Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತ್ವಚೆಯ ಕಾಂತಿಗೆ ಬೇಕು, ಗಿಡಮೂಲಿಕೆಗಳ ಆರೈಕೆ
ಆರೈಕೆಯ ವಿಷಯ ಬಂದಾಗ ಹೆಚ್ಚಿನ ಸಮಯ ಕಬಳಿಸುವ ಮತ್ತು ಹೆಚ್ಚಿನ ಆರೈಕೆ ಬೇಡುವ ಅಂಗಗಳೆಂದರೆ ಮುಖ ಮತ್ತು ಕೇಶ. ಇಂದಿನ ವ್ಯಸ್ತ ಜೀವನದಲ್ಲಿ ಈ ಆರೈಕೆಗೆ ಸಮಯ ನೀಡಲು ಎಲ್ಲರಿಗೂ ಸಾಧ್ಯವಿಲ್ಲ. ಇವರಿಗೆಂದೇ ನಗರದ ತುಂಬಾ ಸಿಂಗಾರ ಮಳಿಗೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕೇಶದ ಆರೈಕೆಗಾಗಿ ಇಲ್ಲಿ ವಿವಿಧ ರೂಪದ ಸೇವೆಗಳು ಲಭ್ಯವಿವೆ. ಆದರೆ ಇವುಗಳಿಂದ ಅಡ್ಡಪರಿಣಾಮವೇ ಹೊರತು, ಯಾವುದೇ ಲಾಭಗಳಿಲ್ಲ.
ಹಾಗಾಗಿ ಬೋಲ್ಡ್ ಸ್ಕೈ ಇಂದು ತ್ವಚೆಯ ಆರೋಗ್ಯವನ್ನು ಕಾಪಾಡುವ ನೈಸರ್ಗಿಕ ಸೌಂದರ್ಯವರ್ಧಕಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೇವೆ. ಇದರ ಪೋಷಕಾಂಶಗಳು ಚರ್ಮದ ಒಳಗಿನಿಂದ ಪೋಷಣೆ ನೀಡುವುದರಿಂದ ಈ ಆರೈಕೆ ಬಹುಕಾಲ ಬಾಳುವಂತಹದ್ದೂ, ಅಪ್ಪಟ ನೈಸರ್ಗಿಕ ಮತ್ತು ಸಹಜವೂ ಆಗಿರುತ್ತದೆ. ಇದು ನಿಮ್ಮ ಸಹಜ ಸೌಂದರ್ಯವನ್ನು ವೃದ್ಧಿಸಿ ಕೃತಕ ಪ್ರಸಾಧನಗಳ ಬಳಕೆಯಿಂದ ಉಂಟಾಗಬಹುದಾಗಿದ್ದ ಅಡ್ಡಪರಿಣಾಮಗಳಿಂದ ಮುಕ್ತಿ ನೀಡುತ್ತದೆ. ಹಾಗಾಗಿ ಸೌಂದರ್ಯವೃದ್ಧಿಗಾಗಿ ನಿಸರ್ಗ ನೀಡಿರುವ ಸಾಮಾಗ್ರಿಗಳನ್ನೇ ಬಳಸಿ ಸಹಜ ಸೌಂದರ್ಯ ಪಡೆಯುವತ್ತ ನಿಮ್ಮ ಚಿತ್ತ ಹರಿಸಿ ಮುಂದೆ ಓದಿ

ಸೌತೆರಸ, ಗುಲಾಬಿ ನೀರು ಮತ್ತು ಗ್ಲಿಸೆರಿನ್
ಒಂದು ಚಿಕ್ಕ ತುಂಡು ಸೌತೆಕಾಯಿಯನ್ನು ತುರಿದು ರಸ ಹಿಂಡಿಕೊಳ್ಳಿ. ಇದಕ್ಕೆ ಸಮಪ್ರಮಾಣದಲ್ಲಿ ಗುಲಾಬಿ ನೀರು ಮತ್ತು ಗ್ಲಿಸೆರಿನ್ ಸೇರಿಸಿ ಮಿಶ್ರಣ ಮಾಡಿ. ಇದನ್ನು ಹತ್ತಿಯುಂಡೆಯ ಸಹಾಯದಿಂದ ಮುಖವನ್ನೆಲ್ಲಾ ಆವರಿಸುವಂತೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಬಿಸಿಲಿನಿಂದ ಬಾಡಿದ್ದ ಚರ್ಮಕ್ಕೆ ಆರೈಕೆ ನೀಡಿ ಸಹಜ ಸೌಂದರ್ಯ ವೃದ್ಧಿಸಲು ನೆರವಾಗುತ್ತದೆ.

ಜೇನು ಮತ್ತು ಕೆನೆ
ಹಾಲಿನ ಕೆನೆ ಮತ್ತು ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ. ಇದನ್ನು ನೇರವಾಗಿ ಮುಖದ ಮೇಲೆ ಹಚ್ಚಿ. ಹತ್ತು ಅಥವಾ ಹದಿನೈದು ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಇದರಿಂದ ಚರ್ಮಕ್ಕೆ ಹೆಚ್ಚಿನ ಆದ್ರತೆ ದೊರೆತು ನಯವಾಗುತ್ತದೆ ಮತ್ತು ಹೊಳಪುಳ್ಳದ್ದಾಗುತ್ತದೆ.

ದ್ರಾಕ್ಷಿಹಣ್ಣು
ದ್ರಾಕ್ಷಿ ಸಹಾ ಚರ್ಮದ ಆರೈಕೆಗೆ ಉತ್ತಮವಾಗಿದೆ. ಸಮಯವಿಲ್ಲದ ಸಂದರ್ಭಗಳಲ್ಲಿ ಒಂದು ದ್ರಾಕ್ಷಿಯನ್ನು ಅರ್ಧವಾಗಿ ಕತ್ತರಿಸಿ ನೇರವಾಗಿ ಚರ್ಮದ ಮೇಲೆ ನಯವಾಗಿ ಒತ್ತಿ ಒರೆಸಿಕೊಳ್ಳಿ. ಇಲ್ಲದಿದ್ದರೆ ನೀರಿಲ್ಲದೇ ಬೀಜ ನಿವಾರಿಸಿದ ದ್ರಾಕ್ಷಿಗಳನ್ನು ಹಾಕಿ ರಸ ಹಿಂಡಿತೆಗೆಯಿರಿ. ಈ ರಸವನ್ನು ಚರ್ಮದ ಮೇಲೆ ನೇರವಾಗಿ ಹಚ್ಚಿ ಸುಮಾರು ಹತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿ.

ದ್ರಾಕ್ಷಿಹಣ್ಣು
ಈ ವಿಧಾನದಿಂದಲೂ ಮೃದುವಾದ ಮತ್ತು ಹೊಳಪುಳ್ಳ ತ್ವಚೆಯನ್ನು ಪಡೆಯಬಹುದು. ಇದಕ್ಕೆ ಕೆಂಪು ದ್ರಾಕ್ಷಿ (ದೊಡ್ಡ ಗಾತ್ರದ) ಉತ್ತಮ. ಕೆಂಪು ದ್ರಾಕ್ಷಿಯಲ್ಲಿರುವ resveratrol ಎಂಬ ಪೋಷಕಾಂಶ ಚರ್ಮದಲ್ಲಿ ನೆರಿಗೆ ಮೂಡುವುದನ್ನು ತಡೆಯುವ ಗುಣ ಹೊಂದಿದೆ.

ಟೀ ಟ್ರೀ ಗಿಡದ ಎಣ್ಣೆ
ಚೂಪು ಎಲೆಗಳ ನೆಲಮಟ್ಟದಲ್ಲಿ ಬೆಳೆಯುವ ಟೀ ಟ್ರೀ ಗಿಡ (ಅಥವಾ ಇಪ್ಪೆ ಗಿಡ) ಮೊಡವೆ ಮತ್ತು ಗಡಸುತನವನ್ನು ನಿವಾರಿಸಲು ಉತ್ತಮವಾದ ಸಸ್ಯವಾಗಿದೆ. ಮಾರುಕಟ್ಟೆಯಲ್ಲಿ ಟೀ ಟ್ರೀ ಆಯಿಲ್ ಎಂಬ ಹೆಸರಿನಲ್ಲಿ ಸಿದ್ಧರೂಪದಲ್ಲಿ ಸಿಗುವ ಈ ಹೂವಿನ ಎಣ್ಣೆಯನ್ನು ಮೊಡವೆಗಳ ಮೇಲೆ ಹಚ್ಚುವುದರಿಂದ ಉತ್ತಮ ಪರಿಣಾಮ ಪಡೆಯಬಹುದು.



Click it and Unblock the Notifications