Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಡಬ್ಲ್ಯೂಐಎಫ್‌ಡಬ್ಲ್ಯೂನಲ್ಲಿ ಅಬ್ರಹಾಮ್ ತಾಕೋರ್ ಕರಾಮತ್ತು
ರಾ ಸಿಲ್ಕ್‌ನ ಅತಿ ಹೆಚ್ಚು ಸಂಗ್ರಹಣೆ ಅಬ್ರಹಾಮ್ ಮತ್ತು ತಾಕೋರ್ ವಿನ್ಯಸದ ಉಡುಗೆಗಳಲ್ಲಿ ವಿಲ್ಸ್ ಇಂಡಿಯಾ ಫ್ಯಾಶನ್ ರಾಂಪ್‌ನಲ್ಲಿ ಕಣ್ಮನ ಸೆಳೆಯಿತು. ಬೀಜ್, ಕಪ್ಪ ಹಾಘೂ ಬಿಳಿ ಬಣ್ಣದಲ್ಲಿ ತಮ್ಮ ವಿವಿಧ ವಿನ್ಯಾಸಗಳನ್ನು ಪ್ರದರ್ಶಿಸಿದರು ಅಬ್ರಹಾಮ್ ಮತ್ತು ತಾಕೋರ್.
ವಿಲ್ಸ್ ಇಂಡಿಯಾ ಫ್ಯಾಶನ್ ವೀಕ್ 2014 ನೇ ಮೂರನೇ ದಿನದಂದು ಫ್ಯಾಶನ್ ಲೋಕವೇ ಕಣ್ಣಿಗೆ ಕಟ್ಟಿದಂತಿತ್ತು ಎಂಬುದು ಇಲ್ಲಿ ಗಮಿಸಬೇಕಾದ ಅಂಶವಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಡಬ್ಲ್ಯೂಐಎಫ್‌ಡಬ್ಲ್ಯೂ 2014 ಪರೊಮಿತಾ ಬ್ಯಾನರ್ಜಿ ಕಮಾಲ್
ಲೆಪೊರ್ಡ್ ಪ್ರಿಂಟ್‌ಗಳ ಧಿರಿಸುಗಳು ಅಂತೆಯೇ ಉದ್ದ ಜಾಕೆಟ್‌ಗಳು, ಕ್ರಾಪ್ಡ್ ಪ್ಯಾಂಟ್‌ಗಳು ಕಾಣಲು ಸುಂದರವಾಗಿದ್ದವು ಹಾಗೂ ಕಲಾತ್ಮಕವಾಗಿದ್ದವು. ಖಾದಿ ಪರಿಣಾಮ ಕೂಡ ರಾಂಪ್‌ನಲ್ಲಿ ಕಂಡುಬಂದಿದ್ದು ದೇಶೀಯ ಸೊಗಸನ್ನು ಪಸರಿಸಿದೆ.
ವಾರಣಾಸಿ ಶೈಲಿ ಧಿರಿಸುಗಳೂ ಕೂಡ ರಾಂಪ್‌ನಲ್ಲಿ ಕಣ್ಮನಸೆಳೆದದ್ದು ಸುಳ್ಳಲ್ಲ. ಆಂಧ್ರದ ಚೌತ್‌ಪಾಲ್ ಧಿರಿಸುಗಳೂ ಕೂಡ ಮನಸೆಳೆದವು. ಅಬ್ರಹಾಮ್ ತಾಕೋರ್‌ರ ಇನ್ನಷ್ಟು ಸುಂದರ ಧಿರಿಸುಗಳ ವಿಹಂಗಮ ನೋಟ ನಿಮ್ಮೆದುರಲ್ಲಿ.

ಸೀರೆಗಳು
ಖಾದಿ ಮತ್ತು ರೇಷ್ಮೆಯಲ್ಲಿ ಕಂಡುಬಂದ ಸಂಪ್ರದಾಯಿ ಪ್ರಿಂಟ್‌ಗಳು ಹಾಗೂ ಎಂಬ್ರಾಯಿಡರಿ ಕಣ್ಣಿಗೆ ಸೊಗಸನ್ನುಂಟು ಮಾಡಿತ್ತು.

ಲೆಹಂಗಾ ಸ್ಕರ್ಟ್
ಗೋಲ್ಡನ್ ಸೊಂಟ ಪಟ್ಟಿಯೊಂದಿಗೆ ಲೆಹಂಗಾ ಸ್ಟರ್ಟ್ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು.

ಖಾದಿ
ಖಾದಿಯನ್ನು ಸರಳವಾಗಿ ಪ್ರದರ್ಶಿಸದೆ ಸುಂದರವಾಗಿ ಅದ್ಭುತವಾಗಿ ತೋರಿಸಿದ ರೀತಿ ಮನಸೆಳೆಯುವಂತಿತ್ತು.

ಗೋಲ್ಡನ್ ವಸ್ತುಗಳು
ಗೋಲ್ಡನ್ ಬೆಲ್ಟ್ ಹಾಗೂ ವ್ಯಾಲೆಟ್ಸ್‌ಗಳು ಹೆಚ್ಚು ಬಳಕೆ ಮಾಡಲಾದ ವಸ್ತುಗಳಾಗಿವೆ.

ಸೀರೆಯೊಂದಿಗೆ ಜಾಕೆಟ್
ಚಳಿಗಾಲದ ಖಾದಿ ಜಾಕೆಟ್‌ಗಳೊಂದಿಗೆ ಸೀರೆಯನ್ನು ಪ್ರದರ್ಶಿಸಿದ ರೀತಿ ಅನುಪಮವಾಗಿತ್ತು.

ಎರಡು ಬಣ್ಣದ ಸೀರೆ
ಸಿಲ್ಕ್ ಹಾಗೂ ಹತ್ತಿಯಲ್ಲಿ ಕಂಡುಬಂದ ಸೀರೆ ಅತ್ಯಾಕರ್ಷಕವಾಗಿತ್ತು

ಸಿಲ್ಕ್ ಕುರ್ತಾ
ಕ್ಲಾಸಿಕ್ ಫ್ಯಾಬ್ರಿಕ್ಸ್, ತುಶ್ಶಾರ್, ಮುಗಾ ಹಾಗೂ ಎರಿ ಸಿಲ್ಕ್ ಅನ್ನು ಸಂಗ್ರಹಣೆಯಲ್ಲಿ ಹೆಚ್ಚು ಬಳಸಲಾಗಿದೆ.

ಕೇಪ್
ಸುಂದರವಾದ ಲೆಪೋರ್ಡ್ ಪ್ರಿಂಟ್ ಜಾಕೆಟ್ಸ್ ಸ್ಟೈಲಿಶ್ ಹಾಗೂ ಸೆಕ್ಸಿಯಾಗಿತ್ತು.

ಲೆಪೋರ್ಡ್ ಪ್ರಿಂಟ್
ಅಬ್ರಹಾಂ ಹಾಗೂ ತಾಕೋರ್ ಟ್ರೆಂಡಿ ಹಾಗೂ ಬೋಲ್ಡ್ ಆಗಿರುವ ಈ ಮುದ್ರಣ ಕಣ್ಣಿಗೆ ಕಟ್ಟಿದ್ದಂತೂ ಸುಳ್ಳಲ್ಲ.



Click it and Unblock the Notifications
