Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ವಿರ್ಲ್ ಪೂಲ್ ನಲ್ಲಿ ಸ್ನಾನದ ವಿಶೇಷವೇನು?
ವಿರ್ಲ್ ಪೂಲ್ ಬಾತ್ ಸ್ಪಾಗಳಲ್ಲಿ ಇರುತ್ತದೆ ಮತ್ತು ತುಂಬಾ ಶ್ರೀಮಂತರ ಮನೆಗಳಲ್ಲಿ ಮಾಡಿರುತ್ತಾರೆ. ಈ ವರ್ಲ್ ಪೂಲ್ ಬಾತ್ ಮಾಡಿದರೆ ಮನಸ್ಸಿಗೆ ಆಹ್ಲಾದ ನೀಡುತ್ತದೆ. ಇದರಲ್ಲಿ ಸ್ನಾನ ಮಾಡಲು ಹೆಚ್ಚಿನವರು ಸ್ಪಾಗಳಿಗೆ ಭೇಟಿ ನೀಡುವುದು ಸಹಜ.
ಈ ವಿರ್ಲ್ ಪೂಲ್ ನಲ್ಲಿ ಸ್ನಾನ ಮಾಡುವುದು ಸ್ವಲ್ಪ ದುಬಾರಿ ಅಂತ ಮಧ್ಯಮ ವರ್ಗದವರಿಗೆ ಅನಿಸಿದರೆ ಶ್ರೀಮಂತ ವರ್ಗದವರೆಗೆ ಇದು ಸಾಮಾನ್ಯವಾಗಿದೆ. ಈ ವಿರ್ಲ್ ಪೂಲ್ ನಲ್ಲಿ ಸ್ನಾನ ಮಾಡಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

ಮಸಾಜ್: ವಿರ್ಲ್ ಪೂಲ್ ನಲ್ಲಿ ಸ್ನಾನ ಮಾಡುವ ಮೊದಲು ದೇಹಕ್ಕೆ ಮಸಾಜ್ ಮಾಡಿಕೊಡಲಾಗುತ್ತದೆ. ನಂತರ ವಿರ್ಲ್ ಪೂಲ್ ನಲ್ಲಿ ಸ್ನಾನ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಮನಸ್ಸಿಗೆ ಮತ್ತು ದೇಹಕ್ಕೆ ಆರಾಮದ ಅನುಭವವಾಗುತ್ತದೆ. ಈ ಸ್ನಾನವನ್ನು ತಿಂಗಳಿಗೆ ಒಮ್ಮೆ ಮಾಡಿದರೂ ಮೈಕೈ ನೋವು ಹೋಗಲಾಡಿಸಿ ನಿಮ್ಮ ಪೂರ್ತಿ ಮೈಗೆ ಫೇಶಿಯಲ್ ಮಾಡಿಸಿದ ರೀತಿಯಲ್ಲಿ ಹೊಳಪನ್ನು ತುಂಬುತ್ತದೆ.
ತ್ವಚೆ ರಂಧ್ರಗಳನ್ನು ಮರೆಮಾಚುತ್ತೆ: ತಲೆಗೆ ಬಿಸಿ ನೀರು ತಾಕಿದರೆ ತಲೆಬುಡದ ರಂಧ್ರಗಳು ಓಪನ್ ಆಗಿ ಕೂದಲು ಉದುರಲು ಪ್ರಾರಂಭಿಸುತ್ತದೆ. ಆದ್ದರಿಂದ ತಲೆ ಕೂದಲಿಗೆ ಬಿಸಿ ನೀರು ಹಾಕಿ ಸ್ನಾನ ಮಾಡುವುದು ಒಳ್ಳೆಯದಲ್ಲ. ಆದರೆ ತ್ವಚೆಗೆ ಬಿಸಿ ನೀರು ಹಾಕುವುದು ಒಳ್ಳೆಯದು. ತ್ವಚೆ ರಂಧ್ರಗಳು ಓಪನ್ ಆಗಿ, ತ್ವಚೆ ಉಸಿರಾಡಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆಯಲ್ಲಿ ಸುಮ್ಮನೆ ಮುಖ ತೊಳೆದಾಗ ಹೋಗದಂತಹ ಕೊಳೆಯನ್ನು ಹೋಗಲಾಡಿಸಬಹುದು. ವಿರ್ಲ್ ಪೂಲ್ ನಲ್ಲಿ ಸ್ನಾನ ಮಾಡಿದರೆ ಪೂರ್ಣ ಮೈಯನ್ನು ಕ್ಲೆನ್ಸ್ ಮಾಡದಂತಾಗುತ್ತದೆ.
ಸ್ವಚ್ಚ ತ್ವಚೆ ನೀಡುತ್ತೆ: ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಸಾಮಾನ್ಯಕ್ಕಿಂತ ಮೈ ಉಷ್ಣತೆಯನ್ನು ಹೆಚ್ಚು ಮಾಡುತ್ತದೆ. ಇದರಿಂದಾಗಿ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ದೇಹದ ಎಲ್ಲಾ ಭಾಗಗಳಿಗೆ ಸರಿಯುವಂತೆ ಮಾಡುತ್ತದೆ. ರಕ್ತ ಸಂಚಾರ ಸರಿಯಾಗಿ ಇದ್ದರೆ ಸುಂದರವಾದ ತ್ವಚೆಯನ್ನು ಪಡೆಯಬಹುದು.
ಯೌವನವನ್ನು ಕಾಪಾಡುತ್ತದೆ: ಮುಪ್ಪು ಕೂಡ ಮನುಷ್ಯನ ಜೀವನದ ಸಹಜ ಪ್ರಕೃತಿ ನಿಯಮ. ಆದರೆ ಸ್ವಲ್ಪ ತ್ವಚೆ ಆರೈಕೆ ಮಾಡಿದರೆ 30-40 ವರ್ಷದಲ್ಲಿಯೇ ವಯಸ್ಸಾದವರ ರೀತಿ ಕಾಣುವುದನ್ನು ತಪ್ಪಿಸಬಹುದು. ವಿರ್ಲ್ ಪೂಲ್ ನಲ್ಲಿ ಸ್ನಾನ ಮಾಡಿದಾಗ ಮಾನಸಿಕ ಒತ್ತಡ ಕಡಿಮೆ ಮಾಡುತ್ತೆ ಮತ್ತು ತ್ವಚೆಯ ಯೌವನವನ್ನು ಕಾಪಾಡುತ್ತೆ.
ಶುದ್ಧತೆ: ಬಾತ್ ಟಬ್ ನಲ್ಲಿ ಸ್ನಾನ ಮಾಡುವುದಕ್ಕಿಂತ ವರ್ಲ್ ಪೂಲ್ ನಲ್ಲಿ ಸ್ನಾನ ಮಾಡುವುದು ಒಳ್ಳೆಯದು. ಏಕೆಂದರೆ ವಿರ್ಲ್ ಪೂಲ್ ನಲ್ಲಿ ಸ್ನಾನ ಮಾಡಿದಾಗ ಕೊಳೆ ನೀರು ಬತ್ತಿ ಹೊಸ ನೀರು ತುಂಬುವುದು.
ಈ ವಿರ್ಲ್ ಪೂಲ್ ಬಾತ್ ಸ್ವಲ್ಪ ದುಬಾರಿ ಅನಿಸಿದರೂ ಇದನ್ನು ಮಾಡಿದರೆ ನಿಮ್ಮ ತ್ವಚೆಯ ಆರೈಕೆಯನ್ನು ಅತ್ಯತ್ತಮ ರೀತಿಯಲ್ಲಿ ಮಾಡಿದಂತಾಗುವುದು.



Click it and Unblock the Notifications
