ಕಾಂತಿಯುತ ತ್ವಚೆಗಾಗಿ ಇಲ್ಲಿದೆ ಪರಿಣಾಮಕಾರಿ ಸಲಹೆ

ಮಾಯಿಶ್ಚರೈಸರ್ ಮತ್ತು ತ್ವಚೆಯ ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳು ಈ ನಿಟ್ಟಿನಲ್ಲಿ ಸಹಾಯಕವಾಗಬಹುದಾದರೂ ಕೂಡ, ತ್ವಚೆಗೆ ನೀವು ಏನನ್ನು ಲೇಪಿಸುತ್ತೀರಿ ಎಂಬುದಕ್ಕಿಂತಲೂ ಮುಖ್ಯವಾಗಿ, ನೀವು ಯಾವ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದೀರಿ ಎಂಬುದು ಅದಕ್ಕಿಂತಲೂ ಮುಖ್ಯವಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಕಣ್ರೆಪ್ಪೆ ದಪ್ಪಗಾಗಿಸಲು ಕೆಲವೊಂದು ವಿಧಾನಗಳು

ಕೆಲವೊಮ್ಮೆ ತ್ವಚೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ನಾವು ಹಲವಾರು ಕ್ರೀಂಗಳು, ಲೇಪನಗಳು ಆರ್ಯರ್ವೇದಿಕ್ ಔಷಧಗಳ ಮೊರೆಹೋಗುತ್ತೇವೆ ಆದರೆ ಪರಿಣಾಮ ನಮಗೆ ತೃಪ್ತಿ ನೀಡುವುದಿಲ್ಲ. ಚಿಂತಿಸದಿರಿ ನಾವಿಂದು ನಿಮಗಾಗಿ ನೀಡುತ್ತಿರುವ ಈ ಲೇಖನವು ನೈಸರ್ಗಿಕವಾಗಿ ದೊರೆಯುವ ಹಣ್ಣುಗಳ ಚಮತ್ಕಾರದಿಂದ ನಿಮ್ಮ ತ್ವಚೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಸುಂದರ ತ್ವಚೆ ಹಾಗೂ ಕಲೆಗಳಿಲ್ಲದ ಹೊಳೆಯುವ ಮುಖ ಸೌಂದರ್ಯ ನಿಮ್ಮದಾಗಬೇಕಿದ್ದರೆ ಈ ವಿಧಾನಗಳನ್ನು ನೀವು ಅನುಸರಿಸಲೇಬೇಕು. ನೀವು ಕೆಲವೊಂದು ಮೂಲ ಸಲಹೆಗಳನ್ನು ಪಾಲಿಸುತ್ತಾ ಬಂದರೆ ಸಾಕು ಕೆಲವೇ ಕೆಲವು ದಿನಗಳಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯಾವ ಫೇಶಿಯಲ್ ಬ್ಲೀಚಿಂಗ್ ಒಳ್ಳೆಯದು?

ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ:

ಶುದ್ಧ ನೀರಿನಿಂದ ಮುಖವನ್ನು ತೊಳೆಯಿರಿ:

ಮುಖವನ್ನು ತೊಳೆಯುವುದರಿಂದ ಚರ್ಮಕ್ಕೆ ಹಾನಿ ಮಾಡುವ ಗಲೀಜು ಮತ್ತು ಮಾಲಿನ್ಯಯುಕ್ತ ಕಣಗಳು ಸ್ವಚ್ಛಗೊಳ್ಳುತ್ತವೆ. ಇದರಿಂದ ಚರ್ಮ ಸ್ವಚ್ಛವಾಗಿ ಕಾಂತಿಯುಕ್ತವಾಗಿ ಕಾಣುತ್ತದೆ. ನೀರಿನಿಂದ ಮುಖವನ್ನು 3-4 ಬಾರಿ ತೊಳೆಯಿರಿ.

ಸೌತೆಕಾಯಿ ಬಳಕೆ:

ಸೌತೆಕಾಯಿ ಬಳಕೆ:

ನಿಮ್ಮ ಕಣ್ಣುಗಳು ಬಳಲಿದಂತಿದ್ದು ಊದಿಕೊಂಡಿದ್ದರೆ ನೀವು ಕಾಂತಿಹೀನರಾಗಿ ಕಾಣುವಿರಿ. ಆಲೂಗಡ್ಡೆ ಮತ್ತು ಸೌತೆಕಾಯಿ ಎರಡೂ ಕೂಡ ಕಣ್ಣಿನ ಊತ ಮತ್ತು ಕೆಂಪನ್ನು ಕಡಿಮೆಗೊಳಿಸುವಲ್ಲಿ ಪರಿಣಾಮಕಾರಿ. ನಿಮಗೆ ಕಣ್ಣಿನ ಸುತ್ತ ಕಪ್ಪು ವೃತ್ತಗಳಿದ್ದರೆ ಆಲೂಗಡ್ಡೆಯ ಸ್ಲೈಸ್ ಬಳಸಿದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ.

ಹೈಡ್ರೇಟಿಂಗ್ ಕ್ರೀಂ:

ಹೈಡ್ರೇಟಿಂಗ್ ಕ್ರೀಂ:

ಇದು ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿಸಲು ಒಂದು ಉತ್ತಮ ವಿಧಾನ. ಹೈಡ್ರೇಟಿಂಗ್ ಕ್ರೀಮನ್ನು ರಾತ್ರಿ ಹಚ್ಚಿಕೊಳ್ಳಿ ಮತ್ತು ಬೆಳಗ್ಗೆ ತಾಜಾ ಮತ್ತು ಹೊಳಪು ಚರ್ಮವನ್ನು ಕಾಣುವಿರಿ. ಕ್ರೀಮು ಚರ್ಮದಲ್ಲಿ ತೇವಾಂಶವನ್ನು ಹೆಚ್ಚಿಸುವುದರಿಂದ ನೀವು ಫ್ರೆಶ್ ಆಗಿ ಕಾಣುವಿರಿ.

ಫೇಸ್ ಮಾಸ್ಕ್:

ಫೇಸ್ ಮಾಸ್ಕ್:

ನೀವು ಮನೆಯಲ್ಲೇ ತಯಾರಿಸಿದ ಕೆಲವು ಫೇಸ್ ಮಾಸ್ಕಗಳನ್ನು ಪ್ರಯತ್ನಿಸಬಹುದು. ಮೊಸರು, ಹಾಲು ಅಥವ ಕ್ರೀಂ, ಅರಿಶಿಣ ಪುಡಿ, ರೋಸ್ ವಾಟರ್ ಮತ್ತು ನಿಂಬೆ ರಸವನ್ನು ಬೆರೆಸಿ. ಈ ಫೇಸ್ ಮಾಸ್ಕನ್ನು ಹಚ್ಚಿ 15 ನಿಮಿಷದ ನಂತರ ತೊಳೆಯಿರಿ. ಇದು ಕೂಡ ಚರ್ಮಕ್ಕೆ ಒಳ್ಳೆಯದು.

ರೋಸ್ ವಾಟರ್:

ರೋಸ್ ವಾಟರ್:

ಇದು ಬಳಲಿದ ಚರ್ಮವನ್ನು ತಾಜಾಗೊಳಿಸಲು ಇರುವ ಪರಿಣಾಮಕಾರಿ ದಾರಿ. ಹತ್ತಿಯ ಉಂಡೆಯನ್ನು ರೋಸ್ ವಾಟರಿನಲ್ಲಿ ಅದ್ದಿ ಚರ್ಮದ ಮೇಲೆ ಹಚ್ಚಿರಿ. ಇದು ಚರ್ಮವನ್ನು ಸ್ವಚ್ಛಗೊಳಿಸುವುದರೊಂದಿಗೆ ಅದರ ಕಾಂತಿಯನ್ನು ಮರಳಿಸುತ್ತದೆ.

ಉಪ್ಪಿನ ಬಳಕೆ ಕಡಿಮೆ ಮಾಡಿ:

ಉಪ್ಪಿನ ಬಳಕೆ ಕಡಿಮೆ ಮಾಡಿ:

ಹೆಚ್ಚು ಉಪ್ಪು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಇದರಿಂದ ಕಣ್ಣು ಊದಿಕೊಂಡು ಕೆಂಪಾಗಿ ಕಾಣಬಹುದು. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ.

ನೀರನ್ನು ಹೆಚ್ಚಾಗಿ ಕುಡಿಯಿರಿ:

ನೀರನ್ನು ಹೆಚ್ಚಾಗಿ ಕುಡಿಯಿರಿ:

ಹೆಚ್ಚು ನೀರನ್ನು ಕುಡಿಯುವುದರಿಂದ ಚರ್ಮದ ಕಾಂತಿ ಮತ್ತು ತಾಜಾತನ ಉಳಿಯುತ್ತದೆ.

ಮೊಟ್ಟೆ ಮತ್ತು ಕ್ರೀಮ್ ಮಾಸ್ಕ್:

ಮೊಟ್ಟೆ ಮತ್ತು ಕ್ರೀಮ್ ಮಾಸ್ಕ್:

ಮೊಟ್ಟೆಯು ಬಯೋಟಿನ್, ಪ್ರೋಟೀನ್ ಮತ್ತು ಜೀವಸತ್ವಗಳ ರೀತಿಯ ಘಟಕಗಳನ್ನು ಹೊಂದಿದೆ ಇವು ಸುಕ್ಕುಗಳನ್ನು ಕಡಿಮೆ ಮದಲು ಸಹಾಯಮಾಡುತ್ತದೆ. ಮೊಟ್ಟೆಯಲ್ಲಿನ ಲೋಳೆ ಅಂಶ ವಯಸ್ಸಾದ ಚಿಹ್ನೆಗಳನ್ನು ಹೋಗಲಾಡಿಸುವ ಗುಣಗಳನ್ನು ಹೊಂದಿದೆ. ಕ್ರೀಮ್, ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡಲು ಅತ್ಯಗತ್ಯ. ಈ ಮಾಸ್ಕ್ ನ್ನು ಒಂದು ಮೊಟ್ಟೆ ಮತ್ತು ಅರ್ಧ ಬೌಲ್ ಕ್ರೀಮ್ ಮಿಶ್ರಣ ಮಾಡಿ ತಯಾರಿಸಿ. ಈ ಮಿಶ್ರಣಕ್ಕೆ ಲಿಂಬೆ ಹನಿಗಳನ್ನು ಸೇರಿಸಿ. ಈ ಮಾಸ್ಕ್ ನ್ನು ತ್ವಚೆಗೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ತೊಳೆಯಿರಿ. ಈ ಪೇಸ್ ಪ್ಯಾಕ್ ನಿಯಮಿತವಾಗಿ ಬಳಸುವುದರಿಂದ ಸಾಕಷ್ಟು ಪರಿಣಾಮಕಾರಿಯಾಗಿದೆ.

ಬಾಳೆಹಣ್ಣು ಮತ್ತು ಕ್ಯಾರೇಟ್ ಮಾಸ್ಕ್:

ಬಾಳೆಹಣ್ಣು ಮತ್ತು ಕ್ಯಾರೇಟ್ ಮಾಸ್ಕ್:

ಈ ಸಂಯೋಜನೆಯು ಸ್ವಲ್ಪ ವಿಲಕ್ಷಣದಂತೆ ಕಂಡರೂ ತ್ವಚೆಯ ಮೇಲೆ ಪವಾಡವನ್ನುಂಟು ಮಾಡುತ್ತದೆ. ಬಾಳೆಹಣ್ಣು ಮತ್ತು ಕ್ಯಾರೆಟ್ ಎರಡೂ ಚರ್ಮದ ಬಿಗಿಗೊಳಿಸುವ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ.

ಗುಲಾಬಿ ನೀರಿನ ಶುದ್ಧೀಕರಣ:

ಗುಲಾಬಿ ನೀರಿನ ಶುದ್ಧೀಕರಣ:

ತ್ವಚೆಯಲ್ಲಿ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳು ಉಂಟಾಗಲು ತ್ವಚೆಯಲ್ಲಿನ ಕಲ್ಮಶಗಳು ಮತ್ತು ಕೊಳಕುಗಳು ಕಾರಣವಾಗುತ್ತವೆ. ರಾತ್ರಿ ನಿದ್ದೆ ಮಾಡುವುದಕ್ಕಿಂತ ಮೊದಲು ಪ್ರತಿ ದಿನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ಗುಲಾಬಿ ನೀರನ್ನು ಬಳಸಿ.

ಆಲೂ ಸ್ಕ್ರಬ್:

ಆಲೂ ಸ್ಕ್ರಬ್:

ಆಲೂಗಡ್ಡೆ ತ್ವಚೆಗೆ ಅತ್ಯುತ್ತಮ ಬ್ಲೀಚಿಂಗ್ ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆಮಾಡುವ ಗುಣಲಕ್ಷಣಗಳನ್ನು ಹೊಂದಿದೆ. ಪ್ರತಿ ದಿನ ನಿಮ್ಮ ಮುಖಕ್ಕೆ ಆಲೂಗಡ್ಡೆ ಸ್ಲೈಸ್ ಬಳಸಿಕೊಂಡು ಮಸಾಜ್ ಮಾಡಿದರೆ ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಮೊಸರಿನ ಮಾಸ್ಕ್:

ಮೊಸರಿನ ಮಾಸ್ಕ್:

ಮೊಸರು ಚರ್ಮದ ಅಂಗಾಂಶಗಳನ್ನು ಮತ್ತು ಜೀವಕೋಶಗಳನ್ನು ದುರಸ್ತಿ ಮತ್ತು ಪುನರ್ ನಿರ್ಮಿಸಲು ಅಗತ್ಯ ಜೀವಸತ್ವಗಳನ್ನು ಒದಗಿಸುತ್ತದೆ. ಮೊಸರನ್ನು ಪ್ರತಿದಿನ ಸೇವಿಸುವುದರಿಂದಲೂ ಸಹ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

ಸಂಸ್ಕರಿಸಲ್ಪಡದ ಧಾನ್ಯಗಳು:

ಸಂಸ್ಕರಿಸಲ್ಪಡದ ಧಾನ್ಯಗಳು:

ಇವು ನಿಮ್ಮ ದೇಹದ ತೂಕವನ್ನು ಸಮತೋಲನದಲ್ಲಿಡಲು ನೆರವಾಗುವುದು ಮಾತ್ರವಲ್ಲದೇ, ಬಾರ್ಲಿ, ಗೋಧಿ, ಮುಸುಕಿನ ಜೋಳ, ಮತ್ತು ಜೋಳದಂತಹ ದವಸ ಧಾನ್ಯಗಳು ನಿಮ್ಮ ತ್ವಚೆಗೆ ಕಾಂತಿಯನ್ನೊದಗಿಸುವ ಜವಾಬ್ದಾರಿಯನ್ನೂ ಸಹ ನಿಭಾಯಿಸುತ್ತವೆ.

ಅಗಸೆಬೀಜಗಳು (flaxseed):

ಅಗಸೆಬೀಜಗಳು (flaxseed):

ನಿಮ್ಮ ತ್ವಚೆಯು ಸಹಜವಾಗಿ ಕಂಗೊಳಿಸಲು, ಪ್ರತಿದಿನ ಮುಂಜಾನೆ ಒಂದು ಟೀಚಮಚದಷ್ಟು ಅಗಸೆ ಎಣ್ಣೆಯನ್ನು ಸೇವಿಸಿರಿ. ಇದು ನವಿರಾದ, ಸೂಕ್ಷ್ಮ ಸ್ವರೂಪದ ತ್ವಚೆಯ ಆರೈಕೆಗೂ ಬಲು ಉಪಯುಕ್ತ.

ಬೆಣ್ಣೆಹಣ್ಣು:

ಬೆಣ್ಣೆಹಣ್ಣು:

ಇದು ನಿಜಕ್ಕೂ ಒಂದು ಚಮತ್ಕಾರಿಕ ಫಲವಸ್ತುವಾಗಿದೆ. ಹಣ್ಣಿನ ತಿರುಳು ಮಾತ್ರವಲ್ಲದೇ, ಇದರ ಸಿಪ್ಪೆಯೂ ಸಹ ಅತಿ ಹೆಚ್ಚು ಪ್ರಮಾಣದ ವಿಟಮಿನ್ B ನಿಂದ ಸಮೃದ್ಧವಾಗಿದೆ. ಇದು ನಿಮಗೆ ನಯವಾದ, ಆರೋಗ್ಯಯುತ ತ್ವಚೆಯನ್ನು ನೀಡುವುದರ ಜೊತೆಗೆ, ತ್ವಚೆಯು ಕಂದಿದಂತೆ ಅಥವಾ ಊದಿಕೊಂಡಂತೆ ಕಾಣುವುದನ್ನು ತಪ್ಪಿಸುತ್ತದೆ.

ಆಲೂಗೆಡ್ಡೆಗಳು:

ಆಲೂಗೆಡ್ಡೆಗಳು:

ಆಲೂಗೆಡ್ಡೆಗಳು ನಿಮ್ಮ ತ್ವಚೆಯು ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳದಂತೆ ಎಚ್ಚರವಹಿಸುತ್ತದೆ ಮತ್ತು ತ್ವಚೆಯು ತಾಜಾ ಹಾಗೂ ತಾರುಣ್ಯಭರಿತವಾಗಿ ಕಾಣುವಂತೆ ಮಾಡುತ್ತದೆ.

ಬೆರ್ರಿಗಳು:

ಬೆರ್ರಿಗಳು:

ಬೆರಿಗಳ ಸೇವನೆಯು ನಿಮ್ಮ ತ್ವಚೆಯು ಉರಿಯೂತದಿoದ ರಕ್ಷಿಸಲ್ಪಟ್ಟು, ತಾರುಣ್ಯದಿoದ ಕೂಡಿರುವಂತೆ ಕಾಳಜಿವಹಿಸುತ್ತದೆ ಹಾಗೂ ನೀವು ಮೊಡವೆಗಳಿಗೆ ವಿದಾಯ ಹೇಳುವoತೆ ಮಾಡುತ್ತದೆ.

ಮೊಸರು:

ಮೊಸರು:

ಹೆಚ್ಚಿನ ಭಾರತೀಯ ಮನೆಗಳಲ್ಲಿ ಆಹಾರದ ಒಂದು ಪ್ರಮುಖ ಸ್ಥಾಯಿ ಘಟಕವಾಗಿರುವುದರಿoದ, ನಿಮ್ಮ ಅರಿವಿಗೆ ಬಾರದಂತೆಯೇ, ಈ ಅದ್ಭುತ ತಿನಿಸು, ನೀವು ಸುಂದರವಾಗಿ ಕಾಣುವoತಾಗಲು ರಹಸ್ಯವಾಗಿ ಕಾರ್ಯನಿರ್ವಹಿಸುತ್ತದೆ.

ಮಾವಿನ ಹಣ್ಣು:

ಮಾವಿನ ಹಣ್ಣು:

ಮಾವಿನ ಹಣ್ಣಿನಲ್ಲಿ 80% ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ವಿಟಮಿನ್ A ಯನ್ನು ಹೊಂದಿದೆ, ಅಲ್ಲದೆ ಮಾವು ಕಡಿಮೆ ಕ್ಯಾಲರಿಗಳನ್ನು ಹೊಂದಿರುವುದರಿಂದ, ಇದು ನಿಮ್ಮ ತ್ವಚೆಯ ಆರೋಗ್ಯಕ್ಕೆ ಸಹಾಯಕವಾಗುವುದಲ್ಲದೇ, ನಿಮ್ಮ ಸೊಂಟದ ಸುತ್ತಳತೆಯ ಮೇಲೂ ನಿಗಾವಹಿಸುತ್ತದೆ.

ದೊಣ್ಣೆಮೆಣಸು:

ದೊಣ್ಣೆಮೆಣಸು:

ದೊಣ್ಣೆಮೆಣಸುಗಳನ್ನು ನಿಯಮಿತವಾಗಿ ಸೇವಿಸುವುದರಿಂದ, ಇವುಗಳಲ್ಲಿರುವ ಮಿಟಮಿನ್ ನಿಮ್ಮ ತ್ವಚೆಯು ಸುಕ್ಕಾಗುವುದನ್ನು ತಡೆಯುತ್ತವೆ.

Story first published: Thursday, April 3, 2014, 16:34 [IST]
X
Desktop Bottom Promotion