Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಂತಿಯುತ ತ್ವಚೆಗಾಗಿ, ಒಂದಿಷ್ಟು ನೈಸರ್ಗಿಕ ಮನೆಮದ್ದು
ಹಿಂದಿನಿಂದಲೂ ಬಳಸುತ್ತಿರುವ ನೈಸರ್ಗಿಕ ಸೌಂದರ್ಯ ಉತ್ಪನ್ನಗಳು, ಇಂದಿನ ಕಾಲದಲ್ಲೂ ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಸಹಾಯಕ ಎಂದೆನಿಸಿವೆ. ಮನೆಯಲ್ಲೇ ನಾವು ಸರಳವಾಗಿ ಸಿದ್ಧಪಡಿಸಬಹುದಾದ ನೈಸರ್ಗಿಕ ಉತ್ಪನ್ನಗಳು ತ್ವಚೆಯ ಕುಂದು ಕೊರತೆಗಳನ್ನು ನಿವಾರಿಸುವುದರ ಜೊತೆಗೆ ಹೊಳೆಯುವ ಕಾಂತಿಯನ್ನು ನೀಡುತ್ತವೆ.
ಹಾಗಿದ್ದರೆ ನಿಮ್ಮ ಮುಖದ ಕಾಂತಿಯನ್ನು ವರ್ಧಿಸಿ ನಿಮ್ಮನ್ನು ಚೆಲುವೆಯರನ್ನಾಗಿಸುವ ಮನೆಯಲ್ಲೇ ಸಿದ್ಧಪಡಿಸಬಹುದಾದ ಸೌಂದರ್ಯ ಪರಿಹಾರಗಳನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ಮುಖದಲ್ಲಿನ ಕಪ್ಪು ಚುಕ್ಕೆ, ಮೊಡವೆ ಮತ್ತು ಜಿಡ್ಡಿನಂಶಗಳನ್ನು ಈ ನೈಸರ್ಗಿಕ ಪರಿಹಾರಕಗಳು ನಿವಾರಿಸಿ ತ್ವಚೆಯನ್ನು ಸುಕೋಮಲಗೊಳಿಸುತ್ತವೆ. ಹಾಗಿದ್ದರೆ ತಡ ಮಾಡದೇ ಕೆಳಗೆ ನಾವು ನೀಡಿರುವ ನೈಸರ್ಗಿಕ ಅಂಶಗಳನ್ನು ಇಂದೇ ಬಳಸಿ ಪ್ರಯೋಜನ ಪಡೆದುಕೊಳ್ಳಿ.

ಲಿಂಬೆ ರಸ ಮತ್ತು ಕಡಲೆಕಾಯಿ ಎಣ್ಣೆ
ಕಪ್ಪು ಕಲೆಗಳು ಮೊತ್ತು ಮೊಡವೆಗಳನ್ನು ನಿವಾರಿಸಲು ಇದನ್ನು ಬಳಸಲಾಗುತ್ತದೆ. ಲಿಂಬೆ ರಸ ಮತ್ತು ಕಡಲೆಕಾಯಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರ ಮಾಡಿ ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ. ನಂತರ 15 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಿ.
ಜೇನು ಮತ್ತು ದಾಲ್ಚಿನ್ನಿ ಹುಡಿ
ಪುದೀನಾ ಮತ್ತು ಸೌತೆಕಾಯಿ ರಸ
ಪ್ರತೀ ರಾತ್ರಿ ಮುಖಕ್ಕೆ ಪುದೀನಾ ಮತ್ತು ಸೌತೆಕಾಯಿ ರಸದ ಪ್ಯಾಕ್ ಅನ್ನು ಹಾಕಿಕೊಳ್ಳಿ. ಸೌತೆಕಾಯಿ ರಸವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ತಂಪಿನ ಅನುಭವವಾಗುತ್ತದೆ ಮತ್ತು ಹೊಳೆಯುವ ತ್ವಚೆಯನ್ನು ನೀವು ಪಡೆದುಕೊಳ್ಳುತ್ತೀರಿ.
ಲೆಟಿಸ್ ಮತ್ತು ಕ್ಯಾರೇಟ್ ರಸ
ಲೆಟಿಸ್ ಮತ್ತು ಕ್ಯಾರೇಟ್ ರಸವನ್ನು ಬಳಸಿಕೊಂಡು ಹೊಳೆಯುತ್ತಿರುವ ತ್ವಚೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ತ್ವಚೆಯನ್ನು ಹೈಡ್ರೇಟ್ ಮಾಡುವುದರ ಜೊತೆಗೆ ತ್ವಚೆಯ ಸಮಸ್ಯೆಗಳನ್ನು ನಿವಾರಿಸುವ ಅದ್ಭುತ ಫೇಸ್ ಪ್ಯಾಕ್ ಆಗಿ ಕೂಡ ಇದು ಕಾರ್ಯನಿರ್ವಹಿಸುತ್ತದೆ.
ಸಿಟ್ರಸ್ ಇರುವ ಹಣ್ಣಿನ ರಸ ಮತ್ತು ನೀರು
ಸಿಟ್ರಸ್ ಇರುವ ಹಣ್ಣು ಎಂದಾಗ ನೆನಪಾಗುವುದೇ ಲಿಂಬೆಯಾಗಿದೆ. ನೈಸರ್ಗಿಕ ಎಕ್ಸ್ಫೋಲಿಯೇಟ್ನಂತೆ ಕೆಲಸ ಮಾಡುವ ಇದು ಚರ್ಮದ ಭಗ್ನಾವಶೇಷಗಳನ್ನು ತೊಡೆದು ಹಾಕಿ ರಂಧ್ರಗಳನ್ನು ತೆರವುಗೊಳಿಸುತ್ತದೆ. ಹತ್ತಿಯ ಉಂಡೆಗಳನ್ನು ಬಳಸಿಕೊಂಡು ಲಿಂಬೆ ರಸವನ್ನು ಮುಖಕ್ಕೆ ಹಚ್ಚಿಕೊಳ್ಳಿ. 10 ನಿಮಿಷಗಳ ನಂತರ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.
ನಾವು ಮೇಲೆ ತಿಳಿಸಿರುವ ರೆಸಿಪಿಗಳ ಹೊರತಾಗಿಯೂ ದಿನಕ್ಕೆ 8 ರಿಂದ 10 ಲೋಟ ನೀರು ಕುಡಿಯುವುದು ಅತ್ಯವಶ್ಯಕವಾಗಿದೆ. ವ್ಯಾಯಮ ಮಾಡುವುದು, ನ್ಯೂಟ್ರಿಶಿಯಸ್ ಆಹಾರಗಳ ಸೇವನೆಯನ್ನು ಮಾಡುವುದರಿಂದ ಹೊಳೆಯುವ ಕಲೆಗಳಿಲ್ಲದ ಸ್ವಚ್ಛ ತ್ವಚೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.



Click it and Unblock the Notifications



