Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮುಪ್ಪನ್ನು ಮುಂದೂಡುವ ಫಾರ್ಮುಲಾ
ವಯಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ವಯಸ್ಸು ಆಗುತ್ತಿದ್ದಂತೆ ನಮ್ಮ ಶರೀರದಲ್ಲಿ ಬದಲಾವಣೆಯಾಗುವುದು ನೈಸರ್ಗಿಕ ನಿಯಮ. ನಾವು ಬಾಲ್ಯ, ಯೌವನದ ಬಗ್ಗೆ ಸುಂದರ ಕಲ್ಪನೆಗಳನ್ನು ಇಟ್ಟುಕೊಳ್ಳುತ್ತೇವೆ. ನಮ್ಮ ಬಾಲ್ಯದ ಸುಂದರ ದಿನಗಳ ಬಗ್ಗೆ ಗಂಟೆ ಗಟ್ಟಲೆ ಮಾತನಾಡುತ್ತೇವೆ. ಯೌವನವನ್ನು ಹೊಸ ಹುಮ್ಮಸ್ಸಿನಿಂದ ಸ್ವಾಗತಿಸುತ್ತೇವೆ. ಆದರೆ ಮುಪ್ಪು ಅಂದರೆ ಭಯ ಬೀಳುತ್ತೇವೆ. ಯಾರಿಗೂ ಮುಪ್ಪು ಬೇಕಾಗಿಲ್ಲ, ಆದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಆದರೆ ನಾವು ಪ್ರಯತ್ನ ಮಾಡಿದರೆ ಬೀಳುವ ನೆರಿಗೆಯನ್ನು ಸ್ವಲ್ಪ ವರರ್ಷಗಳ ನಂತರ ಬೀಳುವಂತೆ ಮಾಡಬಹುದು, ಯೌವನದ ಲುಕ್ ಅನ್ನು ಇನ್ನೂ ಸ್ವಲ್ಪ ಕಾಲ ಮುಂದೂಡಬಹುದು. ಅದು ಹೇಗೆ ಸಾಧ್ಯ ಎಂಬ ಫಾರ್ಮುಲಾವನ್ನು ಇಲ್ಲಿ ನೀಡುತ್ತಿದ್ದೇವೆ ನೋಡಿ:

ಹಣ್ಣು ಮತ್ತು ತರಕಾರಿಗಳು
ಪ್ರತೀದಿನ ಡಯಟ್ ನಲ್ಲಿ 5-6 ಬಗೆಯ ತರಕಾರಿಗಳನ್ನು ಅಳವಡಿಸಿ. ಹಣ್ಣುಗಳನ್ನು ತಿನ್ನಿ. ಪ್ರತಿಯೊಂದು ತರಕಾರಿಯೂ ತನ್ನದೇ ಆದ ಗುಣವನ್ನು ಹೊಂದಿದೆ. ಅದರಲ್ಲೂ ಕ್ಯಾರೆಟ್, ಟೊಮೆಟೊ ಮತ್ತು ಸೊಪ್ಪು ಇವು ನಿಮ್ಮ ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿ ಕಡಿಮೆಯಾಗದಂತೆ ತಡೆದು ಮುಖದಲ್ಲಿ ಬೇಗನೆ ನೆರಿಗೆ ಬೀಳುವುದನ್ನು ತಡೆಯುತ್ತದೆ.

ತೆಳು ಮಾಂಸ
ಮೊಟ್ಟೆ, ಸ್ಕಿನ್ ಲೆಸ್ ಚಿಕನ್, ಮೀನು ಇವುಗಳಲ್ಲಿ ಪ್ರೊಟೀನ್ ಅತ್ಯಧಿಕವಾಗಿದೆ. ವೆಜ್ ತಿನ್ನುವವರು ಮಾಂಸಾಹಾರಕ್ಕೆ ಬದಲು ಟೋಫು ಮತ್ತು ಇತರ ಹಾಲಿನ ಉತ್ಪನ್ನಗಳನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಬೇಕು.

ಮೀನು
ಮೀನು ತಿನ್ನುವವರಾದರೆ ವಾರದಲ್ಲಿ ಎರಡು ಬಾರಿಯಾದರೂ ಮೀನು ತಿನ್ನುವುದು ಒಳ್ಳೆಯದು. ಇದರಲ್ಲಿರುವ ಒಮೆಗಾ 3 ಕೊಬ್ಬಿನಂಶ ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಣೆ ಮಾಡುತ್ತದೆ.

ವಿಟಮಿನ್ ಡಿ
ಬೆಳಗ್ಗೆ ಸೂರ್ಯನ ಶಾಖಕ್ಕೆ ಮೈಯೊಡ್ಡುವುದನ್ನು ಮತ್ತು ವಿಟಮಿನ್ ಡಿ ಇರುವ ಆಹಾರಗಳನ್ನು ತಿನ್ನುವುದನ್ನು ಮಿಸ್ ಮಾಡಬೇಡಿ. ಹಾಲಿನ ಉತ್ಪನ್ನಗಳು ಮತ್ತು ಅಣಬೆಯಲ್ಲಿ ವಿಟಮಿನ್ ಡಿ ಇದೆ.

ಗ್ರೀನ್ ಟೀ
ಇದರಲ್ಲಿರುವ antioxidants ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ, ಅಲ್ಲದೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
ಈ ಸರಳ ಡಯಟ್ ಟಿಪ್ಸ್ ಪಾಲಿಸಿ, ಮುಪ್ಪನ್ನು ದೂರವಿಡಿ.



Click it and Unblock the Notifications
