತ್ತು ಸೌತೆಕಾಯಿ ರಸವನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.

2. ಬ್ರಷ್ ತೆಗೆದುಕೊಂಡು ಇದನ್ನು ಮುಖಕ್ಕೆ ಸರಿಯಾಗಿ ಹಚ್ಚಿಕೊಳ್ಳಿ ಮತ್ತು 12-15 ನಿಮಿಷ ಕಾಲ ಹಾಗೆ ಒಣಗಲಿ.

3. ಇದು ಒಣಗಿದ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಶುದ್ಧ ಟವೆಲ್ ನಿಂದ ಒರೆಸಿಕೊಳ್ಳಿ.

4. ವಾರದಲ್ಲಿ ಮೂರು ಸಲ ಈ ಫೇಸ್ ಪ್ಯಾಕ್ ಬಳಸಿಕೊಂಡರೆ ತ್ವಚೆಯು ಪುರ್ನಶ್ಚೇತನ ಪಡೆಯುವುದು.

ಈ ಫೇಸ್ ಪ್ಯಾಕ್ ಒಳ್ಳೆಯ ರೀತಿ ಕೆಲಸ ಮಾಡುವುದು. ಯಾಕೆಂದರೆ ಸೌತೆಕಾಯಿ ರಸದಲ್ಲಿ ತೇವಾಂಶ ನೀಡುವ ಗುಣವಿದೆ. ಸೌತೆಕಾಯಿ ರಸದಲ್ಲಿ ಇರುವಂತಹ ಶೇ.90ರಷ್ಟು ನೀರಿನಾಂಶವು ರಂಧ್ರಗಳನ್ನು ಕುಗ್ಗಿಸುವುದು ಮತ್ತು ಚರ್ಮದಲ್ಲಿರುವ ಅತಿಯಾದ ಎಣ್ಣೆಯಂಶವನ್ನು ತೆಗೆಯಲು ನೆರವಾಗುವುದು.

English summary

Get Rid Of Oily Skin Easily At Home Using Turmeric!

None of us want an oily skin, but what happens when we have to deal with oily skin every day? Oily skin attracts germs and leads to acne and pimples. Turmeric has its own medicinal values and besides adding flavour and colour to the food, curing cuts, boosting the body's immunity, etc., it helps in getting rid of oily skin.
X
Desktop Bottom Promotion