ಮುಖದ ಕಪ್ಪು ಕಲೆಗಳ ನಿವಾರಣೆಗೆ ಪ್ರಾಕೃತಿಕ ಪರಿಹಾರ

By CM Prasad

ಈಗಿನ ಜನಾಂಗವು ತರಹೇವಾರಿ ಜಾಹೀರಾತುಗಳಿಗೆ ಹೆಚ್ಚು ಮಾರುಹೋಗುತ್ತಿದ್ದು, ಜಾಹೀರಾತಿನಲ್ಲಿರುವ ಅಂಶದ ಸಾಧಕ ಭಾದಕಗಳ ಬಗ್ಗೆ ಯೋಚಿಸಿದೆ ಒಮ್ಮೆಲೆ ಜಾಹೀರಾತುದಾರರು ಹೆಣೆದಿರುವ ಬಲೆಗೆ ಸುಲಭವಾಗಿ ಬೀಳುತ್ತಿದ್ದಾರೆ. ಹೌದು! ಚರ್ಮದ ಆರೈಕೆಯ ವಿಷಯಕ್ಕೆ ಬಂದರೆ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಸೌಂದರ್ಯವರ್ಧಕಗಳು ಲಭ್ಯವಿದೆ.

ಜೊತೆಗೆ ಜಾಹೀರಾತುಗಳಲ್ಲಿ ಅನೇಕ ರೀತಿಯ ಪ್ರಚಾರಗಳನ್ನು ಮಾಡಿ ಗುಣಾತ್ಮಕವಲ್ಲದ ಸೌಂದರ್ಯವರ್ಧಕಗಳನ್ನು ಮಾರಾಟ ಮಾಡಲಾಗುತ್ತಿದೆ. ಜಾಹೀರಾತುಗಳನ್ನು ನೋಡಿ ಕೊಂಡುಕೊಂಡ ಸೌಂದರ್ಯವರ್ಧಕಗಳು ಮತ್ತು ತಾರುಣ್ಯ ವೃದ್ಧಿಸುವ ಕ್ರೀಮ್‌ ಗಳನ್ನು ಬಳಸಿ ಚರ್ಮದ ಕೀವು ಮತ್ತು ಕಪ್ಪು ಕಲೆಗಳನ್ನು ನಿವಾರಿಸಿಕೊಳ್ಳಲಾಗದೇ ಹತಾಶೆಗೊಂಡಿದ್ದೀರಾ? ಒಂದೇ ತಿಂಗಳಲ್ಲಿ ಮಾಯವಾಗುವ ತ್ವಚೆಯ ಕಪ್ಪು ಕಲೆ!

ನೀವೇಕೆ ಪ್ರಾಕೃತಿಕ ಪರಿಹಾರಗಳನ್ನು ಬಳಸಿ ಸುರಕ್ಷಿತವಾದ, ಅಗ್ಗವಾದ ಮತ್ತು ಪರಿಣಾಮಕಾರಿಯಾದ ಫಲಿತಾಂಶವನ್ನು ಹೊಂದಬಾರದು? ಸುಲಭವಾಗಿ ಸಿಗುವ ಹಣ್ಣುಗಳು ಮತ್ತು ತರಕಾರಿಗಳಾದ ಆಲೂಗಡ್ಡೆ, ಲಿಂಬೆಹಣ್ಣು ಮತ್ತು ಪಪ್ಪಾಯ ಹಣ್ಣು ಬಳಸುವುದರಿಂದ ಕೇವಲ ಚರ್ಮದ ಕೀವು ಮತ್ತು ಕಪ್ಪು ಕಲೆಗಳು ನಿವಾರಣೆಯಾಗುವುದಲ್ಲೇ ನಿಮ್ಮ ಚರ್ಮದ ಕಾಂತಿಯೂ ಸಹ ಹೆಚ್ಚಾಗುತ್ತದೆ. ಆಲೂಗಡ್ಡೆ ಮತ್ತು ಲಿಂಬೆಹಣ್ಣಿನಲ್ಲಿ ಸೌಮ್ಯವಾದ ಬ್ಲೀಚಿಂಗ್ ಗುಣವಿದ್ದು, ಹಾಗೂ ಪಪ್ಪಾಯ ಹಣ್ಣಿನಲ್ಲಿ ಚರ್ಮದ ಕೆಟ್ಟ ಪದರವನ್ನು ಹೊರತೆಗೆಯಲು ನೆರವಾಗುತ್ತದೆ...

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯಲ್ಲಿ ಬಿ-ಕಾಂಪ್ಲೆಕ್ಸ್ ವಿಟಮಿನ್ ಸತ್ವ, ಪೊಟಾಷಿಯಮ್, ಮೆಗ್ನೀಷಿಯಮ್, ಜಿಂಕ್ ಮತ್ತು ಫಾಸ್ಫರಸ್ ಸತ್ವಗಳು ಹೇರಳವಾಗಿದ್ದು ಇದು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಿ ಬಣ್ಣವನ್ನು ಅಂದಗೊಳಿಸುವ ಗುಣ ಹೊಂದಿದೆ. ವಿಟಮಿನ್-ಬಿ-ಕಾಂಪ್ಲೆಕ್ಸ್ ಭಾಗವಾದ ನಿಯಾಸಿನ್ ಅಮೈಡ್ ನಿಂದ ಜೀವಕೋಶಗಳು ನವೀಕರಣಗೊಳ್ಳಲು ಹೆಚ್ಚು ನೆರವಾಗುತ್ತದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಆಲೂಗಡ್ಡೆಯ ಹೋಳುಗಳನ್ನು ಮುಖದ ಮೇಲೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ಆಲೂಗಡ್ಡೆಯ ಹೋಳುಗಳು ಒಣಗಿದಲ್ಲಿ ಮತ್ತೊಂದು ತಾಜಾ ಹೋಳನ್ನು ಬಳಸಿ.

ಲಿಂಬೆಹಣ್ಣು

ಲಿಂಬೆಹಣ್ಣು

ಲಿಂಬೆಯಲ್ಲಿರುವ ವಿಟಮಿನ್ ಸಿ ಸತ್ವವು ಉತ್ಕರ್ಷಣವನ್ನು ನಿಯಂತ್ರಿಸಿ ಚರ್ಮಚ ಮೆಲಾನಿನ್ ಸತ್ವದ ಪ್ರಮಾಣವನ್ನು ಸಮತೋಲನದಲ್ಲಿ ಇರಿಸಲು ನೆರವಾಗುತ್ತದೆ. ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಹಾನಿಕಾರಕ ಹೊರಪದರವನ್ನು ಹೊರತೆಗೆಯುವ ಗುಣ ಹೊಂದಿದ್ದು, ಸತ್ತ ಜೀವಕೋಶಗಳನ್ನು ಹೊರಹಾಕಿ ಚರ್ಮವನ್ನು ಹಗುರಗೊಳಿಸಲು ಸಹಕಾರಿಯಾಗಿದೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಒಂದು ಚಮಚ ಬ್ರೌನ್ ಶುಗರ್ ಅನ್ನು ಮೊಟ್ಟೆಯ ಬಿಳಿಯ ಅಂಶದೊಂದಿಗೆ ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಚಮಚ ಲಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ವೃತ್ತಾಕಾರದಲ್ಲಿ 10 ನಿಮಿಷಗಳ ಕಾಲ ನಯವಾಗಿ ತಿಕ್ಕಿ. ನಂತರ ತಿಳಿನೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ.

ಪಪ್ಪಾಯ ಹಣ್ಣು

ಪಪ್ಪಾಯ ಹಣ್ಣು

ಪಪ್ಪಾಯ ಹಣ್ಣಿನಲ್ಲಿ ಪಪಾಯಿನ್ ಎಂಬ ಎನ್ಸೈಮ್ ಸತ್ವವಿದ್ದು, ಇದು ಚರ್ಮದ ಅನುಪಯುಕ್ತ ಹೊರಪದರವನ್ನು ಹೊರತೆಗೆಯಲು ನೆರವು ನೀಡುತ್ತದೆ ಮತ್ತು ಹೊಸ ಜೀವಕೋಶಗಳನ್ನು ಉತ್ಪತ್ತಿ ಮಾಡಲು ಸಹಕಾರಿಯಾಗಿದೆ. ಇಲ್ಲಿದೆ ಇದನ್ನು ಉಪಯೋಗಿಸುವ ವಿಧಾನ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಪಪ್ಪಾಯ ಪಾನಕ ತಯಾರಿಸಿ, ಇದನ್ನು ಚರ್ಮದ ಕೀವಿನ ಭಾಗಕ್ಕೆ ಹಚ್ಚಿಕೊಂಡು 10 ನಿಮಿಷ ಹಾಗೆಯೇ ಬಿಡಿ. ಪಾನಕವು ಒಣಗಿದ ನಂತರ ಚರ್ಮವನ್ನು ತಿಳಿನೀರಿನಿಂದ ಸ್ವಚ್ಛಗೊಳಿಸಿ. ಒಳ್ಳೆಯ ಫಲಿತಾಂಶ ಹೊಂದಲು ಪರಂಗಿಯ ಪಾನಕವನ್ನು ಒಂದು ತಿಂಗಳ ಕಾಲ ಕ್ರಮವಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ನಿಮ್ಮ ತ್ವಚೆ ಹೆಚ್ಚು ಕಾಂತಿಯುಕ್ತವಾಗಿ ಅಂದಗೊಳ್ಳುತ್ತದೆ.

X
Desktop Bottom Promotion