Latest Updates
-
ಇಂದಿನಿಂದ ಹಾಲು ದುಬಾರಿ: ಅಮೂಲ್, ಮದರ್ ಡೈರಿ ಬೆಲೆ ಏರಿಕೆ; ಬಜೆಟ್ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬಿಗ್ ಬಾಸ್ ಕನ್ನಡ 13: ದೊಡ್ಮನೆಯ ಹೊಸ ಕ್ಯಾಪ್ಟನ್ ಯಶಸ್ ಕೃಷ್ಣ, ಮನೆಯಲ್ಲಿ ಬದಲಾಗುತ್ತಾ ಗೇಮ್ ಪ್ಲಾನ್? -
ದಟ್ಟ ಮಂಜು ಮತ್ತು ಮಾಲಿನ್ಯ: ಬೆಳಗಿನ ವಾಕಿಂಗ್ ಮಾಡುವವರು ಈ 12 ನಿಮಿಷದ ವ್ಯಾಯಾಮ ಮಿಸ್ ಮಾಡಬೇಡಿ! -
ಮದುವೆ ಪ್ಲಾನಿಂಗ್ ಗೊಂದಲವೇ? ಕನ್ನಡಿಗ ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಮತ್ತು ಶಾಂತಿಯುತ ಮದುವೆ ಮಾರ್ಗದರ್ಶಿ! -
ವಿಶ್ವ ಮಧುಮೇಹ ದಿನ: ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ₹100ರೊಳಗೆ ಸಿಗುವ ಬೆಸ್ಟ್ ಡಯಟ್ ಟಿಪ್ಸ್! -
ದೆಹಲಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆಯಾ? ವಾಟ್ಸಾಪ್ ಸುಳ್ಳು ಸುದ್ದಿಗಳ ಹಿಂದಿನ ಸತ್ಯ ಇಲ್ಲಿದೆ! -
ತಮಿಳುನಾಡಿನಲ್ಲಿ ಮಳೆ ಅಬ್ಬರ: ಕರೆಂಟ್ ಇಲ್ಲದಿದ್ದರೂ ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷದ ವರ್ಕೌಟ್ ಟಿಪ್ಸ್! -
ಹಬ್ಬದ ಫೋಟೋ ಶೇರ್ ಮಾಡ್ತಿದ್ದೀರಾ? ಸಂಬಂಧ ಹಾಳಾಗದಂತೆ ಪ್ರೈವಸಿ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಎಫೆಕ್ಟ್: ಗಂಟಲು ಕೆರೆತ, ಕೆಮ್ಮು ತಡೆಯಲು ಇಂದೇ ಈ ಆರೋಗ್ಯಕರ ಆಹಾರಗಳನ್ನು ಟಿಫಿನ್ನಲ್ಲಿ ಪ್ಯಾಕ್ ಮಾಡಿ! -
ಬಿಗ್ ಬಾಸ್ ಕನ್ನಡ 13: 10ನೇ ವಾರದ ನಾಮಿನೇಷನ್ ಶುರು, ಈ ಬಾರಿ ಯಾರು ಸೇಫ್? ವೋಟ್ ಮಾಡುವುದು ಹೇಗೆ?
ಯಾವ ಕಾರಣಕ್ಕೆ ಫೇಶಿಯಲ್ ಮಾಡಿಸುತ್ತೀರಿ?

ಫೇಶಿಯಲ್ ನ ಸಂಪೂರ್ಣ ಪ್ರಯೋಜನ ಪಡೆಯಲು ಯಾವ ಕಾರಣಕ್ಕೆ ಫೇಶಿಯಲ್ ಮಾಡುತ್ತಿದ್ದೇವೆ, ಅದಕ್ಕೆ ಯಾವ ಫೇಶಿಯಲ್ ಸೂಕ್ತ ಎಂದು ತಿಳಿದಿರಬೇಕು. ಆದ್ದರಿಂದ ಮೊಡವೆ ನಿವಾರಣೆಗೆ, ತ್ವಚೆಯಲ್ಲಿರುವ ಕಲೆ ನಿವಾರಿಸಲು, ನಯವಾದ ತ್ವಚೆ, ವಿಶ್ರಾಂತಿಗಾಗಿ ಫೇಶಿಯಲ್ ಅಂತ 4 ರೀತಿಯ ಫೇಶಿಯಲ್ ವಿಧಾನ ನೀಡಲಾಗಿದೆ. ನಿಮಗೆ ಯಾವುದು ಸೂಕ್ತವೋ ಅದನ್ನು ಮಾಡಬಹುದು.
ಮೊಡವೆಗೆ ಫೇಶಿಯಲ್:
ಅಡುಗೆ ಸೋಡಾದ ಫೇಶಿಯಲ್ ಕೂಡ ಮೊಡವೆಗೆ ಪರಿಣಾಮಕಾರಿ. 3-4 ಚಮಚ ಅಡುಗೆ ಸೋಡಾವನ್ನು ಪೇಸ್ಟ್ ನಂತೆ ತಯಾರಿಸಿಕೊಂಡು ಮೃದುವಾಗಿ ಮುಖಕ್ಕೆ ಉಜ್ಜಿಕೊಂಡು 10 ನಿಮಿಷದ ಬಳಿಕ ಬಟ್ಟೆಯಿಂದ ಒರೆಸಿಕೊಳ್ಳಬೇಕು. ಇದು ಮೊಡವೆ ಹೋಗಿಸುವ ಒಂದು ಸುಲಭದ ದಾರಿ.
ಕಲೆರಹಿತ ತ್ವಚೆಗಾಗಿ ಈ ಫೇಶಿಯಲ್ :
ಬಾಳೆಹಣ್ಣಿನ ಫೇಶಿಯಲ್: 1 ಚೆನ್ನಾಗಿ ಹಣ್ಣಾದ ಬಾಳೆಹಣ್ಣು, 1 ಚಮಚ ಜೇನು, 2-3 ಚಮಚ ನಿಂಬೆರಸ, ಹಾಲಿನ ಕೆನೆ 1/2 ಚಮಚ ಇವುಗಳನ್ನು ಚೆನ್ನಾಗಿ ಬೆರೆಸಿ ಮುಖಕ್ಕೆ ಲೇಪಿಸಿಕೊಂಡು ಮಸಾಜ್ ಮಾಡಿಕೊಳ್ಳಬೇಕು. ನಂತರ 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಬೇಕು.ಈ ಫೇಶಿಯಲ್ ನಿಂದ ತ್ವಚೆಗೆ ಅವಶ್ಯಕವಿರುವ ವಿಟಮಿನ್ ಎ, ಬಿ, ಸಿ ಮತ್ತು ಇ ದೊರೆಯುವುದರಿಂದ ತ್ವಚೆ ನುಣುಪಾಗಿ ಕಲೆ ಮುಕ್ತವಾಗಿ ಹೊಳಪನ್ನು ಹೊಂದುವುದು
3. ನಯವಾದ ತ್ವಚೆಗಾಗಿ :
ಟೊಮೆಟೊ ಫೇಶಿಯಲ್ : ಹಣ್ಣಾದ ಟೊಮೆಟೊ 1, 1 ಚಮಚ ನಿಂಬೆ ರಸ, ಒಂದು ಚಮಚ ಓಟ್ ಮೀಲ್ಸ್ ಇವುಗಳನ್ನು ಮಾಡಿ ಈ ಮಿಶ್ರಣವನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬೇಕು. ನಂತರ ಬಿಸಿ ನೀರಿನಿಂದ ಮುಖ ತೊಳೆಯಬೇಕು.
4. ವಿಶ್ರಾಂತಿಗಾಗಿ ಹರ್ಬಲ್ ಫೇಶಿಯಲ್ :
ಒಂದು ಮೊಟ್ಟೆಯ ಬಿಳಿ, ಒಂದು ಚಮಚ ಗ್ಲಿಸರಿನ್, ಒಂದು ಜೇನು ಒಂದು ಚಮಚ ಹಾಲಿನ ಪುಡಿ ಈ ಎಲ್ಲಾ ವಸ್ತುಗಳನ್ನು ಮಿಶ್ರ ಮಾಡಬೇಕು. ಹೀಗೆ ಮಿಶ್ರ ಮಾಡುವಾಗ ಸ್ವಲ್ಪ ಗಟ್ಟಿಯಾಗಿರುವಂತೆ ಮಾಡಬೇಕು. ಇಲ್ಲದಿದ್ದರೆ ಮುಖಕ್ಕೆ ಹಚ್ಚಿದರೆ ಮಿಶ್ರಣ ಮುಖದಲ್ಲಿ ಜಾರಲಾರಂಭಿಸುತ್ತದೆ. ಈಗ ಈ ಮಿಶ್ರಣಕ್ಕೆ ಸ್ವಲ್ಪ ಲ್ಯಾವೆಂಡರ್ ಎಣ್ಣೆಯನ್ನು ಸೇರಿಸಬೇಕು.
ಈಗ ಈ ಮಿಶ್ರಣವನ್ನು ಮುಖಕ್ಕೆ ಮೇಲ್ಮುಖವಾಗಿ ಹಚ್ಚಿ 15- 20 ನಿಮಿಷ ಬಿಡಬೇಕು. ಹೀಗೆ ಹಚ್ಚಿ ಆರಾಮ ಕುರ್ಚಿಯಲ್ಲಿ ಕುಳಿತು ಕಣ್ಣುಗಳನ್ನು ಮುಚ್ಚಿ ನಿಧಾನಕ್ಕೆ ಉಸಿರಾಡುತ್ತಿರಬೇಕು. ಲ್ಯಾವೆಂಡರ್ ಎಣ್ಣೆ ಬಳಸಿರುವುದರಿಂದ ತುಂಬಾ ವಿಶ್ರಾಂತಿಯ ಅನುಭವ ಉಂಟಾಗುತ್ತದೆ.
ಈಗ ಟವಲ್ ಅನ್ನು ಬಿಸಿ ನೀರಿನಲ್ಲಿ ನೆನೆಸಿ ಅದರಿಂದ ಮುಖವನ್ನು ಉಜ್ಜಿ ಫೇಶಿಯಲ್ ತೆಗೆಯಬೇಕು. ನಂತರ ನೀರು ಹಾಕಿ ಮುಖ ತೊಳೆದರೆ ನುಣಪಾದ ಮುಖ ನಿಮ್ಮದಾಗುವುದು.



Click it and Unblock the Notifications
