Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಸ್ಕಿಯ ಮ್ಯಾಜಿಕ್ ಚಿಕಿತ್ಸೆ- ತ್ವಚೆಯ ಮೊಡವೆ ಮಂಗಮಾಯ!
ಹದಿಹರೆಯದವರಿಗೆ ಮೊಡವೆಗಳ ಕಾಟ ಅನಿವಾರ್ಯ. ಇದು ಸುಮ್ಮನೇ ಬಂದು ಹೋಗಿದ್ದರೆ ತೊಂದರೆ ಇರುತ್ತಿರಲಿಲ್ಲ. ಆದರೆ ಇದ್ದಷ್ಟೂ ಹೊತ್ತು ನೋವು, ಒಡೆಯಲೇಬೇಕು ಎಂಬ ಮನದ ತುಡಿತ, ಮಾಗಿದ ಮೇಲೆ ಉಳಿಯುವ ಕಪ್ಪು ಕಲೆ ಕಾಳಜಿಯ ವಿಷಯವಾಗಿದೆ. ಇದಕ್ಕೆ ಹಲವು ಮದ್ದುಗಳಿವೆಯಾದರೂ ತಣ್ಣಗಿನ ಆಲ್ಕೋಹಾಲ್ ಮೊಡವೆಗಳ ಮಟ್ಟಿಗೆ ಮಾತ್ರ ಅತ್ಯುತ್ತಮ ಆರೈಕೆ ನೀಡುತ್ತದೆ.
ನಿತ್ಯವೂ ಕೊಂಚ ಆಲ್ಕೋಹಾಲ್ ಬೆರೆತ ಹತ್ತಿಯಿಂದ ಮೊಡವೆ ಮತ್ತು ಕಲೆಗಳಿವ ಸ್ಥಳಕ್ಕೆ ಹಚ್ಚುತ್ತಾ ಬರುವುದರಿಂದ ಮೊಡವೆ ಕಲೆಯಿಲ್ಲದೇ ಮಾಗುವ ಜೊತೆಗೇ ಹಳೆಯ ಮೊಡವೆಗಳ ಕಾರಣ ಉಳಿದುಕೊಂಡಿದ್ದ ಕಲೆಗಳೂ ಮಾಯವಾಗುತ್ತವೆ. ಸೂಕ್ಷ್ಮ ಚರ್ಮದವರಿಗೆ ಇದು ಕೊಂಚ ಉರಿ ತರಿಸಬಹುದು ಆದರೆ ಇದರ ಪರಿಣಾಮ ಮಾತ್ರ ಅದ್ಭುತವಾದುದರಿಂದ ಈ ಉರಿಯನ್ನು ಕೊಂಚ ತಡೆದುಕೊಳ್ಳುವುದು ಅನಿವಾರ್ಯ. ವಿಸ್ಕಿ ಆರೋಗ್ಯಕ್ಕೆ ಒಳ್ಳೆಯದು ಚಿಯರ್ಸ್
ಆಲ್ಕೋಹಾಲ್ ಅಂದರೆ ವಿಸ್ಕಿ ಬ್ರಾಂದಿ ಮೊದಲಾದ ಮಾದಕ ಪಾನೀಯಗಳೇ ಮನದಲ್ಲಿ ಮೂಡುತ್ತವೆ. ಅಪ್ಪಟ ವೈದ್ಯಕೀಯ ಗುಣದ ಆಲ್ಕೋಹಾಲ್ ಮುಳುಗಿಸಿರುವ ಹತ್ತಿಯ ಪಟ್ಟಿಗಳು ಔಷಧಿ ಅಂಗಡಿಗಳಲ್ಲಿ ದೊರಕುತ್ತದೆ. alcohol swabs ಎಂಬ ಹೆಸರಿನಲ್ಲಿ ದೊರಕುವ ಇವು ವಾಸ್ತವವಾಗಿ ಚಿಕ್ಕಪುಟ್ಟ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಚರ್ಮವನ್ನು ಕುಯ್ಯುವ ಸಂದರ್ಭದಲ್ಲಿ ಅಥವಾ ಸೂಜಿ ಚುಚ್ಚುವ ಸಂದರ್ಭದಲ್ಲಿ ಉಪಯೋಗಿಸಲಾಗುತ್ತದೆ.
ಇವನ್ನೂ ಮೊಡವೆಗಳನ್ನು ಒರೆಸಿಕೊಳ್ಳಲು ಬಳಸಬಹುದು. ಅಥವಾ ಕೊಂಚ ವಿಸ್ಕಿಯನ್ನು ನೀರಿನೊಂದಿಗೆ ಸಮಪ್ರಮಾಣದಲ್ಲಿ ಬೆರೆಸಿ ಹತ್ತಿಯ ಉಂಡೆಯನ್ನು ಮುಳುಗಿಸಿ ಒರೆಸಿಕೊಳ್ಳಲೂಬಹುದು. ಇದಕ್ಕೂ ಹೊರತಾದ ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಲಿಂಬೆಯೊಂದಿಗೆ
ಒಂದು ದೊಡ್ಡಗಾತ್ರದ ಲಿಂಬೆಹಣ್ಣಿಯ ರಸವನ್ನು ಹಿಂಡಿ ಎರಡು ದೊಡ್ಡಚಮಚ ವಿಸ್ಕಿಗೆ ಸೇರಿಸಿ ಮಿಶ್ರಣಮಾಡಿ. ಈ ಮಿಶ್ರಣವನ್ನು ಹತ್ತಿಯುಂಡೆಯ ಮೂಲಕ ಮೊಡವೆಗಳಿಗೆ ಹಚ್ಚುವ ಮೂಲಕ ಒಂದೇ ವಾರದಲ್ಲಿ ಮೊಡವೆಗಳು ನಿವಾರಣೆಯಾಗಿರುವುದು ಕಂಡುಬರುತ್ತದೆ.

ಮೊಟ್ಟೆಯ ಬಿಳಿಭಾಗದೊಂದಿಗೆ
ಒಂದು ದೊಡ್ಡಚಮಚ ವಿಸ್ಕಿ ಮತ್ತು ಒಂದು ದೊಡ್ಡಚಮಚ ಮೊಟ್ಟೆಯ ಬಿಳಿಭಾಗ ಸೇರಿಸಿ ಗೊಟಾಯಿಸಿ. ಇದನ್ನು ಕೂಡಲೇ ಈಗತಾನೇ ತಣ್ಣೀರಿನಲ್ಲಿ ತೊಳೆದು ಒರೆಸಿಕೊಂಡ ಮುಖಕ್ಕೆ ಹಚ್ಚಿ ಒಣಗಲು ಬಿಡಿ. ಕೆಲವು ನಿಮಿಷಗಳ ಅಂತರದಲ್ಲಿ ಇದರ ಮೇಲೆ ಇನ್ನಷ್ಟು ಪ್ರಮಾಣವನ್ನು ಹಚ್ಚಿ ದಪ್ಪನೆಯ ಮುಖಲೇಪದಂತಾಗಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೊಟ್ಟೆಯ ಬಿಳಿಭಾಗದೊಂದಿಗೆ
ಸುಮಾರು ಅರ್ಧಗಂಟೆಯ ಬಳಿಕ ಸಿಪ್ಪೆ ಸುಲಿದಂತೆ ನಿವಾರಿಸಿ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ದೊಡ್ಡ ಗಾತ್ರದ ಮತ್ತು ಬಹಳಷ್ಟು ಹೆಚ್ಚಿರುವ ಮೊಡವೆಗಳಿಗೆ ಉತ್ತಮವಾದ ಪರಿಹಾರವಾಗಿದೆ.

ಜೇನಿನೊಂದಿಗೆ
ಚರ್ಮದ ಮೊಡವೆ ಸಹಿತ ತುರಿಕೆ, ಕಜ್ಜಿ, ಬ್ಲಾಕ್ ಹೆಡ್ ಮೊದಲಾದ ತೊಂದರೆಗಳಿಗೆ ಜೇನು ಮತ್ತು ವಿಸ್ಕಿಯ ಜೋಡಿ ಉತ್ತಮವಾಗಿದೆ. ಸಮಪ್ರಮಾಣದಲ್ಲಿ ವಿಸ್ಕಿ ಮತ್ತು ಜೇನನ್ನು ಸೇರಿಸಿ ಮಿಶ್ರಣ ಮಾಡಿ ಹತ್ತಿಯುಂಡೆಯ ಮೂಲಕ ಒರೆಸಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.

ಹಸಿರು ಟೀ ಜೊತೆಗೆ
ಹಸಿರು ಟೀಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮೊಡವೆಗಳ ಒಳಭಾಗದಲ್ಲಿರುವ ಸೋಂಕನ್ನು ನಿವಾರಿಸಲೂ ನೆರವಾಗುತ್ತದೆ. ಇದಕ್ಕಾಗಿ ಹಸಿರು ಟೀ ಹಾಕಿ ಸುಮಾರು ನಾಲ್ಕು ನಿಮಿಷ ಕುದಿಸಿ ತಣಿಸಿದ ನೀರಿಗೆ ಸಮಪ್ರಮಾಣದಲ್ಲಿ ವಿಸ್ಕಿ ಬೆರೆಸಿ ಮೊಡವೆಗಳ ಮೇಲೆ ಹತ್ತಿಯುಂಡೆಯ ನೆರವಿನಿಂದ ಒರೆಸಿಕೊಳ್ಳಿ.

ಹಸಿರು ಟೀ ಜೊತೆಗೆ
ಇದರಿಂದ ಮೊಡವೆಗಳು ಮೂಲದಿಂದ ನಿವಾರಣೆಯಾಗುತ್ತದೆ ಹಾಗೂ ಕಲೆಯಿಲ್ಲದ ಚರ್ಮ ಬೆಳೆಯುತ್ತದೆ.

ಉಪ್ಪಿನೊಂದಿಗೆ
ಸಮಪ್ರಮಾಣದ ನೀರಿನಲ್ಲಿ ಬೆರೆಸಿದ ವಿಸ್ಕಿಯ ಎರಡು ದೊಡ್ಡ ಚಮಚದಷ್ಟು ಪ್ರಮಾಣಕ್ಕೆ ಒಂದು ಚಮಚ ಉಪ್ಪು ಸೇರಿಸಿ ಚೆನ್ನಾಗಿ ಕಲಕಿ. ಉಪ್ಪು ವಿಸ್ಕಿಯಲ್ಲಿ ನಿಧಾನವಾಗಿ ಕರಗುತ್ತದೆ. ಇದು ಪೂರ್ಣವಾಗಿ ಕರಗುವ ಮೊದಲೇ ಹತ್ತಿಯುಂಡೆಯಿಂದ ಚರ್ಮಕ್ಕೆ ಹಚ್ಚಿಕೊಳ್ಳಿ. ಇದು ಒಣಚರ್ಮದವರಿಗೆ ಅತ್ಯುತ್ತಮ ವಿಧಾನವಾಗಿದೆ.

ಹಾಲಿನೊಂದಿಗೆ
ಹಸಿಹಾಲು ಚರ್ಮಕ್ಕೆ ಉತ್ತಮವಾಗಿದೆ. ಆದರೆ ಇದನ್ನು ವಿಸ್ಕಿಯೊಂದಿಗೆ ಬೆರೆಸಿ ಬಳಸಿದರೆ ಇದರ ಗುಣಗಳು ಹತ್ತುಪಟ್ಟು ಹೆಚ್ಚಾಗುತ್ತವೆ.

ಹಾಲಿನೊಂದಿಗೆ
ಸಮಪ್ರಮಾಣದಲ್ಲಿ ಹಸಿಹಾಲು (ಹಸುವಿನ ಹಾಲು) ಮತ್ತು ವಿಸ್ಕಿಯನ್ನು ಬೆರೆಸಿಹತ್ತಿಯುಂಡೆಯಿಂದ ದಿನಕ್ಕೆರಡು ಬಾರಿ ಮೊಡವೆ ಮತ್ತು ಹಳೆಯ ಮೊಡವೆಯ ಕಲೆಗಳಿರುವ ಸ್ಥಳದಲ್ಲಿ ಹಚ್ಚುತ್ತಾ ಬಂದರೆ ಮೊಡವೆಗಳು ನಿವಾರಣೆಯಾಗುತ್ತದೆ ಮತ್ತು ಕಲೆಗಳೂ ನಿಧಾನವಾಗಿ ಮಾಯವಾಗುತ್ತಾ ಬರುತ್ತದೆ.

ಮೊಸರಿನೊಂದಿಗೆ
ಒಂದು ವೇಳೆ ಮೊಡವೆಯ ತುದಿಭಾಗ ಒಡೆದಿದ್ದರೆ ಅಥವಾ ಗೋಡೆಯಲ್ಲಿ ಬುಡದವರೆಗೂ ಬಿರುಕುಂಟಾಗಿದ್ದರೆ ಮೇಲಿನ ಯಾವುದೇ ವಿಧಾನ ಅನುಸರಿಸಬೇಡಿ. ಇದು ಅತೀವವಾದ ಉರಿಯನ್ನೂ ಒಣಗಲು ಹೆಚ್ಚು ಸಮಯವನ್ನೂ ತೆಗೆದುಕೊಳ್ಳುತ್ತದೆ. ಬದಲಿಗೆ ಮೊದಲು ತಣ್ಣಗಿನ ಮೊಸರನ್ನು ದಪ್ಪನಾಗಿ ಮೊಡವೆಯ ಮೇಲೆ ಲೇಪಿಸಿ ಒಣಗಲು ಬಿಡಿ. ಇದು ನೀವು ಮಲಗಿದ್ದಾಗ ಅನುಸರಿಸಲು ಸಾಧ್ಯ. ಸುಮಾರು ಅರ್ಧ ಘಂಟೆಯ ಬಳಿಕ ತಣ್ಣೀರನ್ನು ಸಿಂಪಡಿಸಿ ಮೊಸರನ್ನು ನಿವಾರಿಸಿ ಸ್ವಚ್ಛವಾದ ಟವೆಲ್ ಒತ್ತಿಕೊಂಡು ಒರೆಸಿ.

ಮೊಸರಿನೊಂದಿಗೆ
ಈಗ ಹತ್ತಿಯುಂಡೆಯೊಂದನ್ನು ವಿಸ್ಕಿಯಲ್ಲಿ ಮುಳುಗಿಸಿ ಮೊಡವೆಯ ಮೇಲಿರಿಸಿ ನಯವಾಗಿ ಒತ್ತಿ ತೆಗೆಯಿರಿ. ಅರ್ಧ ಗಂಟೆಯ ಬಳಿಕ ಮತ್ತೆ ಹತ್ತಿಯಿಂಡೆಯನ್ನು ಬಳಸಿ ಲೇಪಿಸಿ. ಹೀಗೇ ದಿನಕ್ಕೆ ಐದಾರು ಬಾರಿ ಮಾಡಿ. ಮೊಡವೆ ಒಂದೆರಡು ದಿನದಲ್ಲಿಯೇ ಹಣ್ಣಾಗಿ ಉದುರಿ ಹೋಗುತ್ತದೆ ಹಾಗೂ ಕಲೆಯಿಲ್ಲದೇ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ.



Click it and Unblock the Notifications