Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವೈಟ್ ಪ್ಯಾಚ್ ಹೋಗಲಾಡಿಸುವ ಫೇಶಿಯಲ್
ಸ್ಕಿನ್ ನಲ್ಲಿ ವೈಟ್ ಪ್ಯಾಚ್ ಬಿದ್ದರೆ ಮುಖ ಬಿಳುಚಿಕೊಂಡು ಆಕರ್ಷಣೆಯನ್ನು ಕಳೆದುಕೊಳ್ಳುವುದು, ಅಲ್ಲದೆ ಮೇಕಪ್ ಮಾಡಿದರೆ ಈ ವೈಟ್ ಪ್ಯಾಚ್ ಮತ್ತಷ್ಟು ಎದ್ದು ಕಾಣುವುದರಿಂದ ಮೇಕಪ್ ಮಾಡಲೂ ಸಾಧ್ಯವಾಗುವುದಿಲ್ಲ.
ತ್ವಚೆ ಮೇಲೆ ವೈಟ್ ಪ್ಯಾಚ್ ಈ ಕೆಳಗಿನ ಪ್ರಮುಖ ಕಾರಣಗಳಿಂದ ಉಂಟಾಗುತ್ತದೆ:
* ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುತ್ತಿದ್ದರೆ ಅಥವಾ ಮಾಲಿನ್ಯವಾದ ವಾತಾವರಣದಲ್ಲಿ ಓಡಾಡಿದರೆ ಮೆಲನಿನ್ ನಲ್ಲಿ ವ್ಯತ್ಯಾಸವಾಗಿ ಈ ರೀತಿಯ ವೈಟ್ ಪ್ಯಾಚ್ ಕಂಡು ಬರುವುದು.
* ತ್ವಚೆಗೆ ಬ್ಯಾಕ್ಟೀರಿಯಾಗಳು ಆಕ್ರಮಣ ಮಾಡಿದರೆ ವೈಟ್ ಪ್ಯಾಚ್ ಉಂಟಾಗುವುದು.
* ಹಾರ್ಮೋನ್ ಗಳ ಅಸಮತೋಲನ
* ರಾಸಾಯನಿಕ ವಸ್ತುಗಳು ತ್ವಚೆಗೆ ತಾಗಿದರೆ ವೈಟ್ ಪ್ಯಾಚ್ ಉಂಟಾಗುವುದು.
ಮಹಿಳೆಯರ ತ್ವಚೆ ತುಂಬಾ ಸೂಕ್ಷ್ಮವಾಗಿರುವುದರಿಂದ ಪುರುಷರಿಗಿಂತ ಮಹಿಳೆಯರಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
ವೈಟ್ ಪ್ಯಾಚ್ ಬಿದ್ದಾಗ ತ್ವಚೆ ತಜ್ಞರನ್ನು ಕಂಡು ಚಿಕಿತ್ಸೆಯನ್ನು ಮಾಡಿಸಬಹುದು, ನೈಸರ್ಗಿಕ ವಿಧಾನದಿಂದಲೂ ಹೋಗಲಾಡಿಸಬಹುದು. ಇಲ್ಲಿ ನಾವು ಕೆಲ ಫೇಶಿಯಲ್ ಬಗ್ಗೆ ಹೇಳಿದ್ದೇವೆ. ಅವುಗಳನ್ನು ಬಳಸಿದರೆ ಕೆಲವೇ ದಿನಗಳಲ್ಲಿ ನಯವಾದ, ಪ್ಯಾಚ್ ಮುಕ್ತ ತ್ವಚೆ ನಿಮ್ಮದಾಗುವುದು:

ಜೇನು ಮತ್ತು ನಿಂಬೆ ರಸ
1 ಚಮಚ ಜೇನಿಗೆ 1 ಚಮಚ ನಿಂಬೆ ರಸ ಹಾಕಿ 2-3 ಹನಿ ಬಾದಾಮಿ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಮುಖ ತೊಳೆಯದಿರಿ. ಈ ವಿಧಾನ ವೈಟ್ ಪ್ಯಾಚ್ ಹೋಗಲಾಡಿಸುವಲ್ಲಿ ತುಂಬಾ ಸಹಕಾರಿ.

ಮಿಂಟ್ ಪ್ಯಾಕ್
ಪುದೀನಾವನ್ನು ಪೇಸ್ಟ್ ಮಾಡಿ 30 ನಿಮಿಷದ ಬಳಿಕ ಮುಖ ತೊಳೆಯಬೇಕು, ಈ ರೀತಿ ಮಾಡಿದರೆ ಯಾವುದೇ ಮುಲಾಮು ಹಚ್ಚದೆ ವೈಟ್ ಪ್ಯಾಚ್ ಹೋಗಲಾಡಿಸಬಹುದು.

ತೆಂಗಿನ ಎಣ್ಣೆ ಮತ್ತು Sea -Kale
ವೈಟ್ ಪ್ಯಾಚ್ ಹೋಗಲಾಡಿಸಲು ತೆಂಗಿನೆಣ್ಣೆ ಬಳಸಬಹುದು. ತೆಂಗಿನೆಣ್ಣೆಗೆ Sea -Kale ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಹದ ಬಿಸಿ ನೀರಿನಿಂದ ಮುಖ ತೊಳೆಯಬೇಕು. ಈ ರೀತಿ ಪ್ರತೀದಿನ ಮಾಡುತ್ತಾ ಬಂದರೆ ವೈಟ್ ಪ್ಯಾಚ್ ಹೋಗಲಾಡಿಸಬಹುದು.

ಮುಲ್ತಾನಿ ಮಿಟಿ
ಮುಲ್ತಾನಿ ಮಿಟಿಯನ್ನು ದಿನಾ ಹಚ್ಚಲು ಸಾಧ್ಯವಿಲ್ಲ 2 ದಿನಕ್ಕೊಮ್ಮೆ ಇದರಿಂದ ಫೇಸ್ ಪ್ಯಾಕ್ ಮಾಡುತ್ತಾ ಬಂದರೆ ವೈಟ್ ಪ್ಯಾಚ್ ಕಡಿಮೆಯಾಗಿ ಮುಖದ ಸೌಂದರ್ಯ ಹೆಚ್ಚುವುದು.

ಸ್ಟ್ರಾಬೆರಿ ಪ್ಯಾಕ್
ಸ್ಟ್ರಾಬೆರಿಯನ್ನು ಪೇಸ್ಟ್ ಮಾಡಿ ಅದಕ್ಕೆ 1 ಚಮಚ ಹಾಲು ಹಾಕಿ 2 ಚಮಚ ಅಕ್ಕಿ ಹಿಟ್ಟು ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷದ ಬಳಿಕ ಮುಖ ತೊಳೆಯಿರಿ.

ಬೆಳ್ಳುಳ್ಳಿ ಒಳ್ಳೆಯದು, ಆದರೆ ಬಳಸುವಾಗ ಜಾಗ್ರತೆ
ವೈಟ್ ಪ್ಯಾಚ್ ಹೋಗಲಾಡಿಸುವಲ್ಲಿ ಬೆಳ್ಳುಳ್ಳಿ ತುಂಬಾ ಪರಿಣಾಮಕಾರಿಯಾದರೂ ಇದನ್ನು ಬಳಸುವಾಗ ಜಾಗ್ರತೆ, ಏಕೆಂದರೆ ಮುಖದಲ್ಲಿ ಸುಟ್ಟ ಕಲೆಗಳು ಬೀಳುವ ಸಾಧ್ಯತೆ ಇದೆ. ಆದ್ದರಿಂದ 1 ಎಸಳು ಬೆಳ್ಳುಳ್ಳಿಯನ್ನು 2 ಚಮಚ ಹಾಲಿನಲ್ಲಿ ಹಾಕಿ ಚೆನ್ನಾಗಿ ಹಿಸುಕಿ ಪೇಸ್ಟ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ 5 ನಿಮಿಷದ ಬಳಿಕ ಮುಖ ತೊಳೆಯಿರಿ.



Click it and Unblock the Notifications
