ಬರೀ ಹದಿನೈದೇ ದಿನಗಳಲ್ಲಿಯೇ ತ್ವಚೆಯ ಕಾಂತಿ, ರಂಗೇರುತ್ತದೆ!

By Arshad

ಹಿತ್ತಲಗಿಡ ಮದ್ದಲ್ಲ ಎಂಬ ಗಾದೆಯೇ ಇದೆ. ನಮ್ಮ ಹಿತ್ತಲಲ್ಲಿ ಬೆಳೆಯುವ, ನಮ್ಮ ಅಡುಗೆ ಮನೆಯಲ್ಲಿಯೇ ಇರುವ ಅಥವಾ ಸುಲಭವಾಗಿ ಮಾರುಕಟ್ಟೆಯಲ್ಲಿ ದೊರಕುವ ನೈಸರ್ಗಿಕ ವಸ್ತುಗಳಲ್ಲಿ ತ್ವಚೆಯ ಆರೋಗ್ಯ ಮತ್ತು ಕಾಂತಿಯನ್ನು ಹೆಚ್ಚಿಸುವ ಪ್ರಬಲ ಅಂಶಗಳಿವೆ. ಆದರೆ ಇದನ್ನು ನಂಬದ ನಾವು ಇದೇ ಅಂಶಗಳನ್ನು ಬೇರ್ಪಡಿಸಿ ಇತರ ರಾಸಾಯನಿಕಗಳ ಜೊತೆ ಬೆರೆಸಿ ಸುಂದರ ಪ್ಯಾಕೆಟ್ಟುಗಳಲ್ಲಿ ರೂಪದರ್ಶಿಯರು ಜಾಹೀರಾತು ನೀಡಿದರೆ ಯಾವುದೇ ಅಳುಕಿಲ್ಲದೇ ಖರೀದಿಸಿಬಿಡುತ್ತೇವೆ. ವಾಸ್ತವವಾಗಿ ಈ ಥಳಕು ಬೆಳಕಿಗೆ ಮಣಿಯದೇ ಕೊಂಚ ಮನಸ್ಸನ್ನು ನಿಸರ್ಗ ನೀಡಿದ ವಸ್ತುಗಳತ್ತ ಹರಿಸಿದರೆ ನಿಸರ್ಗ ನೀಡಿದ ಅದ್ಭುತವನ್ನೇ ಕಾಣಬಹುದು. ಇದಕ್ಕೆ ಕೊಂಚ ತಾಳ್ಮೆ ಹಾಗೂ ಸರಿಯಾದ ಮೂಲಿಕೆಯ ಆಯ್ಕೆ ಅಗತ್ಯ.

ಈ ಮೂಲಿಕೆಗಳು ಹಲವು ಪ್ರಮುಖ ಪೋಷಕಾಂಶಗಳನ್ನು ಹೊಂದಿದ್ದು ಆಹಾರದ ಮೂಲಕ ಸೇವಿಸಿದ ಮೂಲಕ ಒಳಗಡೆಯಿಂದ ಪೋಷಣೆ ನೀಡುವಂತೆಯೇ ಚರ್ಮದ ಹೊರಗಿನಿಂದಲೂ ಉತ್ತಮ ಆರೈಕೆ ನೀಡುತ್ತದೆ. ಚರ್ಮದ ನೈಜ ಆರೈಕೆ ಮತ್ತು ಸಹಜ ಕಾಂತಿ ಪಡೆಯಲು ನಿಸರ್ಗ ನೀಡಿದ ವಸ್ತುಗಳನ್ನು ಅವಲಂಬಿಸಿ ಕೃತಕ ರಾಸಾಯನಿಕಗಳನ್ನು ಬೇಡವೆನ್ನುವುದು ಜಾಣರ ಲಕ್ಷಣ.

ಅಲ್ಲದೇ ಇದು ಅಗ್ಗವೂ ಆದುದರಿಂದ ದುಬಾರಿ ಪ್ರಸಾದನಗಳನ್ನು ಕೊಳ್ಳುವ ಹಣವೂ ಉಳಿತಾಯವಾದಂತಾಗುತ್ತದೆ. ಗಿಡಮೂಲಿಕೆಗಳು ಎಂದಾಕ್ಷಣ ಕಾಡಲ್ಲಿ ಹುಡುಕಿಕೊಂಡು ಅಲೆಯಬೇಕಾದ ಸಂಭವವೇನೂ ಇಲ್ಲ, ನಮ್ಮ ನಿತ್ಯದ ಪುದೀನಾ ಸೊಪ್ಪು, ಲೋಳೆಸರ, ಗುಲಾಬಿ ಹೂವು, ಮಲ್ಲಿಗೆ ಮೊದಲಾದವೇ ತ್ವಚೆಯ ಅಂದವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿವೆ. ಆದರೆ ಸರಿಯಾದ ಮೂಲಿಕೆಯನ್ನು ಆಯ್ದುಕೊಳ್ಳುವುದು ಮುಖ್ಯ. ಈ ಕಷ್ಟವನ್ನು ಕೆಳಗಿನ ಸ್ಲೈಡ್‌ ಶೋ ನಿವಾರಿಸುತ್ತದೆ...

 ಪುದೀನಾ ಎಲೆಗಳು

ಪುದೀನಾ ಎಲೆಗಳು

ಚರ್ಮದ ಕಲೆಗಳನ್ನು ಹೋಗಲಾಡಿಸುವಲ್ಲಿ ಪುದಿನಾ ಎಲೆಗಳು ಹೆಚ್ಚು ಸಮರ್ಥವಾಗಿವೆ. ಅಲ್ಲದೇ ಇದರ ತಂಪುಮಾಡುವ ಗುಣ ರಕ್ತಸಂಚಾರವನ್ನು ಹೆಚ್ಚಿಸಿ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ. ಪರಿಣಾಮವಾಗಿ ಚರ್ಮಕ್ಕೆ ಹೆಚ್ಚಿನ ಆರೈಕೆ, ಆರ್ದ್ರತೆ ಮತ್ತು ಪೋಷಣೆ ದೊರೆತು ನೈಜವರ್ಣ ಮತ್ತು ಕಾಂತಿ ಹೆಚ್ಚುತ್ತದೆ. ಅಲ್ಲದೇ ಚರ್ಮಕ್ಕೆ ಅಲರ್ಜಿ ಅಥವಾ ಇನ್ನಾವುದೋ ಕಾರಣದಿಂದ ಎದುರಾಗಿದ್ದ ತುರಿಕೆ, ಬಿಸಿಲಿನಿಂದ ಬಾಡಿ ಎದುರಾಗಿದ್ದ ಉರಿ ಮೊದಲಾದವನ್ನು ಪುದಿನಾ ಎಲೆಯನ್ನು ಅರೆದು ಲೇಪಿಸಿದ ಲೇಪನ ನಿವಾರಿಸುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ತುಳಸಿ ಎಲೆಗಳು ನೈಸರ್ಗಿಕವಾದ ಬ್ಯಾಕ್ಟೀರಿಯಾ ನಿವಾರಕವಾಗಿವೆ. ಇದು ಬೇಗನೇ ಸೋಂಕಿಗೆ ಒಳಗಾಗುವ ಸೂಕ್ಷ್ಮ ಚರ್ಮದವರಿಗೆ ಅತಿ ಸೂಕ್ತವಾಗಿದ್ದು ಉತ್ತಮ ಪೋಷಣೆ ನೀಡುತ್ತದೆ. ವಿಶೇಷವಾಗಿ ಚರ್ಮದ ಸೂಕ್ಷ್ಮರಂಧ್ರಗಳಲ್ಲಿದ್ದ ಕೊಳೆ ಮತ್ತು ಕಲ್ಮಶಗಳನ್ನು ನಿವಾರಿಸಲು ತುಳಸಿಯ ರಸ ಉತ್ತಮವಾಗಿದೆ. ತುಳಸಿ ಎಲೆಗಳನ್ನು ಅರೆದು ತೆಳುವಾದ ಲೇಪನದ ರೂಪದಲ್ಲಿ ಹಚ್ಚಬಹುದು ಅಥವಾ ಈ ಎಲೆಗಳನ್ನು ಕುದಿಸಿ ತಣಿಸಿ ಸೋಸಿದ ನೀರಿನಿಂದ ಚರ್ಮವನ್ನು ತೊಳೆದುಕೊಳ್ಳುವ ಮೂಲಕ ಚರ್ಮಕ್ಕೆ ಉತ್ತಮ ಪೋಷಣೆ ನೀಡಬಹುದು.

ಯಷ್ಠಿಮಧು ಪುಡಿ (Licorice Powder)

ಯಷ್ಠಿಮಧು ಪುಡಿ (Licorice Powder)

ಚರ್ಮಕ್ಕೆ ಯಾವುದೋ ಕಾರಣದಿಂದ ಉರಿ ಉಂಟಾಗಿದ್ದರೆ ಈ ಪುಡಿಯ ಲೇಪನ ಅತ್ಯುತ್ತಮವಾಗಿದೆ. ವಿಶೇಷವಾಗಿ ಅಲರ್ಜಿ ಮತ್ತು ಬಿಸಿಲಿನ ಕಾರಣದ ಉರಿಯನ್ನು ಈ ಪುಡಿ ಶಮನಗೊಳಿಸುತ್ತದೆ. ಅಲ್ಲದೇ ಚರ್ಮದ ಸೋಂಕು ನಿವಾರಿಸಿ ಮೊಡವೆ, ದದ್ದು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ದಪ್ಪನೆಯ ಲೇಪನ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು.

ರೋಸ್ಮರಿ ಎಣ್ಣೆ

ರೋಸ್ಮರಿ ಎಣ್ಣೆ

ಕಳೆಗುಂದಿದ ಚರ್ಮ ಅಥವಾ ಚಿಕ್ಕ ಚಿಕ್ಕ ಮೊಡವೆಗಳಿರುವ ಚರ್ಮಕ್ಕೆ ರೋಸ್ಮರಿ ಹೂವಿನ ಎಣ್ಣೆ ಅತ್ಯುತ್ತಮವಾಗಿದೆ. ಅಲ್ಲದೇ ಇದು ಕೂದಲಿನ ಬುಡಕ್ಕೆ ಪೋಷಣೆ ಹಾಗೂ ಕೂದಲಿನ ದೃಢತೆಯನ್ನು ಹೆಚ್ಚಿಸುವ ಕಾರಣ ಕೂದಲ ಪೋಷಣೆಗೂ ಸಮರ್ಥವಾಗಿದೆ. ಉತ್ತಮ ಪರಿಣಾಮಕ್ಕಾಗಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಮಲಗಿ ಬೆಳಿಗ್ಗೆದ್ದು ತಣ್ಣೀರಿನಲ್ಲಿ ತೊಳೆಯಬೇಕು. ವಾರಕ್ಕೊಮ್ಮೆ ತಲೆಗೂದಲಿಗೆ ಹಚ್ಚಿ ರಾತ್ರಿಯಿಡೀ ಬಿಟ್ಟು ಬೆಳಿಗ್ಗೆ ತೊಳೆದುಕೊಂಡರೆ ಉತ್ತಮ ಪೋಷಣೆ ದೊರಕುತ್ತದೆ.

ಸೇಜ್ ಎಲೆಗಳು (Sage Leaves)

ಸೇಜ್ ಎಲೆಗಳು (Sage Leaves)

ನವಿರಾದ ಬಿಳಿಯಬಣ್ಣದ ಪದರ ಕುಳಿತಿರುವಂತೆ ಕಾಣುವ ಸೇಜ್ ಎಲೆಗಳು (Salvia Officinalis) ಸಹಾ ಚರ್ಮದ ಕಾಂತಿ ಹೆಚ್ಚಿಸಲು ಸೂಕ್ತವಾಗಿದೆ. ಇದಕ್ಕಾಗಿ ಹಲವು ಎಲೆಗಳನ್ನು ನುಣ್ಣಗೆ ಅರೆದು ತೆಳುವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಚರ್ಮದ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರದ ಬಾಧೆ ನಿವಾರಣೆಯಾಗುತ್ತದೆ. ಪರಿಣಾಮವಾಗಿ ನವತಾರುಣ್ಯದ, ನಯವಾದ, ಕಲೆಯಿಲ್ಲದ ಮತ್ತು ಕಾಂತಿಯುಕ್ತ ತ್ವಚೆ ನಿಮ್ಮದಾಗುತ್ತದೆ. ಅಲ್ಲದೇ ಇದರಲ್ಲಿ ಹೇರಳವಾಗಿರುವ ಅಂಟಿ ಆಕ್ಸಿಡೆಂಟುಗಳು ನೆರಿಗೆ ಮೂಡುವುದನ್ನು ತಡವಾಗಿಸುತ್ತದೆ ಹಾಗೂ ಚರ್ಮದ ಉರಿಯಿಂದ ರಕ್ಷಿಸುತ್ತದೆ.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಕೊಂಚ ಘಾಟು ಇರುವ ಈ ಎಣ್ಣೆ ಸೊಳ್ಳೆಗಳಿಂದ ಚರ್ಮವನ್ನು ರಕ್ಷಿಸುವುದು ಮಾತ್ರವಲ್ಲ ಚರ್ಮದ ಕಾಂತಿ ಹೆಚ್ಚಿಸಲೂ ನೆರವಾಗುತ್ತದೆ. ಚರ್ಮದ ಸೋಂಕಿಗೆ ಕಾರಣವಾಗುವ ಕ್ರಿಮಿಗಳನ್ನು ಕೊಲ್ಲುವ ಮೂಲಕ ಮೊಡವೆ ದದ್ದು ಮೊದಲಾದವುಗಳನ್ನು ನಿವಾರಿಸುತ್ತದೆ ಹಾಗೂ ಕಾಂತಿಯುಕ್ತ ಚರ್ಮ ಹೊಂದಲು ನೆರವಾಗುತ್ತದೆ. ಆದರೆ ಇದು ಅತಿ ಪ್ರಬಲ ಎಣ್ಣೆಯಾದುದರಿಂದ ಅತಿ ತೆಳ್ಳಗೆ ಮತ್ತು ಕೆಲವು ನಿಮಿಷಗಳಿಗೆ ಮಾತ್ರ ಹಚ್ಚಬೇಕು.

ಲೆಮನ್ ಗ್ರಾಸ್ ಪುಡಿ (ಮಜ್ಜಿಗೆ ಹುಲ್ಲು)

ಲೆಮನ್ ಗ್ರಾಸ್ ಪುಡಿ (ಮಜ್ಜಿಗೆ ಹುಲ್ಲು)

ಈ ಹುಲ್ಲಿನ ಪುಡಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣ ಚರ್ಮಕ್ಕೆ ಹಾನಿ ಎಸಗುವ ಸೋಂಕುಗಳಿಂದ ರಕ್ಷಿಸುತ್ತದೆ. ಅಲ್ಲದೇ ಚರ್ಮ ಸಹಜವರ್ಣ ಪಡೆಯಲು ಮತ್ತು ಚರ್ಮದ ಒಳಪದರಲ್ಲಿರುವ ಕಲ್ಮಶಗಳನ್ನು ನಿವಾರಿಸಲೂ ಈ ಹುಲ್ಲು ಬೇಯಿಸಿದ ನೀರು ಸಕ್ಷಮವಾಗಿದೆ. ಅಷ್ಟೇ ಅಲ್ಲ, ಮಾನಸಿಕ ಬೇಗುದಿ, ಒತ್ತಡ ಮತ್ತು ಉದ್ವೇಗದಿಂದಲೂ ಹೊರಬರಲು ಈ ಹುಲ್ಲನ್ನು ಬೇಯಿಸಿದ ನೀರು ಕುಡಿದರೆ ಸಾಕು.

English summary

Use These Kitchen Herbs For Glowing And Radiant Skin In 15 days

You must not miss out the power of herbs in making your skin fair and glowing. These are the nature's bleeding for our skin which we normally ignore. We usually rely on chemical creams and other skin treatments to get fair skin and overlook theses common kitchen herbs. Read on the article to know the kitchen herbs that can do wonders for your beauty.
X
Desktop Bottom Promotion