Latest Updates
-
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ!
ಫೇರ್ ನೆಸ್ ಕ್ರೀಮ್ ನಿಜಕ್ಕೂ ಅಂದ ಹೆಚ್ಚಿಸುತ್ತದೆಯೆ?

ಆದರೆ ಈ ಕ್ರೀಮ್ ಗಳನ್ನು ಬಳಸುವಾಗ ಅದರ ಪ್ರಯೋಜದ ಬಗ್ಗೆ ಮಾತ್ರ ಯೋಚಿಸುತ್ತೇವೆ. ಆದರೆ ಅದರಿಂದ ತ್ವಚೆಯಲ್ಲಿ ಉಂಟಾಗುವ ಅಡ್ಡ ಪರಿಣಾಮದ ಕುರಿತು ಯೋಚಿಸಲು ಹೋಗುವುದೆ ಇಲ್ಲ.
ಕ್ರೀಮ್ ಗಳು ಮುಖ ಒಣಗಿದಂತೆ ಆಗುವುದನ್ನು ತಡೆಯಬಹುದು, ಮುಖಕ್ಕೆ ಹೊಳಪನ್ನು ಕೊಡಬಹುದು ಆದರೆ ಅದರ ಬಳಕೆಯನ್ನು ನಿಲ್ಲಿಸಿದರೆ ತ್ವಚೆ ತನ್ನ ಅಂದವನ್ನು ಕಳೆದು ಕೊಳ್ಳತೊಡಗುತ್ತದೆ.
ಇಂತಹ ಫೇರ್ ನೆಸ್ ಕ್ರೀಮ್ ಗಳಲ್ಲಿ ಸಾಮಾನ್ಯಾವಾಗಿ ಎಷ್ಟು ಪ್ರಮಾಣದಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಲಾಗಿದೆ ಎಂದು ಹೇಳಿರುವುದಿಲ್ಲ, ಒಂದು ವೇಳೆ ಅದರಲ್ಲಿ ಬರೆದಿದ್ದರು ಯಾರೂ ಅದರ ಬಗ್ಗೆ ಹೆಚ್ಚು ಗಮನ ಕೊಡದೆ, ಅದರಿಂದ ಎಷ್ಟು ಬೇಗ ಬೆಳ್ಳಗೆ ಕಾಣಬಹುದು ಎಂಬುದರ ಬಗ್ಗೆ ಮಾತ್ರ ಚಿಂತಿಸುತ್ತೇವೆ.
ತ್ವಚೆ ಬಿಳಿ ಮಾಡುವ ಕ್ರೀಮ್ ಗಳಲ್ಲಿ ಸ್ಟೆರಾಯ್ಡ್ ಅಂಶವನ್ನು ಬಳಸಲಾಗುತ್ತದೆ. ಆದರೆ ಇದನ್ನು ಅಧಿಕ ಪ್ರಮಾಣದಲ್ಲಿ ಬೆರೆಸಿರುವ ಕ್ರೀಮ್ ಹಚ್ಚುವುದರಿಂದ ಮುಖದಲ್ಲಿ ಕಲೆ,ಮೊಡವೆ, ಚರ್ಮ ಸಂಬಂಧಿ ಅಲರ್ಜಿ ಮುಂತಾದ ಸಮಸ್ಯೆಗಳು ಸಹ ಉಂಟಾಗುತ್ತದೆ.
ಅಲ್ಲದೆ ಕೆಲವೊಂದು ಫೇರ್ ನೆಸ್ ಕ್ರೀಮ್ ಗಳಲ್ಲಿ ಹೈಡ್ರೋಕ್ಯುನನ್ ಎಂಬ ರಾಸಾಯನಿಕವನ್ನು ಬಳಸಿರುತ್ತಾರೆ , ಇದರಲ್ಲಿ ಬ್ಲೀಚಿಂಗ್ ಅಂಶ ಜಾಸ್ತಿ ಇರುವುದರಿಂದ ಮುಂದೆ ಮುಖದಲ್ಲಿ ಬಿಳಿ ಮಚ್ಚೆ, ಸೂರ್ಯನಿಗೆ ಮುಖ ಒಡ್ಡಲಾಗದಷ್ಟು ಸೂಕ್ಷ್ಮತೆ ಉಂಟಾಗುವುದು.
ಶೇ. 4ಕ್ಕಿಂತ ಅಧಿಕ ಹೈಡ್ರೋಕ್ಯುನನ್ ಅಂಶವಿರುವ ಕ್ರೀಮ್ ಗಳು ಮುಖದ ಕಾಂತಿ ಹೆಚ್ಚಿಸುವುದರ ಬದಲಾಗಿ , ನೈಜ ಸೌಂದರ್ಯವನ್ನು ನಾಶಮಾಡುತ್ತದೆ.
ಆದ್ದರಿಂದ ರಾಸಾಯಾನಿಕ ವಸ್ತುಗಳನ್ನು ಬಳಸುವುದರ ಬದಲು ನೈಸರ್ಗಿಕ ವಸ್ತುಗಳನ್ನು ಬಳಸಿದರೆ ಅಂದ ಹೆಚ್ಚುವುದರ ಜೊತೆಗೆ ಮುಖದ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
ನೈಸರ್ಗಿಕ ಫೇಸ್ ಪ್ಯಾಕ್ ಆಗಿ ಲೋಳೆಸರ, ಅರಿಶಿಣ, ಜೇನು, ಹಾಲು, ನಿಂಬೆರಸ ಬಳಸಿದರೆ ತ್ವಚೆಯ ಆರೋಗ್ಯವನ್ನು ಹೆಚ್ಚುತ್ತದೆ.



Click it and Unblock the Notifications