Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ನಿಮ್ಮ ಸೌಂದರ್ಯಕ್ಕೆ ನೀವೇ ಜವಾಬ್ದಾರರು!

ಈ ಕ್ರೀಮ್ ಬಳಿದುಕೊಂಡರೆ ಏಳೇ ದಿನಗಳಲ್ಲಿ ಕಪ್ಪು ಮಾಯವಾಗಿ ಬೆಳ್ಳಗಾಗುತ್ತೀರಿ. ಈ ಸೋಪು ಹಚ್ಚಿಕೊಂಡರೆ ಹಾಲಿನಲ್ಲಿ ಅದ್ದಿತೆಗೆದಂತೆ ಫಳಫಳಿಸುತ್ತೀರಿ. ಈ ಪೌಡರ್ ಹಚ್ಚಿಕೊಂಡರೆ ಸೂರ್ಯ ಕೂಡ ನಿಮ್ಮ ಚರ್ಮವನ್ನು ಸೋಂಕಲಾರ... ಇತ್ಯಾದಿ. ಇವನ್ನೆಲ್ಲ ಹಚ್ಚಿಕೊಂಡರೆ, ಮೆತ್ತಿಕೊಂಡರೆ ಅಥವಾ ಬಳಿದುಕೊಂಡರೆ ಬೆಳ್ಳಗಾಗ್ತಾರಾ?
ಸೌಂದರ್ಯ ಎಂಬುದು ದೇವರು ಕೊಟ್ಟ ವರ. ಅದನ್ನು ನಾವು ಸಾಧ್ಯವಾದಷ್ಟು ರೀತಿಯಲ್ಲಿ ಪ್ರಾಕೃತಿಕವಾಗಿಯೇ ಕಾಪಾಡಿಕೊಂಡು ಬರಬೇಕು. ಆ ಕ್ರೀಮ್ ಗಳನ್ನು ಹಚ್ಚಿಕೊಂಡು ಬೆಳ್ಳಗಾಗುವ ಹಾಗಿದ್ದರೆ ಪ್ರಪಂಚದಲ್ಲಿ ಯಾರೂ ಕಪ್ಪಗೆ ಇರುತ್ತಿರಲಿಲ್ಲ. ಟಿವಿಗಳಲ್ಲಿ ಬರುವ ಸೌಂದರ್ಯವರ್ಧಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇವು ಕೆಲವರಿಗೆ ಒಗ್ಗುವುದಿಲ್ಲ. ಅತಿಯಾಗಿ ಬಳಸಿದರೆ ಚರ್ಮಕ್ಕೆ ಹಾನಿ ಕೂಡ ಮಾಬಹುದು.
ಹೆಣ್ಣು ಹೇಗಿದ್ದರೇನು? ಎಷ್ಟೇ ಸುಂದರವಾಗಿದ್ದರೇನು? ಮುಖದಲ್ಲಿ ಸಣ್ಣದೊಂದು ನಗುವಿಲ್ಲದಿದ್ದರೆ ಅಂದವಾಗಿ ಕಾಣುವುದಿಲ್ಲ. ಎಷ್ಟು ಬೇಕೋ ಅಷ್ಟು ಅಲಂಕಾರ ಮಾಡಿಕೊಂಡರೆ ಹೆಚ್ಚು ಸುಂದರವಾಗಿ ಕಾಣಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ನಮ್ಮಲ್ಲಿ ಎಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದೇವೆ ಎಂಬುದರ ಮೇಲೆ ನಮ್ಮ ಸೌಂದರ್ಯ ಅಭಿವ್ಯಕ್ತವಾಗುತ್ತದೆ.
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ದೊಡ್ಡದು. ಇರುವ ಸೌಂದರ್ಯವನ್ನೇ ಜತನದಿಂದ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಮದ್ದುಗಳು ಸಿಗುತ್ತವೆ. ಕೆಲವು ಇಲ್ಲಿವೆ. ಇವನ್ನು ನಿಯಮಿತವಾಗಿ ಬಳಸಿರಿ ಮತ್ತು ದುಬಾರಿ ಕ್ರೀಮ್, ಸೋಪುಗಳಿಗೆ ಗೋಲಿ ಹೊಡೆಯಿರಿ.
* ಮುಖವನ್ನು ಆದಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳಿ. ದಿನಕ್ಕೆ ಕನಿಷ್ಠ ಎರಡು ಬಾರಿ ತೊಳೆಯಲು ಮರೆಯಬೇಡಿ.
* ವಾರಕ್ಕೆ ಎರಡು ಬಾರಿ ಹಾಲಿನಿಂದ ಮುಖ ತೊಳೆಯಿರಿ. ಕೆನೆಯನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ಕಾಂತಿಯುತವಾಗುತ್ತದೆ.
* ಜೇನುತುಪ್ಪ ಮುಖಕ್ಕೆ ತೆಳುವಾಗಿ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದರೆ ಮುಖ ಶುಭ್ರವಾಗುತ್ತದೆ ಹಾಗು ಕಾಂತಿಯುತವಾಗುತ್ತದೆ.
* ಮುಖಕ್ಕೆ ಕಡಲೆಹಿಟ್ಟು ಹಾಗು ಜೇನುತುಪ್ಪ ಬೆರೆಸಿ ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಮಾಡಿ ಹಚ್ಚಿಕೊಂಡು ಹದಿನೈದು ನಿಮಿಷ ಬಿಟ್ಟು ತೊಳೆದರೆ ಕಪ್ಪುಕಲೆಗಳು ಮಾಯವಾಗಿರುತ್ತವೆ.
* ಅಕ್ಕಿ ಹಿಟ್ಟನ್ನು ಸ್ಕ್ರಬ್ ತರಹ ಉಪಯೋಗಿಸಬಹುದು. ಅಂದರೆ ಅಕ್ಕಿ ಹಿಟ್ಟು ಮುಖಕ್ಕೆ ಹಾಕಿ ಉಜ್ಜಿ ತೊಳೆದರೆ ಮುಖದಲ್ಲಿ ಇರುವ ಕೊಳೆ ಹಾಗು ಎಣ್ಣೆ ಮಂಗಮಾಯವಾಗುತ್ತದೆ.
;


Click it and Unblock the Notifications
