Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಪ್ಪುವರ್ಣಕ್ಕೆ ಗುಡ್ ಬೈ - ಗೌರವ ವರ್ಣಕ್ಕೆ ಹಾಯ್, ಹಾಯ್....
ಬೆಳ್ಳಗಾಗಬೇಕು ಎಂಬುದು ಗೋಧಿಬಣ್ಣದವರೆಲ್ಲರ ಇಚ್ಛೆ. ಒಂದು ವೇಳೆ ನಿಮ್ಮ ಚರ್ಮವೂ ಬಿಸಿಲು ಅಥವಾ ಇನ್ನಾವುದೋ ಕಾರಣದಿಂದ ಸಹಜವರ್ಣ ಕಳೆದುಕೊಂಡು ಗಾಢವಾಗಿದ್ದರೆ ಇದನ್ನು ಸರಿಪಡಿಸಲು ಬಹಳ ಹಳೆಯ ವಿಧಾನವೊಂದಿದೆ. ಎಷ್ಟೋ ವರ್ಷಗಳಿಂದ ಈ ವಿಧಾನವನ್ನು ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದಾರೆ, ಆದರೆ ಹೆಚ್ಚಿನವರಿಗೆ ಇದು ಗೊತ್ತಿಲ್ಲ!
ಗೌರವರ್ಣದ ಜನರು ಸ್ವಾಭಾವಿಕವಾಗಿಯೇ ಇತರರ ಗಮನ ಸೆಳೆಯುತ್ತಾರೆ. ಕೃತಕ ಬಣ್ಣಗಳನ್ನು ಹಚ್ಚಿ ಗೌರವರ್ಣ ಪಡೆದರೂ ಇದು ಕೃತಕ ಎಂದು ಗೊತ್ತಿರುವ ಕಾರಣ ಆತ್ಮವಿಶ್ವಾಸದಿಂದ ಮುಂದೆ ಬರಲು ಸಾಧ್ಯವಿಲ್ಲ. ಜಾಹೀರಾತಿಗೆ ಮರುಳಾಗಿ ಸೌಂದರ್ಯ ಕಳೆದುಕೊಳ್ಳಬೇಡಿ!

ಬದಲಿಗೆ ನಿಜವಾದ ಬಣ್ಣ, ಸ್ವಾಭಾವಿಕವಾದ ಮತ್ತು ಕಾಂತಿಯುಕ್ತ ತ್ವಚೆ ನೀಡುವ ಆತ್ಮವಿಶ್ವಾಸ ಯಾವುದೇ ದುಬಾರಿ ಶೃಂಗಾರಕ್ಕಿಂತ ಅಮೂಲ್ಯ. ಬನ್ನಿ, ನಿಮ್ಮ ತ್ವಚೆ ನೈಸರ್ಗಿಕ ಕಾಂತಿ ಪಡೆಯಲು ಈ ಹಳೆಯ ವಿಧಾನವನ್ನು ಬಳಸಿ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.
ಈ ವಿಧಾನ ಅನುಸರಿಸಲು ಎಲ್ಲಿಯೂ ಹೋಗಬೇಕಾಗಿಲ್ಲ, ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳು ಅಲಭ್ಯವೂ ಅಲ್ಲ. ಬನ್ನಿ, ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ, ಇದುವರೆಗೆ ಕೆಲವೇ ಜನರ ಗೌರವರ್ಣದ ಗುಟ್ಟಾಗಿದ್ದ ಈ ವಿಧಾನವನ್ನು ಈಗ ನೋಡೋಣ:
ಅಗತ್ಯವಿರುವ ಸಾಮಾಗ್ರಿಗಳು:
*ನೆಲ್ಲಿಕಾಯಿ: ಎರಡು.
*ಪಪ್ಪಾಯಿ ಹಣ್ಣು: ನಾಲ್ಕೈದು ತೊಳೆಗಳು. ಊಹೆಗೂ ನಿಲುಕದ ಪಪ್ಪಾಯಿಯ ಪವರ್‌ಗೆ ಬೆರಗಾಗಲೇಬೇಕು!
ತಯಾರಿಸುವ ವಿಧಾನ:
* ಮೇಲೆ ತಿಳಿಸಿದ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಚೆನ್ನಾಗಿ ಗೊಟಾಯಿಸಿ.
* ಈ ಲೇಪನವನ್ನು ಒಂದು ಬೋಗುಣಿಯಲ್ಲಿ ಸಂಗ್ರಹಿಸಿ
* ಈಗ ತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖಕ್ಕೆ ಈ ಲೇಪನವನ್ನು ತೆಳುವಾಗಿ ಹಚ್ಚಿ
* ಹಚ್ಚುವ ಸಮಯದಲ್ಲಿ ನಯವಾಗಿ ಮಸಾಜ್ ಮಾಡಿ.
* ಕೆಲವು ನಿಮಿಷ ಮಸಾಜ್ ಮಾಡಿದ ಬಳಿಕ ಲೇಪವನ್ನು ಒಣಗಲು ಬಿಡಿ.
* ಸುಮಾರು ಹದಿನೈದು ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ವಿಧಾನವನ್ನು ಅನುಸರಿಸಿ.



Click it and Unblock the Notifications


