Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಗ್ಲಿಸೆರಿನ್ ಬಳಸಿ 5 ಬಗೆಯ ಫೇಸ್ ಮಾಸ್ಕ್

ಮುಖದ ಅಂದ ಹೆಚ್ಚಿಸುವ ಗ್ಲಿಸೆರಿನ್ ಫೇಸ್ ಮಾಸ್ಕ್:
ಗ್ಲಿಸೆರಿನ್ ಮತ್ತು ಜೇನು: ಒಂದು ಚಮಚ ಜೇನು ಮತ್ತು ಒಂದು ಚಮಚ ಗ್ಲಿಸೆರಿನ್ ತೆಗೆದುಕೊಂಡು ಮಿಶ್ರಣ ಮಾಡಬೇಕು. ನಂತರ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ಮುಖ ತೊಳೆಯಬೇಕು. ಈ ರೀತಿ ಮಾಡಿದರೆ ತ್ವಚೆ ಒಣಗುವುದಿಲ್ಲ, ಮುಖದಲ್ಲಿ ಹೊಳಪು ಹೆಚ್ಚಾಗುವುದು.
ಗ್ಲಿಸೆರಿನ್ ಮತ್ತು ಬಾಳೆಹಣ್ಣು: ಒಂದು ಚಮಚ ಗ್ಲಿಸೆರಿನ್ ಗೆ ಪೇಸ್ಟ್ ರೀತಿ ಮಾಡಿದ್ದ ಬಾಳೆಹಣ್ಣನ್ನು 3 ಚಮಚ ಹಾಕಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 30 ನಿಮಿಷದ ಬಳಿಕ ಮುಖ ತೊಳೆಯಬೇಕು. ಈ ರೀತಿ ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಮುಖದಲ್ಲಿರುವ ಕಲೆಗಳು ಕ್ರಮೇಣ ಕಡಿಮೆಯಾಗುವುದು.
ಗ್ಲಿಸೆರಿನ್ ಮತ್ತು ಓಟ್ಸ್: 3 ಚಮಚ ಓಟ್ಸ್ ಮೀಲ್ಸ್ ಪುಡಿಗೆ 2 ಚಮಚ ಗ್ಲಿಸೆರಿನ್ ಹಾಕಿ ಮಿಶ್ರಣ ಮಾಡಿ, ಈ ಮಿಶ್ರಣದಿಂದ ಮುಖವನ್ನು ಸ್ಕ್ರಬ್ ಮಾಡಿ 15 ನಿಮಿಷ ಬಿಟ್ಟು ಮುಖ ತೊಳೆದರೆ ಬ್ಲ್ಯಾಕ್ ಹೆಡ್ಸ್ ಕಡಿಮೆಯಾಗುವುದು.
ಗ್ಲಿಸೆರಿನ್, ಮೊಟ್ಟೆ ಮತ್ತು ನಿಂಬೆರಸ: ಒಂದು ಪಾತ್ರೆಯಲ್ಲಿ ಒಂದು ಚಮಚ ಗ್ಲಿಸೆರಿನ್, ಮೊಟ್ಟೆಯ ಬಿಳಿ ಮತ್ತು ಅರ್ಧ ನಿಂಬೆ ರಸ ಹಾಕಿ ಮಿಶ್ರಣ ಮಾಡಿ ಇದನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆದರೆ ಮುಖ ಸ್ವಚ್ಛವಾಗಿ ಕಾಣುತ್ತದೆ.
ಕಪ್ಪು ಮಣ್ಣು ಮತ್ತು ಗ್ಲಿಸೆರಿನ್: ತ್ವಚೆ ಆರೈಕೆಗೆ ಕಪ್ಪು ಮಣ್ಣು ತುಂಬಾ ಒಳ್ಳೆಯದು. 1 ಚಮಚ ಕಪ್ಪು ಮಣ್ಣಿಗೆ 2 ಚಮಚ ಗ್ಲಿಸೆರಿನ್ ಹಾಕಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆದರೆ ಅಕಾಲಿಕ ನೆರಿಗೆ ಬೀಳುವುದಿಲ್ಲ ಮತ್ತು ಮುಖದ ಅಂದ ವೃದ್ಧಿಸುವುದು.



Click it and Unblock the Notifications
