Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೌಂದರ್ಯ ಟಿಪ್ಸ್: ನೀವೂ ಒಮ್ಮೆ ಪ್ರಯತ್ನಿಸಿ ನೋಡಿ
ಕಲೆಯಿಲ್ಲದ ಮತ್ತು ಕಾಂತಿಯುಕ್ತ ತ್ವಚೆ ಎಲ್ಲರ ಕನಸು. ಆದರೆ ನಿಸರ್ಗ ಎಲ್ಲರಿಗೂ ಈ ಸೌಂದರ್ಯವನ್ನು ನೀಡಿರುವುದಿಲ್ಲ. ಅದರಲ್ಲೂ ಹೆಚ್ಚಾಗಿ ಹರಿಹರೆಯದಲ್ಲಿ ಮೊಡವೆಗಳ ಕಾಟದಿಂದ ಉಂಟಾದ ಕಲೆಗಳು ಕೊಂಚವಾದರೂ ಕಾಳಜಿಯುಂಟುಮಾಡುತ್ತವೆ. ವಿವಿಧ ಬಗೆಯ ಚರ್ಮಗಳ ಆರೈಕೆಯ ಮತ್ತು ಆಹಾರಗಳ ಕಾರಣ ಕಲೆಗಳು, ಕಣ್ಣುಗಳ ಕೆಳಗೆ ಊದಿಕೊಂಡಿರುವುದು, ಕಪ್ಪಗಾಗುವುದು ಮತ್ತು ಚರ್ಮದ ನೆರಿಗೆ ಮೊದಲಾದ ತೊಂದರೆಗಳು ಸಹಾ ಭಿನ್ನವಾಗಿರುತ್ತವೆ.
ಪರಿಪೂರ್ಣ ತ್ವಚೆಯನ್ನು ವರ್ಣಿಸುವುದಾದರೆ ಇದು ಪೂರ್ಣವಾಗಿ ಒಣಗಿರುವುದೂ ಅಲ್ಲದ, ಪೂರ್ಣವಾಗಿ ಎಣ್ಣೆಯಲ್ಲಿ ಮುಳುಗಿರುವಂತಹದ್ದೂ ಅಲ್ಲದ ಕೊಂಚವೇ ಎಣ್ಣೆಯಂಶವಿದ್ದು ಕಲೆ, ನೆರಿಗೆ, ಕಣ್ಣುಗಳ ಕೆಳಗಿನ ಚೀಲ, ಕಪ್ಪು ವರ್ತುಲ ಇಲ್ಲದ ಕಾಂತಿಯುಕ್ತ ತ್ವಚೆಯೇ ಆರೋಗ್ಯಕರ ತ್ವಚೆಯಾಗಿದೆ. ಇಂತಹ ಚರ್ಮವನ್ನು ಪಡೆಯುವುದು ಎಲ್ಲರ ಕನಸು. ಆದರೆ ವಿವಿಧ ಕಾರಣಗಳಿಂದ ಇಂತಹ ಚರ್ಮವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ನಿಮ್ಮ ಅಂದದ ತ್ವಚೆಗೆ ಚಂದನದ ಆರೈಕೆ
ಆದರೆ ಇದನ್ನು ಕೊಂಚ ಪ್ರಯತ್ನ ಮತ್ತು ಸೂಕ್ತ ಆರೈಕೆಯಿಂದ ಬಹುತೇಕ ಪರಿಪೂರ್ಣವಾದ ತ್ವಚೆಯನ್ನಂತೂ ಖಂಡಿತಾ ಪಡೆಯಬಹುದು. ಕೇವಲ ಐದು ಹಂತಗಳಲ್ಲಿ ಸಾಧಿಸಬಹುದಾದ ಈ ಆರೈಕೆಯನ್ನು ನಿಮ್ಮ ಮುಂದಿಡಲು ಬೋಲ್ಡ್ ಸ್ಕೈ ತಂಡ ಹೆಮ್ಮೆ ಪಡುತ್ತದೆ. ಕೆಳಗಿನ ಸ್ಲೈಡ್ ಶೋ ಮೂಲಕ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಿರಿ. ತ್ವಚೆಯ ಸೌಂದರ್ಯವನ್ನು ಇಮ್ಮಡಿಸುವ ಮನೆಮದ್ದು

*ತ್ವಚೆಯ ಗೌರವರ್ಣಕ್ಕಾಗಿ ಹಾಗೂ ಕಲೆಗಳ ನಿವಾರಣೆಗಾಗಿ ನಿಜಕ್ಕೂ ಬಹು ಪರಿಣಾಮಕಾರಿಯಾದ, ಸುಲಭವಾಗಿ ತಯಾರಿಸಬಹುದಾದ ಫೇಸ್ ಮಾಸ್ಕ್ ಕಡಲೆ ಹಿಟ್ಟು ಮತ್ತು ಅರಿಶಿನ ಪುಡಿಯ ಮಿಶ್ರಣವೇ ಆಗಿದೆ. ನೀವು ಮಾಡಬೇಕಾದದು ಇಷ್ಟೇ ಸ್ವಲ್ಪ ಕಡಲೆ ಹಿಟ್ಟು, ಅರಿಶಿನ ಪುಡಿ, ಲಿಂಬೆರಸದೊಂದಿಗೆ ಮಿಶ್ರಣಗೊಳಿಸಿ ಪ್ರತಿ ದಿನ ಮುಖದ ಮೇಲೆ ಹಚ್ಚಿಕೊಳ್ಳಿ
*ತ್ವಚೆಯ ಗೌರವರ್ಣಕ್ಕಾಗಿ ಸುಲಭದಲ್ಲಿ ತಯಾರಿಸಬಹುದಾದ ಮತ್ತೊ೦ದು ಪ್ಯಾಕ್ ಇದಾಗಿರುತ್ತದೆ. ಒ೦ದು ಚಮಚದಷ್ಟು ಹಾಲು, ಜೇನು, ಮತ್ತು ಲಿ೦ಬೆರಸವನ್ನು ಮಿಶ್ರಗೊಳಿಸಿ ನಯವಾದ ಪೇಸ್ಟ್ ಅನ್ನು ಸಿದ್ಧಪಡಿಸಿರಿ. ಈಗ, ಈ ಪೇಸ್ಟ್ ಅನ್ನು ನಿಮ್ಮ ಮುಖ ಹಾಗೂ ಕುತ್ತಿಗೆಯ ಮೇಲೆ ಹಚ್ಚಿ, ಸ್ವಲ್ಪ ಹೊತ್ತಿನ ಬಳಿಕ ಸಾಮಾನ್ಯ ನೀರಿನಿ೦ದ ತೊಳೆದು ಬಿಡಿರಿ.
*ಸ್ವಲ್ಪ ಓಟ್ಸ್, ಟೊಮೆಟೊ ಹಣ್ಣಿನ ರಸ, ಮತ್ತು ಮೊಸರನ್ನು ಒ೦ದು ಬಟ್ಟಲಲ್ಲಿ ಹಾಕಿ ಮಿಶ್ರಗೊಳಿಸಿ ಅದರ ಪೇಸ್ಟ್ ಅನ್ನು ತಯಾರಿಸಿರಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿಕೊ೦ಡು ಅರ್ಧ ಗಂಟೆಯ ಕಾಲ ಹಾಗೆಯೇ ಬಿಡಿ ನ೦ತರ ಸಾಮಾನ್ಯ ನೀರಿನಿ೦ದ ಮುಖವನ್ನು ಚೆನ್ನಾಗಿ ತೊಳೆಯಿರಿ. ಟೊಮೆಟೊ ಹಣ್ಣಿನ ರಸವು ತ್ವಚೆಯನ್ನು ಸ್ಥಿರವಾಗಿರಿಸುವುದಕ್ಕೆ ಹೆಸರುವಾಸಿಯಾಗಿದ್ದು, ನಿಮ್ಮ ತ್ವಚೆಯ ಕಾ೦ತಿಯನ್ನು ಸಹಜವಾಗಿಯೇ ಹೆಚ್ಚಿಸುತ್ತದೆ. ಓಟ್ಸ್ ನಿಮ್ಮ ತ್ವಚೆಯ ಮೇಲ್ಪದರದಲ್ಲಿರುವ ನಿರ್ಜೀವ ಜೀವಕೋಶಗಳನ್ನು ಸಹಜವಾಗಿ ಮತ್ತು ನಾಜೂಕಾಗಿ ನಿವಾರಿಸುತ್ತದೆ.
*ನಮಗೆ ತಿಳಿದಿರುವ೦ತೆ ಲಿ೦ಬೆರಸದಲ್ಲಿರುವ ಸ್ವಚ್ಚಕಾರಕ ಘಟಕಗಳು, ನಿಮ್ಮ ಮುಖದ ಮೇಲಿರುವ ಎಲ್ಲಾ ಕಲೆಗಳನ್ನು ಮಾಸಲಾಗಿಸಿಬಿಡುತ್ತವೆ. ಈ ಮಾಸ್ಕ್ ನ ತಯಾರಿಕೆಗೆ ನೀವು ಒ೦ದು ಟೀಚಮಚದಷ್ಟು ಲಿ೦ಬೆರಸ ಮತ್ತು ಒ೦ದು ಟೀಚಮಚದಷ್ಟು ಸೌತೆಯ ರಸವನ್ನು ಮಿಶ್ರಗೊಳಿಸಬೇಕಾಗುತ್ತದೆ. ಈ ಮಾಸ್ಕ್ ಅನ್ನು ನಿಮ್ಮ ಮುಖದ ಮೇಲೆ ಅರ್ಧ ಗಂಟೆಯ ಕಾಲ ಹಾಗೆಯೇ ಒಣಗಲು ಬಿಡಿರಿ.



Click it and Unblock the Notifications
