Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ವಯಸ್ಸು 40 ಆದರೇನಂತೆ? ನೀವೂ ಚಿರಯುವಕರಂತೆ ಕಾಣಬಹುದು!
ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬನಿಗೂ ವಯಸ್ಸಾಗಲೇ ಬೇಕು. ವಯಸ್ಸಾಗುತ್ತಿದ್ದಂತೆ ಸಾವು ಸಮೀಪ ಬರುತ್ತಿದೆ ಎನ್ನುವ ಭೀತಿಯೊಂದಿಗೆ ಆರೋಗ್ಯದಲ್ಲೂ ಹಲವಾರು ಬದಲಾವಣೆಗಳು ಆಗುತ್ತಾ ಹೋಗುತ್ತದೆ.
ಅದರಲ್ಲೂ ದೇಹದಲ್ಲಿ ವಯಸ್ಸಾಗುತ್ತಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಲು ಆರಂಭಿಸುತ್ತದೆ. ಇಂದಿನ ದಿನಗಳಲ್ಲಿ ಅದರಲ್ಲೂ ವೈದ್ಯಕೀಯವಾಗಿ ಮುಂದುವರಿದಿರುವಾಗ ವಯಸ್ಸಾಗುವ ಲಕ್ಷಣಗಳು ಗೋಚರಿಸುವುದನ್ನು ತಡೆಯಲು ಸಾಧ್ಯ. ಆದರೆ ದೇಹದ ಒಳಗಿನ ಭಾಗಗಳು ವಯಸ್ಸಾಗುವುದನ್ನು ತಡೆಯುವುದ ಅಸಾಧ್ಯ. ಬ್ಯೂಟಿ ಟಿಪ್ಸ್: ಮೂವತ್ತರ ಪ್ರಾಯದಲ್ಲೂ 16ರ ಸೌಂದರ್ಯ!
35 ವಯಸ್ಸಾಗುತ್ತಿದ್ದಂತೆ ದೇಹದಲ್ಲಿನ ಕೋಶಗಳಿಗೂ ವಯಸ್ಸಾಗುತ್ತದೆ. ಇದು ಪುನರ್ಜೀವ ಪಡೆಯುವ ಸಮಯವೂ ನಿಧಾನವಾಗುತ್ತಾ ಹೋಗುತ್ತದೆ. ಇದರ ಪರಿಣಾಮವಾಗಿ ನಮ್ಮ ದೇಹದ ಮೇಲೆ ವಯಸ್ಸಾಗುತ್ತಿರುವ ಲಕ್ಷಣಗಳು ಕಾಣಿಸುವುದು. ಇದನ್ನು ತಪ್ಪಿಸಲೆಂದೇ ಹಲವಾರು ರೀತಿಯ ಕಾಸ್ಮೆಟಿಕ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆದರೆ ಈ ಕಾಸ್ಮೆಟಿಕ್‌ಗಳಲ್ಲಿ ಅತಿಯಾದ ರಾಸಾಯನಿಕಗಳು ಒಳಗೊಂಡಿರುತ್ತದೆ. ಯಂಗ್ ಲುಕ್ ನಿಮ್ಮದಾಗಬೇಕೇ? ಇಲ್ಲಿದೆ ಸ್ಮಾರ್ಟ್ ಟಿಪ್ಸ್
ಇದನ್ನು ಕಡೆಗಣಿಸಬೇಕಾದರೆ ನಾವು ನೈಸರ್ಗಿಕವಾಗಿಯೇ ಕಾಸ್ಮೆಟಿಕ್‌ಗಳನ್ನು ಮನೆಯಲ್ಲಿ ತಯಾರಿಸಬೇಕು. 40ರ ಹರೆಯದಲ್ಲಿ ಯಾವ ಸೌಂದರ್ಯ ವರ್ಧಕಗಳನ್ನು ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅದನ್ನು ಪಾಲಿಸಿಕೊಂಡು ಹೋಗಿ...

ಸೌಂದರ್ಯ ಟಿಪ್ಸ್ #1
ಚರ್ಮದಲ್ಲಿರುವ ಸತ್ತ ಕೋಶಗಳನ್ನು ನಿಯಮಿತವಾಗಿ ಸ್ಕ್ರಬ್ ಮಾಡುವ ಮೂಲಕ ತೆಗೆದು ಹಾಕಿದರೆ ನೀವು ಯುವಕರಂತೆ ಕಾಣಬಹುದು. ಮುಖ ಒಣ ಹಾಗೂ ಗಡುಸಾಗಿ ಕಾಣಿಸುತ್ತಿದ್ದರೆ ಒಳ್ಳೆಯ ಸ್ಕ್ರಬ್ ಬಳಸಿ.

ಸೌಂದರ್ಯ ಟಿಪ್ಸ್ #2
ವಯಸ್ಸಾಗುವುದನ್ನು ತಡೆಯುವಂತಹ ಲೋಷನ್ ಮತ್ತು ಕ್ರೀಮ್ ಗಳನ್ನು ಬಳಸಿ. ವಯಸ್ಸಾಗುವುದನ್ನು ತಡೆಯುವುದಕ್ಕಾಗಿಯೇ ಕೆಲವೊಂದು ಕ್ರೀಮ್ ಮತ್ತು ಲೋಷನ್ ಗಳನ್ನು ತಯಾರಿಸುತ್ತಾರೆ. ಇದು ಚರ್ಮದಲ್ಲಿ ಕೋಶಗಳ ಉತ್ಪತ್ತಿ ಮಾಡಿ ನೆರಿಗೆ ಮತ್ತು ಚರ್ಮ ಜೋತುಬೀಳುವುದನ್ನು ದೂರ ಮಾಡುವುದು.

ಸೌಂದರ್ಯ ಟಿಪ್ಸ್ #3
ಮುಖಕ್ಕೆ ಆಗಾಗ ಮಸಾಜ್ ಮಾಡುತ್ತಾ ಇರಿ. ಇದರಿಂದ ವಯಸ್ಸಾಗುವ ಲಕ್ಷಣಗಳು ಗೋಚರಿಸುವುದು ಕಡಿಮೆಯಾಗುವುದು. ರಾತ್ರಿ ವೇಳೆ ನಿಮ್ಮ ಕಣ್ಣುಗಳ ಸುತ್ತ ಮಸಾಜ್ ಮಾಡಿಕೊಳ್ಳಿ. ಇದರಿಂದ ನೆರಿಗೆ ಹಾಗೂ ಕಲೆಗಳು ಮೂಡುವುದು ಕಡಿಮೆಯಾಗುವುದು.

ಸೌಂದರ್ಯ ಟಿಪ್ಸ್ #4
ವಯಸ್ಸಾಗುತ್ತಿದ್ದಂತೆ ಕೆಲವೊಂದು ಫ್ಯಾಷನ್ ಬಿಟ್ಟುಬಿಡಬೇಕಾಗುತ್ತದೆ. 40 ಹರೆಯದಲ್ಲಿ ತಲೆ ಕೂದಲಿಗೆ ಕಂದು ಬಣ್ಣ ಹಚ್ಚಿಕೊಂಡರೆ ಮತ್ತಷ್ಟು ವಯಸ್ಸಾದಂತೆ ಕಾಣುತ್ತೀರಿ.

ಸೌಂದರ್ಯ ಟಿಪ್ಸ್ #5
ಆದಷ್ಟು ದೇಹಕ್ಕೆ ನೀರಿನಾಂಶವನ್ನು ಒದಗಿಸಿ. ಸಾಧ್ಯವಾದಷ್ಟು ನೀರು ಕುಡಿಯಿರಿ. ಗ್ರೀನ್ ಟೀಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಗ್ರೀನ್ ಟೀಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ನಿಮ್ಮ ತ್ವಚೆಯನ್ನು ಯುವಕರಂತೆ ಕಾಣುವಂತೆ ಮಾಡುವುದು ಮತ್ತು ನೀರು ಚರ್ಮಕ್ಕೆ ತೇವಾಂಶ ನೀಡುತ್ತದೆ.

ಸೌಂದರ್ಯ ಟಿಪ್ಸ್ #6
ಕೆಲವೊಂದು ಮೇಕಪ್ ಸಾಮಗ್ರಿಗಳನ್ನು ನೀವು ತಂದಿಟ್ಟುಕೊಳ್ಳಿ. ಮೇಕಪ್ ನಿಂದ ನೆರಿಗೆ ಹಾಗೂ ಚರ್ಮ ಜೋತು ಬೀಳುವುದನ್ನು ಮರೆಮಾಚಬಹುದು.ಮೇಕಪ್ ಮಾಡಿಕೊಳ್ಳಲು ನೆರವು ಪಡೆಯಲು ನೀವು ಇತರ ಕೆಲವೊಂದು ಲೇಖನಗಳನ್ನು ಓದಿಕೊಂಡರೆ ಒಳ್ಳೆಯದು.



Click it and Unblock the Notifications











