Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಡವೆ ಕಲೆ ನಿವಾರಣೆಗೆ 10 ವಿಧಾನ

ಆದ್ದರಿಂದ ಮೊಡವೆ ಕಲೆಗಳು ಉಂಟಾದರೆ ಅದನ್ನು ನಿರ್ಲಕ್ಷಿಸುವಂತೆ ಇಲ್ಲ, ಮೊಡವೆ ಕಲೆಗಳನ್ನು ಹೋಗಲಾಡಿಸಲು ಈ ಕೆಳಗಿನ ಸಲಹೆಗಳು ಸಹಕಾರಿಯಾಗುವುದು.
ಮೊಡವೆ ಕಲೆ ನಿವಾರಣೆ:
1. ತುಟಿಯ ಕೆಳಗೆ ಗಲ್ಲದಲ್ಲಿ ಕಾಣಿಸಿಕೊಳ್ಳುವ ವೈಟ್ ಹೆಡ್ಸ್‌ಗಳನ್ನು 15 ದಿನಕ್ಕೊಮ್ಮೆ ಕ್ಲೀನ್ ಮಾಡಿಕೊಳ್ಳಬೇಕು. ಈ ವೈಟ್ ಹೆಡ್ಸ್‌ಗಳೇ ಕೆನ್ನೆಯ ಮೇಲೆ ಮೊಡವೆ ಏಳಲು ಕಾರಣವಾಗುತ್ತದೆ. ಹಬೆ ತೆಗೆದುಕೊಳ್ಳುವುದು ವೈಟ್ ಹೆಡ್ಸ್ ಹೋಗಲಾಡಿಸುವ ಸುಲಭ ವಿಧಾನ. ಹಬೆ ತೆಗೆದುಕೊಂಡು ಹತ್ತಿಯಿಂದ ನಯವಾಗಿ ಉಜ್ಜಿ ತೆಗೆದರೆ ವೈಡ್ ಹೆಡ್ ಸುಲಭವಾಗಿ ನಿವಾರಣೆಯಾಗುತ್ತದೆ.
2. ಅಡುಗೆ ಸೋಡಾವನ್ನು ಮೊಡವೆ ಆದ ಜಾಗದ ಮೇಲೆ ನಯವಾಗಿ ಮಸಾಜ್ ಮಾಡಿದರೆ ಕ್ರಮೇಣ ಕಲೆ ನಿವಾರಣೆಯಾಗುತ್ತದೆ.
3. ಮೊಡವೆ ಅಥವಾ ಕಲೆಯ ಮೇಲೆ ಇಂಗು ಅಥವಾ ಗಂಧಧ ಪುಡಿಯಿಂದ ಮಸಾಜ್ ಮಾಡಿಕೊಂಡರೆ ಉತ್ತಮ ಪರಿಣಾಮ ಬೀರುತ್ತದೆ.
4. ವಾರಕ್ಕೆ 2-3 ಬಾರಿ ಟೊಮೆಟೊ ಅಥವಾ ಸೌತೆಕಾಯಿಯೊಂದಿಗೆ ನಿಂಬೆ ರಸ ಬೆರೆಸ ಮಸಾಜ್ ಮಾಡಿಕೊಂಡು 15 ನಿಮಿಷದ ನಂತರ ತೊಳೆದರೂ ಉತ್ತಮ ಪರಿಣಾಮ ನೀಡಬಹುದು. ಆದರೆ ಕೆಲವರಿಗೆ ನಿಂಬೆರಸ ಹೆಚ್ಚು ಬಳಸಿದರೆ ಗುಳ್ಳೆಗಳೂ ಏಳಬಹುದು. ಆದ್ದರಿಂದ ನಿಂಬೆ ರಸದಿಂದ ಅಲರ್ಜಿ ಉಂಟಾಗುವವರು ಈ ವಿಧಾನ ಬಳಸಬೇಡಿ.
5. ಮೊಡವೆಯ ಕಲೆ ನಿವಾರಣೆಗೆ ಹುಣಸೇ ರಸ ಅಥವಾ ಹುಳಿ ಮಜ್ಜಿಗೆ ಲೇಪಿಸಿದರೆ ಒಳ್ಳೆಯದು.
6. ನೀರಿಗೆ ಪುದೀನಾ ಎಲೆಗಳನ್ನು ಹಾಕಿ ಆ ನೀರನ್ನು ಕುದಿಸಿ ಅದರ ಹಬೆಯನ್ನು ಮುಖಕ್ಕೆ ಹಿಡಿದರೆ ಮೊಡವೆ ಕಲೆ ನಿವಾರಣೆಯಾಗುವುದು.
7. ಚಂದನ ಮತ್ತು ರೋಸ್ ವಾಟರ್ ಮಿಶ್ರ ಮಾಡಿ ಹಚ್ಚುತ್ತಾ ಬಂದರೆ ಮುಖದ ಕಲೆಗಳು ಕಡಿಮೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.
8. ತೆಂಗಿನೆಣ್ಣೆ, ಆಲೀವ್ ಎಣ್ಣೆ, ಲ್ಯಾವೆಂಡರ್ ಎಣ್ಣೆ ಈ ಎಣ್ಣೆಗಳಲ್ಲಿ ಯಾವುದಾದರು ಒಂದು ಎಣ್ಣೆಯನ್ನು ಹಚ್ಚುತ್ತಾ ಬಂದರೆ ಮುಖದಲ್ಲಿ ಕಲೆಗಳು ನಿವಾರಣೆಯಾಗುವುದು.
9. ವಿಟಮಿನ್ ಇ ಎಣ್ಣೆ ಅಥವಾ ಮಾತ್ರೆಯನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿದರೆ ಕಲೆಗಳೂ ಮಾಯವಾಗುತ್ತದೆ.
10. ಪ್ರತಿದಿನ ಲೋಳೆಸರ ಅಥವಾ ಅದರಿಂದ ತಯಾರಿಸಿದ ಜೆಲ್ ಬಳಸುತ್ತಿದ್ದರೆ ಮುಖದ ಕಲೆ ನಿವಾರಣೆಯಾಗವುದು.
ಸಲಹೆ:
* ಕರಿದ ಎಣ್ಣೆ ಪದಾರ್ಥಗಳನ್ನು ಮತ್ತು ಕೃತಕ ಬಣ್ಣ ಬಳಸಿ ತಯಾರಿಸಿದ ಆಹಾರವನ್ನು ಸೇವಿಸದಿದ್ದರೆ ಮೊಡವೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ.
* ಮಲಬದ್ಧತೆಯಾಗದಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ನಾರಿನಂಶ, ಒಣದ್ರಾಕ್ಷೆ, ಬಾಳೆಹಣ್ಣು, ತಂಪಿನ ಬೀಜ ಇವುಗಳು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗಿದೆ.



Click it and Unblock the Notifications
