Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬಣ್ಣದ ಹಬ್ಬದಲ್ಲಿ ತ್ವಚೆ ರಕ್ಷಣೆಗೆ ಸರಳ ಉಪಾಯ

ಈ ಕಡೆ ಕಾಲೇಜುಗಳಲ್ಲಿ ಫ್ರೆಂಡ್ಸ್ ಎಲ್ಲಾ ಸೇರಿ ಹೋಳಿ ಹಬ್ಬವನ್ನು ಆಚರಿಸುತ್ತೇವೆ. ಪರಸ್ಪರ ಬಣ್ಣ ಎರಚುತ್ತಾ ಸಂತೋಷ ಪಡುವಾಗ ತ್ವಚೆ ಬಗ್ಗೆ ಸ್ವಲ್ಪ ಮುನ್ನಚ್ಚರಿಕೆ ವಹಿಸದಿದ್ದರೆ ನಂತರ ಅಲರ್ಜಿ, ಮೊಡವೆ ಅಂತ ತ್ವಚೆ ಸಮಸ್ಯೆಯನ್ನು ಹೋಗಲಾಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ಆದ್ದರಿಂದ ಹೋಳಿಯಲ್ಲಿ ತ್ವಚೆಯನ್ನು ಕೆಮಿಕಲ್ ನಿಂದ ಕಾಪಾಡಿಕೊಳ್ಳಲು ಈ ಕೆಳಗಿನ ಸುಲಭ ಉಪಾಯಗಳನ್ನು ಪಾಲಿಸಬಹುದು:
1. ಹೋಳಿ ದಿನ ಮುಖ ಮತ್ತು ಕೈ ಕಾಲುಗಳಿಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿರುವುದು ಒಳ್ಳೆಯದು. ಬಣ್ಣ ಎರಚಲು ಹೋಗುವ 45 ನಿಮಿಷ ಮೊದಲು ಈ ಜೆಲ್ಲಿಯನ್ನು ಹಚ್ಚಿಕೊಳ್ಳಬೇಕು. ಈ ರೀತಿ ಹಚ್ಚಿದರೆ ಬಣ್ಣದಿಂದ ತ್ವಚೆ ಹಾಳಾಗುವುದನ್ನು ತಡೆಯಬಹುದು.
2. ಹೋಳಿಗೆ ಹೋಗುವ ಮೊದಲು ತೆಂಗಿನೆಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದು ತುಂಬಾ ಒಳ್ಳೆಯದು.
3. ಮಾರ್ಚ್ ತಿಂಗಳಿನಲ್ಲಿ ಬಿಸಿಲು ಹೆಚ್ಚಾಗಿ ಬೀಳುವುದರಿಂದ ಮೈ ಬೇಗನೆ ಕಪ್ಪಾಗುತ್ತದೆ. ಆದ್ದರಿಂದ ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳುವುದು ಒಳ್ಳೆಯದು. ಇದನ್ನು ಎಣ್ಣೆ ಅಥವಾ ಪೆಟ್ರೋಲಿಯಂ ಜೆಲ್ಲಿ ಹಚ್ಚುವ ಮೊದಲು ಹಚ್ಚಬೇಕು.
4. ಹೋಳಿ ಹಬ್ಬದ ಮುನ್ನ ಅಂದರೆ ಇವತ್ತು ಯಾವುದೇ ಫೇಶಿಯಲ್ ಮಾಡದಿರುವುದು ಒಳ್ಳೆಯದು. ಏಕೆಂದರೆ ಫೇಶಿಯಲ್ ಮಾಡಿಸಿದ ಮುಖಕ್ಕೆ ಬಣ್ಣ ಬಿದ್ದರೆ ಅಲರ್ಜಿ ಉಂಟಾಗಬಹುದು.
5. ಬಣ್ಣದಲ್ಲಿರುವ ಕೆಮಿಕಲ್ ಮುಖದ ಮೇಲೆ ಇದ್ದರೆ ಉಜ್ಜಿದರೂ ಹೋಗುವುದಿಲ್ಲ. ಸೋಪು ಹಾಕಿ ತೊಳೆದರೂ ಹಾಗೆ ಇರುತ್ತದೆ. ಆದ್ದರಿಂದ ಮುಖವನ್ನು ಸ್ಕ್ರಬ್ಬಿಂಗ್ ಮಾಡಿ. ಹೀಗೆ ಸ್ಕ್ರಬ್ಬಿಂಗ್ ಮಾಡುವಾಗ ಸ್ವಲ್ಪ ಬಲವಾಗಿ ತಿಕ್ಕಿದರೆ ಮಾತ್ರ ರಾಸಾಯನಿಕಗಳನ್ನು ಹೋಗಲಾಡಿಸಬಹುದು.



Click it and Unblock the Notifications
