Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಪುರಾತನ ಕಾಲದ ಸೌಂದರ್ಯ ರಹಸ್ಯ-ಮುಲ್ತಾನಿ ಮಿಟ್ಟಿ
ಹೆಂಗಳೆಯರಿಗೆ ತಮ್ಮ ಸೌಂದರ್ಯದ ಮೇಲೆ ಏನೋ ಒಂದು ವಿಶಿಷ್ಟ ಅಭಿಮಾನ. ತಾವು ಸುಂದರವಾಗಿ ಕಾಣಬೇಕು, ಮುಖದಲ್ಲಿ ಮೊಡವೆ ಕಲೆಗಳು ಇರಬಾರದು, ಕಣ್ಣ ಸುತ್ತ ಕಪ್ಪು ಇರಬಾರದು ಮುಂತಾಗಿ ತಮ್ಮ ಮುಖದ ಸೌಂದರ್ಯಕ್ಕೆ ಪ್ರಮುಖ ಆದ್ಯತೆಯನ್ನು ನೀಡುತ್ತಾರೆ. ಅಲ್ಲದೆ ತ್ವಚೆಯ ಸೌಂದರ್ಯ ವೃದ್ಧಿಗಾಗಿ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಉತ್ಪನ್ನಗಳನ್ನು ಬಳಸುವುದು ನಮಗೆ ಅಭ್ಯಾಸವಾಗಿ ಬಿಟ್ಟಿದೆ.
ಆದರೆ ಮಣ್ಣನ್ನು ಬಳಸಿಕೊಂಡು ತ್ವಚೆಯ ಸೌಂದರ್ಯವನ್ನು ವೃದ್ಧಿಸಬಹುದು ಎನ್ನುವುದು ನಿಮಗೆ ತಿಳಿದಿದೆಯಾ? ಇದನ್ನು ಕೇಳಿ ನಿಮಗೆ ಅಚ್ಚರಿಯಾಗಬಹುದು ಅಲ್ಲವೇ. ಅದರೆ ಮುಲ್ತಾನಿ ಮಿಟ್ಟಿಗೆ ಈ ಶಕ್ತಿಯಿದೆ. ಪುರಾತನ ಕಾಲದಿಂದಲೂ ಇದನ್ನು ಸೌಂದರ್ಯ ವೃದ್ಧಿಸಲು ಬಳಸುತ್ತಿದ್ದರು. ಅಲ್ಲದೆ ಇದು ಕೈಗೆಟಕುವ ದರದಲ್ಲಿ ಸಿಗುವ ಕಾರಣ ಪ್ರತಿಯೊಬ್ಬರು ಇದನ್ನು ಬಳಸಲು ಇಷ್ಟಪಡುತ್ತಾರೆ.
ಅಷ್ಟೇ ಏಕೆ ಇದನ್ನು ಹೇಗೆ ಬಳಸಬಹುದು ಎನ್ನುವ ಬಗ್ಗೆ ಚಿಂತಿಸದೆ ನೇರವಾಗಿ ಮುಖಕ್ಕೆ ಹಚ್ಚಿಕೊಂಡು ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು. ಆದರೆ ಇತರ ಕೆಲವೊಂದು ಸಾಮಗ್ರಿಗಳನ್ನು ಅದಕ್ಕೆ ಸೇರಿಸುವುದರಿಂದ ನಿಮ್ಮ ಮುಖದ ಕಾಂತಿಯನ್ನು ಮತ್ತಷ್ಟು ವೃದ್ಧಿಸಬಹುದಾಗಿದೆ. ಫುಲ್ಲರ್ಸ್ ಅರ್ಥ್ ಎಂದು ಕರೆಯಲ್ಪಡುವ ಮುಲ್ತಾನಿ ಮಿಟ್ಟಿಯಲ್ಲಿ ಚರ್ಮದ ಸೌಂದರ್ಯವರ್ಧಕ ಗುಣಗಳಿವೆ. ಇದು ಮುಖದ ಮೇಲಿನ ಎಣ್ಣೆ ಮತ್ತು ಕೊಳೆಯನ್ನು ತೆಗೆದು ಹಾಕಿ ಮುಖವನ್ನು ಸ್ವಚ್ಛಗೊಳಿಸುತ್ತದೆ. ತ್ವಚೆಯ ಸೌಂದರ್ಯ ಹೆಚ್ಚಿಸಲು ಬರೀ 15 ದಿನಗಳು ಸಾಕು!
ಅಲ್ಲದೆ ಇದನ್ನು ಫೇಸ್ ಮಾಸ್ಕ್ ಆಗಿ ಬಳಸಿಕೊಂಡು ತ್ವಚೆಯ ನೆರಿಗೆಯನ್ನೂ ಕೂಡ ದೂರಗೊಳಿಸಬಹುದಾಗಿದೆ. ಮುಖದಲ್ಲಿ ಮೊಡವೆ ಇರುವವರು ಮುಲ್ತಾನಿ ಮಿಟ್ಟಿಯನ್ನು ಬಳಸಿಕೊಂಡು ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಇದು ಬ್ಯಾಕ್ಟೀರಿಯಾವನ್ನು ಹೊಡೆದೋಡಿಸಿ ನೆರಿಗೆ ಬರದಂತೆ ತಡೆಯುತ್ತದೆ. ಮುಲ್ತಾನಿ ಮಿಟ್ಟಿಯನ್ನು ಮುಖಕ್ಕೆ ಬಳಸಿಕೊಳ್ಳುವುದು ಹೇಗೆ? ಮುಲ್ತಾನಿ ಮಿಟ್ಟಿಯನ್ನು ನೀವು ಪ್ರತಿದಿನವೂ ಬಳಸುತ್ತೀರಾ? ನಾವು ಇದರ ಬಗ್ಗೆ ಚರ್ಚಿಸುವ. ಅಪ್ಸರೆಯಂತಹ ತ್ವಚೆಗಾಗಿ ಬಳಸಿ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಮುಲ್ತಾನಿ ಮಿಟ್ಟಿಯ ಪೇಸ್ಟ್
ಮುಲ್ತಾನಿ ಮಿಟ್ಟಿ ಮುಲ್ತಾನಿ ಮಿಟ್ಟಿಯನ್ನು ನೀರಿನಲ್ಲಿ ಕಲಸಿಕೊಂಡು ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಒಂದು ಗಂಟೆಯ ನಂತರ ಮುಖವನ್ನು ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೊಮ್ಮೆ ಮಾಡಿ ನಿಮಗೆ ಅದ್ಭುತ ಫಲಿತಾಂಶ ದೊರೆಯುವುದು ಖಂಡಿತ. ಮುಲ್ತಾನಿ ಮಿಟ್ಟಿ ನಿಮ್ಮ ತ್ವಚೆಯ ಚರ್ಮದ ರಚನೆಯನ್ನು ಸುಧಾರಿಸುತ್ತದೆ. ಇದು ಅನಗತ್ಯ ತೇಪೆಗಳನ್ನು ತೆಗೆದು ಚರ್ಮವನ್ನು ಮೃದುವಾಗಿಸುತ್ತದೆ. ಇದರಿಂದ ನಿಮ್ಮ ತ್ವಚೆಯ ಚರ್ಮ ತುಂಬಾ ಸುಸಂಗತ ಮತ್ತು ಬಿಳಿಯಾಗುತ್ತದೆ. ಚರ್ಮದ ಕಾಂತಿ ಹಾಗೂ ರಚನೆ, ಅದರ ಆರೋಗ್ಯಕ್ಕಾಗಿ ಮುಲ್ತಾನಿ ಮಿಟ್ಟಿಯನ್ನು ನಿಯಮಿತವಾಗಿ ಬಳಸಬೇಕು.

ಬಾದಾಮಿಯೊಂದಿಗೆ
ಒಂದು ಬಾದಾಮಿಯನ್ನು ಪುಡಿ ಮಾಡಿ ಮತ್ತು ಇದಕ್ಕೆ ಒಂದು ಹನಿ ಹಾಲು ಹಾಕಿ. ಈ ಮಿಶ್ರಣಕ್ಕೆ ಸ್ವಲ್ಪ ಮುಲ್ತಾನಿ ಮಿಟ್ಟಿಯನ್ನು ಹಾಕಿ ಫೇಸ್ ಪ್ಯಾಕ್ ಮಾಡಿ. ಇದರಿಂದ ನಿಮ್ಮ ಚರ್ಮ ಮೃದುವಾಗುತ್ತದೆ.

ಮೊಸರಿನೊಂದಿಗೆ
ಕೆಲವು ಪುದೀನಾ ಎಲೆಗಳನ್ನು ಮಿಕ್ಸಿಗೆ ಹಾಕಿ ಅರೆದು ಅದಕ್ಕೆ ಸ್ವಲ್ಪ ಮೊಸರು ಸೇರಿಸಿಕೊಳ್ಳಿ. ಈ ಮಿಶ್ರಣವನ್ನು ಮಿಲ್ತಾನಿ ಮಿಟ್ಟಿಗೆ ಹಾಕಿ ಫೇಸ್ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖದ ಮೇಲಿನ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ.

ರೋಸ್ ವಾಟರ್
ಮುಲ್ತಾನಿ ಮಿಟ್ಟಿಯನ್ನು ರೋಸ್ ವಾಟರ್ ನೊಂದಿಗೆ ಮಿಶ್ರಣ ಮಾಡಿಕೊಳ್ಳಿ ಮತ್ತು ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಒಣಗಿದ ಬಳಿಕ ತೊಳೆಯಿರಿ. ಸಾಮಾನ್ಯವಾಗಿ ಈ ಫೇಸ್ ಪ್ಯಾಕ್ ಎಣ್ಣೆಯುಕ್ತ ತ್ವಚೆಯುಳ್ಳವರಿಗೆ ಪರಿಣಾಮಕಾರಿ ಪ್ರಯೋಜನ ಬೀರುತ್ತದೆ.

ಪಪ್ಪಾಯಿಯೊಂದಿಗೆ
ಒಂದು ಚಮಚ ಪಪ್ಪಾಯಿ ಹಣ್ಣಿನ ಹೋಳನ್ನು ತೆಗೆದು ಜೇನಿನೊಂದಿಗೆ ಸೇರಿಸಿ ಬಳಿಕ ಈ ಮಿಶ್ರಣವನ್ನು ಮುಲ್ತಾನಿ ಮಿಟ್ಟಿ ಜತೆ ಸೇರಿಸಿಕೊಳ್ಳಿ. ಪ್ರತಿ ದಿನ ಬಳಸುತ್ತಾ ಬನ್ನಿ, ಖಂಡಿತವಾಗಿಯೂ ಈ ಫೇಸ್ ಪ್ಯಾಕ್ ತ್ವಚೆಯ ಕಾಂತಿಯನ್ನು ಹೆಚ್ಚಿಸುವಲ್ಲಿ ಎರಡು ಮಾತಿಲ್ಲ..

ಗಂಧ
ಒಂದು ಚಮಚ ಟೊಮೇಟೊ ಜ್ಯೂಸ್, ಗಂಧದ ಪೇಸ್ಟ್, ಮುಲ್ತಾನಿ ಮಿಟ್ಟಿಯನ್ನು ಸೇರಿಸಿಕೊಂಡು ಫೇಸ್ ಪ್ಯಾಕ್ ಮಾಡಿಕೊಂಡು ಪ್ರತಿದಿನ ತ್ವಚೆಗೆ ಹಚ್ಚುತ್ತಾ ಬಂದರೆ, ತ್ವಚೆಯ ಕಾಂತಿ ಇನ್ನಷ್ಟು ಕಂಗೊಳಿಸುತ್ತದೆ

ಹಾಲು
ಮುಲ್ತಾನಿ ಮಿಟ್ಟಿಯ ಫೇಸ್ ಪ್ಯಾಕ್‌ಗೆ ಸ್ವಲ್ಪ ಹಾಲನ್ನು ಸೇರಿಸಿಕೊಳ್ಳಿ. ಇದರಿಂದ ನಿಮ್ಮ ಚರ್ಮವು ತೇವಾಂಶವನ್ನು ಪಡೆದು ಕಾಂತಿಯನ್ನು ನೀಡುತ್ತದೆ.



Click it and Unblock the Notifications
