Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾಹ್ ! ಮುಪ್ಪಿನ ನೆರಿಗೆಗಳನ್ನು ನಿವಾರಿಸುವ ಅದ್ಭುತ ಮನೆಮದ್ದುಗಳು
Skin Care
oi-Staff
By Super
ಒಂದು ವೇಳೆ ನಿಮ್ಮ ಚರ್ಮ ಎಣ್ಣೆಯುಕ್ತವಾಗಿದ್ದರೆ ಸೂಕ್ತ ಮುಖಲೇಪದಿಂದ (ಫೇಸ್‌ಪ್ಯಾಕ್) ಈ ತೊಂದರೆಯನ್ನೂ ಹೋಗಲಾಡಿಸಬಹುದು. ಅಲ್ಲದೇ ಈ ಲೇಪಗಳು ಸುಲಭವಾಗಿ ದೊರಕುವಂತಹದ್ದೂ ಮತ್ತು ಕಡಿಮೆ ಬೆಲೆಯವೂ ಆಗಿರುವುದರಿಂದ ಎಲ್ಲರೂ ಅನುಸರಿಸಬಹುದಾಗಿದೆ. ಇಂತಹ ಕೆಲವು ಮುಖಲೇಪಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆರೋಗ್ಯವಂತ ಕೇಶಕ್ಕಾಗಿ ಪರಿಪೂರ್ಣ ಹೇರ್ ಮಸಾಜ್ ಸಲಹೆಗಳು
ಜೇನು

ಇದುವರೆಗೆ ನೀವು ಯಾವುದೇ ಮುಖಲೇಪವನ್ನು ಪ್ರಯತ್ನಿಸದೇ ಇದ್ದಲ್ಲಿ ಜೇನುತುಪ್ಪದಿಂದ ಪ್ರಾರಂಭಿಸುವುದು ಉತ್ತಮ. ಚರ್ಮ ಇತ್ತೀಚೆಗೆ ನೆರಿಗೆ ಬೀಳಲು ಪ್ರಾರಂಭವಾಗಿದ್ದರೆ ಜೇನು ಉತ್ತಮ ಆರೈಕೆಯಾಗಿದೆ. ಇದಕ್ಕಾಗಿ ಮುಖವನ್ನು ಚೆನ್ನಾಗಿ ಮೃದುವಾದ ಸೋಪಿನಿಂದ ತೊಳೆದುಕೊಂಡು ಸ್ವಚ್ಛವಾದ ಬಟ್ಟೆಯಿಂದ ಒರೆಸಿಕೊಳ್ಳಿ. ಬಳಿಕ ಜೇನುತುಪ್ಪದ ಕೆಲವು ಹನಿಗಳನ್ನು ಎರಡೂ ಹಸ್ತಗಳ ಮೇಲೆ ಸುರಿದು ಉಜ್ಜಿಕೊಂಡು ಮುಖಕ್ಕೆ ತೆಳುವಾಗಿ ಹಚ್ಚಿಕೊಳ್ಳಿ. ಹುಬ್ಬು, ಕಣ್ಣು ಮತ್ತು ಕೂದಲುಗಳಿಗೆ ಜೇನು ತಾಕದಂತೆ ಎಚ್ಚರವಹಿಸಿ. ಬಳಿಕ ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ (ಜೇನು ಒಣಗುವವರೆಗೆ) ಹಾಗೇ ಬಿಟ್ಟು ಮೊತ್ತೊಮ್ಮೆ ಕೇವಲ ನೀರಿನಿಂದ ತೊಳೆದುಕೊಳ್ಳಿ (ಸೋಪು ಹಚ್ಚಬಾರದು). ಈ ವಿಧಾನದಿಂದ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರೆತು ತನ್ನ ಸಹಜ ಸೆಳೆತವನ್ನು ಪಡೆದುಕೊಳ್ಳುತ್ತದೆ ಹಾಗೂ ನೆರಿಗೆಗಳು ದೂರಾಗುತ್ತವೆ. ಜೊತೆಗೆ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಕುಳಿತಿದ್ದ ಧೂಳು ಸೋಪಿನಿಂದಲೂ ಹೋಗದೇ ಇದ್ದದ್ದು ಈಗ ಸುಲಭವಾಗಿ ತೊಲಗುತ್ತದೆ. ಇದು ಒಣಚರ್ಮ ಮತ್ತು ಎಣ್ಣೆಚರ್ಮದವರೂ ಬಳಸಬಹುದು.
ಅಕ್ರೋಟು, ಬಾದಾಮಿ ಎಣ್ಣೆ ಮತ್ತು ಮೊಸರು
ಈ ಮೂರೂ ಸಾಮಾಗ್ರಿಗಳು ಚರ್ಮದ ಕಾಂತಿಯನ್ನು ಮರಳಿಸಲು ಮತ್ತು ನೆರಿಗೆಮುಕ್ತವಾಗಿಸಲು ಉತ್ತಮವಾಗಿವೆ. ಇದಕ್ಕಾಗಿ ಎರಡು ಅಕ್ರೋಟಿನ ತಿರುಳನ್ನು ನುಣ್ಣಗೆ ಕುಟ್ಟಿ ಪುಡಿಮಾಡಿ (ಮಿಕ್ಸಿ ಬಳಸಬೇಡಿ, ಇದರಿಂದ ಬಿಸಿಯಾಗಿ ಇದರ ಪೋಷಕಾಂಶಗಳು ಕಡಿಮೆಯಾಗುತ್ತವೆ) ಸಮಪ್ರಮಾಣದ ಮೊಸರಿನೊಂಗಿದೆ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಕೆಲವು ಬಾದಾಮಿ ಎಣ್ಣೆಯ ಹನಿಗಳನ್ನು ಸೇರಿಸಿ. (ಸುಮಾರು ಒಂದು ಚಮಚಕ್ಕೆ ಒಂದು ಹನಿಯ ಪ್ರಮಾಣದಲ್ಲಿ). ಈ ಲೇಪನವನ್ನು ರಾತ್ರಿ ಮಲಗುವ ಮುನ್ನ ದಪ್ಪನಾಗಿ ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. (ಸೋಪು ಬಳಸಬಾರದು). ಇದನ್ನು ಎಣ್ಣೆಚರ್ಮದವರೂ ಒಣಚರ್ಮದವರೂ ಸಮಾನವಾಗಿ ಬಳಸಬಹುದು. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.
ಮೊಟ್ಟೆ
ನಾಟಿ ಮೊಟ್ಟೆಯ ಬಿಳಿಭಾಗವನ್ನು ಬೇರ್ಪಡಿಸಿ. ಮೊದಲು ನೀವು ಸಹಿಸುವಷ್ಟು ಬಿಸಿನೀರಿನಿಂದ ಮುಖವನ್ನು ನಾಲ್ಕೈದು ಬಾರಿ ತೊಳೆದುಕೊಳ್ಳಿ. ಇದರಿಂದ ಮುಖದ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ರಾತ್ರಿ ಮಲಗುವ ಮುನ್ನ ಮೊಟ್ಟೆಯ ಬಿಳಿಭಾಗವನ್ನು ತೆಳುವಾಗಿ ಲೇಪಿಸಿ ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದನ್ನು ಎಣ್ಣೆಚರ್ಮದವರೂ ಒಣಚರ್ಮದವರೂ ಸಮಾನವಾಗಿ ಬಳಸಬಹುದು. ವಾರಕ್ಕೆ ಮೂರರಿಂದ ನಾಲ್ಕು ಬಾರಿ ಈ ವಿಧಾನವನ್ನು ಪುನರಾವರ್ತಿಸಿ.
Comments
English summary



Click it and Unblock the Notifications


