Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮುಖದ ಸೌಂದರ್ಯವನ್ನು ಇಮ್ಮಡಿಸುವ ಹಣ್ಣುಗಳ ಜ್ಯೂಸ್..
ಸಹಜ ಸೌಂದರ್ಯಕ್ಕಿಂತ ಮಿಗಿಲಾದ ಸೌಂದರ್ಯ ಇನ್ನೊಂದಿಲ್ಲ. ಆದರೆ ಹೆಚ್ಚಿನವರು ಪ್ರಸಾದನಗಳ ಮೂಲಕ ಮಾತ್ರವೇ ತಮ್ಮ ಸೌಂದರ್ಯವೃದ್ಧಿ ಸಾಧ್ಯ ಎಂದು ತಿಳಿದಿದ್ದಾರೆ. ಇವರು ನಿತ್ಯವೂ ಮೇಕಪ್‌ನ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಬಿಸಿಲು ಮತ್ತಿತರ ಕಾರಣದಿಂದ ಚರ್ಮದ ಬಣ್ಣ ಗಾಢವಾಗುತ್ತದೆ. ಈ ವರ್ಣವನ್ನು ತೋರದಿರಲು ದಪ್ಪನಾಗಿ ಹಚ್ಚುವ ಮೇಕಪ್ ಆಕ್ಷಣಕ್ಕೆ ಮುಖದ ಬಣ್ಣವನ್ನು ಪ್ರಖರಗೊಳಿಸಿದರೂ ಸತತ ಬಳಕೆಯಿಂದ ಚರ್ಮ ತನ್ನ ಸಹಜ ಗುಣವನ್ನೇ ಕಳೆದುಕೊಳ್ಳಬಹುದು. ಇದರಲ್ಲಿರುವ ಹಾನಿಕಾರಕ ರಾಸಾಯನಿಕಗಳು ಚರ್ಮಕ್ಕೆ ಅನುಕೂಲಕ್ಕಿಂತ ಕೆಟ್ಟದ್ದನ್ನೇ ಮಾಡಬಹುದು.
ಆದ್ದರಿಂದ ಸಹಜ ಸೌಂದರ್ಯ ಪಡೆಯುವ ನಿಟ್ಟಿನಲ್ಲಿ ಪೋಷಣೆ ಪಡೆಯುವುದೇ ಜಾಣತನದ ಕ್ರಮ. ಚರ್ಮದ ಬಣ್ಣವನ್ನು ಸಹಜವರ್ಣದತ್ತ ತರಲು ನಿಸರ್ಗ ಕೆಲವೊಂದು ಹಣ್ಣುಗಳನ್ನು ನೀಡಿದೆ. ಇದರ ರಸಗಳ ಬಳಕೆಯಿಂದ ಬಿಸಿಲಿಗೆ ಕಪ್ಪಗಾಗಿದ್ದ ಬಣ್ಣ ಸಹಜವರ್ಣದತ್ತ ತಿರುಗಲು ಸಾಧ್ಯವಾಗುತ್ತದೆ. ಇವು ಚರ್ಮದ ಬಣ್ಣವನ್ನು ಹಿಂದೆ ತರುವ ಜೊತೆಗೇ ಕಲೆಗಳನ್ನು ನಿವಾರಿಸುತ್ತದೆ ಮತ್ತು ಗಾಯಗಳ ಮತ್ತು ಮೊಡವೆಗಳಿಂದ ಮೂಡಿದ್ದ ಗೀರುಗಳ ಗುರುತುಗಳನ್ನೂ ನಿವಾರಿಸಲು ಸಾಧ್ಯವಾಗುತ್ತದೆ.
ಲಿಂಬೆ, ದಾಳಿಂಬೆ, ಪಪ್ಪಾಯಿ ಮೊದಲಾದವುಗಳಲ್ಲಿ ನೈಸರ್ಗಿಕ ಆಮ್ಲ ಮತ್ತು ಕಿಣ್ವಗಳಿದ್ದು ಇವು ಚರ್ಮದ ಬಣ್ಣವನ್ನು ತಿಳಿಗೊಳಿಸಲು ನೆರವಾಗುತ್ತದೆ. ಚರ್ಮಕ್ಕೆ ಆರೈಕೆ ನೀಡುವ ಇಂತಹ ಹಣ್ಣುಗಳ ಬಗ್ಗೆ ಬೋಲ್ಡ್ ಸ್ಕೈ ತಂಡ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಷೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ...

ಲಿಂಬೆ ರಸ
ಚರ್ಮದ ಬಣ್ಣವನ್ನು ತಿಳಿಗೊಳಿಸಲು ಲಿಂಬೆರಸ ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಸಿಟ್ರಿಕ್ ಆಮ್ಲ ಚರ್ಮದ ಬಣ್ಣವನ್ನು ಗಾಢಗೊಳಿಸುವ ಮೆಲನಿನ್ ಎಂಬ ವರ್ಣದ್ರವ್ಯಗಳ ಪ್ರಭಾವವನ್ನು ಕಡಿಮೆಗೊಳಿಸುವ ಮೂಲಕ ಬಣ್ಣ ಸಹಜವರ್ಣದತ್ತ ತಿರುಗಲು ನೆರವಾಗುತ್ತದೆ. ಲಿಂಬೆಯಲ್ಲಿರುವ ವಿಟಮಿನ್ ಸಿ ಕಲೆ ಮತ್ತು ಗೀರುಗಳನ್ನು ನಿವಾರಿಸಲು ನೆರವಾಗುತ್ತದೆ.

ನೆಲ್ಲಿಕಾಯಿ
ನೆಲ್ಲಿಕಾಯಿ ಅಥವಾ ಆವ್ಲಾದಲ್ಲಿ ವಿಟಮಿನ್ ಸಿ, ಎ ಮತ್ತು ಆಂಟಿಆಕ್ಸಿಡೆಂಟುಗಳಿವೆ. ಇವೆಲ್ಲವೂ ಚರ್ಮಕ್ಕೆ ಅತಿ ಅಗತ್ಯವಾದ ಪೋಷಕಾಂಶಗಳಾಗಿದ್ದು ಚರ್ಮದ ಬಣ್ಣವನ್ನು ತಿಳಿಗೊಳಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೇ ಕಲೆಗಳು ಮತ್ತು ಗೀರುಗಳ ಗುರುತನ್ನೂ ನಿವಾರಿಸಲು ನೆರವಾಗುತ್ತವೆ.

ಕಿತ್ತಳೆ
ಕಿತ್ತಳೆರಸದ ನಿಯಮಿತ ಸೇವನೆಯಿಂದ ಚರ್ಮದ ವರ್ಣ ಸಹಜವರ್ಣದತ್ತ ತಿರುಗಲು ಸಾಧ್ಯವಾಗುತ್ತದೆ. ಇದಕ್ಕೆ ಕಿತ್ತಳೆ ರಸದಲ್ಲಿರುವ ವಿಟಮಿನ್ ಎ ಮತ್ತು ಸಿ ಕಾರಣ. ಉತ್ತಮ ಪರಿಣಾಮಕ್ಕಾಗಿ ಕಿತ್ತಳೆ ರಸದೊಂದಿಗೆ ಕೊಂಚ ಜೇನುತುಪ್ಪ ಸೇರಿಸಿ ಕುಡಿಯಬೇಕು. ಪ್ರತಿದಿನ ಒಂದು ಲೋಟ ಕಿತ್ತಳೆ ರಸವನ್ನು ಕುಡಿಯುವ ಮೂಲಕ ರೋಗನಿರೋಧಕ ಶಕ್ತಿಯೂ ಬಹಳವಾಗಿ ಹೆಚ್ಚುತ್ತದೆ.

ಪಪ್ಪಾಯಿ ಹಣ್ಣು
ಒಂದು ವೇಳೆ ಮುಖದಲ್ಲಿ ಮೊಡವೆಗಳು ಒಡೆದು ಗಾಢವಾದ ಕಲೆಗಳು ಮೂಡಿದ್ದರೆ ಇದನ್ನು ನಿವಾರಿಸಲು ಪೊಪ್ಪಾಯಿ ಉತ್ತಮ ಆಯ್ಕೆಯಾಗಿದೆ. ಅಲ್ಲದೇ ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳಿಗೂ ಪೊಪ್ಪಾಯಿ ಉತ್ತಮವಾಗಿದೆ. ಇದರಲ್ಲಿರುವ ಪಪಾಯಿನ್ ಎಂಬ ಕಿಣ್ವ ಚರ್ಮದ ಬಣ್ಣ ಬದಲಿಸಿ ಸಹಜವರ್ಣ ಪಡೆಯಲು ನೆರವಾಗುತ್ತದೆ. ಅಲ್ಲದೇ ಚೆನ್ನಾಗಿ ಹಣ್ಣಾದ ಪಪ್ಪಾಯಿ ಹಣ್ಣಿನ ತಿರುಳನ್ನು ಅರೆದು ಮುಖಕ್ಕೆ ದಪ್ಪನಾದ ಲೇಪನದಂತೆ ನಿತ್ಯವೂ ಹಚ್ಚುವ ಮೂಲಕ ಕೆಲವೇ ದಿನಗಳಲ್ಲಿ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ.

ದಾಳಿಂಬೆ
ಚರ್ಮದ ವರ್ಣ ಬದಲಿಸುವ ಶಕ್ತಿ ಇರುವ ಇನ್ನೊಂದು ಹಣ್ಣು ಎಂದರೆ ದಾಳಿಂಬೆ. ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಎ ಮತ್ತು ಕಬ್ಬಿಣದ ಅಂಶವಿದೆ. ಇದರ ರಸ ನೈಸರ್ಗಿಕವಾಗಿ ಚರ್ಮದ ಬಣ್ಣವನ್ನು ಸಹಜವರ್ಣಕ್ಕೆ ತಿರುಗಿಸಲು ಸಮರ್ಥವಾಗಿದೆ. ಅಲ್ಲದೇ ಮುಖದ ಕಲೆಗಳನ್ನು ನಿವಾರಿಸಲೂ ನೆರವಾಗುತ್ತದೆ.



Click it and Unblock the Notifications











