Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ವಾವ್! ಸೀರೆಯಲ್ಲಿ ಕಣ್ಮನ ಸೆಳೆದ ಸುಂದರಿ ವಿದ್ಯಾ ಬಾಲನ್!
ಅಂತೂ ಕೊನೆಗೆ ವಿದ್ಯಾ ಬಾಲನ್ ಸೀರೆಯಲ್ಲಿ ತಮ್ಮ ಅದ್ಭುತ ರೂಪ ಲಾವಣ್ಯ ಬಿಚ್ಚಿಟ್ಟಿದ್ದಾರೆ. ಗೌರವಯುತವಾದ ಪ್ರಶಸ್ತಿ ಐಫಾ 2014 ರ ಪ್ರಚಾರ ಕಾರ್ಯಕ್ರಮದಲ್ಲಿ ವಿದ್ಯಾ ಸೀರೆಯುಟ್ಟು ಕಂಗೊಳಿಸಿದ್ದರು. ಕಂಟೆಪರರಿ ಸ್ಟೈಲ್‌ನಲ್ಲಿ ಸೀರೆಯುಟ್ಟು ಪ್ರೆಸ್ ಮೀಟ್‌ನಲ್ಲಿ ಭಾಗವಹಿಸಿದ್ದರು ಈ ಬುದ್ಧಿವಂತ ನಟಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಾಯಲ್ ಸಿಂಗಾಲ್ ವಿನ್ಯಾಸದ ಸೀರೆಯಲ್ಲಿ ವಿದ್ಯಾಬಾಲನ್
ಈ ಬಾರಿ ಹೊಸ ಪ್ರಯೋಗವೆಂಬಂತೆ ವಿದ್ಯಾ ತನ್ನ ಮೆಚ್ಚಿನ ಸಬ್ಯಸಾಚಿ ಸೀರೆಯನ್ನು ಕೈ ಬಿಟ್ಟು ಪ್ರಿಂಟೆಡ್ ಸತ್ಯ ಪಾಲ್ ಸೀರೆಗೆ ಮನಸೋತಿದ್ದಾರೆ. ಈ ಪ್ರಿಂಟೆಡ್ ಸೀರೆ ವಿದ್ಯಾಗೆ ಚೆನ್ನಾಗಿ ಒಪ್ಪುತ್ತಿದ್ದು ಆಕೆಯ ರೂಪ ಲಾವಣ್ಯಕ್ಕೆ ಕನ್ನಡಿ ಹಿಡಿದಂತಿದೆ.

ಕಪ್ಪು ಬಿಳಿ ಬಣ್ಣದ ಚೆಕ್ಸ್ ಪ್ರಿಂಟ್‌ನ ಸೀರೆಯನ್ನು ಮಡಚಿ ತುಂಬಾ ಸ್ಟೈಲಿಶ್ ಆಗಿ ವಿದ್ಯಾ ಉಟ್ಟಿದ್ದರು. ಸಾಂಪ್ರದಾಯಿಕ ಬ್ಲೌಸ್ ಅನ್ನು ಬಿಟ್ಟು ಉದ್ದ ತೋಳಿನ ನಿಯೋನ್ ಆರೆಂಜ್ ಬಣ್ಣದ ಜಾಕೆಟ್ ಬ್ಲೌಸ್ ಅನ್ನು ವಿದ್ಯಾ ತಮ್ಮ ಈ ಸೀರೆಗೆ ಆಯ್ದುಕೊಂಡಿದ್ದಾರೆ. ಜಾಕೆಟ್ ಬ್ಲೌಸ್ ಸಂಪೂರ್ಣ ಪ್ಲೇನ್ ಆಗಿದ್ದು ಫುಲ್ ಸ್ಲೀವ್ ಅನ್ನು ಹೊಂದಿದೆ. ಬ್ಲೌಸ್ ಕಾಲರ್ ಅನ್ನು ಹೊಂದಿದ್ದು ಚಿಕ್ ಆಗಿದೆ.
ನ್ಯೂಯಾರ್ಕ್‌ನಲ್ಲಿ ನಡೆದ ಐಫಾದ ಪ್ರೆಸ್ ಮೀಟ್ ಸಮಾರಂಭದಲ್ಲಿ ಸತ್ಯಪಾಲ್ ಪ್ರಿಂಟೆಡ್ ಸೀರೆಯನ್ನು ಫ್ಲೋಟಿಂಗ್ ಶೈಲಿಯಲ್ಲಿ ವಿದ್ಯಾ ಉಟ್ಟಿದ್ದಾರೆ. ಆಮ್ರಪಾಲಿ ಆಭರಣಗಳನ್ನು ತೊಟ್ಟಿರುವ ವಿದ್ಯಾ ಸ್ಟಡ್ ಕಿವಿಯಾಭರಣಗಳಿಂದ ಸುಶೋಭಿತೆಯಾಗಿದ್ದಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸೀರೆಯಲ್ಲಿ ಕಣ್ಮನ ಸೆಳೆದ ವಿದ್ಯಾ ಬಾಲನ್
ಪಫ್‌ಡ್ ಅಪ್ ಹೇರ್ ಬನ್ ಅನ್ನು ಕೇಶವಿನ್ಯಾಸವನ್ನಾಗಿಸಿಕೊಂಡಿರುವ ವಿದ್ಯಾ ಸರಳ ಐ ಮೇಕಪ್ ಮತ್ತು ನ್ಯೂಡ್ ಗ್ಲೋಸ್ ಲಿಪ್ಸ್‌ನಿಂದ ಕಂಗೊಳಿಸಿದ್ದಾರೆ.
ವಿದ್ಯಾ ತಮ್ಮ ಹಳೆಯ ಚಾರ್ಮ್‌ಗೆ ಮರಳಿದ್ದಾರೆ ಎಂಬುದು ನಮ್ಮ ಆಲೋಚನೆಯಾಗಿದೆ! ಆಕೆ ಧರಿಸಿರುವ ಚೆಕ್ಸ್ ಸೀರೆ, ಜಾಕೆಟ್ ಬ್ಲೌಸ್ ಸರಳ ಮೇಕಪ್ ಭಾರತೀಯ ನಟಿಯನ್ನು ಅದ್ಭುತ ಸುಂದರಿಯನ್ನಾಗಿಸಿದೆ. ಈ ದೇಸೀ ಸ್ಟೈಲ್‌ಗೆ ನೀವು ಮರಳಾಗಿದ್ದೀರಾ?



Click it and Unblock the Notifications
