Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮುಖದ ತೈಲಗಳು ಆರೋಗ್ಯದಾಯಕವಾಗಿಯೂ ಇರಬಲ್ಲವು!
ಮುಖದ ತೈಲದ ಕುರಿತು ಅನೇಕರ ಸಾಮಾನ್ಯ ಅಭಿಪ್ರಾಯವೆಂದರೆ, ಇದು ಮುಖಕ್ಕೆ ಅನಗತ್ಯ ಹೊಳಪನ್ನು ನೀಡುವ ಹಾಗೂ ತ್ವಚೆಯ ರಂಧ್ರಗಳು ಮುಚ್ಚಿಕೊಳ್ಳಲು ಕಾರಣವಾಗುವ ಒಂದು ಅವಶ್ಯವಿಲ್ಲದ "ತ್ವಚೆಯ ರಕ್ಷಣೆಯ ಉತ್ಪನ್ನ" ಎಂದೇ ಆಗಿದೆ. ಆದರೆ, ತಜ್ಞರ ಅಭಿಪ್ರಾಯದಂತೆ, ಮುಖದ ತೈಲಗಳು ಎಲ್ಲಾ ಸಂದರ್ಭಗಳಲ್ಲಿಯೂ ಅಹಿತಕರ ಎನ್ನುವಂತಿಲ್ಲ.
ನ್ಯೂಯಾರ್ಕ್ ನಗರದ ಮೆಟ್ರೋಪಾಲಿಟನ್ ಆಸ್ಪತ್ರೆಯ ಚರ್ಮ ಶಸ್ತ್ರಚಿಕಿತ್ಸೆಯ ನಿರ್ದೇಶಕರಾದ ಅವರು ಮುಖದ ತೈಲದ ಲಾಭಗಳ ಕುರಿತು essence.com ನಲ್ಲಿ ಸಮಗ್ರವಾಗಿ ವರದಿ ಮಾಡಿದ್ದಾರೆ.

ಸಾಮಾನ್ಯ ನಂಬಿಕೆಯಂತೆ ತೈಲಗಳು ತ್ವಚೆಯ ರಂಧ್ರಗಳನ್ನು ಮುಚ್ಚುವುದಿಲ್ಲ ಅಥವಾ ಮೊಡವೆಗಳಿಗೆ ಕಾರಣವಾಗುವುದಿಲ್ಲ: ತೈಲವು ತ್ವಚೆಯಲ್ಲಿನ ಒಂದು ಸ್ವಾಭಾವಿಕ ಉತ್ಪನ್ನವಾಗಿದೆ. ಸ್ವೇದ ಗ್ರಂಥಿಗಳು ತೈಲ ಅಥವಾ ನಿರ್ಜೀವ ಕೋಶಗಳಿಂದ ಮುಚ್ಚಲ್ಪಟ್ಟಾಗ ಮೊಡವೆಗಳು ಉಂಟಾಗುತ್ತವೆ.
ಸಾಮಾನ್ಯ ನಂಬಿಕೆಯಂತೆ ತ್ವಚೆಯ ಮೇಲೆ ಲೇಪಿಸಲ್ಪಡುವ ಮುಖದ ತೈಲಗಳು ಖಂಡಿತವಾಗಿಯೂ ಈ ಪ್ರಕ್ರಿಯೆಯನ್ನು ಮತ್ತಷ್ಟು ಹದೆಗೆಡಿಸುವುದಿಲ್ಲ. ಬದಲಿಗೆ, ಮುಖದ ತೈಲ ಸೂಕ್ಷ್ಮ ಸ್ವಭಾವದ ತ್ವಚೆಯನ್ನು ಸಂತುಲಿತಗೊಳಿಸಿ ತ್ವಚೆಯ ಗುಣಮಟ್ಟವನ್ನು ಕಾಪಾಡುತ್ತದೆ.
ಮೊಡವೆ ರಹಿತ ತ್ವಚೆಗೆ ಸರಳ ಮದ್ದು
ತೈಲಗಳಲ್ಲಿ ಕ್ರಿಯಾತ್ಮಕ ಘಟಕಗಳು ಪ್ರಬಲವಾಗಿರುತ್ತವೆ: ತೇವಕಾರಕ ಅಥವಾ serumಗಳಲ್ಲಿ Argan, ದ್ರಾಕ್ಷಿ ಬೀಜ, ಮತ್ತು black currantಗಳು ಸಾಮಾನ್ಯವಾಗಿ ಕ್ರಿಯಾತ್ಮಕ ಘಟಕಗಳಾಗಿವೆ. ಆದಾಗ್ಯೂ ತೈಲದಲ್ಲಿ ಈ ಘಟಕಗಳು ಮತ್ತಷ್ಟು ಪ್ರಬಲವಾಗಿರುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ತೈಲವು ಪ್ರಾಯಶಃ ನೀವು ನಿಮ್ಮ ತ್ವಚೆಗೆ ಈಗಾಗಲೇ ಹಚ್ಚಿಕೊಳ್ಳುತ್ತಿರುವ ಉತ್ಪನ್ನದ ಮತ್ತಷ್ಟು ಶುದ್ಧ ರೂಪವೇ ಆಗಿದೆ.
ತೈಲಗಳು ನಿಮ್ಮ ತ್ವಚೆಯನ್ನು ಜಾರುತ್ವಚೆ (greasy) ಯನ್ನಾಗಿಸಲಾರವು: ಮುಖದ ತೈಲಗಳು ಹಗುರವಾಗಿದ್ದು, ಕೂಡಲೇ ಹೀರಲ್ಪಡುತ್ತವೆ. ನಿಮ್ಮ ಇಡಿಯ ಮುಖಕ್ಕೆ ಕೇವಲ ಒಂದರಿಂದ ಎರಡು ಹನಿಗಳಷ್ಟು ತೈಲವು ಸಾಕಾಗಬಹುದಷ್ಟೇ.
ಮೂಗಿನಲ್ಲಿರುವ ಬ್ಲ್ಯಾಕ್ ಹೆಡ್ಸ್ ತೆಗೆಯಲು ಟಿಪ್ಸ್
ತೈಲಗಳು ನಿಮ್ಮ ತ್ವಚೆಯನ್ನು ರಕ್ಷಿಸಿ ನೀವು ತಾರುಣ್ಯಭರಿತರಾಗಿ ಕಾಣುವಂತೆ ಮಾಡುತ್ತವೆ: ತೈಲಗಳು; ಆಂಟಿಆಕ್ಸಿಡೆಂಟ್, ಅನ್ನಾಂಗ C ಮತ್ತು E ಗಳಿಂದ ಸಮೃದ್ಧವಾಗಿದ್ದು, ಇವು ಮುಕ್ತ radicals (free radicals) ನ ವಿರುದ್ಧ ಕಾರ್ಯನಿರ್ವಹಿಸುತ್ತವೆ ಮತ್ತು ಸೂರ್ಯರಶ್ಮಿಯಿoದ ತ್ವಚೆಗೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟುತ್ತವೆ.
ವ್ಯಕ್ತಿಗೆ ವಯಸ್ಸಾದಂತೆಲ್ಲಾ ಶರೀರದ ಸ್ವಾಭಾವಿಕ ತೈಲದ ಉತ್ಪನ್ನವು ಕುಂಠಿತವಾಗುತ್ತದೆ. ತತ್ಪರಿಣಾಮವಾಗಿ ಚರ್ಮದ ಸುಕ್ಕುಗಳು ಎದ್ದು ಕಾಣುವಂತಾಗುತ್ತವೆ. ಆದರೆ, ತೈಲಗಳು ನಾವು ಕಳೆದುಕೊಂಡಿರುವುದನ್ನು ಮರಳಿ ಪಡೆಯಲು ನೆರವಾಗುತ್ತವೆ.



Click it and Unblock the Notifications
