Latest Updates
-
ರಾಷ್ಟ್ರೀಯ ಯೋಗಾಸನ ಚಾಂಪಿಯನ್ಶಿಪ್: ಅಯೋಧ್ಯೆಯಲ್ಲಿ ಯೋಗದ ಅದ್ಭುತ ಕೌಶಲ ಪ್ರದರ್ಶನ -
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ -
ಬಿಸಿಲಿನಲ್ಲಿ ವ್ಯಾಯಾಮ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಹೈರಾಕ್ಸ್ ಬೆಂಗಳೂರು: ಗೆಲುವಿಗಾಗಿ ಬೆಳಗಿನ ತಯಾರಿ ಹೀಗಿರಲಿ -
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ
ಮೊಡವೆ ಸಮಸ್ಯೆಗೆ 5 ಅಸಾಮಾನ್ಯ ಕಾರಣಗಳು
ಮೊಡವೆಗೆ ಪರಿಹಾರ ಹುಡುಕುವ ಮುನ್ನ, ಅದು ಉಂಟಾಗಲು ಕಾರಣಗಳೇನು ಎಂದು ತಿಳಿದುಕೊಳ್ಳಬೇಕು. ದೇಹದಲ್ಲಿ ಹಾರ್ಮೋನ್ ಗಳಲ್ಲಿ ಅಸಮತೋಲನ, ಎಣ್ಣೆ ಅಂಶವಿರುವ ಆಹಾರ ಸೇವನೆ ಇವುಗಳಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ ಅನ್ನುವುದು ನಮಗೆ ತಿಳಿದಿರುವ ವಿಷಯ. ಆದರೆ ಇವುಗಳಲ್ಲದೆ ಇನ್ನೂ ಕೆಲವು ಕಾರಣಗಳಿಂದ ಕೂಡ ಮೊಡವೆ ಸಮಸ್ಯೆ ಉಂಟಾಗುತ್ತವೆ. ಆದರೆ ಹೆಚ್ಚಿನವರಿಗೆ ಮೊಡವೆ ಬರಲು ಇವುಗಳು ಕೂಡ ಒಂದು ಕಾರಣವಾಗುತ್ತದೆ ಎಂಬ ಅಂಶ ತಿಳಿದಿರುವುದೇ ಇಲ್ಲ! ಮೊಡವೆಗೆ ಉಂಟಾಗಲು ಕಾರಣವಾಗಿರುವ ಆ ಆಶ್ಚರ್ಯಕರ ಸಂಗತಿಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.

ಮೊಬೈಲ್ ಫೋನ್: ಮೊಬೈಲ್ ಫೋನ್ ನಲ್ಲಿ ತುಂಬಾ ಹೊತ್ತು ಮಾತನಾಡಿದರೆ ಮೆದುಳಿಗೆ ಹಾನಿಯುಂಟಾಗುತ್ತದೆ, ಕಿವುಡುತನ ಉಂಟಾಗುತ್ತದೆ ಎಂದು ಹೇಳಲಾಗಿದೆ, ಆದರೆ ಇದೇ ಮೊಬೈಲ್ ಫೋನ್ ಮೊಡವೆ ಸಮಸ್ಯೆ ಹೆಚ್ಚಾಗಲು ಕೂಡ ಒಂದು ಕಾರಣವಾಗಿದೆ. ಮೊಬೈಲ್ ಅನ್ನು ಕಿವಿಗೆ ಹಿಡಿದುಕೊಂಡು ಮಾತನಾಡುವಾಗ ಮೊಬೈಲ್ ಕೆನ್ನೆಗೆ ತಾಗುತ್ತಿರುತ್ತದೆ, ಮುಖದ ಬೆವರು, ಎಣ್ಣೆಯಂಶ ಮೊಬೈಲ್ ನಲ್ಲಿ ಇದ್ದರೆ ಬ್ಯಾಕ್ಟೀರಿಯಾಗಳು ಮುಖದಲ್ಲಿ ಬಂದು ಕುಳಿತುಕೊಳ್ಳುತ್ತದೆ. ಮೊಬೈಲ್ ಮಾತನಾಡುವಾಗ ಕೆನ್ನೆಗೆ ತಾಗುವುದು ಸಹಜ, ಆಗ ಅದರಲ್ಲಿರುವ ಬ್ಯಾಕ್ಟೀರಿಯಾಗಳು ಕೆನ್ನೆಗೆ ತಾಗಿ ಮೊಡವೆ ಉಂಟಾಗುತ್ತದೆ.
ಪ್ರಯಾಣ: ವಾತಾವಾರಣ ಬದಲಾದಾಗ, ಜಾಗ ಬದಲಾದಾಗ, ಪ್ರಯಾಣ ಈ ಎಲ್ಲಾ ಕಾರಣಗಳಿಂದ ಮೊಡವೆ ಉಂಟಾಗುತ್ತದೆ. ಪ್ರಯಾಣದಲ್ಲಿ ದೂಳು ಮುಖಕ್ಕೆ ತಾಗುವುದು ಸಹಜ, ಇದರಿಂದ ಮುಖದಲ್ಲಿ ಅಲರ್ಜಿ ಅಥವಾ ಮೊಡವೆ ಸಮಸ್ಯೆ ಉಂಟಾಗುವುದು. ಆದ್ದರಿಂದ ದೂಳಿರುವ ಪ್ರದೇಶಕ್ಕೆ ಹೋದಾಗ ಮುಖಕ್ಕೆ ದೂಳು ತಾಗದಂತೆ ಎಚ್ಚರಿಕೆವಹಿಸಬೇಕು.
ಕೂದಲಿನ ವಿನ್ಯಾಸ: ನಿಮ್ಮ ಕೂದಲು ಕೂಡ ಮೊಡವೆ ಬರಲು ಒಂದು ಮುಖ್ಯ ಕಾರಣವಾಗಿದೆ. ಕೂದಲಿನಲ್ಲಿ ಎಣ್ಣೆಯಂಶ, ತಲೆಯಲ್ಲಿ ಹೊಟ್ಟು ಈ ಸಮಸ್ಯೆಗಳಿದ್ದರೆ ಮೊಡವೆ ಉಂಟಾಗುವುದು. ಆದ್ದರಿಂದ ತಲೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕೂದಲಿನ ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆ ಆರೋಗ್ಯಕ್ಕೂ ಒಳ್ಳೆಯದು.
ಕೈಗಳಿಂದ ಮುಖವನ್ನು ಉಜ್ಜುವುದು: ಆಗಾಗ ಮುಖ ಉಜ್ಜುವುದು, ಕೈಗಳನ್ನು ಸ್ವಚ್ಛ ಮಾಡದೆ ಮುಖವನ್ನು ಮುಟ್ಟುವುದು ಮಾಡುತ್ತಿದ್ದರೆ ಮುಖದಲ್ಲಿ ಮೊಡವೆ ಉಂಟಾಗುವುದು. ಒಂದು ವೇಳೆ ಮುಖದಲ್ಲಿ ಮೊಡವೆ ಇದ್ದರೆ ಮುಟ್ಟಲೇ ಬಾರದು. ಆಗಾಗ ಮುಟ್ಟುತ್ತಿದ್ದರೆ ಮೊಡವೆ ಸಮಸ್ಯೆ ಹೆಚ್ಚಾಗಿ ಮುಖದಲ್ಲಿ ಕಲೆಗಳು ಬೀಳುತ್ತದೆ.
ಗಡಸು ನೀರು: ನೀರು ಕೂಡ ಮೊಡವೆ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಗಡಸು ನೀರಿನಲ್ಲಿ ಮುಖ ತೊಳೆದರೆ ಅದರಲ್ಲಿ ಕೆಲವು ರಾಸಾಯನಿಕಗಳಿರುವುದರಿಂದ ಮುಖದಲ್ಲಿ ಮೊಡವೆ ಸಮಸ್ಯೆ ಕಂಡುಬರುತ್ತದೆ.



Click it and Unblock the Notifications











