Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಪ್ರಕೃತಿಯ ನಂಟಿನಲ್ಲಿದೆ ಸೌಂದರ್ಯದ ಗುಟ್ಟು!

ಜೊಜೊಬಾ ಎಣ್ಣೆ: ಜೊಜೊಬಾ ಎಣ್ಣೆಗೆ ಬಣ್ಣವಿಲ್ಲ, ವಾಸನೆಯಿಲ್ಲ ಆದರೆ ಇದು ತ್ವಚೆ ಹೊಳಪನ್ನು ಹೆಚ್ಚಿಸುವಲ್ಲಿ ತುಂಬಾ ಪರಿಣಾಮಕಾರಿಯಾದ ಎಣ್ಣೆಯಾಗಿದೆ. ಈ ಎಣ್ಣೆಯನ್ನು ಎಲ್ಲಾ ರೀತಿಯ ತ್ವಚೆಯವರು ಬಳಸಬಹುದು.
* ಇದನ್ನು ತಲೆಗೆ ಹಚ್ಚಿದರೆ ತಲೆ ಕೂದಲು ಹೊಳಪನ್ನು ಪಡೆಯುವುದರ ಜೊತೆಗೆ ತುಂಬಾ ನಯವಾದ ಕೂದಲು ನಿಮ್ಮದಾಗುವುದು.
* ಐ ಲೈನರ್ ಅನ್ನು ಕಣ್ಣಿನಿಂದ ತೆಗೆಯಲು ಇದನ್ನು ಬಳಸಿ , ಸ್ವಲ್ಪ ಹತ್ತಿಗೆ ಹಾಕಿ ಅದರಿಂದ ಕಣ್ಣನ್ನು ಉಜ್ಜಿದರೆ ಮಸ್ಕರಾವನ್ನು ಸುಲಭವಾಗಿ ತೆಗೆಯಬಹುದು.
* ಸ್ನಾನದ ನಂತರ ಮೈಯನ್ನು ಇದರಿಂದ ಮಾಯಿಶ್ಚರೈಸರ್ ಮಾಡಿಕೊಳ್ಳಲು ಸೂಕ್ತವಾದ ಎಣ್ಣೆಯಾಗಿದೆ.
* ಆಡಿನ ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಹಾಲು ತ್ವಚೆ ಸೌಂದರ್ಯವನ್ನು ಹೆಚ್ಚಿಸಲು ಕೂಡ ಸಹಕಾರಿಯಾಗಿದೆ. ಜೊಜೊಬಾ ಎಣ್ಣೆಯನ್ನು ಮೈಗೆ ಹಚ್ಚಿ ನಂತರ ಆಡಿನ ಹಾಲನ್ನು 2-3 ಹನಿ ಸ್ನಾನದ ಟಬ್ ನಲ್ಲಿರುವ ಬಿಸಿ ನೀರಿಗೆ ಹಾಕಿ ಅದರಲ್ಲಿ 10 ನಿಮಿಷ ಕುಳಿತು ಸ್ನಾನ ಮಾಡುವುದರಿಂದ ತ್ವಚೆ ಮೃದುವಾಗುವುದು ಮತ್ತು ಮೈ ಕಾಂತಿ ಹೆಚ್ಚುವುದು.
ಟೀ ಗಿಡದ ಎಣ್ಣೆ (tea tree oil): ಇದನ್ನು ಬಳಸಿ ಮೊಡವೆ ಹೋಗಲಾಡಿಸಬಹುದು, ಬಾಯಿ ಶುಚಿಗೊಳಿಸಲು ಮೌತ್ ವಾಶ್ ಆಗಿ ಅಷ್ಟೇ ಏಕೆ ದೇಹಕ್ಕೆ ಹಚ್ಚುವ ಸುಗಂಧದ್ರವ್ಯವಾಗಿ ಕೂಡ ಬಳಸಬಹುದು.
ಗ್ರೀನ್ ಟೀ ಬ್ಯಾಗ್: ಗ್ರೀನ್ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಹಾಕಿ ಟೀ ತಯಾರಿಸಿದ ಬಳಿಕ ಬಳಿಕ ಆ ಬ್ಯಾಗ್ ಬಿಸಾಡದೆ ಅದನ್ನು ಕಣ್ಣಿನ ಮೇಲೆ ಇಡಿ. ಈ ರೀತಿ ಮಾಡಿದರೆ ಕಣ್ಣಿನ ಸುತ್ತ ಇರುವ ಕಪ್ಪುಕಲೆಗಳು ಕಡಿಮೆಯಾಗಿ ತ್ವಚೆ ಕಾಂತಿ ಹೆಚ್ಚುವುದು.
ಜೇನು: ಜೇನನ್ನು ಮೈಗೆ ಹಚ್ಚಿದರೆ ತ್ವಚೆ ಕಾಂತಿ ಹೆಚ್ಚುವುದು. ತುಟಿಗೆ ಹಚ್ಚಿದರೆ ತುಟಿ ಮೃದುವಾಗುವುದು. ಜೇನು ಕೂದಲಿಗೂ ಒಳ್ಳೆಯದು.
ವಿಟಮಿನ್ ಇ ಮಾತ್ರೆ: ಇದನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವ ಎಣ್ಣೆ ಜೊತೆ ಮಿಶ್ರ ಮಾಡಿ ಹಚ್ಚಿದರೆ ಕೂದಲು ಸೊಂಪಾಗಿ ಬೆಳೆಯುವುದು. ಕಣ್ಣಿನ ಸುತ್ತ ಕಪ್ಪು ಕಲೆ ಇರುವವರು ಇದನ್ನು ಪೇಸ್ಟ್ ಮಾಡಿ ಕಣ್ಣಿನ ಸುತ್ತ ಹಚ್ಚಿದರೆ ಕೆಲವೇ ದಿನದಲ್ಲಿ ಇದರ ಫಲಿತಾಂಶ ತಿಳಿಯುತ್ತದೆ.
ಇದಲ್ಲದೆ ಮೊಟ್ಟೆ, ನಿಂಬೆ ಹಣ್ಣು ಇವುಗಳು ಕೂಡ ಸೌಂದರ್ಯ ಹೆಚ್ಚಿಸುವ ಗುಣ ಹೊಂದಿದೆ.



Click it and Unblock the Notifications
