Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಫೇಶಿಯಲ್ ಮಾಡುವ ಮುನ್ನ ಈ ಅಂಶ ಗಮನಿಸಿ!

18 ವಯಸ್ಸಿನ ಮೇಲೆ 30ರ ಒಳಗೆ:
1. ವಯಸ್ಸು 20 ಸಮೀಪಿಸಿದಾಗ ಹೆಚ್ಚಿನವರಿಗೆ ಮೊಡವೆಗಳು ಬರುವುದು ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಕಲೆಗಳನ್ನು ಹೋಗಲಾಡಿಸಿ ಕಲೆರಹಿತ ತ್ವಚೆಗಾಗಿ ಹೆಚ್ಚಿನ ಆರೈಕೆ ಮಾಡಬೇಕು.
2. ಈ ವಯಸ್ಸಿನವರು ತಿಂಗಳಿಗೊಮ್ಮೆ ಕ್ಲೀನ್ ಅಪ್ ಮಾಡಿಸಿಕೊಳ್ಳುವುದು, ಹರ್ಬಲ್ ಫೇಶಿಯಲ್ ಮಾಡಿಸಿಕೊಳ್ಳುವುದು ಒಳ್ಳೆಯದು. ಇದರಿಂದ ತ್ವಚೆಯಲ್ಲಿ ಮಾಯಿಶ್ಚರೈಸರ್ ಕಾಪಾಡಿಕೊಳ್ಳಬಹುದು.
3. ಅರಿಶಿಣ, ಪುದೀನಾ, ಸೌತೆಕಾಯಿ, ಜೇನು ಈ ಸಾಮಾಗ್ರಿಗಳನ್ನು ಹಾಕಿ ಮಾಡುವ ಫೇಶಿಯಲ್ ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ.
30ರ ಆಸುಪಾಸಿನವರು:
1.ವಯಸ್ಸಿನಲ್ಲಿ ತ್ವಚೆ ಸ್ವಲ್ಪ ಕಾಂತಿಯನ್ನು ಕಳೆದುಕೊಳ್ಳಲಾರಂಭಿಸುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಆರೈಕೆ ಮಾಡಬೇಕು.
2. ಫ್ರೂಟ್ ಫೇಶಿಯಲ್ ಮಾಡಿಸಿ ಮುಖದಲ್ಲಿ ಮಾಯಿಶ್ಚರೈಸರ್ ಕಾಪಾಡಿಕೊಳ್ಳಬೇಕು. ಮುಖ ಒಣಗಿಕೊಂಡು ಇದ್ದರೆ ನೆರಿಗೆಗಳು ಬೇಗನೆ ಉಂಟಾಗುತ್ತದೆ. ಆದ್ದರಿಂದ ಮುಖದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು.
40ರ ಆಸುಪಾಸಿನವರು:
1. ಈ ವಯಸ್ಸಿನಲ್ಲಿ ಮುಖದಲ್ಲಿ ನೆರಿಗೆಗಳು ಬರಲಾರಂಭಿಸುತ್ತದೆ. ಆದರೆ ಮುಖವನ್ನು ಮಾಯಿಶ್ಚರೈಸರ್ ಆಗಿ ಇಟ್ಟುಕೊಂಡರೆ ಹೆಚ್ಚಾಗಿ ನೆರಿಗೆ ಬೀಳುವುದನ್ನು ತಡೆಗಟ್ಟಬಹುದು.
2. ಲೈಟ್ ಫ್ರೂಟ್ ಬೇಸಡ್ ಕ್ರೀಮುಗಳನ್ನು ಹಚ್ಚಿ. ಸೇಬು, ಬಾಳೆಹಣ್ಣು, ಪಪ್ಪಾಯಿ ಇವುಗಳನ್ನು ಮುಖಕ್ಕೆ ಹಚ್ಚುವುದು ಒಳ್ಳೆಯದು.
3. ಈ ವಯಸ್ಸಿನಲ್ಲಿ ಸ್ಟೀಮಿಂಗ್ ಮಾಡುವುದು ಒಳ್ಳೆಯದಲ್ಲ. ಮಾಡಿದರೆ ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರುವುದು.



Click it and Unblock the Notifications
